ಭೂಮಿಕಾ ಶೆಟ್ಟಿ (ಭೂಮಿ ಶೆಟ್ಟಿ) , ಇವರು ಭಾರತೀಯ ಟೆಲಿವಿಷನ್ ನಟಿ, ಮಾಡೆಲ್ ಮತ್ತು ಡಿಸ್ಕ್ ಜಾಕಿ. ಇವರು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ೨೦೧೯ ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ -೭ ನಲ್ಲಿ ಭಾಗವಹಿಸಿದ್ದು ಟಾಪ್ ೫ ಫೈನಲಿಸ್ಟ್ ಗಳಲ್ಲಿ ಬಬ್ಬರಾಗಿದ್ದರು.[]

ಭೂಮಿಕಾ ಶೆಟ್ಟಿ
Born೧೯ ಫೆಬ್ರವರಿ ೧೯೯೮
Nationalityಭಾರತೀಯ
Other namesಭೂಮಿ ಶೆಟ್ಟಿ , ರಾಯಲ್ ಶೆಟ್ಟಿ
Occupation(s)ನಟಿ, ಮಾಡೆಲ್
Known forಕಿನ್ನರಿ , ಬಿಗ್ ಬಾಸ್ ಸೀಸನ್ ೭
Parent(s)ಭಾಸ್ಕರ್ ಶೆಟ್ಟಿ(ತಂದೆ) , ಬೇಬಿ ಶೆಟ್ಟಿ (ತಾಯಿ)

ಜನನ , ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಭೂಮಿ ಶೆಟ್ಟಿ ಇವರು ೧೯ ಫೆಬ್ರವರಿ ೧೯೯೮ ರಂದು ಕುಂದಾಪುರದಲ್ಲಿ ಭಾಸ್ಕರ್ ಮತ್ತು ಬೇಬಿ ಶೆಟ್ಟಿ ದಂಪತಿಗೆ ಜನಿಸಿದರು.[] ಇವರು ಕುಂದಾಪುರದಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿಂದಲೇ ಶಾಲಾ ಶಿಕ್ಷಣವನ್ನು ಪಡೆದರು. ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜ್‌ನಿಂದ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ನಂತರ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡು ಎ.ಎಂ.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆದರು. ಅಂತಿಮವಾಗಿ ಇವರು ೨೦೧೯ ರಲ್ಲಿ ಬಿ.ಟೆಕ್ ಪದವಿ ಪಡೆದರು.

ವೃತ್ತಿಜೀವನ

ಬದಲಾಯಿಸಿ

ಬಾಲ್ಯದಿಂದಲೂ ಇವರು ಯಕ್ಷಗಾನ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರಿಂದ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ನಿರ್ಧರಿಸಿದರು.[] ಇವರು ೨೦೧೮ ರಲ್ಲಿ ಕನ್ನಡ ಟೆಲಿವಿಷನ್ ಸರಣಿ ಕಿನ್ನರಿಯಲ್ಲಿ 'ಮಣಿ' ಪಾತ್ರಕ್ಕಾಗಿ ಆಡಿಷನ್ ನೀಡಿದರು. ಅವರ ಅಭಿನಯಕ್ಕಾಗಿ ಅವರು ಹೆಚ್ಚು ಮೆಚ್ಚುಗೆ ಪಡೆದರು. ನಂತರ ನಿನ್ನೆ ಪೆಳ್ಳಾಡತಾ ಎಂಬ ತೆಲುಗು ಧಾರವಾಹಿಯಲ್ಲಿ ನಟಿಸಿದರು. ಇವರು ಆಗಸ್ಟ್ ೨೦೧೮ ರಲ್ಲಿ ಈ ಪ್ರದರ್ಶನಕ್ಕೆ ಸೇರಿಕೊಂಡರು ಮತ್ತು ಅಕ್ಟೋಬರ್ ೨೦೧೯ ರವರೆಗೆ ಕೆಲಸ ಮಾಡಿದರು. ಅಭಿ ಪ್ರತಾಪ್, ಕ್ರಾಂತಿ ಬಲಿವಾಡಾ, ಸರಾಯು ಮತ್ತು ಅನುಶೌಮೇಶ್ ಹೆಗ್ಡೆ ಅವರೊಂದಿಗೆ ಇವರು ನಟಿಸಿದ್ದು , ೮ ತಿಂಗಳವರೆಗೆ ಈ ಧಾರವಾಹಿಯಲ್ಲಿ ನಟಿಸಿ ನಂತರ ತನ್ನ ಪಾತ್ರವನ್ನು ತೊರೆದರು ಮತ್ತು ಅವರ ಸ್ಥಾನವನ್ನು ನಟಿ ಮಧುಬಾಲಾ ಎಂಬವರು ವಹಿಸಿಕೊಂಡರು.[]
೨೦೧೯ ರಲ್ಲಿ, ಇವರು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ೭ ರಲ್ಲಿ ಭಾಗವಹಿಸಿ ಟಾಪ್ ೫ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು.

