ದಕ್ಷಿಣ ಕರ್ನಾಟಕವು ಕಾವೇರಿ ಕಣಿವೆಯಾಗಿದ್ದು, ಸಮೃದ್ಧವಾಗಿದೆ, ಹೇಮಾವತಿ, ಲಕ್ಷ್ಮಣತೀರ್ಥ, ಕಬಿನಿ, ಯಗಚಿ, ನುಗು ಅರ್ಕಾವತಿ ,ಶಿಂಷ ಮುಂತಾದ ನದಿಗಳು ಹುಟ್ಟಿ ಹರಯುತ್ತವೆ.

ಇತಿಹಾಸಸಂಪಾದಿಸಿ

 
ದಕ್ಷಿಣ ಕರ್ನಾಟಕ

ದಕ್ಷಿಣ ಕರ್ನಾಟಕವನ್ನು ಕದಂಬರು, ಚಾಲುಕ್ಯರು, ಹೋಯ್ಸಳರು, ಗಂಗರು, ಮೈಸೂರು ಒಡೆಯರು, ಮೈಸೂರು ಸುಲ್ತಾನರು ಆಳಿದ್ದಾರೆ. ಇವರಲ್ಲಿ ಪ್ರಮುಖರಾದವರೆಂದರೆ ಮೈಸೂರಿನ ಒಡೆಯರು, ಕದಂಬರು ಮತ್ತು ಮೈಸೂರಿನ ಸುಲ್ತಾನರು.

೨೦ ನೇ ಶತಮಾನದ ಸಂಧರ್ಭದಲ್ಲಿ ಇದು ಮೈಸೂರಿನ ರಾಜರ ಆಳ್ವಿಕೆಯಲ್ಲಿತ್ತು, ೧೯೪೭ ರ ಭಾರತ ಸ್ವಾತಂತ್ರ್ಯದ ನಂತರ ಇದನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು, ಇದು ದಕ್ಷಿಣ ಕರ್ನಾಟಕವಾದರು ಈಗಲು ಸಹ ಇಲ್ಲಿ ಸ್ಥಳೀಯವಾಗಿ ಈ ಭಾಗವನ್ನು ಹಳೇ ಮೈಸೂರು ಭಾಗವೆಂದು ಕರೆಯುತ್ತಾರೆ.

ಇಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ

ಸ್ಥಳ ಸ್ಥಳ ವಿಶೇಷ
ಮೈಸೂರು ಅರಮನೆಗಳು
ಬೇಲೂರು-ಹಳೇಬೀಡು ಪ್ರಾಚೀನ ದೇವಾಲಯಗಳು
ಬೆಂಗಳೂರು ರಾಜ್ಯ ರಾಜಧಾನಿ
ಜೋಗ ಜಲಪಾತ
ಧರ್ಮಸ್ಥಳ ಹಿಂದೂ ಧಾರ್ಮಿಕ ಕ್ಷೇತ್ರ
ನಾಗರಹೊಳೆ ಅಭಯಾರಣ್ಯ

ಜಿಲ್ಲೆಗಳುಸಂಪಾದಿಸಿ

 1. ಬೆಂಗಳೂರು ನಗರ
 2. ಬೆಂಗಳೂರು ಗ್ರಾಮಾಂತರ
 3. ಚಿಕ್ಕಬುಳ್ಳಾಪುರ
 4. ಕೋಲಾರ
 5. ತುಮಕೂರು
 6. ರಾಮನಗರ
 7. ಮಂಡ್ಯ
 8. ಚಿತ್ರದುರ್ಗ
 9. ದಾವಣಗೆರೆ
 10. ಶಿವಮೊಗ್ಗ
 11. ಉಡುಪಿ
 12. ದಕ್ಷಿಣ ಕನ್ನಡ
 13. ಚಿಕ್ಕಮಗಳೂರು
 14. ಹಾಸನ
 15. ಮೈಸೂರು
 16. ಕೊಡಗು
 17. ಚಾಮರಾಜನಗರ

