ಮಸಾಯಿ ಮಾರಾ ಆಫ್ರಿಕಾಕೀನ್ಯಾ ದೇಶದ ಒಂದು ರಾಷ್ಟ್ರೀಯ ಉದ್ಯಾನವನ. ಮಧ್ಯ ಆಫ್ರಿಕಾತಾಂಜೇನಿಯಸೆರೆಂಗೆಟಿ ಅಭಯಾರಣ್ಯದ ಉತ್ತರಭಾಗದಲ್ಲಿ ವಿಶಾಲವಾಗಿ ೩೨೦ ಚದರ ಕಿಲೋಮೀಟರ್ ಪ್ರದೇಶದಲ್ಲಿ ಮುಖ್ಯವಾಗಿ ಹುಲ್ಲುಗಾವಲಿನಂತೆ ಹರಡಿರುವ ಇದು ಇಲ್ಲಿನ ಮಸಾಯಿ ಬುಡಕಟ್ಟು ಮತ್ತು ಮಾರ ನದಿಗಳಿಂದ ತನ್ನ ಹೆಸರನ್ನು ಪಡೆದಿದೆ.

ಮಸಾಯಿ ಮಾರ ರಾಷ್ಟ್ರೀಯ ಉದ್ಯಾನವನ

ಇಲ್ಲಿನ ವನ್ಯಜೀವಿ ವೈವಿಧ್ಯದಲ್ಲಿ ವಾರ್ಷಿಕವಾಗಿ (ಸೆಪ್ಟೆಂಬರ ಮತ್ತು ಅಕ್ಟೋಬರ ಮಾಸಗಳಲ್ಲಿ) ನೆಡೆಯುವ ಮಹೀ ಮೃಗದ (ವೈಲ್ಡ್ ಬೀಸ್ಟ್) ವಲಸೆಯ ದೃಶ್ಯ ಅತ್ಯಂತ ರೋಚಕವಾದುದು. ಆಫ್ರಿಕಾದಲ್ಲಿ ಅತಿ ಹೆಚ್ಚು ಸಿಂಹಗಳನ್ನು ಹೊಂದಿದ ಪ್ರದೇಶವಾಗಿಯೂ ಇದು ಪ್ರಸಿದ್ಧ ವಾಗಿದೆ. ಸಿಂಹಗಳಲ್ಲದೆ ಚಿರತೆ, ಕಪ್ಪು ಘೇಂಡಾ ಮೃಗ, ನೀರು ಕುದುರೆ, ಜಿರಾಫೆ, ಜೀಬ್ರಾ , ಆನೆ, ಕಿರುಬಾ ಮತ್ತು ಕಾಡೆಮ್ಮೆ ಗಳು ಇಲ್ಲಿ ಜೀವಿಸುತ್ತವೆ. ಇದಲ್ಲದೇ ಹತ್ತಾರು ಬಗೆಯ ಜಿಂಕೆಗಳೂ ಮತ್ತು ೪೫೦ಕ್ಕೂ ಹೆಚ್ಚು ಪಕ್ಷಿಸಂಕುಲಗಳೂ ನೆಲೆಸಿವೆ.