ಬ್ರಹ್ಮಗುಪ್ತ

ಗಣಿತಜ್ಞ

ಭಾರತದ ಒಬ್ಬ ಮಹಾನ್ ಗಣಿತಜ್ಞ ಹಾಗು ಬೀಜಗಣಿತ ಪ್ರತಿಪಾದಕ. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ ಗಣಿತ ಚಕ್ರ ಚೂಡಾಮಣಿ ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. ಬ್ರಹ್ಮಗುಪ್ತರವರು ಉಚ್ಚ ಗಣಿತ ಸಂಖ್ಯಾತ್ಮಕ ವಿಶ್ಲೇಷಣೆ ಶಾಖೆಯ ಸಂಸ್ಥಾಪಕರು.

Brahmagupta
ಜನನc. 598 CE
ಮರಣafter 665 CE
ವಾಸಸ್ಥಳ
  • ಭಿಲ್ಲಾಮಾಲಾ [೧]
  • ಉಜ್ಜೈನ್
ಕಾರ್ಯಕ್ಷೇತ್ರಗಣಿತ, ಖಗೋಳಶಾಸ್ತ್ರ
ಪ್ರಸಿದ್ಧಿಗೆ ಕಾರಣ

ಇವರು ಭಿನ್ನಲಿ ಎಂಬ ಸ್ಥಳದಲ್ಲಿ ಜನಿಸಿದರು ಎನ್ನಲಾಗುತ್ತದೆ. ಮಾಹಿತಿಗಳ ಪ್ರಕಾರ ಇವರು ಚಾಪವಂಶದ ರಾಜ ವ್ಯಘ್ರಮುಖನ ದರ್ಬಾರಿನಲ್ಲಿ ರಾಜ ಜ್ಯೋತಿಷಿಯಾಗಿದ್ದರು. ಇವರು ರಚಿಸಿದ ಬ್ರಹ್ಮ ಸ್ಪುಟ ಸಿದ್ಧಾಂತ ಮತ್ತು ಕರುಣ ಖಂಡ ಸಂಹಿತೆಗಳು ಪ್ರಖ್ಯಾತಿ ಗಳಿಸಿವೆ. [೨]

ಸಿದ್ಧಾಂತ ಸಂಪಾದಿಸಿ

ಇವರು ಶೂನ್ಯ ಬಳಕೆಯ ನಿಯಮವನ್ನ ಪ್ರತಿಪಾದಿಸಿದರು. ಈ ನಿಯಮದ ಪ್ರಕಾರ ಶೂನ್ಯದಿಂದ ಯಾವುದೇ ಸಂಖ್ಯೆಯನ್ನ ಕೂಡಿಸಿದರೆ ಅಥವಾ ಕಳೆದರೆ ಆ ಸಂಖ್ಯೆಯಲ್ಲಿ ಯಾವ ಅಂತರವೂ ಬರುವುದಿಲ್ಲ. ಅಷ್ಟೇ ಅಲ್ಲದೆ ಶೂನ್ಯವನ್ನ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ.[೩] ಬ್ರಹ್ಮಗುಪ್ತ, ತಮ್ಮ ಬ್ರಹ್ಮ ಸ್ಫುಟ ಸಿದ್ಧಾಂತ ಗ್ರಂಥದಲ್ಲಿ ಜ್ಯೋತಿಷ್ಯ ಹಾಗು ಗಣಿತದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಅಂಕಗಣಿತ ಮತ್ತು ಬೀಜಗಣಿತದ ಅಧ್ಯಯಗಳನ್ನೂ ಈ ಗ್ರಂಥದಲ್ಲಿ ವಿವರಿಸಲಾಗಿದೆ. ಇವರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿ ವಿವರಿಸಲಾಗಿದೆ. ಇವರು ಬರೆದ ಕರುಣ ಖಂಡ ಗ್ರಂಥಖಗೋಳ ಶಾಸ್ತ್ರದ ಬಗ್ಗೆ ವಿವರಣೆ ನೀಡುತ್ತದೆ. ತಮ್ಮ ಗ್ರಂಥಗಳಲ್ಲಿ ಬ್ರಹ್ಮಗುಪ್ತ, ಜ್ಯೋತಿಷ್ಯದ ಪ್ರಶ್ನೆಗೆ ಪರಿಹಾರ ತಿಳಿಸಲು ಬೀಜಗಣಿತ ಬಳಸಿದ್ದಾರೆ. ವರ್ಗೀಕರಣ ವರ್ಣನೆಯನ್ನ ಮೊದಲಬಾರಿಗೆ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಬ್ರಹ್ಮಗುಪ್ತರ ಬೀಜಗಣಿತ ಗ್ರಂಥಗಳನ್ನು, ಆಂಗ್ಲ ವಿದ್ವಾಂಸ ಕೊಲುಬುಕ ಎಂಬಾತ ಆಂಗ್ಲಭಾಷೆಗೆ ಅನುವಾದಿಸಿದ್ದಾನೆ. ಪೈಥಗೊರಸನ ನಿಯಮ ಇವರ ಗ್ರಂಥಗಳಲ್ಲಿ ಕಂಡುಬರುತ್ತದೆ ಹಾಗೂ ಇವರ ಗ್ರಂಥಗಳು ಆಧುನಿಕ ಬೀಜಗಣಿತಕ್ಕೆ ತಳಹದಿಯಾಗಿವೆ.

ಗ್ರಂಥಗಳು ಸಂಪಾದಿಸಿ

ಬಿರುದುಗಳು ಸಂಪಾದಿಸಿ

ಗಣಿತ ಚಕ್ರ ಚೂಡಾಮಣಿ

ಉಲ್ಲೇಖಗಳು ಸಂಪಾದಿಸಿ

  1. Sachau, Edward C. (2013), Alberuni's India, Routledge, p. 156, ISBN 978-1-136-38357-1, Brahma-siddhānta, so called from Brahman, composed by Brahmagupta, the son of Jishnu, from the town of Bhillamāla between Multān and Anhilwāra, 16 yojana from the latter place (?)
  2. http://www.storyofmathematics.com/indian_brahmagupta.html
  3. http://www-history.mcs.st-andrews.ac.uk/Biographies/Brahmagupta.html