ಆಡಳಿತಸಂಪಾದಿಸಿ

ರೆವಿನ್ಯೂ ವಿಭಾಗಗಳುಸಂಪಾದಿಸಿ

ದಕ್ಷಿಣ ಕರ್ನಾಟಕವು ಒಟ್ಟು ೩ ರೆವಿನ್ಯೂ ವಿಭಾಗಗಳ ೧೭ ಜಿಲ್ಲೆಗಳನ್ನೊಳಗೊಂಡಿದೆ,

 
ಮೈಸೂರು ಅರಮನೆ

ಕಾವೇರಿ ನದಿಯು ಈ ಭಾಗದ ಮುಖ್ಯ ನದಿಯಾಗಿದ್ದು, ಕೃಷ್ಣರಾಜಸಾಗರ ದೊಡ್ಡ ಜಲಾಶಯವಾಗಿದೆ. ಪಶ್ಚಿಮದಲ್ಲಿ ಪಶ್ಚಿಮಘಟ್ಟಗಳಿದ್ದು ಹೆಚ್ಚಿನ ಮಳೆ ಪಡೆಯುತ್ತದೆ.ಭತ್ತ, ಕಬ್ಬು, ಮತ್ತು ತಂಬಾಕು ಇಲ್ಲಿನ ಪ್ರಮುಖ ಬೆಳೆಗಳಾಗಿದ್ದು, ತೆಂಗು ಮತ್ತು ಅಡಿಕೆ ಇಲ್ಲಿನ ಮುಖ್ಯ ತೋಟಗಾರಿಕಾ ಬೆಳೆಗಳಾಗಿವೆ.

 
ಕಾವೇರಿ ನದಿ

ಭೌಗೋಳಿಕ ಲಕ್ಷಣ ಮತ್ತು ಹವಾಮಾನಸಂಪಾದಿಸಿ

ದಖ್ಹನ್ ಪ್ರಸ್ತಭೂಮಿಯಲ್ಲಿರುವ ದಕ್ಷಿಣ ಕರ್ನಾಟಕವು ಕಾವೇರಿ, ಹೇಮಾವತಿ, ಕಬಿನಿ, ಲಕ್ಷ್ಮಣತೀರ್ಥ ಮುಂತಾದ ನದಿಗಳ ಉಗಮ ಸ್ಥಳವಾಗಿದ್ದು ಬಹುತೇಕ ಈ ಭಾಗದ ನದಿಗಳು ಪಶ್ಚಿಮಘಟ್ಟದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತವೆ. ಆದರೆ ಶಿಂಷ, ಅರ್ಕಾವತಿ, ವೃಷಭಾವತಿ ಮತ್ತು ಪೆನ್ನಾರ್ ನದಿಗಳು ನಂದಿ ಬೆಟ್ಟ ಮತ್ತು ಬೆಂಗಳೂರು ಭಾಗದ ಬಯಲುಸೀಮೆಯಲ್ಲಿ ಹುಟ್ಟಿ ಕಾವೇರಿಯನ್ನು ಸೇರುತ್ತವೆ.

ಪೂರ್ವಾಭಿಮುಖವಾಗಿ ಹರಿಯುವ ನದಿಗಳುಸಂಪಾದಿಸಿ

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳುಸಂಪಾದಿಸಿ

ಹವಾಮಾನಸಂಪಾದಿಸಿ

ಈ ಭಾಗದಲ್ಲಿ ವರ್ಷಪೂರ್ತಿ ಹಿತಕರ ವಾತವರಣವಿದ್ದು, ಜೂನ್ ರಿಂದ ಅಕ್ಟೋಬರ್ ವರೆಗೆ ನೈರುತ್ಯ ಮಾನ್ಸೂನ್ ಮಾರುತಗಳು ಮಳೆ ಸುರಿಸುತ್ತವೆ. ಚಳಿಗಾಲದಲ್ಲಿ ಕನಿಷ್ಟ ತಾಪಮಾನವು ೧೪ ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, ಬೀಸಿಗೆಯಲ್ಲಿ ಗರಿಷ್ಟ ತಾಪಮಾನವು ಸುಮಾರು ೩೦ ರಿಂದ ೩೫ ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ.

ಇವುಗಳನ್ನು ಸಹ ನೋಡಿಸಂಪಾದಿಸಿ