ಕಾಸರಗೋಡು[] ನಗರ ದಿಂದ ಸುಮಾರು ೭ ಕಿಲೋಮಿಟರ್ ದೂರದಲ್ಲಿರುವ ಈ ದೇವಸ್ಥಾನದಲ್ಲಿ ಶಿವ ಹಾಗೂ ಗಣಪತಿ ಮೂಲ ಆರಾಧನ ಮೂರ್ತಿ. ಸುಬ್ರಹ್ಮಣ್ಯ,ಆಯ್ಯಪ್ಪ,ದುರ್ಗಾಪರಮೇಶ್ವರಿ ಮುಂತಾದ ಗುಡಿಗಳಿವೆ. ಕಾಸರಗೋಡಿನ ಪ್ರಸಿದ್ದ ಪ್ರವಾಸಿತಾಣಗಳಲ್ಲಿ ಇದು ಒಂದು.

ಇತಿಹಾಸ

ಬದಲಾಯಿಸಿ

ಮಧೂರು ಮೂಲತಃ ಮದನಂತೇಶ್ವರ (ಶಿವ) ದೇವಸ್ಥಾನವೆಂದು ಸಿದ್ಧಾಂತವು ಹೇಳುತ್ತದೆ. ಮೊಗೇರ ಸಮುದಾಯದ ಮದರು ಎಂಬ ಮಹಿಳೆಗೆ ಈ "ಉದ್ಧವ ಮೂರ್ತಿ" ಶಿವ ಲಭಿಸುತ್ತದೆ(ಇದು ಮಾನವರಿಂದ ಮಾಡಲ್ಪಟ್ಟ ವಿಗ್ರಹವಲ್ಲ). ಮದರು ಎಂಬ ಮಹಿಳೆಯ ಹೆಸರಿನಿಂದ ಮಧೂರು ಎಂದು ಕರೆಯಲ್ಪಡುತ್ತದೆ. ಒಬ್ಬ ಬಾಲಕನು ಆಟವಾಡುತ್ತಿರುವಾಗ ಗರ್ಭಗ್ರಹದ ದಕ್ಷಿಣದ ಗೋಡೆಯಲ್ಲಿ ಗಣಪತಿಯ ಚಿತ್ರವನ್ನು ಬಿಡಿಸುತ್ತಾನೆ.ದಿನ ಕಳೆದಂತೆ ಚಿತ್ರವು ದೊಡ್ಡದಾಗುತ್ತಾ ಹೋಯಿತು. ಆ ಬಾಲಕನು ಗಣಪತಿಯನ್ನು ಬೊಡ್ಡಜ್ಜ ಎಂದು ಕರೆದನು. ಕುಂಬಳೆ ಸೀಮೆ ಇತಿಹಾಸದ ಪ್ರಕಾರ ಟಿಪ್ಪು ಸುಲ್ತಾನನು ಕೊಡಗು,ತುಳುನಾಡು,ಮಲಬಾರ್https://malabar.com/about ಪ್ರದೇಶಗಳನ್ನು ಆಕ್ರಮಣಮಾಡಿ ಮಧೂರು ದೇವಸ್ಥಾನವನ್ನು ಕೆಡವಲು ಬರುತ್ತಾನೆ. ದೇವಸ್ಥಾನದ ಬಾವಿಯ ನೀರನ್ನು ಕುಡಿದಾಗ ತನ್ನ ಮನಸ್ಸು ಬದಲಾಗಿ ಹಿಂತಿರುಗುತ್ತಾನೆ.ಟಿಪ್ಪುವಿನ ಖಢ್ಗದ ಗುರುತು ಈಗಲು ಅಲ್ಲಿನ ಗೋಡೆಯ ಮೇಲಿದೆ.

