ಬೈದು
ಬೈದು,ಇನ್ ಕಾ Chinese: 百度; pinyin: BǎidùChinese: 百度; pinyin: Bǎidùಎಂಬುದನ್ನು ಸರಳವಾಗಿ ಬೈದು ಎನ್ನಲಾಗುತ್ತದೆ.ಇದು ಜನವರಿ 18,2000 ರಲ್ಲಿ ಅಸ್ತಿತ್ವಕ್ಕೆ ಬಂತು.ಇದುಚೀನಾದ ಸರ್ಚ್ ಎಂಜಿನ್ ಆಗಿದ್ದು ವೆಬ್ ಸೈಟ್ಸ್ ,ಆಡಿಯೊ ಫೈಲ್ಸ್ ಮತ್ತು ಚಿತ್ರಗಳ ಗುಂಪನ್ನು ಕಂಡುಹಿಡಿಯುವ ಹುಡುಕಾಟದ ಮೂಲ (ಮಂ)ಯಂತ್ರ ಇದಾಗಿದೆ.(ಇದು ಚೀನಾದ ಪ್ರಖ್ಯಾತ ಕವಿತೆಯೊಂದರ ಹೆಸರಾಗಿದೆ.) ಬೈದು 57 ಹುಡುಕಾಟ ಮತ್ತು ಸಮುದಾಯದ ದೇವೆಗಳನ್ನು ಬೈದು ಬೇಕ್ ಎಂಬ ವಿಶ್ವಕೋಶವನ್ನೂ ಆನ್ ಲೈನ್ ಮೇಲೆ ಪರಿಚಯಿಸುತ್ತದೆ.ಅದಲ್ಲದೇ ಇದು ಚರ್ಚಾವೇದಿಕೆಗೆ ಕೀವರ್ಡ್ ಮೂಲದ ಆಧಾರ-ಆರಂಭ ಒದಗಿಸುತ್ತದೆ.[೪] ಬೈದುವನ್ನು 2000 ನಲ್ಲಿ ಸಹ ಸಂಸ್ಥಾಪಕರಾದ.ರಾಬಿನ್ ಲಿ ಮತ್ತು ಎರಿಕ್ ಕ್ಸು ಪರಿಚಯಿಸಿದರು. ಈ ಇಬ್ಬರೂ ಸಂಸ್ಥಾಪಕರು ಚೀನಾ ಮೂಲದವರಾಗಿದ್ದು ಹೊರದೇಶಗಳಲ್ಲಿ ಅಧ್ಯಯನ ಮತ್ತು ಕೆಲಸ ಮಾಡಿ, ಚೀನಾಕ್ಕೆ ಬರುವ ಮುಂಚೆ ಅವರು ಈ ಸಾಹಸಕ್ಕೆ ಕೈಹಾಕಿದರು.[೫] Baidu.com Inc. ನ್ನು ಕೆಯ್ ಮ್ಯಾನ್ ಐಲ್ಯಾಂಡ್ಸ್ ನಲ್ಲಿ ನೊಂದಾಯಿಸಲಾಗಿದೆ.[೫] ಕಳೆದ ಏಪ್ರಿಲ್ ,2010 ರಲ್ಲಿ ಬೈದು ಅಲೆಕ್ಸಾಸ್ ಇಂಟರ್ ನೆಟ್ ರಾಂಕಿಂಗ್ಸ್ ನಲ್ಲಿಒಟ್ಟಾರೆ 7 ನೆಯ ಸ್ಥಾನ ಪಡೆದಿದೆ.[೬] ಅದಲ್ಲದೇ ಡಿಸೆಂಬರ್ 2007 ರಲ್ಲಿ ಬೈದು NASDAQ-100 ನ ಸೂಚ್ಯಂಕದಲ್ಲಿ ಪಟ್ಟಿಯಾದ ಚೀನಾದ ಮೊದಲ ಕಂಪನಿ ಎನಿಸಿದೆ.[೭]
ಸಂಸ್ಥೆಯ ಪ್ರಕಾರ | Public (NASDAQ: BIDU) |
---|---|
ಸ್ಥಾಪನೆ | Beijing, China (2000 ) |
ಸಂಸ್ಥಾಪಕ(ರು) | Robin Li and Eric Xu |
ಮುಖ್ಯ ಕಾರ್ಯಾಲಯ | Beijing, China |
ವ್ಯಾಪ್ತಿ ಪ್ರದೇಶ | China, Japan |
ಪ್ರಮುಖ ವ್ಯಕ್ತಿ(ಗಳು) | Robin Li (Chairman, CEO) Jennifer Li (CFO) Peng Ye (COO) |
ಉದ್ಯಮ | Internet search |
ಸೇವೆಗಳು | Internet search services |
ಆದಾಯ | US$651 Million (FY 2009)[೧] |
ಆದಾಯ(ಕರ/ತೆರಿಗೆಗೆ ಮುನ್ನ) | US$235 Million (FY 2009)[೧] |
ನಿವ್ವಳ ಆದಾಯ | US$218 Million (FY 2009)[೧] |
ಒಟ್ಟು ಆಸ್ತಿ | US$902 Million (FY 2009)[೨] |
ಒಟ್ಟು ಪಾಲು ಬಂಡವಾಳ | US$696 Million (FY 2009)[೨] |
ಉದ್ಯೋಗಿಗಳು | 6,252[೩] |
ಉಪಸಂಸ್ಥೆಗಳು | Baidu, Inc. (Japan) |
ಬೈದು ಸುಮಾರು 740 ದಶಲಕ್ಷ ವೆಬ್ ಪುಟಗಳು,80 ದಶಲಕ್ಷ ಪ್ರತಿಂಬಿಂಗಳು ಮತ್ತು 10 ದಶಲಕ್ಷ ಮಲ್ಟಿಮೀಡಿಯಾ ಫೈಲ್ ಗಳ ಸೂಚ್ಯಂಕ ಪಟ್ಟಿಯನ್ನು ಪ್ರದರ್ಶಿಸುತ್ತದೆ.[೮] ಬೈದು ಮಲ್ಟಿ-ಮಿಡಿಯಾ ಅಂಶಗಳಾದ MP3 ಸಂಗೀತ ಮತ್ತು ಚಲನಚಿತ್ರಗಳನ್ನೊಳಗೊಂಡಿದೆ.WAP ಮತ್ತು PDA-ಮೂಲದ ಸಂಚಾರಿ ಹುಡುಕಾಟದ ಅಂದರೆ ಮೊಬೈಲ್ ಸರ್ಚ್ ಗೆ ತಾಣವಾಗಿದೆ.
ಬೈದು ತನ್ನ ಲೈನ್ ಕಂಟೆಂಟ್ ಅಥವಾ ಅದರಲ್ಲಿನ ಅಂಶಗಳನ್ನು ಸರ್ಕಾರಿ ನಿಯಂತ್ರಣಗಳ ನೀತಿ-ನಿಯಮಗಳಿಗನುಸಾರವಾಗಿ ಕತ್ತರಿ ಪ್ರಯೋಗ ಮಾಡುತ್ತದೆ.[೯]
ಹೆಸರು
ಬದಲಾಯಿಸಿ“ | Many people have asked about the meaning of our name. 'Baidu' was inspired by a poem written more than 800 years ago during the Song Dynasty. The poem compares the search for a retreating beauty amid chaotic glamour with the search for one's dream while confronted by life's many obstacles. '...hundreds and thousands of times, for her I searched in chaos, suddenly, I turned by chance, to where the lights were waning, and there she stood.' Baidu, whose literal meaning is hundreds of times, represents persistent search for the ideal. | ” |
ಈ ಹೆಸರು "ಬೈದು" ಎಂಬುದು ಕ್ಶಿನ್ ಕಿಜಿಯ ಶಾಸ್ತ್ರೀಯ ಕವಿತೆ "ಗ್ರೀನ್ ಜೆಡೆ ಟೇಬಲ್ ಇನ್ ದಿ ಲ್ಯಾಂಟರ್ನ್ ಫೆಸ್ಟಿವಲ್ " ಎಂಬುದರ ಸಾಲುಗಳಲ್ಲಿನ ಹೇಳಿಕೆಯನ್ನು ಇಲ್ಲಿ ಭಟ್ಟಿ ಇಳಿಸಲಾಗಿದೆ. "ನಾನು ಆತನನ್ನು ನೂರಾರು ಸಾವಿರಾರು ಬಾರಿ ಆತನನ್ನೋ ಗುಂಪಿನಲ್ಲಿ ಹುಡುಕಲು ಪ್ರಯತ್ನಿಸಿದೆ,ಆದರೆ ನಾನು ಆಕಸ್ಮಿ ಕವಾಗಿ ಹಠಾತ್ ಆಗಿ ಹಿಂದುರಿಗಿ ನೋಡಿದಾಗ,ಆ ಮಂದಬೆಳಕಿನಲ್ಲಿ ನಾನವನನ್ನು ಕಂಡೆ."
