ಭೋರಮ್‍ದೇವ್ ದೇವಾಲಯ

ಭೋರಮ್‍ದೇವ್ ದೇವಾಲಯವು ಭಾರತದ ಛತ್ತೀಸ್‌ಘಡ್ ರಾಜ್ಯದ ಭೋರಮ್‍ದೇವ್‍ನಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಸ್ಥಾನಗಳ ಸಂಕೀರ್ಣವಾಗಿದೆ.[] ಇದು ನಾಲ್ಕು ದೇವಾಲಯಗಳ ಒಂದು ಗುಂಪನ್ನು ಹೊಂದಿದ್ದು ಇದರಲ್ಲಿ ಅತ್ಯಂತ ಮುಂಚಿತವಾದದ್ದು ಇಟ್ಟಿಗೆಯ ದೇವಾಲಯವಾಗಿದೆ.[]

ಭೋರಮ್‍ದೇವ್ ದೇವಾಲಯವು ಮುಖ್ಯ ದೇವಾಲಯವಾಗಿದ್ದು ಕಲ್ಲಿನಿಂದ ಕಟ್ಟಲ್ಪಟ್ಟಿದೆ.[] ಕಾಮಪ್ರಚೋದಕ ಶಿಲ್ಪಗಳಿರುವ ವಾಸ್ತುಶಿಲ್ಪ ಲಕ್ಷಣಗಳು ಇದಕ್ಕೆ ಖಜುರಾಹೊ ದೇವಾಲಯ ಮತ್ತು ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದಂತೆ ಒಂದು ವಿಶಿಷ್ಟ ಶೈಲಿಯನ್ನು ನೀಡಿದೆ. ಹಾಗಾಗಿ ಭೋರಮ್‍ದೇವ್ ಸಂಕೀರ್ಣವು "ಛತ್ತೀಸ್‍ಗಢ್‍ನ ಖಜುರಾಹೊ" ಎಂಬ ಉಪನಾಮದಿಂದ ಪರಿಚಿತವಾಗಿದೆ.

ಭೋರಮ್‍ದೇವ್‍ನಿಂದ ಸುಮಾರು ೧ ಕಿಲೊಮೀಟರ್ ದೂರದಲ್ಲಿರುವ ಈ ಸಂಕೀರ್ಣದ ಮತ್ತೊಂದು ದೇವಾಲಯವೆಂದರೆ ಮಡ್ವಾ ಮೆಹೆಲ್ (ಸ್ಥಳೀಯ ಉಪಭಾಷೆಯಲ್ಲಿ ಇದರರ್ಥ ಮದುವೆ ಮಂಟಪ). ಇದು ದುಲ್ಹಾದೇವ್ ಎಂದೂ ಕರೆಯಲ್ಪಡುತ್ತದೆ. ಇದು ೧೬ ಕಂಬಗಳ ಮೇಲೆ ನಿಲ್ಲಿಸಲಾಗಿರುವ ಅನನ್ಯವಾದ ಶಿವಲಿಂಗವನ್ನು ಹೊಂದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. Syed Amanur Rahman; Balraj Verma (2006). The Beautiful India – Chhatisgarh. Reference Press.
  2. Deshpande, M.N. "Indian Archeological Survey – 1972-73" (PDF). National Informatics Center. pp. 13–14. Archived from the original (pdf) on 2016-03-04. Retrieved 2015-02-08.
  3. ೩.೦ ೩.೧ "Bhoramdeo: The Khajuraho of Chhattisgarh". National Informatics Center, Govt. of India. Archived from the original on 2009-11-25. Retrieved 2009-08-08.


ಹೊರಗಿನ ಕೊಂಡಿಗಳು

ಬದಲಾಯಿಸಿ