ಭಂಡಾರ್‌ದರಾ
ಭಂಡಾರ್‌ದರಾ ಪಶ್ಚಿಮ ಘಟ್ಟಗಳ ಇಗತ್‍ಪುರಿ ಹತ್ತಿರವಿರುವ ಒಂದು ರಜಾದಿನಗಳ ವಿಹಾರ ಗ್ರಾಮವಾಗಿದೆ. ಈ ಹಳ್ಳಿಯು ಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯ ಅಕೋಲೆ ತಾಲ್ಲೂಕಿನಲ್ಲಿ ಸ್ಥಿತವಾಗಿದೆ. ಇದು ಮುಂಬೈಯಿಂದ ಸುಮಾರು ೧೮೫ ಕಿಲೋಮೀಟರ್ ದೂರವಿದೆ.
ಭಂಡಾರ್‌ದರಾ ಪ್ರವರ ನದಿಯ ಹತ್ತಿರವಿದೆ. ಇಲ್ಲಿನ ನೈಸರ್ಗಿಕ ಪರಿಸರ, ಜಲಪಾತಗಳು, ಪರ್ವತಗಳು, ವಿಲ್ಸನ್ ಅಣೆಕಟ್ಟು, ಆರ್ಥರ್ ಸರೋವರ್ ಮತ್ತು ರಾಂಧಾ ಜಲಪಾತ ಪ್ರವಾಸಿ ಆಕರ್ಷಣೆಗಳಾಗಿವೆ.
ಆಕರ್ಷಣೆಗಳು
ಬದಲಾಯಿಸಿ- ರತನ್‍ಗಡ್ ಕೋಟೆ
- ಅಗಸ್ತ್ಯ ಋಷಿ ಆಶ್ರಮ
- ಅಮೃತೇಶ್ವರ ದೇವಾಲಯ
- ಸಂಧಾನ್ ಕಣಿವೆ
- ರಾಂಧಾ ಜಲಪಾತ
- ನೆಕ್‍ಲೇಸ್ ಫ಼ಾಲ್
- ಹರಿಶ್ಚಂದ್ರಗಡ್ ಕೋಟೆ
- ಕೋಕನ್‍ಕಡಾ (ಘಾಟ್‍ಘರ್)
- ರಿವರ್ಸ್ ಫ಼ಾಲ್
- ನ್ಹಾನಿ ಜಲಪಾತ
ಇತರ ಆಕರ್ಷಣೆಗಳು
ಬದಲಾಯಿಸಿವಿಲ್ಸನ್ ಅಣೆಕಟ್ಟು: ಪ್ರವರ ನದಿಗೆ ಅಡ್ಡವಾಗಿ ಇದನ್ನು ಕಟ್ಟಲಾಗಿದೆ ೧೯೧೦ರಲ್ಲಿ. ದೇಶದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. ತೂಬುದ್ವಾರಗಳನ್ನು ತೆರೆದಾಗ ಎರಡು ೬೦ - ೮೦ ಅಡಿಗಳ ಚಿಕ್ಕ ಜಲಪಾತಗಳ ಸೃಷ್ಟಿಯಾಗುತ್ತದೆ.
ಆರ್ಥರ್ ಸರೋವರ: ಈ ಸರೋವರವು ತನ್ನ ನೀರನ್ನು ಪ್ರವರ ನದಿಯಿಂದ ಪಡೆಯುತ್ತದೆ. ಈ ಪ್ರಶಾಂತ ಸರೋವರ ಸಹ್ಯಾದ್ರಿ ಪರ್ವತಗಳ ದಟ್ಟ ಕಾಡುಗಳಿಂದ ಆವೃತವಾಗಿದೆ.
ರಾಂಧಾ ಜಲಪಾತ: ಈ ಜಲಪಾತದಲ್ಲಿ ಪ್ರವರ ನದಿಯು ಸುಮಾರು ೧೭೦ ಅಡಿ ಎತ್ತರದಿಂದ ಕಂದರದಲ್ಲಿ ಧುಮುಕುತ್ತದೆ. ಮಳೆಗಾಲದ ನೋಡಲು ಅತ್ಯುತ್ತಮವಾಗಿದೆ.
ಘಾಟ್‍ಘರ್: ಈ ಗ್ರಾಮಕ್ಕೆ ೨೨ ಕಿ.ಮಿ. ದೂರವಿರುವ ಇದು ಪ್ರದೇಶದ ನೋಟವನ್ನು ಒದಗಿಸುವ ಸ್ಥಳವಾಗಿದೆ.
ಕಲ್ಸುಬಾಯಿ ಪರ್ವತ: ಭಂಡಾರ್‌ದರಾದಿಂದ ಪ್ರವಾಸಿಗಳು ಸಹ್ಯಾದ್ರಿ ಶ್ರೇಣಿಯ ಅತ್ಯಂತ ಎತ್ತರದ ಶಿಖರವಾದ ಕಲ್ಸುಬಾಯಿ ಪರ್ವತವನ್ನು ನೋಡಬಹುದು. ಇದು ಚಾರಣಕ್ಕೆ ಜನಪ್ರಿಯವಾಗಿದೆ.
ರತ್ನಗಡ್ : ಈ ಕೋಟೆಯನ್ನು ಶಿವಾಜಿಯು ಸ್ವಾಧೀನಪಡಿಸಿಕೊಂಡಿದ್ದನು. ಕೋಟೆಯ ಸುತ್ತಮುತ್ತಲೂ ಚಾರಣಕ್ಕೆ ಆಸಕ್ತಿ ನೀಡುವಂತಹದ್ದಾಗಿದೆ.
ಸಂಧಾನ್ ಕಣಿವೆ ಹಳ್ಳಿಯಿಂದ ೨೫ ಕಿ.ಮಿ. ದೂರದಲ್ಲಿದೆ.
ಗಾಳಹಾಕುವುದು: ಈ ಸ್ಥಳವು ಗಾಳಹಾಕಿ ಮೀನುಹಿಡಿಯಲು ಜನಪ್ರಿಯವಾಗಿದೆ.