ಈ ಕವಿತೆಯ ಮೂಲಾರ್ಥ ಅಥವಾ ಉದ್ದೇಶವೆಂದರೆ ಚೀನಾದಲ್ಲಿ ಹುಡುಗಿಯರು ಸಾಮಾನ್ಯವಾಗಿ ಮನೆಯೊಳಗಡೆಯೇ ಉಳಿಯುತ್ತಾರೆ; ಅವರು ಕೇವಲ ಲ್ಯಾಂಟೆರ್ನ್ ಫೆಸ್ಟಿವಲ್ (ಬೆಳಕಿನ ಹಬ್ಬ)ದಂದು ಮಾತ್ರ ಹೊರಗೆ ಕಾಣಿಸಿಕೊಳ್ಳುತ್ತಾರೆ. ಆ ಲಾಟೀನ್ ಬೆಳಕುಗಳಲ್ಲಿ ಜನಸಾಗರ ಮತ್ತು ಗೌಜು-ಗಲಾಟೆಯಲ್ಲಿ ಅವರು ನುಸುಳಿ ಹೋಗಿ ತಮ್ಮ ಪ್ರಿಯತಮನನ್ನು ಕಾಣುತ್ತಾರೆ,ಅಲ್ಲದೇ ಮುಂದಿನ ವರ್ಷ ಮತ್ತೆ ಸಿಗುವುದಾಗಿ ಅವರೊಂದಿಗೆ ವಾಗ್ದಾನ ಮಾಡುತ್ತಾರೆ.
ಕವಿತೆಯ ಸಂಪೂರ್ಣ ಸಾರಾಂಶ: ಆಕಾಶದಲಿ ಹೂಗಳು ಸುರಿಮಳೆಗೈಯುತ್ತಿವೆ,ನಕ್ಷತ್ರಗಳು ಮಳೆಯಂತೆ ಕೆಳಕ್ಕೆ ಬೀಳುತ್ತಿವೆ,(ವಿಭಿನ್ನ ವರ್ಣದ ಸಿಡಿಮದ್ದು-ಪಟಾಕಿಗಳು/ಅದರ ರೂಪಾಲಂಕಾರವೆನಿಸಿವೆ.)ಇಡೀ ಬೀದಿಗಳಲ್ಲಿ ಸುವಾಸನೆ ತುಂಬಿ ತುಳುಕುತ್ತಿದೆ,ಅಲಂಕೃತ ರಥವನ್ನು ರತ್ನ-ವಜ್ರಾಭರಣ ಖಚಿತ ಅಶ್ವಗಳು ಎಳೆಯುತ್ತಿವೆ,ಮಿಂಚುವ ಮೀನುಗಳು ಬೃಹತ್ ಡ್ರ್ಯಾಗನ್ ನಂತಹ ದೊಡ್ಡ ಜಲಪ್ರಾಣಿಗಳು ಇಡೀ ರಾತ್ರಿ ದೀಪ ಹಿಡಿದು ನೃತ್ಯ ಮಾಡುತ್ತವೆ. ಚಿನ್ನದ ಎಳೆಗಳಿಂದ ಅಲಂಕೃತ ದೇಹವೊಂದು ತನಗೆ ಪಾತರಗಿತ್ತಿ ಬಣ್ಣ ಮೆತ್ತಿಕೊಂಡು ಎಲ್ಲೆಡೆಯೂ ನವಿರಾದ ಕಂಪನ್ನು ಬೀರುತ್ತಿದೆ. ಈ ವ್ಯಕ್ತಿಗಾಗಿ ಇಡೀ ರಾತ್ರಿಯಲ್ಲಾ ಹುಡುಕಾಡಿದರೂ ಕಾಣಿಸಿದ ಈತ ಹಠಾತ್ ನೇ ಹಿಂದೆ ತಿರುಗಿದಾಗ ಆತ ಅಲ್ಲಿಯೇ ಇದ್ದ,ಬೀದಿಯ ಕಟ್ಟಕಡೆಯ ಅಂಚಿನಲ್ಲಿದ್ದ ಅಮಂದ ಬೆಳಕಿನಲ್ಲಿ ಆತ ಕಣ್ಸೆಳೆದ.
ಬೈದುಗೆ ದಾರಿ
ಬದಲಾಯಿಸಿಆಗ 1944 ರ ವೇಳೆಗೆ ರಾಬಿನ್ ಲಿ IDD ಇನ್ ಫಾರ್ಮೇಶನ್ ಸರ್ವಿಸಿಸ್,ಇದು ನಿವ್ ಜರ್ಸಿಯ ಡೊವ್ ಜೊನ್ಸ್ ಅಂಡ್ ಕಂಪನಿಯ ವಿಭಾಗವಾಗಿತ್ತು.ಅಲ್ಲಿ ಅವರು ದಿ ವಾಲ್ ಸ್ಟ್ರೀಟ್ ಜರ್ನಲ್ ಗೆ ಆನ್ ಲೈನ್ ಸಂಪುಟ ಅಭಿವೃದ್ಧಿಗೆ ಸಹಾಯ ಮಾಡಿದರು.[೧೧] ಆತ ಈ ಸರ್ಚ್ ಎಂಜಿನ್ ಗಳಿಗಾಗಿ ಉತ್ತಮ ಅಂಕಗಣಿತದ ಸೂತ್ರಗಳ ಮೇಲೆ ಕೆಲಸ ಮಾಡಿದ. ಆತ IDD ಇನ್ ಫಾರ್ಮೇಶನ್ ಸರ್ವಿಸಿಸ್ ಗಾಗಿ ಮೇ 1994 ರಿಂದ ಜೂನ್ 1997 ರ ವರೆಗೆ ಕೆಲಸ ನಿರ್ವಹಿಸಿದ.
ಅದೇ ವೇಳೆಗೆ 1966 ರಲ್ಲಿ IDD ಗಾಗಿ ಲಿ ರಾಂಕ್ ಡೆಕ್ಸ್ ಸೈಟ್ ಸ್ಕೊರಿಂಗ್ ನ್ನು ಸರ್ಚ್ ಎಂಜಿನ್ ಗಾಗಿ ಅಂಕಗಣಿತೀಯ ಸೂತ್ರದ ಮೇಲೆ ಪೇಜ್ [೧೨][೧೩][೧೪] ರಾಂಕಿಂಗ್ ನ್ನು ಅಭಿವೃದ್ದಿಪಡಿಸಿದರು.ಈ ತಂತ್ರಜ್ಞಾನಕ್ಕಾಗಿ ಅವರು US ನ ಹಕ್ಕುಸ್ವಾಮ್ಯ ಪಡೆದುಕೊಂಡರು.[೧೫] ಹೀಗೆ ಅವರು ಈ ತಂತ್ರಜ್ಞಾನವನ್ನು ಬೈದು ಸರ್ಚ್ ಎಂಜಿನ್ ಗಾಗಿ ಬಳಸಿದರು.
