ಭೃಗು ಸರೋವರ
ಭೃಗು ಸರೋವರವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿ ಸುಮಾರು 4,300 metres (14,100 ft) ಎತ್ತರದಲ್ಲಿದೆ. ಇದು ರೋಹ್‍ತಾಂಗ್ ಕಣಿವೆಮಾರ್ಗಕ್ಕೆ ಪೂರ್ವದಲ್ಲಿದೆ. ಮನಾಲಿ ಪಟ್ಟಣಕ್ಕೆ ಸಮೀಪದಲ್ಲಿರುವ, ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿಯಾದ ವಶಿಷ್ಠ ದೇವಾಲಯದಿಂದ ಚಾರಣದ ಮೂಲಕ ಇದನ್ನು ತಲುಪಬಹುದು. ಇದಕ್ಕೆ ಮಹರ್ಷಿ ಭೃಗುರ ಹೆಸರಿಡಲಾಗಿದೆ.[೧][೨][೩]
ದಂತಕಥೆಯ ಪ್ರಕಾರ ಋಷಿಯು ಸರೋವರದ ಬಳಿ ಧ್ಯಾನ ಮಾಡುತ್ತಿದ್ದರು ಮತ್ತು ಆದ್ದರಿಂದ ಇದನ್ನು ಪವಿತ್ರವೆಂದು ಪರಿಗಣಿಸಲಾಗಿದೆ; ಈ ಕಾರಣದಿಂದಾಗಿ ಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುವುದಿಲ್ಲ ಎಂದು ಸ್ಥಳೀಯರು ನಂಬುತ್ತಾರೆ. ಈ ಸರೋವರವು ಭಾರತೀಯ ಇತಿಹಾಸದ ಶ್ರೇಷ್ಠ ಸಂತ ಋಷಿ ಭೃಗುಗೆ ಪವಿತ್ರವೆಂದು ಭಾವಿಸಲಾಗಿದೆ. ಇದು ಪ್ರದೇಶದ ವಿವಿಧ ಚಾರಣ ಮಾರ್ಗಗಳಲ್ಲಿ ಬರುತ್ತದೆ.[೪]
-
ಇದು ಅಂದಾಜು 14,200 ft (4,300 m) ಎತ್ತರದಲ್ಲಿರುವ ಭೃಗು ಸರೋವರ. ಹಿಮಾಲಯದ ಕುಲ್ಲುವಿನ ರೋಹ್‍ತಾಂಗ್ ಕಣಿವೆಮಾರ್ಗದ ಬಳಿ ಇದೆ.
-
ಘನೀಕೃತ ಭೃಗು ಸರೋವರ
ಉಲ್ಲೇಖಗಳು
ಬದಲಾಯಿಸಿ- ↑ "Bhrigu Lake, Himachal". himachalpradeshtourism.org. Archived from the original on 12 June 2018. Retrieved 4 February 2014.
- ↑ "Bhrigu Lake Trek". mountainsojourns.com.
- ↑ "Bhrigu Lake Trek (432.5 m)". geck-co.com. Archived from the original on 22 February 2014. Retrieved 4 February 2014.
- ↑ "himachaltourism.gov.in". Archived from the original on 24 March 2010. Retrieved 8 June 2019.