ಮಖನ್ ಸಿಂಗ್ (೧ ಜುಲೈ ೧೯೩೭ - ೨೧ ಜನವರಿ ೨೦೦೨) ಅವರು ೧೯೬೦ ರ ದಶಕಕ್ಕೆ ಸೇರಿದ ಭಾರತೀಯ ಕ್ರೀಡಾಪಟು.[] ಅವರು ಪಂಜಾಬ್‌ನ ಹೋಶಿಯಾರ್ಪುರ್ ಜಿಲ್ಲೆಯ ಬಾತುಲ್ಲಾ ಗ್ರಾಮದಲ್ಲಿ ಜನಿಸಿದರು.

ಮಖನ್ ಸಿಂಗ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಮಖನ್ ಸಿಂಗ್
ಜನನ(೧೯೩೭-೦೭-೦೧)೧ ಜುಲೈ ೧೯೩೭
ಬತುಲ್ಲಾ, ಬ್ರಿಟಿಷ್ ಭಾರತ
ಮರಣ21 January 2002(2002-01-21) (aged 64)
ಚಬ್ಬೇವಾಲ್, ಭಾರತ
Sport
ದೇಶ ಭಾರತ

ವೃತ್ತಿಜೀವನ

ಬದಲಾಯಿಸಿ

೧೯೬೪ ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಲ್ಕಾ ಸಿಂಗ್ ವಿರುದ್ಧದ ವಿಜಯವು ಅವರ ಪ್ರಮುಖ ಖ್ಯಾತಿಗೆ ಕಾರಣವಾಯಿತು. ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಲವಾರು ಚಿನ್ನದ ಪದಕಗಳನ್ನು ಗೆದ್ದರು. ೧೯೬೨ ಏಷ್ಯನ್ ಗೇಮ್ಸ್ ಮತ್ತು ೧೯೬೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು.[]

ಕ್ರೀಡಾ ಸಾಧನೆ

ಬದಲಾಯಿಸಿ
 
ಅರ್ಜುನ ಪ್ರಶಸ್ತಿ ಪುರಸ್ಕೃತ ದಿವಂಗತ ಶ್ರೀ ಮಖನ್ ಸಿಂಗ್ ಅವರ ಸನ್ಮಾನ ಸಮಾರಂಭದಲ್ಲಿ ಎಂ.ವೀರಪ್ಪ ಅವರು ಮಾತನಾಡಿದರು.

೧೯೫೯ ರಲ್ಲಿ ಕಟಕ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚನ್ನು ಗಳಿಸುವುದರ ಮೂಲಕ ಮಖನ್ ಅವರು ತಮ್ಮ ಮೊದಲ ಯಶಸ್ಸನ್ನು ಪಡೆದರು. ನಂತರ ಅವರು ದೆಹಲಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೩೦೦ ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಮತ್ತು ಶಾರ್ಟ್ ಸ್ಪ್ರಿಂಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ೧೯೬೦ ರಲ್ಲಿ ಮದ್ರಾಸ್‌ನಲ್ಲಿ ಚಿನ್ನದ ಮತ್ತು ಬೆಳ್ಳಿಯ ಪದಕ ಪಡೆದರು. ೧೯೬೨ ರಲ್ಲಿ ಜಬಲ್ಪುರ್‌ನಲ್ಲಿ ನಾಲ್ಕು ಚಿನ್ನದ ಪದಕಗಳು ಮತ್ತು ೧೯೬೩ ರಲ್ಲಿ ತ್ರಿವಾಂಡ್ರನ್‌ನ್ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆದ್ದ ಅವರು, ನಂತರದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈ ಯಶಸ್ಸನ್ನು ಮುಂದುವರೆಸಿದರು. ೧೯೬೪ ರಲ್ಲಿ ಕಲ್ಕತ್ತಾದಲ್ಲಿ, ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಮಿಲ್ಕಾ ಸಿಂಗ್ ಅವರ ವಿರುದ್ಧದ ಅವರ ಜಯ ಅವರಿಗೆ ಭಾರೀ ಯಶಸ್ಸನ್ನು ತಂದು ಕೊಟ್ಟಿತು.[] ಅವರು ಅಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದರು. ಅವರು ಜಕಾರ್ತಾದಲ್ಲಿನ ೧೯೬೨ ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ೪ x ೪೦೦ ಮೀಟರ್‌ಗಳ ರಿಲೇಯಲ್ಲಿ ಚಿನ್ನ ಮತ್ತು ೪೦೦ ಮೀಟರುಗಳ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

