ಮಕ್ಕಾ ಮಸ್ಜಿದ್
ಮಕ್ಕಾ ಮಸ್ಜಿದ್ ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿರುವ ಜನ ಸೇರುವ ಒಂದು ಮಸೀದಿಯಾಗಿದೆ. ಇದು 10,000 ಜನರ ಸಾಮರ್ಥ್ಯವನ್ನು ಹೊಂದಿರುವ ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ.[೧] ಈ ಮಸೀದಿಯನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು ರಾಜ್ಯ-ರಕ್ಷಿತ ಸ್ಮಾರಕವಾಗಿದೆ. ಇದು ಹೈದರಾಬಾದ್‌ನ ಹಳೆಯ ನಗರಕ್ಕೆ ಪ್ರಾಥಮಿಕ ಮಸೀದಿಯಾಗಿ ಕಾರ್ಯನಿರ್ವಹಿಸುತ್ತದೆ,[೨] ಮತ್ತು ಇದು ಚಾರ್ಮಿನಾರ್, ಚೌಮಹಲ್ಲಾ ಅರಮನೆ ಹಾಗೂ ಲಾಡ್ ಬಜಾರ್ ಐತಿಹಾಸಿಕ ಹೆಗ್ಗುರುತುಗಳಿಗೆ ಹತ್ತಿರದಲ್ಲಿದೆ.
ಕುತುಬ್ ಶಾಹಿ ರಾಜವಂಶದ ಆರನೇ ದೊರೆ ಮುಹಮ್ಮದ್ ಕುತುಬ್ ಷಾ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾದಿಂದ ತಂದ ಮಣ್ಣಿನಿಂದ ಇಟ್ಟಿಗೆಗಳನ್ನು ತಯಾರಿಸಲು ಆಜ್ಞೆ ಮಾಡಿದನು ಮತ್ತು ಮಸೀದಿಯ ಕೇಂದ್ರ ಕಮಾನು ನಿರ್ಮಾಣದಲ್ಲಿ ಅವುಗಳನ್ನು ಬಳಸಲಾಯಿತು. ಹಾಗಾಗಿ ಈ ಹೆಸರು.
ಇತಿಹಾಸ
ಬದಲಾಯಿಸಿಗೋಲ್ಕೊಂಡದ (ಈಗ ಹೈದರಾಬಾದ್) ಆರನೇ ಕುತುಬ್ ಶಾಹಿ ಸುಲ್ತಾನ ಸುಲ್ತಾನ್ ಮುಹಮ್ಮದ್ ಕುತುಬ್ ಷಾ ಆಳ್ವಿಕೆಯಲ್ಲಿ ಮಕ್ಕಾ ಮಸೀದಿಯ ನಿರ್ಮಾಣವು ಕ್ರಿ.ಶ. 1617 ರಲ್ಲಿ ಪ್ರಾರಂಭವಾಯಿತು. ಆಡಳಿತಗಾರನು ಸ್ವತಃ ತಾನೇ ಇದರ ಅಡಿಪಾಯವನ್ನು ಹಾಕಿದನು. ಮಸೀದಿಯನ್ನು ನಿರ್ಮಿಸಲು ಸುಮಾರು 8,000 ಕಾರ್ಮಿಕರನ್ನು ಬಳಸಿಕೊಳ್ಳಲಾಯಿತು. ಇದನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ 1693 ರಲ್ಲಿ ಪೂರ್ಣಗೊಳಿಸಿದನು.[೩][೧] ಮೂರು ಕಮಾನಿನ ಮುಂಭಾಗಗಳನ್ನು ಒಂದೇ ಗ್ರಾನೈಟ್ ತುಂಡಿನಿಂದ ಕೆತ್ತಲಾಗಿದೆ. ಇದನ್ನು ಅಗೆಯಲು ಐದು ವರ್ಷಗಳು ಬೇಕಾಯಿತು.