ಸೇವೆಗಳು
ಬದಲಾಯಿಸಿಮಾಹಿತಿಗಾಗಿ ಬೈದು ಅಸಂಖ್ಯಾತ ಸೇವೆಗಳ Archived 2015-03-18 ವೇಬ್ಯಾಕ್ ಮೆಷಿನ್ ನಲ್ಲಿ. ನ್ನು ಒದಗಿಸುತ್ತದೆ,ಚೀನಾದ ಭಾಷಾ ಗುಚ್ಛದ ಸಹಾಯದಿಂದ ಹಲವು ವಿಷಯಗಳ ಪತ್ತೆಗೆ ನೆರವಾಗುತ್ತದೆ.ಉದಾಹರಣೆಗೆ ಚೀನೀಸ್ ಭಾಷೆಯ ಧ್ವನಿ ವಿಜ್ಞಾನ ಸಂಕೇತಗಳ ಬಳಸಿ ಅಗತ್ಯ ಮಾಹಿತಿ ಸಂಗ್ರಹಿಸಲು ಸಹಾಯ ಮಾಡುತ್ತದೆ,ಶೀಘ್ರ ಪತ್ತೆಯ ಹುಡುಕಾಟ,ಕ್ಷಣಾರ್ಧದಲ್ಲಿ ಛಾಯಾಚಿತ್ರಗಳು,ಶಬ್ದಾಕ್ಷರಗಳ ಪರೀಕ್ಷೆ,ಶೇರು ತಿಳಿವಳಿಕೆ,ಸುದ್ದಿ,ತಿಳಿವಳಿಕೆಗಳು,ಪೊಸ್ಟ್ ಬಾರ್ ,ಪ್ರತಿಬಿಂಬಗಳು,ವಿಡಿಯೊ ಮತ್ತು ಸ್ಪೇಸ್ ಗಳ ಮಾಹಿತಿ,ಮತ್ತು ಹವಾಮಾನ,ರೈಲು ಹಾಗು ವಿಮಾನ ವೇಳಾಪಟ್ಟಿ ಅಲ್ಲದೇ ಇನ್ನುಳಿದ ಸ್ಥಳೀಯ ಮಾಹಿತಿಗಳ ಒದಗಿಸುತ್ತದೆ. ದಿ ಯುಜರ್ -ಏಜೆಂಟ್ ಸ್ಟ್ರಿಂಗ್ ಬೈದು ಸರ್ಚ್ ಎಂಜಿನ್ ಗೆ ಸಹಾಯ ಮಾಡುತ್ತದೆ;ಇದನ್ನು ಬೈದುಸ್ಪೈಡರ್ ಎಂದು ಕರೆಯಲಾಗುತ್ತದೆ.[೧೬][೧೭]
- ಬೈದು ನಕ್ಷೆ (map.baidu.com)
- ಬೈದು ತನ್ನ ಜಪಾನ್ಮೂಲದ ಸರ್ಚ್ ಸೇವೆ (www.baidu.jp),ನ್ನು ಬೈದು ಜಪಾನ್ ಮೂಲಕ ನಡೆಸುತ್ತದೆ.ಕಂಪನಿಯ ಚೀನಾ ಹೊರಗಿನ ನಿಯಮಿತ ಸೇವೆಯ ಪ್ರಥಮ ಪ್ರಯತ್ನ ಇದಾಗಿದೆ. ಇದು ವೆಬ್ ಪೇಜ್ ಗಳಿಗಾಗಿ ಮತ್ತು ಇಮೇಜ್ ಸರ್ಚ್ ಗಳಿಗೆ ಸರ್ಚ್ ಬಾರ್ ಮತ್ತು ಯುಜರ್ ಸಹಾಯ ಮತ್ತು ಸುಧಾರಿತ,ಮುಂದುವರೆದ ಸೇವೆಗಳನ್ನೊಳಗೊಂಡಿದೆ.[೧೮]
- ಬೈದು ಪೊಸ್ಟ್ ಬಾರ್ ಬಳಕೆದಾರರಿಗೆ ಪ್ರಶ್ನಾವಳಿ ಮೂಲಕ ಸಮುದಾಯದ ಹುಡುಕಾಟದ ಮೂಲಕ ಪರಸ್ಪರ ಅಭಿಪ್ರಾಯಗಳ ವಿನಿಮಯ ಮತ್ತು ಜ್ಞಾನ ಮತ್ತು ಅನುಭವಗಳ ಒಬ್ಬರಿಗೊಬ್ಬರು ಹಂಚಿಕೊಳ್ಳಲು ಅನುಕೂಲ ಮಾಡುತ್ತದೆ. ಇದು ಆನ್ ಲೈನ್ ಕಮ್ಯುನಿಟಿ ಬದ್ದತೆಯುಳ್ಳ ಬೈದು ಸರ್ಚ್ ಸೇವೆಗೆ ಗಾಢವಾಗಿ ಅಂಟಿಕೊಂಡಿದೆ.
- ಬೈದು ನಿವ್ಸ್ ಸ್ಥಳೀಯ,ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನು ಒದಗಿಸುತ್ತದೆ,ಅಲ್ಲದೇ ಸುದ್ದಿ ವಿಶ್ಲೇಷಣೆ ಸುವೆಬ್ ಮೇಲೆ ಒದಗಿಸಲು ಸಹಾಯ ಮಾಡುತ್ತದೆ. ಬೈದು ತಲೆಬರೆಹದ ಶೀರ್ಷಿಕೆಗಳ ಸ್ವಯಂ ಸಂಸ್ಕರಣಕ್ಕೆ ಲಿಂಕ್ಸ್ ಸಂಭಂದದ ಕೊಂಡಿಗಳನ್ನು ಜೋಡಿಸುತ್ತದೆ.ಹೀಗಾಗಿ ನೋಡುಗರಿಗೆ ಒಂದೇ ಸುದ್ದಿ ಮೇಲೆ ವಿವಿಧ ಅಭಿಪ್ರಾಯಗಳನ್ನು ಓದಬಹುದಾಗಿದೆ. ಚೈನೀಸ್ ಅಥವಾ ಚೀನಾ ಸರ್ಕಾರ ಮತ್ತು ಚೀನಾ ಉದ್ಯಮದ ಮೂಲಗಳ ಪ್ರಕಾರ,ಬೈದು ಬೀಜಿಂಗ್ ನಿಂದ ಅನುಮತಿ ಪಡೆದು ತನ್ನ ಸರ್ಚ್ ಎಂಜಿನ್ನನ್ನು ಪೂರ್ಣ ಪ್ರಮಾಣದ ಸುದ್ದಿ ವೆಬ್ ಸೈಟ್ ಆಗಿ ನಡೆಸಲು ಪರವಾನಿಗೆ ಪಡೆದಿದೆ. ಹೀಗೆ ಬೈದು ತನ್ನ ಸ್ವಂತ ಸುದ್ದಿ,ವರದಿಗಳು ಮತ್ತು ಸರ್ಚ್ ಎಂಜಿನ್ ಗಾಗಿ ಕೆಲವು ನಿರ್ಧಿಷ್ಟ ಫಲಿತಾಂಶಗಳನ್ನು ಹೊರಗೆಡುವಲು ಸಾಧ್ಯವಿದೆ. ಕಂಪನಿಯು ಈಗಾಗಲೇ ತನ್ನ ಸುದ್ದಿ ವಿಭಾಗವನ್ನು ಪರಿಚಯಿಸುವ ತಯಾರಿಯಲ್ಲಿದೆ. ಬೈದು ಒಂದೇ ಪ್ರಥಮ ಸರ್ಚ್ ಎಂಜಿನ್ ಚೀನಾದಲ್ಲಿ ಈ ತೆರನಾದ ಅನುಮತಿಗೆ ಪಾತ್ರವಾಗಿದೆ.[೧೯]