ವಿನ್ಯಾಸ

ಬದಲಾಯಿಸಿ

ದೇವಸ್ಥಾನವು ಆನೆಯ ಹಿಂದಿನ ಭಾಗದಂತೆ ಕಾಣುತ್ತದೆ. ರಾಮಯಣದ ಕಥೆಯ ಕೆತ್ತನೆಗಳನ್ನೂ ಇಲ್ಲಿ ಕಾಣಬಹುದು. ಮಧುವಹಿನಿ ನದಿಯು ದೇವಸ್ಥಾನದ ಮುಂಭಾಗದಲಿ ಹರಿಯುತ್ತದೆ. ಸುತ್ತಲೂ ಹಚ್ಚ ಹಸಿರಿದೆ. ಮಳೆಗಾಲದಲ್ಲಿ ದೇವಸ್ಥಾನದ ಒಳಭಾಗಕ್ಕೆ ನದಿಯ ನೀರು ಹರಿದು ಬರುತ್ತದೆ.ಶ್ರೀ ಗಜಮುಖನ ಸೊಂಡಿಲು ಬಲಗಡೆಗೆ ಬಾಗಿದ್ದು "ಬಲಮುರಿ ಗಣಪತಿ" ಎಂದು ಪ್ರಸಿದ್ದವಾಗಿದೆ.ಈ ರೀತಿಯ ವಿಗ್ರಹ ಬಹಳ ಅಪರೂಪ. ಶ್ರೀ ದೇವಾಲಯವು 'ಗಜಾಯ'ದಲ್ಲಿದೆ ಹಿಂಭಾಗವು ಕಲಾಕೃತಿಗಳಿಂದ ಕೂಡಿದೆ.ಗಜಾಯವು ಬದುಕನ್ನು ತೇಜೋಮಯ ಮಾಡಿ ಸಕಲ ಶುಭವನ್ನು ತಂದುಕೊಡುತ್ತದೆ.'ಗಜಪೃಷ್ಠ' ಆಕಾರವು ಪ್ರಾಚೀನ ಬೌದ್ದರ ಕೊಡುಗೆ ಎನ್ನುವ ಪ್ರತೀತಿಯಿದೆ.

ನಿಜಾಂಶ

ಬದಲಾಯಿಸಿ

ತುಳುನಾಡಿನ ೬ ಪ್ರಮುಖ ಗಣಪತಿ ದೇವಸ್ಥಾನಗಳಲಿ ಇದು ಒಂದು. ಉಳಿದ ೩ ಮಂಗಳೂರು[]ನಲ್ಲಿದೆ.ಆನೆಗುಂಡಿ,ಇಡಗುಂಜಿ[],ಹಟ್ಟಿಯಂಗಡಿ,ಗೋಕರ್ಣದಲ್ಲಿದೆ.ಬೇಸಗೆ ರಜೆಯಲ್ಲಿ ವೇದ ಪಾರಯಣಗಳು ನಡೆಯುತ್ತದೆ.ವಿದ್ಯಾರ್ಥಿಗಳಿಗೆ ಬೇಕಾದ ವಸತಿ ಸೌಲಭ್ಯಗಳು ದೇವಸ್ಥಾನದ ಮೂಲಗಳಿಂದ ಲಭಿಸುತ್ತದೆ.

ಪ್ರಾರ್ಥನೆಗಳು ಹಾಗು ಪ್ರಸಾದಗಳು

ಬದಲಾಯಿಸಿ

ಭಕ್ತಾಧಿಗಳು ಹೆಚ್ಚಾಗಿ ಉದಯಾಸ್ತಮಾನ ಪೂಜೆಯನ್ನು ಮಾಡಿಸುತ್ತಾರೆ.'ಅಪ್ಪ ಪ್ರಸಾದ'ವು ಇಲ್ಲಿನ ಮುಖ್ಯ ಪ್ರಸಾದ.

ದೇವಸ್ಥಾನದ ದರ್ಶನ ಸಮಯ

ಬದಲಾಯಿಸಿ

ಬೆಳಿಗ್ಗೆ:೦೫.೦೦-೧೦.೩೦ ಸಂಜೆ:೦೫.೩೦-೦೩.೦೦

ದೇವಸ್ಥಾನಕ್ಕೆ ತಲುಪಲು ದಾರಿ

ಬದಲಾಯಿಸಿ
ಕಾಸರಗೋಡು ನಗರ ದಿಂದ ಸುಮಾರು ೭ ಕಿಲೋಮಿಟರ್ ದೂರದಲ್ಲಿದೆ. ಬಸ್ಸು ನಿಲ್ದಾಣದಿಂದ ಪ್ರತಿ ೫ ನಿಮಿಷಕ್ಕೆ ಬಸ್ಸು ಸೌಲಭ್ಯವಿದೆ. ಆಟೋ ರಿಕ್ಷಾ ವ್ಯವಸ್ಥೆಯ ಇದೆ.

ಉಲ್ಲೇಖ

ಬದಲಾಯಿಸಿ
  1. ಕಾಸರಗೋಡು https://kn.wikipedia.org/s/1io
  2. ಮಂಗಳೂರು https://kn.wikipedia.org/s/15q
  3. ಇಡಗುಂಜಿ https://kn.wikipedia.org/s/byi


"https://kn.wikipedia.org/w/index.php?title=ಮಧೂರು&oldid=1251873" ಇಂದ ಪಡೆಯಲ್ಪಟ್ಟಿದೆ