 
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಅವರು ಅರ್ಜುನ ಪ್ರಶಸ್ತಿ ಪುರಸ್ಕೃತ ದಿವಂಗತ ಶ್ರೀ ಮಖನ್ ಸಿಂಗ್ ಅವರ ಪರವಾಗಿ ಅವರ ಪತ್ನಿ ಶ್ರೀಮತಿ ಸಲೀಂದರ್ ಕೌರ್ ಅವರಿಗೆ ರೂ.ಐದು ಲಕ್ಷ ನೀಡುತ್ತಿರುವುದು.

ಮಖನ್ ಸಿಂಗ್ ಅವರಿಗೆ, ಫಿರಂಗಿ ತೋಪುಗಾರ (ಆರ್ಟಿಲರಿ ಗನ್ನರ್) ಎಂಬ ರಾಷ್ಟ್ರೀಯ ಆಟದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ೧೯೫೯ ರಿಂದ ೧೯೬೪ ರವರೆಗೆ ಎಲ್ಲಾ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರು. ಅವರು ಒಟ್ಟು ೧೨ ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡರು.[]

ನಿವೃತ್ತಿ

ಬದಲಾಯಿಸಿ

ಅವರು ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿದ್ದರು ಮತ್ತು ೧೯೭೨ ರಲ್ಲಿ ನಿವೃತ್ತಿ ಹೊಂದಿದರು. ಸೈನ್ಯದಿಂದ ನಿವೃತ್ತಿಯಾದ ನಂತರ ಅವರು ತಮ್ಮ ಗ್ರಾಮದಲ್ಲಿ ಸ್ಟೇಷನರಿ ಅಂಗಡಿಯನ್ನು ಪ್ರಾರಂಭಿಸಿದರು.[]

ಅವರು ಮಧುಮೇಹಿಯಾಗಿದ್ದರು. ೧೯೯೦ ರಲ್ಲಿ ಅವರ ಕಾಲಿಗೆ ಗಾಜಿನ ತುಂಡಿನಿಂದ ಗಾಯವಾದದ್ದರಿಂದ ವೈದ್ಯರು ಕಾಲನ್ನು ಕತ್ತರಿಸುವ ಸಲಹೆ ನೀಡಿದರು. ನಂತರ ಅವರು ೨೦೦೨ ರಲ್ಲಿ ನಿಧನರಾದರು. ಅವರ ಸಾಧನೆಗಾಗಿ ಅವರಿಗೆ ಮರಣೋತ್ತರವಾಗಿ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿದೆ.

ಉಲ್ಲೇಖ

ಬದಲಾಯಿಸಿ
  1. Bhattal, Amardeep (21 January 2002). "Makhan Singh dead". The Tribune. Retrieved 13 July 2013.
  2. Makhan Singh Olympic Results, archived from the original on 18 April 2020, retrieved 15 August 2017
  3. Makhan Singh takes over, T.D. Parthasarathy, Sport and Pastime 1964 annual, p.91
  4. Ministry of Youth Affairs and Sports Website accessed 13 Nov 2006. Archived 30 June 2006 ವೇಬ್ಯಾಕ್ ಮೆಷಿನ್ ನಲ್ಲಿ.
  5. Winner takes all