- ಬೈದು ನೋಜ್ ಬಳಕೆದಾರರಿಗೆ ಪ್ರಶ್ನಾವಳಿ ಆಧಾರದ ಜ್ಞಾನ ಮತ್ತು ಅನುಭವಗಳ ಹಂಚಿಕೊಳ್ಳಲು ನೆರವಾಗುತ್ತದೆ.百度知道 ಈ ಬೈದು ನೋಜ್ ಮುಖಾಂತರ ಬೈದು ನೋಜ್ ಗೆ ಸದಸ್ಯರಾದವರು ತಮ್ಮ ಪ್ರಶ್ನೆಗಳನ್ನು ಕಳಿಸಿ ಇನ್ನುಳಿದ ಸದಸ್ಯರ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
- ಬೈದು MP3 ಸರ್ಚ್ ಅಂಕಗಣಿತದ ಸೂತ್ರದ ಮೂಲಕ ಹಾಡುಗಳಿಗೆ ಮತ್ತು ಇಂಟರ್ ನೆಟ್ ನಲ್ಲಿನ ಇನ್ನುಳಿದ ಮಲ್ಟಿಮೀಡಿಯಾದ ಫೈಲ್ ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬೈದು ಜನಪ್ರಿಯ "MP3 ಸರ್ಚ್ "ಎಂಬ ಕೈಪಿಡಿಯು ಸಮಗ್ರ ಚೀನಾದ ಜನಪ್ರಿಯ ಸಂಗೀತದ ಪಟ್ಟಿಗಳನ್ನು ಅಂದರೆ (ಬೈದು 500 )ನ್ನು ಒದಗಿಸುತ್ತದೆ. ಬೈದು ಹಲವಾರು ಫೈಲ್ ಫಾರ್ಮೆಟ್ಸ್MP3, WMA ಮತ್ತುSWF ಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ.ಮಲ್ಟಿಮೀಡಿಯಾ ಸರ್ಚ್ ಫೀಚರ್ ನ್ನು ಪ್ರಮುಖವಾಗಿ ಚೀನಾದ ಪಾಪ್ ಸಂಗೀತpop music ದ ಹುಡುಕಾಟಕ್ಕಾಗಿ ಬಳಸಲಾಗುತ್ತದೆ. ಇಂತಹ ಕಾರ್ಯವಿಧಾನಗಳ ಮಾಹಿತಿಯನ್ನು ಚೀನಾದ ಕಾನೂನಿನಡಿ ನಕಲು ಮಾಡುವುದನ್ನು,ಕಾಪಿರೈಟ್ ನಿಯಮದಡಿ ಪರಿಗಣಿಸಲಾಗುತ್ತದೆ.ಇದರ ಮರುಮುದ್ರಣ ಅಥವಾ ಮರುಪ್ರಕಾಶನದಂತಹ ವಿಷಯಗಳಲ್ಲಿ ಚೀನಾದ ಕಾನೂನುಗಳನ್ನು ಉಲ್ಲಂಘಿಸದಂತೆ ಅದು ನೋಡಿಕೊಳ್ಳುತ್ತದೆ. ಇದೇ ನೀತಿ-ಧೋರಣೆಯನ್ನು ಇತರ ಸ್ಥಳೀಯ ಸರ್ಚ್ ಎಂಜಿನ್ ಗಳು ಪಾಲಿಸುತ್ತವೆ.ಗೂಗಲ್ ಚೀನಾ ಕೂಡಾ ಇಂಟರ್ ಮಿಡಿಯೇಟ್ ಕಂಪನಿ ಟಾಪ್100 ಮೂಲಕ ಅದೇ ಮಾದರಿಯ MP3 ಸರ್ಚ್ ಸೇವೆ ಒದಗಿಸುತ್ತದೆ.
- ಬೈದು ಇಮೇಜ್ ಸರ್ಚ್ ಕೂಡಾ ಬಳಕೆದಾರರಿಗೆ ದಶಲಕ್ಷಗಟ್ಟಲೇ ಛಾಯಾ ಪ್ರತಿಬಿಂಬಗಳನ್ನು ಇಂಟರ್ ನೆಟ್ ಮೇಲೆ ಹುಡುಕಲು ನೆರವಾಗುತ್ತದೆ. ಬೈದು ಇಮೇಜ್ ಸರ್ಚ್ ಹುಡುಕಾಟ ಪ್ರತಿಬಿಂಬದ ಗಾತ್ರ ಮತ್ತು ಇಮೇಜ್ ಫೈಲ್ ಅಥವಾ ಕಡತದ ವಿಧ ಅವಲಂಬಿಸಿದೆ. ಇಮೇಜ್ ಗಳ ಪಟ್ಟಿಯನ್ನು ವರ್ಗೀಕೃತ ವಿಭಾಗಗಳಲ್ಲಿ ಮಾಡಲಾಗುತ್ತಿದ್ದು ಅವು ಪ್ರಸಕ್ತಕ್ಕೆ ತಕ್ಕಂತೆ ಗಣಿತದ ಸೂತ್ರಗಳ ಮೂಲಕ ತಮ್ಮಿಂದ ತಾವೇ ಹೊಸತನ ಪಡೆಯುತ್ತವೆ.
- ಬೈದು ವಿಡಿಯೊ ಸರ್ಚ್ ಬಳಕೆದಾರರಿಗೆ ಆನ್ ಲೈನ್ ವಿಡಿಯೊ ಕ್ಲಿಪ್ಸ್ ಗಳು ತೀಕ್ಷಣವಾಗಿ ದೊರೆಯುವಂತೆ ಮಾಡುತ್ತದೆ,ಅಲ್ಲದೇ ಮೂರನೆಯ ವೆಬ್ ಸೈಟ್ ಗಳಲ್ಲಿನ ಕ್ಲಿಪಿಂಗ್ಸ್ ಗಳ ಪಡೆಯಲು ಅನುಕೂಲವಾಗುತ್ತದೆ.
- ಬೈದುವಿನ ಬೈದು ಸ್ಪೇಸ್ (hi.baidu.com) ಸೊಸಿಯಲ್ ನೆಟ್ವರ್ಕಿಂಗ್ ಸರ್ವಿಸ್ ನೊಂದಾಯಿತ ಸದಸ್ಯರು ತಮ್ಮದೇ ವೈಯಕ್ತಿಕ ಹೋಮ್ ಪೇಜ್ ಗಳ ನಿರ್ಮಿಸಲು ಹಾಗು ಪ್ರಶ್ನಾವಳಿ ಆಧಾರಿತ ಸರ್ಚೇಬಲ್ ಕಮ್ಯುನಿಟಿಗೆ ಸಹಾಯ ಮಾಡುತ್ತದೆ. ನೊಂದಾಯಿತ ಬಳಕೆದಾರರು ತಮ್ಮ ವೆಬ್ ಲಾಗ್ ಗಳನ್ನು,ಫೊಟೊ ಆಲ್ಬಮ್ ,ಮತ್ತು ಅವರ ಹೋಮ ಪೇಜ್ ಮೇಲಿನ ಕೆಲವು ನಿಶ್ಚಿತ ಮಾಹಿತಿಯನ್ನು ತಮ್ಮ ಸ್ವಂತ ಸಮುದಾಯ ಅಥವಾ ನೊಂದಾಯಿತ ಅವರದೇ ಸ್ನೇಹಿತರಿಗೆ ರವಾನಿಸಬಹುದು. ಕಳೆದ ಜುಲೈ 2009 ರಲ್ಲಿ ಅದು 100 ದಶಲಕ್ಷ ನೊಂದಾಯಿತ ಬಳಕೆದಾರರನ್ನು ಹೊಂದಿದೆ.
