ಮಲೂಟಿ

ಭಾರತದ ಜಾರ್ಖಂಡ್ ರಾಜ್ಯದ ಒಂದು ಹಳ್ಳಿ

ಮಲೂಟಿ ಭಾರತದ ಝಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯಲ್ಲಿನ ಶಿಕಾರಿಪಾರಾ ಹತ್ತಿರವಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇದನ್ನು ಬಾಜ್ ಬಸಂತಾ ರಾಜವಂಶದ ಕಾಲದಲ್ಲಿ ನಿರ್ಮಿಸಲಾಗಿತ್ತು. ಈ ಪ್ರದೇಶದಲ್ಲಿ ೭೨ ಹಳೆಯ ದೇವಾಲಯಗಳಿದ್ದು ಇವು ಪಾಲ ರಾಜವಂಶದ ರಾಜರ ಭವನಗಳಾಗಿವೆ.[೧] ಇವು ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಹಿಂದೂ ಪುರಾಣದ ವಿವಿಧ ದೃಶ್ಯಗಳನ್ನು ಚಿತ್ರಿಸುತ್ತವೆ. ಕಾಳಿ ಪೂಜಾದ ದಿನದಂದು ಒಂದು ಎಮ್ಮೆ, ಒಂದು ಕುರಿ ಸೇರಿದಂತೆ, ೧೦೦ ಕ್ಕಿಂತ ಹೆಚ್ಚು ಮೇಕೆಗಳ ವಾರ್ಷಿಕ ಬಲಿಗಾಗಿ ಮಲೂಟಿ ಪರಿಚಿತವಾಗಿದೆ. ಪ್ರಾಣಿ ಕಾರ್ಯಕರ್ತ ಗುಂಪುಗಳು ಹಲವುವೇಳೆ ಈ ಚಟುವಟಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. ಇಂದು ಮಲೂಟಿ ಹಳೆ ದೇವಾಲಯಗಳ ಸಾಕಾಗದ ನಿರ್ವಹಣೆಯಿಂದ ಅಪಾಯಕ್ಕೊಳಗಾಗಿದೆ, ಮತ್ತು ನೈಸರ್ಗಿಕ ವಿಪತ್ತುಗಳಿಂದ ಅಪಾಯಕ್ಕೊಳಗಾಗಿದೆ.

ಮಲೂಟಿ ದೇವಾಲಯದ ಗಡಸು ಜೇಡಿಮಣ್ಣಿನ ಕೃತಿಗಳು
ಮಲೂಟಿಯಲ್ಲಿನ ದೇವಾಲಯಗಳು

ಹೊರಗಿನ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Maluti". maluti.org. Archived from the original on 2010-01-15. Retrieved April 10, 2017.
"https://kn.wikipedia.org/w/index.php?title=ಮಲೂಟಿ&oldid=1210345" ಇಂದ ಪಡೆಯಲ್ಪಟ್ಟಿದೆ