ಬಾಂಬ್ ದಾಳಿ
ಬದಲಾಯಿಸಿ18 ಮೇ 2007 ರಂದು, ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಕ್ಕಾ ಮಸೀದಿಯೊಳಗೆ ಬಾಂಬ್ ಸ್ಫೋಟಗೊಂಡಿತು, ಕನಿಷ್ಠ ಹದಿಮೂರು ಜನರು ಸಾವನ್ನಪ್ಪಿದರು ಮತ್ತು ಡಜನ್‍ಗಟ್ಟಲೆ ಜನರು ಗಾಯಗೊಂಡರು.[೪][೫]
ವಾಸ್ತುಕಲೆ
ಬದಲಾಯಿಸಿಮಕ್ಕಾ ಮಸೀದಿಯನ್ನು ಕುತುಬ್ ಶಾಹಿಗಳ ಅತ್ಯುತ್ತಮ ವಾಸ್ತುಕಲಾ ಕೆಲಸಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.[೬] ಇದನ್ನು ಕಲ್ಲುಮಣ್ಣು ಅಥವಾ ಪ್ಲಾಸ್ಟರ್ ಬದಲಾಗಿ ಸಂಪೂರ್ಣವಾಗಿ ನಯಗೊಳಿಸಿದ ಕಲ್ಲಿನಿಂದ ನಿರ್ಮಿಸಲಾಗಿದೆ. ಮಸೀದಿಯ ಪ್ರಾರ್ಥನಾ ಮಂದಿರವು 225 feet (69 m) ಉದ್ದ 180 feet (55 m) ಅಗಲವಿದ್ದು ಚಾವಣಿ 75 feet (23 m) ಎತ್ತರವಿದೆ. ಪ್ರಾರ್ಥನಾ ಮಂದಿರದ ಮುಂಭಾಗವು ಐದು ತೆರೆದ ಕಮಾನುಗಳನ್ನು ಹೊಂದಿದೆ ಮತ್ತು ಬದಿಗಳಲ್ಲಿ ಎರಡು ಮಿನಾರುಗಳಿವೆ. ಪ್ರತಿಯೊಂದು ಮಿನಾರಿನ ಮೇಲೆ ಗುಮ್ಮಟವಿದೆ ಮತ್ತು ಪ್ರಾರ್ಥನಾ ಮಂದಿರದ ಎರಡೂ ಬದಿಯಲ್ಲಿ ಮೇಲ್ಚಾವಣಿಯಿರುವ ಬಾಲ್ಕನಿಗೆ ಹೊಂದಿಕೊಂಡಿದೆ.[೩]
ಮಸೀದಿಯ ಸಾಹ್ನ್ (ಪ್ರಾಂಗಣ) 108 ಚದರ ಮೀಟರ್‌ಗಳಷ್ಟಿದೆ.[೨] ಇದು ನೆರಳು ಗಡಿಯಾರವನ್ನು ಹೊಂದಿದ್ದು ಜೊತೆಗೆ ಒಂದು ಹಮಾಮ್‍ನ ಅವಶೇಷಗಳನ್ನು ಹೊಂದಿದೆ. ಮಸೀದಿ ಸಂಕೀರ್ಣದ ಮುಖ್ಯ ಪ್ರವೇಶದ್ವಾರದ ಎರಡೂ ಬದಿಯಲ್ಲಿ ಎರಡು ಮಿನಾರ್‌ಗಳಿವೆ.[೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ Dayakar, G (2019). Qutb Shahi Architecture in Hyderabad- A Special Study. p. 28. ISBN 9788193828243. ಉಲ್ಲೇಖ ದೋಷ: Invalid
<ref>
tag; name ":0" defined multiple times with different content - ↑ ೨.೦ ೨.೧ Burton-Page, John (2008). Indian Islamic Architecture: Forms and Typologies, Sites and Monuments (PDF). Brill. p. 146. ISBN 9789047423652. ಉಲ್ಲೇಖ ದೋಷ: Invalid
<ref>
tag; name ":1" defined multiple times with different content - ↑ ೩.೦ ೩.೧ Khalidi, Omar (2009). A Guide to Architecture in Hyderabad, Deccan, India. Aga Khan Program for Islamic Architecture & MIT Libraries. p. 41. ಉಲ್ಲೇಖ ದೋಷ: Invalid
<ref>
tag; name ":2" defined multiple times with different content - ↑ "Bomb hits historic India mosque". BBC News Online. 18 May 2007.
- ↑ "HuJI ban takes no note of 'terror' role". The Times of India. 8 August 2010. Archived from the original on 4 November 2012.
- ↑ Alfieri, Bianca Maria; Borromeo, Federico (2000). Islamic Architecture of the Indian Subcontinent. Lawrence King Publishing. p. 162. ISBN 9781856691895.