- ಬೈದು ಎನ್ ಸೈಕ್ಲೊಪಿಡಿಯಾ ವು ಚೀನಾದ ಬಹುಸಂಖ್ಯಾತರು ದೊಡ್ಡ ಪ್ರಮಾಣದಲ್ಲಿ ಬಳಸುವ ವಿಶ್ವಕೋಶವಾಗಿದೆ.ಅದಲ್ಲದೇ ಪೇಜ್ ವಿವ್ ಗಳು ಮತ್ತು ವೆಬ್ ಟ್ಯ್ರಾಫಿಕ್ ಗಳು ಉಪಯೋಗವಾಗುತ್ತವೆ.ಇದು ಎರಡನೆಯ ಅತಿ ದೊಡ್ಡ ಬಳಕೆದಾರರ ಸಮುದಾಯ ಹೊಂದಿದೆ ಎಂದು ಇದರ ಆರ್ಟಿಕಲ್ ಕೌಂಟ್ ಅಂದರೆ ಎಣಿಕೆಯಲ್ಲಿ ಹೇಳಲಾಗಿದೆ.(ಹುಡೊಂಗ್ ನಂತರದ್ದು)
- ಚೀನಾ ಡಿಜಿಟಲ್ ವಿಲೇಜ್ ಎನ್ ಸೈಕ್ಲೊಪಿಡಿಯಾ 中国数字乡村大百科全书ವು ಜೂನ್ 2009 ರಲ್ಲಿ ಅತಿ ದೊಡ್ಡ ಡಿಜಿಟಲ್ ಮಾಹಿತಿ ಕೋಶದ ಬಗ್ಗೆ ಘೋಷಿಸಿತು.ಇದು ಚೀನಾದ ಸೆಕ್ಯುರಿಟೀಸ್ ಜರ್ನಲ್ ನಲ್ಲಿ ಈ ವಿಷಯ ಪ್ರಕಟಿಸಿತು. ಸದ್ಯದಲ್ಲೇ ಅದು ಚೀನಾದಲ್ಲಿನ 500,000 ಆಡಳಿತಾತ್ಮಕ ಹಳ್ಳಿಗಳಲ್ಲಿನ ಒಟ್ಟು 600,000 ಚೀನಾದ ಗ್ರಾಮಗಳ 80% ರಷ್ಟನ್ನು ವ್ಯಾಪಿಸಲಿದೆ. ಈ ಸೈಕ್ಲೊಪಿಡಿಯಾದ ಅಂಶಗಳನ್ನು ಸಂಗ್ರಹಿಸಲು ಗ್ರಾಮೀಣ ಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ'ಗ್ರಾಮೀಣ ಮಾಹಿತಿ 乡村信息化大赛ಸ್ಪರ್ಧೆ'ಏರ್ಪಡಿಸಿ (xiangcun.baidu.com Archived 2009-10-14 ವೇಬ್ಯಾಕ್ ಮೆಷಿನ್ ನಲ್ಲಿ.)ಮೂಲಕ ತನ್ನ ಕಾರ್ಯವಿಧಾನ ಸಿದ್ದಪಡಿಸುತ್ತದೆ.ಈ ಉದ್ದೇಶಕ್ಕಾಗಿ ಅದು ಐದು ದಶಲಕ್ಷ ಯಾನ್ ಗಳ ಹೆಚ್ಚುವರಿ ನಿಧಿ ಘೋಷಿಸಿದೆ. ಚೀನಾದ ಗ್ರಾಮೀಣ ಪ್ರದೇಶಗಳು ಬೈದುವಿನ ಅತಿ ದೊಡ್ಡ ಎಲೆಕ್ಟ್ರಾನಿಕ್ ವಹಿವಾಟು (e-business) ಇ-ಬಿಜಿನೆಸ್ ನಡೆಸುತ್ತದೆ.ಇದರಿಂದಾಗಿ ವೇಗವಾಗಿ ಬೆಳೆಯುವ ಕೃಷಿ,ಅರಣ್ಯ,ಪಶು ಮತ್ತು ಮೀನುಗಾರಿಕೆಯ ಕೀವರ್ಡ್ ಪ್ರೊತ್ಸಾಹಕ್ಕೆ ಕ್ರಮಕೈಗೊಳ್ಳಲಾಗಿದೆ.ಇದು ಬೈದುವಿನ ಒಟ್ಟು ಆದಾಯದ ಪ್ರಮುಖ ಭಾಗವಾಗಿದೆ. ಇದಲ್ಲದೇ ಬೈದು ಎನ್ ಸೈಕ್ಲೊಪಿಡಿಯಾ ಅಲ್ಲದೇ ಎಲ್ಲಾ ಕೀವರ್ಡ್ ಪ್ರಮೊಶನ್ ಗೆ ಇಲ್ಲಿಇನ್ನಿತರ ಉತ್ಪನ್ನಗಳನ್ನು ಜನಪ್ರಿಯಗೊಳಿಸಿತು.ಉದಾಹರಣೆಗೆ ಬೈದು ಝೈದಾವೊ ಮತ್ತು ಬೈದು ಯೋವುವಾ ಮೂಲಕ ಸಲಹಾ ಕೇಂದ್ರ ಆರಂಭಿಸಿದೆ.ಬ್ರಾಂಡ್ ಆಡ್ ಪ್ರದರ್ಶನಗಳು ಮತ್ತು ಆನ್ ಲೈನ್ ನೆಟ್ವರ್ಕ್ ,ಮಾರ್ಕೆಟಿಂಗ್ /ಮಾರಾಟ ಮಾಹಿತಿ ಗ್ರಾಮೀಣ ಪ್ರವಾಸೋದ್ಯಮ ಅಲ್ಲದೇ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಿದೆ.[೨೦]
- ಬೈದು ಸರ್ಚ್ ರಾಂಕಿಂಗ್ ಹುಡುಕಾಟದ ಪದಗುಚ್ಚಗಳನ್ನು ಪಟ್ಟಿ ಮಾಡುತ್ತದೆ,ಇದಕ್ಕಾಗಿ Baidu.com ನಲ್ಲಿ ಪ್ರಶ್ನೆಗಳ ಸರಣಿ ಸಲ್ಲಿಸಬೇಕಾಗುತ್ತದೆ. ಈ ಪಟ್ಟಿಗಳನ್ನು ವರ್ಗೀಕರಣ ಮಾಡಿ, ಬಳಕೆದಾರರನ್ನು ಅವರ ಆಸಕ್ತಿಗನುಗುಣವಾಗಿ ಸರ್ಚ್ ವಿಷಯಾನುಕ್ರಮಣಗಳ ಪದಗಳಿಗೆ ಸಂಘಟನಾತ್ಮಕವಾದ ವಿವರ ನೀಡುತ್ತದೆ.
- ಬೈದು ವೈಬ್ ಡೈರೆಕ್ಟರಿ ಯು ಬಳಕೆದಾರರಿಗೆ ಬ್ರೌಸ್ ಮತ್ತು ಸರ್ಚ್ ಗಳನ್ನು ವೆಬ್ ಸೈಟ್ ಮೂಲಕ ಸಂಘಟಿತ ವಿವರ ಒದಗಿಸುತ್ತದೆ.
- ಬೈದು ಗವರ್ನ್ ಮೆಂಟ್ ಇನ್ ಫಾರ್ಮೇಶನ್ ಸರ್ಚ್ ಬಳಕೆದಾರರಿಗೆ ಹಲವಾರು ಕಾನೂನು,ನೀತಿ-ನಿಯಮಾವಳಿಗಳ ಪಟ್ಟಿ,ತಿಳಿವಳಿಕೆ, ಪೀಪಲ್ಸ್ ಆಫ್ ರಿಪಬ್ಲಿಕ್ ಆಫ್ ಚೀನಾ ಸರ್ಕಾರಕ್ಕೆ ಮತ್ತು ಅದರ ಅಂಗಸಂಸ್ಥೆಗಳಿಗೆ ನೀಡಿದ ಸಲಹೆಗಳ ಮಾಹಿತಿ ಪ್ರಕಟಿಸಲಾಗುತ್ತದೆ.
- ಬೈದು ಪೊಸ್ಟಲ್ ಕೋಡ್ ಸರ್ಚ್ ಹುಡುಕಾಟವು ಚೀನಾದ ನೂರಾರು ನಗರಗಳ ಅಂಚೆ ಕೋಡ್ ನಂಬರ್ ಗಳ ಮಾಹಿತಿ ನೀಡುತ್ತದೆ.
- ಎಜುಕೇಶನಲ್ ವೆಬ್ ಸೈಟ್ ಸರ್ಚ್ ಇದು ಎಲ್ಲಾ ಶಿಕ್ಷಣಸಂಸ್ಥೆಗಳ ಮಾಹಿತಿ ನೀಡುತ್ತದೆ. ಬೈದು ಯುನ್ವರ್ಸಿಟಿ ಸರ್ಚ್ ಬಳಕೆದಾರರಿಗೆ ವಿಶೇಷ ಮಾಹಿತಿ ಅಥವಾ ಬ್ರೌಸ್ ಮೂಲಕ ಚೀನಾದಲ್ಲಿನ ಯುನ್ವರ್ಸಿಟೀಸ್ ಬಗ್ಗೆ ಮಾಹಿತಿ ನೀಡುತ್ತದೆ.
- ಬೈದು ಲೀಗಲ್ ಸರ್ಚ್ ಎಲ್ಲಾ ತೆರನಾದ ಕಾನೂನು ಅಂಕಿಅಂಶಗಳ ಮೂಲವನ್ನು ಅದು ರಾಷ್ಟ್ರೀಯ ಸ್ಥಳೀಯ ಕಾನೂನು ನಿಯಮ-ನಿಯಂತ್ರಣಗಳು,ನಿರ್ಧಾರಗಳು ಮತ್ತು ಕಾನೂನು ಶಬ್ದಕೋಶಗಗಳನ್ನು ಒದಗಿಸುತ್ತದೆ.
- ಬೈದು ಲೌ ಪ್ರಶ್ನಾವಳಿ ಆಧಾರದ ಸಮುದಾಯ ಮೂಲದ ನೊಂದಾಯಿತ ಸದಸ್ಯರು ತಮ್ಮ ಪ್ರೀತಿಪಾತ್ರರರಿಗೆ ಸಂದೇಶ ರವಾನಿಸಬಹುದು.
- ಬೈದು ಪೇಟೆಂಟ್ ಸರ್ಚ್ ಮೂಲಕ ಚೀನಾದ ಹಕ್ಕುಸ್ವಾಮ್ಯದ ನಿಯಮಾವಳಿಗಳನ್ನು ಪಡೆಯಬಹುದು.ಹಕ್ಕು ಸ್ವಾಮ್ಯದ ಮೂಲಾಧಾರಗಳು,ಮಾಹಿತಿ,ಪೇಟೆಂಟ್ ಹೆಸರು,ಅರ್ಜಿ ಸಂಖ್ಯೆ,ಕಡತದ ದಿನಾಂಕ ಹುಡುಕುವವರ ಮಾಹಿತಿ ಮತ್ತು ಪೇಟೆಂಟ್ ನ ಸಂಕ್ಷಿಪ್ತ ವಿವರ ಇದರಲ್ಲಿದೆ.
- ಬೈದು ಗೇಮ್ಸ್ ಆನ್ ಲೈನ್ ಚಾನಲ್ ಆಗಿರುವ ಇದು ಬಳಕೆದಾರರಿಗೆ ಕ್ರೀಡೆಗೆ ಸಂಬಂಧಿಸಿದ ಸುದ್ದಿ ಮತ್ತು ಅದರ ವಿವರಗಳನ್ನು ಸರ್ಚ್ ಅಥವಾ ಬ್ರೌಸ್ ಮೂಲಕ ನೀಡುತ್ತದೆ.
- ಬೈದು-ಹೆಕ್ಸುನ್ ಫೈನಾನ್ಸ್ (finance.baidu.com Archived 2016-10-26 ವೇಬ್ಯಾಕ್ ಮೆಷಿನ್ ನಲ್ಲಿ.),ಇದು ಹಣಕಾಸು ವಹಿವಾಟಿನ ಮಾಹಿತಿ ನೀಡುವ ವೆಬ್ ಸೈಟ್ ಇದು,Hexun.com, ಚೀನಾದಲ್ಲಿ ಹಣಕಾಸು ಸೇವೆ ಮಾಹಿತಿ ಮತ್ತು ಸುದ್ದಿ ವರದಿಗಾರಿಕೆ ಅಲ್ಲದೇ ಶೇರುಗಳ ಕುರಿತು ಸಲಹಾ ಪರವಾನಿಗೆಗಳ ಬಗ್ಗೆ ವಿವರಿಸುತ್ತದೆ. ಬಳಕೆದಾರರು ಆರ್ಥಿಕ ಮತ್ತು ಹಣಕಾಸುಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಹುಡುಕಾಟ ಅಥವಾ ಬ್ರೌಸ್ ಮಾಡಿ ವೈಯಕ್ತಿಕ ವೆಲ್ತ್ ಮ್ಯಾನೇಜ್ ಮೆಂಟ್ ಅಂದರೆ ಸಂಪತ್ತು ನಿರ್ವಹಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಅಂಕಿಅಂಶಗಳ ಪಡೆಯಬಹುದು.
- ಬೈದು ಸ್ಟ್ಯಾಟಿಸ್ಟಿಕಲ್ ಸರ್ಚ್ ಮೂಲಕ ಬಳಕೆದಾರರು ಗವರ್ನ್ ಮೆಂಟ್ ಆಫ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಪ್ರಕಟಿಸಿದ ಚೀನಾ ಸರ್ಕಾರದ ಎಲ್ಲಾ ಅಂಕಿಅಂಶಗಳ ಮಾಹಿತಿ ನೀಡುತ್ತದೆ.
- ಬೈದು ಎಂಟರ್ ಟೇನ್ ಮೆಂಟ್ ಒಂದು ಮನರಂಜನೆಗೆ ಮೀಸಲಾದ ಚಾನಲ್ ಆಗಿದ್ದು ಅದಕ್ಕೆ ಮೀಸಲಾದ ಸುದ್ದಿ ಮತ್ತು ಅದರ ವಿಭಾಗಗಳನ್ನು ಪ್ರದರ್ಶಿಸುತ್ತದೆ. ಬಳಕೆದಾರರು ತಮಗೆ ಬೇಕಾದ ಸಿನೆಮಾ ತಾರೆಗಳು,ಸಿನೆಮಾ ಮತ್ತು ಟೆಲೆವಿಜನ್ ಸರಣಿಗಳು ಮತ್ತು ಸಂಗೀತ ಅದಕ್ಕೆ ಸಂಭಂಧಿಸಿದ ಸುದ್ದಿಗಳನ್ನು ಹುಡುಕಬಹುದು.
- ಬೈದು ಡಿಕ್ಷನರಿ ಯು ಬಳಕೆದಾರರಿಗೆ ಪಠ್ಯದ ಅನುವಾದಕ್ಕೆ ಕಣ್ಣಾಡಿಸಲುಬೇಕಾದ ಶಬ್ದಕೋಶ ಸೇವೆಗಳನ್ನು ನೀಡುತ್ತದೆ.
- ಬೈದು ಯೋವಾ (youa.baidu.com Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ.), ಇದೊಂದು ಆನ್ ಲೈನ್ ಶಾಪಿಂಗ್/ಇ-ಕಾಮರ್ಸ್ಗಾಗಿ ವೇದಿಕೆ ಒದಗಿಸುತ್ತದೆ.ಬೈದು ನೊಂದಾಯಿತ ಸದಸ್ಯರಿಗೆ ಇದು ಅನುಕೂಲ ಒದಗಿಸುತ್ತದೆ.
- ಬೈದು ಡೆಸ್ಕ್ ಟಾಪ್ ಸರ್ಚ್ ಒಂದು ಉಚಿತ ಡೌನ್ ಲೋಡ್ ಮಾಡಬಹುದಾದ ಸಾಫ್ಟ್ ವೇರ್ ಇದು ಬಳಕೆದಾರರಿಗೆ ತಮ್ಮ ಅಕೌಂಟ್ ನಲ್ಲಿರುವ ಎಲ್ಲಾ ಕಡತಗಳ ಹುಡುಕಲು ನೆರವಾಗುತ್ತದೆ.ಇದಕ್ಕೆ ವೆಬ್ ಬ್ರೌಸರ್ ನ ಅಗತ್ಯವಿಲ್ಲದೇ ಈ ಕಾರ್ಯ ಮಾಡಲು ಅನುವಾಗುತ್ತದೆ.
- ಬೈದು ಸೊಬರ್ ಒಂದು ಉಚಿತ ಡೌನ್ ಲೋಡ್ ಮಾಡಿಕೊಳ್ಳುವ ಸಾಫ್ಟ್ ವೇರ್ ಆಗಿದೆ.ಬ್ರೌಸರ್ ನ ಟೂಲ್ ಬಾರ್ ಮೇಲೆ ಇದನ್ನು ಹಾಕಿದ್ದರಿಂದ ಹುಡುಕಾಟಕ್ಕೆ ಮತ್ತು ಪ್ರತಿ ವೆಬ್ ಪೇಜ್ ಪತ್ತೆಗೆ ಸಹಾಯಕವಾಗಿದೆ.
- ಬೈದು ವೈರ್ ಲೆಸ್ ಸೇವೆಯುಮೊಬೈಲ್ ಫೋನ್ಗಳ ಸೇವೆಗೆ ಮೀಸಲಾಗಿದೆ. ಅದಲ್ಲದೇ ಚೀನಾದ-ಇನ್ಪುಟ್FEP ಸೇವೆಯನ್ನು ವಿವಿಧ ಜನಪ್ರಿಯ ಚಾಲನಾ ಕ್ರಿಯೆಗಳಿಗೆ ಬಳಸಲಾಗುತ್ತದೆ.ಉದಾಹರಣೆಗೆ ಸಿಂಬಿಯನ್ S60v5, ವಿಂಡೊಸ್ ಮೊಬೈಲ್ ಮತ್ತು ಗೂಗಲ್ ಅಂಡ್ರೊಯಿಡ್.
- ಬೈದು ಆಂಟಿ-ವೈರಸ್ ಇದು ಆಂಟಿ-ವೈರಸ್ ಸಾಫ್ಟ್ ವೇರ್ಉತ್ಪಾದನೆಗಳನ್ನು ಮತ್ತು ಕಾಂಪ್ಯುಟರ್ ವೈರಸ್-ಸಂಭಂದಿತ ಸುದ್ದಿಗಳನ್ನು ಒದಗಿಸುತ್ತದೆ.
- ಬೈದು ಸೇಫ್ಟಿ ಸೆಂಟರ್ ,ಇದನ್ನು 2008,ರಲ್ಲಿ ಪರಿಚಯಿಸಲಾಯಿತು.ಬಳಕೆದಾರರಿಗೆ ಉಚಿತ ವೈರಸ್ ಸ್ಕ್ಯಾನ್ ಮಾಡುವಿಕೆ, ವಿಧಾನ ದುರಸ್ತಿ ಮತ್ತು ಆನ್ ಲೈನ್ ಭದ್ರತೆ ಮೌಲ್ಯಮಾಪನಗಳನ್ನು ತಿಳಿಸುತ್ತದೆ.
- ಬೈದು ಇಂಟರ್ ನೆಟ್ TV (ಇದನ್ನು ಬೈದು ಮೂವೀಸ್ )ಎನ್ನಲಾಗುವುದು.ಇದು ಬಳಕೆದಾರರಿಗೆ ಹುಡುಕಾಟಕ್ಕೆ,ವೀಕ್ಷಣೆಗೆ ಮತ್ತು ಚಲನಚಿತ್ರಗಳ ಟೆಲೆವಿಜನ್ ಧಾರಾವಾಹಿಗಳ,ಕಾರ್ಟೂನ್ ಗಳ ಮತ್ತು ಇನ್ನಿತರ ಕಾರ್ಯಕ್ರಮಗಳ ಉಚಿತ ಡೌನ್ ಲೋಡ್ ಗೆ ಸೇವೆ ಸಲ್ಲಿಸುತ್ತದೆ.
- ಚೈನೀಸ್ -ಲ್ಯಾಂಗ್ವೇಜ್ ವೈಸ್ ಅಸಿಸ್ಟಂಟ್ ಸರ್ಚ್ ಸರ್ವಿಸಿಸ್ ನ್ನು ಚೀನಾದ ಭಾಷಣಕಾರರು ಜಪಾನ್ ಭೇಟಿಕೊಡುವಾಗ ಅನುಕೂಲಾಗಲು ಇದನ್ನು 2008 ರಲ್ಲಿ ಪ್ರಾರಂಭಿಸಲಾಯಿತು.ಇದನ್ನು ಜಪಾನಿನ ವೈಯಕ್ತಿಕ ಹ್ಯಾಂಡೀ ಫೋನ್ ಸಿಸ್ಟೆಮ್ ಆಪರೇಟರ್ ವಿಲಿಯಮ್ ಇಂಕಾ ದ ಸಹಯೋಗದಲ್ಲಿ ಮಾಡಲಾಗಿದೆ.
- discovery.baidu.com Archived 2010-10-12 at the Library of Congress ,ಇದು ಡಿಸ್ಕವರಿ ಕಮ್ಯುನಿಕೇಶನ್ಸ್ ಜೊತೆ ಜಂಟಿ ಸಾಹಸ ಕೈಗೊಂಡಿದೆ.ಇದು ವಿಜ್ಞಾನ,ತಂತ್ರಜ್ಞಾನ,ಬಾಹ್ಯಾಕಾಶ,ನೈಸರ್ಗಿಕ ಇತಿಹಾಸ,ಎಂಜನೀಯರಿಂಗ್ ,ಪಾಲೆಒಂಟ್ಲೊಜಿ,(ಪಳೆಯುಳಿಕೆ ವಿಜ್ಞಾನ)ಆರ್ಕ್ಯಾಲಜಿ,(ಪುರಾತತ್ವ ಶಾಸ್ತ್ರ)ಹಿಸ್ಟ್ರಿ ಅಂಡ್ ಕಲ್ಚರ್ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುತ್ತದೆ.
P4P
ಬದಲಾಯಿಸಿಬೈದು ಸಾಮಾನ್ಯವಾಗಿ ಪ್ರಾಥಮಿಕವಾಗಿ ಆನ್ ಲೈನ್ ಮಾರ್ಕೆಟಿಂಗ್ ಸೇವೆಗಳ ಮೇಲೆ ಹೆಚ್ಚು ಅವಲಂಬಿಸಿದೆ. ಬೈದು ನ ಪೇ ಫಾರ್ ಪ್ಲೇಸ್ ಮೆಂಟ್ (P4P)ಪ್ಲಾಟ್ ಫಾರ್ಮ್ ಎಂಬ ವೇದಿಕೆಯು ತನ್ನ ಗ್ರಾಹಕರಿಗೆ ಉತ್ಪನ್ನಗಳು ಮತ್ತು ಸೇವೆಗಳ ಮಾಹಿತಿಗಾಗಿ ಹುಡುಕಾಟಕ್ಕೆ ಅನುಕೂಲ ಮಾಡುತ್ತದೆ. ಗ್ರಾಹಕರು ಪಠ್ಯ ಆಧಾರಿತ ಆನ್ ಲೈನ್ ಮಾಹಿತಿ ಸಂಗ್ರಹಿಸಿ ಅದರ ಉಪಕರಣಗಳ ಮೂಲಕ ತಮ್ಮ ವೆಬ್ ಪೇಜ್ ಗಳ ಮೂಲಕ ಕೀವರ್ಡ್ ಆಧಾರದ ಮೇಲೆ ಬಿಡ್ ಸಲ್ಲಿಸಬಹುದಾಗಿದೆ.ಹೀಗೆ ಅವರು ತಮ್ಮ ವೆಬ್ ಪೇಜ್ ಮಾಹಿತಿ ಕೊಂಡಿಯನ್ನು ರವಾನಿಸಬಹುದು. ಬೈದುವಿನ P4P ಸೇವೆಗಳನ್ನು ಗ್ರಾಹಕರು ಯಾವಾಗ ಬೇಕು ಆವಾಗ ಕ್ರಿಯಾತ್ಮಕಗೊಳಿಸಿ ಸೈನ್ -ಅಪ್ ಮಾಡಿ ತಮ್ಮ ಸೇವೆಗಳನ್ನು ಪಡೆಯಬಹುದಾಗಿದೆ. ಈ P4P ವೇದಿಕೆಯು ಒಂದು ಆನ್ ಲೈನ್ ಮಾರುಕಟ್ಟೆ ತಾಣವಾಗಿದ್ದು ಇಂಟರ್ ನೆಟ್ ಸರ್ಚ್ ಬಳಕೆದಾರರಿಗೆ ಆದ್ಯತೆ ಮೇರೆಗೆ ಪ್ಲೇಸ್ ಮೆಂಟ್ ಸೇವೆಗಳನ್ನು ನೀಡುತ್ತದೆ. ಬೈದು ಮೂರನೆಯ ಪಕ್ಷದವರ ಅಂದರೆ ಇತರೆ ವಿತರಣೆಗಾರರು ಸಹ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತದೆ.ಹೀಗಾಗಿ ಗ್ರಾಹಕರಲ್ಲಿ ರಿಯಾಯತಿ ಮತ್ತು ಇನ್ನಿತರ ಪರಿಗಣನೆಗೆ ಅವಕಾಶ ಒದಗಿಸುತ್ತದೆ.
ಬೈದು ಹಲವಾರು ಸಲಹಾ ಸೇವೆಗಳನ್ನೂ ಒದಗಿಸುತ್ತದೆ,ಅಕೌಂಟ್ ಮ್ಯಾನೇಜ್ ಮೆಂಟ್ ಮತ್ತು ನಿರ್ವಹಣಾ ವರದಿಗಳನ್ನು ನೀಡುತ್ತದೆ. ಬೈದು ಸಲಹೆ ಮಾಡುವ ಪ್ರಕಾರ ಅದಕ್ಕೆ ಸಮನಾದ ಅರ್ಥವಿವರಗಳನ್ನು ನೀಡಿ ಅದಕ್ಕೆ ಸಂಬಂಧಿಸಿದ ಕಿವರ್ಡ್ ಮತ್ತು ಪಠ್ಯವನ್ನು ಸರ್ಚಿಂಗ್ ನಲ್ಲಿ ನೀಡುತ್ತದೆ. ಈ ಸಲಹೆಗಳು ಕ್ಲಿಕ್ -ಥ್ರು ಮೂಲಕ ಸುಧಾರಣೆ ಕಾಣುತ್ತವೆ.ಗ್ರಾಹಕರ ಲಿಸ್ಟಿಂಗ್ ಮತ್ತು ಬಳಕೆದಾರರ ಆಯ್ಕೆಗಳನ್ನು ಅಧಿಕಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಬೈದು ಆನ್ ಲೈನ್ ಮೇಲೆ ಕ್ಲಿಕ್ ಥ್ರು ಗಳ ಒಟ್ಟು ಸಂಖ್ಯೆ ಗಣಿಸಿ ಅದಕ್ಕೆ ಸಂಭಂಧಿಸಿದ ಕಿವರ್ಡಗಳನ್ನು ಒಟ್ಟು ವೆಚ್ಚಗಳ ಪಟ್ಟಿ ಮತ್ತು ಸಂಭಂಧಿತ ಅಂಕಿಅಂಶಗಳನ್ನು ನೀಡುತ್ತದೆ.ಆಯಾ ಭೌಗೋಳಿಕತೆಗನುಗುಣವಾಗಿ ಒದಗಿಸುತ್ತದೆ.
ಪ್ರೊಥೀಮ್
ಬದಲಾಯಿಸಿಬೈದು ಪ್ರೊಥೀಮ್ ಸೇವೆಗಳನ್ನು ಒದಗಿಸುತ್ತಿದ್ದು ಬೈದು ಯುನಿಯನ್ ಸದಸ್ಯರು ಇದರ ಮೂಲಕ ತಮ್ಮ ಆಸ್ತಿ ವಿವರಗಳನ್ನು ಗ್ರಾಹಕರ ಪ್ರೊತ್ಸಾಹಿತ ಸೈಟ್ ಗಳ ಕೊಂಡಿಗಳ ಮೂಲಕ ಗ್ರಾಹಕರ ಆಸ್ತಿ ವಿವರ ಅದರಲ್ಲಿನ ಅಂಶಗಳನ್ನು ಅದು ನೀಡುತ್ತಿದೆ. ತನ್ನ ಗ್ರಾಹಕರ ಒಟ್ಟು ಲಿಂಕ್ ಗಳ ಆಧಾರದ ಮೇಲೆ ಬೈದು ಈ ಪ್ರೊಥೀಮ್ ಸೇವೆಯನ್ನು ತನ್ನ ಗ್ರಾಹಕ ಸಮುದಾಯಕ್ಕೆ ನೀಡುತ್ತದೆ.ಇದರ ಬಹುತೇಕ ಲಾಭಗಳು ಗ್ರಾಹಕರ ಪ್ರಿ-ಆಗ್ರೀಡ್ ಅಂದರೆ ನಿರ್ಧಾರಿತ ನಿಯಮಗಳ ಮೇಲೆ ಇದನ್ನು ಅಳವಡಿಸಲಾಗುತ್ತದೆ. ಬೈದು ತನ್ನ ಗ್ರಾಹಕರ ಸರ್ಚ್ ರಿಜಲ್ಟ್ ಪೇಜಗಳ ಮೂಲಕ ನಿಗದಿತ-ರಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ.ಇದಕ್ಕೆ ಪ್ರಶ್ನಾವಳಿಗಳ-ಸೂಕ್ಷ್ಮತೆ ಉಳಿಸಿ ಪಠ್ಯ ಸರ್ಚ್ ಫಲಿತಾಂಶಗಳ ನೀಡಲಾಗುತ್ತದೆ. ಅದರ ಟಾರ್ಗೆಟೈಜ್ ಮೆಂಟ್ ನಿಗದಿತ ಗುರಿ ಸೇವಾ ಪರಿಕರಗಳು ಗ್ರಾಹಕರ ಮೇಲೆ ಅದರ ಇಂಅಟರ್ ನೆಟ್ ಬಳಕೆದಾರರಿಗೆ ಅವರ ಜಾಹಿರಾತುಗಳ ಪ್ರದರ್ಶನಕ್ಕೆ ಅನುಕೂಲ ಮಾಡುತ್ತದೆ.ಇಲ್ಲಿ ನಿಶ್ಚಿತ ವೆಬ್ ಪುಟಗಳನ್ನು ತನ್ನದೇ ನಿಗದಿತ ಗುರಿಯಲ್ಲಿರುವ ಗ್ರಾಹಕರಿಗೆ ತಲುಪಿಸಲು ಪ್ರಯತ್ನಿಸುತ್ತದೆ.
ಬೈದು TV
ಬದಲಾಯಿಸಿಬೈದು ತನ್ನ ಜಾಹಿರಾತು ಸೇವೆಗಳನ್ನು ಬೈದು TV ಪಾಲುದಾರಿಕೆ ಮೇಲೆ ವಹಿವಾಟು ನಡೆಸುತ್ತದೆ.ಆಡ್ ಇಟ್ ! ಮಿಡಿಯಾ ಕಾರ್ಪೊಶೇನ್ ಒಂದು ಆನ್ ಲೈನ್ ಜಾಹಿರಾತು ಏಜೆನ್ಸಿ ಮತ್ತು ತಂತ್ರಜ್ಞಾನದ ಕಂಪನಿಯಾಗಿದೆ. ಬೈದು TV ತನ್ನ ