ಮರಿಯ ಜಯಂತಿ
ಮರಿಯ ಜಯಂತಿಯು ಒಂದು ಒಗ್ಗೂಡುವಿಕೆಯ ಹಾಗು ಕುಟುಂಬದ ಹಬ್ಬವಾಗಿದೆ.ಈ ಹಬ್ಬವನ್ನು ಮಂಗಳೂರು ಹಾಗು ಉಡುಪಿಯ ಭಾಗದಲ್ಲಿ ಕೊಂಕಣಿ ಮತಾಡುವ ಕ್ರೈಸ್ತರು ಹೆಚ್ಚಾಗಿ ಆಚರಿಸುತ್ತಾರೆ.ಮರಿಯಮ್ಮನವರ ಜನುಮವು ಈ ಹಬ್ಬದ ಪ್ರಮುಖ್ಯತೆಯಾಗಿದೆ. ಈ ಹಬ್ಬವನ್ನು ಹೆಣ್ಣುಮಕ್ಕಳ ಹಬ್ಬವೆಂದೂಸಹ ಕರೆಯಲಾಗುತ್ತದೆ.
ಹಿನ್ನೆಲೆ
ಬದಲಾಯಿಸಿಕೋಂಕಣಿಯಲ್ಲಿ ಈ ಹಬ್ಬವನ್ನು "ಮೋಂತಿ ಫೆಸ್ತ್" ಎಂದು ಕರೆಯಲಾಗುತ್ತದೆ. "ಮೋಂತಿ ಫೆಸ್ತ್" ಎಂಬ ಹೆಸರು ಫರಂಗಿ ಪೇತೆಯ ಮಾತೆ ಮರಿಯಾನೋ ಎಂಬ ಚರ್ಚಿನ ಹೆಸರಿನಿಂದ ಬಂದಿದೆ.ಟಿಪ್ಪು ಸುಲ್ತಾನನ ಕಾಲದಲ್ಲಿ ಹಲವಾರು ಕ್ರೈಸ್ತ ಗುಡಿಯನ್ನು ನಾಶಮಾಡಿದ್ದಾದರು, ಈ ಒಂದು ಗುಡಿಯು ಮಾತ್ರ ನಾಶವಾಗದೆ ಮಂಗಳೂರು ಪ್ರದೇಶದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.ಈ ಒಂದು ಹಬ್ಬದ ದಿನ ಎಲ್ಲಾ ಜನರು ಒಟ್ಟುಗೂಡಿ ಮಾಂಸ-ಮೀನು ಮಾಡದೆ, ಹೊಸ ತೆನೆ ಹಾಗು ಹೊಸ ಫಲದಿಂದ ಮಾಡಿದ ತರಕಾರಿ ಊಟವನ್ನು ಮಾಡುತ್ತಾರೆ.
ಆಚರಣೆ
ಬದಲಾಯಿಸಿಪ್ರಪ್ರಥಮವಾಗಿ ಈ ಹಬ್ಬದ ದಿನ ಹೋಸ ತೆನೆಯನ್ನು ಕ್ರೈಸ್ತ ಗುಡಿಯಲ್ಲಿ ಪವಿತ್ರೀಕರಿಸಲಾಗುತ್ತದೆ.ಪೂಜೆಯ ಮೋದಲು ಈ ಒಂದು ತೆನೆಯನ್ನು ಪವಿತ್ರೀಕರಿಸಿ, ಪೂಜೆಯ ಕೊನೆಯಲ್ಲಿ ಕುಟುಂಬದ ಯಜಮಾನರಿಗೆ ಅಥವಾ ಹಿರಿಯರಿಗೆ ಹಂಚಲಾಗುತ್ತದೆ. ಇದನ್ನು ತದನಂತರ ಮನೆಯಲ್ಲಿ ಹಾಲು ಅಥವ ಪಾಯಸದಲ್ಲಿ ಸೇರಿಸಿ ಸೇವಿಸಲಾಗುತ್ತದೆ.ಮಕ್ಕಳು ಈ ಹಬ್ಬದ ದಿನ ಹೋವನ್ನು ಮರಿಯಮ್ಮನವರಿಗೆ ಒಟ್ಟುಗೂಡಿಸಿ ಅರ್ಪಿಸುತ್ತಾರೆ. ಪೂಜೆಯ ಕೋನೆಯಲ್ಲಿ ಮಕ್ಕಳಿಗಾಗಿ ಸಿಹಿತಿಂಡಿಯನ್ನು ಹಂಚಲಾಗುತ್ತದೆ.ಈ ಹಬ್ಬದ ದಿನ ಪೂಜೆಯ ಸಮಯದಲ್ಲಿ ಮುಖ್ಯವಾಗಿ ಕುಟುಂಬಗಳಿಗೆ ಹಾಗು ಹೆಣ್ಣುಮಕ್ಕಳಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.
ಗುಡುಯಲ್ಲಿ ನಡೆದ ಪೂಜೆಯ ನಂತರ ಮನೆಯಲ್ಲೂ ಊಟದ ಮುಂಚೆ ಪ್ರಾರ್ಥನೆ ಮಾಡಲಾಗುತ್ತದೆ. ಈ ಪ್ರಾರ್ಥನೆ[ಶಾಶ್ವತವಾಗಿ ಮಡಿದ ಕೊಂಡಿ]ಯಲ್ಲಿ ಕುಟುಂಬದ ಐಕ್ಯತೆ ಹಾಗು ಅನ್ಯೋನತೆಗಾಗಿ ಪ್ರಾರ್ಥನೆ ಮಾದಲಾಗುತ್ತದೆ.ಹೊರದೇಶದಲ್ಲಿರುವ ಕುಟ್ಂಬದವರಿಗೂ ಹಾಗು ಕುಟುಂಬದಲ್ಲಿ ತೀರಿಕೂಂಡವರಿಗೂ ಮುಖ್ಯವಾಗಿ ಪ್ರಾರ್ಥನೆ ಮಾಡಲಾಗುತ್ತದೆ.ಪ್ರಾರ್ಥನೆಯ ನಂತರ ಕುಟುಂಬದವರೆಲ್ಲರೂ ಒಟ್ಟಾಗಿ ಕೆಳಗೆ ಕುಳಿತು, ಬಾಳೇಎಲೆಯಲ್ಲಿ ಊಟ ಮಾಡುತ್ತಾರೆ.