ನಟನಾ ಜೀವನ

ಬದಲಾಯಿಸಿ

ಅಭಿನಯಿಸಿದ ಧಾರವಾಹಿಗಳು

ಬದಲಾಯಿಸಿ
ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೮ ಕಿನ್ನರಿ ಮಣಿ(ನಾಯಕಿ) []
೨೦೧೮ ನಿನ್ನೆ ಪೆಳ್ಳಾಡತಾ ಮೃದುಳಾ []

ಅಭಿನಯಿಸಿದ ಚಲನಚಿತ್ರಗಳು

ಬದಲಾಯಿಸಿ
ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೯ ಲಂಬೋದರ []
೨೦೨೧ ಇಕ್ಕಟ್ ಜಾನ್ವಿ []

ಗೌರವಗಳು

ಬದಲಾಯಿಸಿ
  • ೨೦೧೮ ನೇ ಸಾಲಿನ ಹೈದರಬಾದ್ ಟೈಮ್ಸ್ ವತಿಯಿಂದ ಮೋಸ್ಟ್ ಡಿಸೈರೇಬಲ್ ವಿಮೆನ್ ಗೌರವ.[]

ಉಲ್ಲೇಖಗಳು

ಬದಲಾಯಿಸಿ
  1. "bhoomi shetty: Latest News, Videos and Photos of bhoomi shetty | Times of India". The Times of India. Retrieved 16 May 2020.
  2. "Bhoomi Shetty (Bigg Boss Kannada) Wiki, Age, Biography, Boyfriend, Family & More". www.celebrityborn.com. Archived from the original on 18 ಜನವರಿ 2022. Retrieved 16 May 2020.
  3. "ಯಕ್ಷಗಾನ ಲೋಕದ ಗಟ್ಟಿಗಿತ್ತಿ ಭೂಮಿಕಾ - Prajavani". Dailyhunt (in ಇಂಗ್ಲಿಷ್). Retrieved 16 May 2020.
  4. "Ninne Pelladutha actress Bhoomi Shetty gets replaced in the show; here's why - Times of India". The Times of India (in ಇಂಗ್ಲಿಷ್). Retrieved 16 May 2020.
  5. "Kinnari fame Bhoomi Shetty looks unrecognisable in this retro pic; See picture - Times of India". The Times of India (in ಇಂಗ್ಲಿಷ್). Retrieved 16 May 2020.
  6. "Ninne Pelladatha Serial Actress Bhoomi Shetty Photos". www.telugunestam.com. Retrieved 16 May 2020.
  7. "Lambodara Movie: Showtimes, Review, Trailer, Posters, News & Videos | eTimes". Retrieved 16 May 2020.
  8. https://indianexpress.com/article/movie-review/ikkat-movie-review-amazon-kannada-comedy-is-smart-and-funny-7415414/
  9. "Most desirable woman on TV: Bhoomi Shetty - Times of India". The Times of India (in ಇಂಗ್ಲಿಷ್). Retrieved 19 May 2020.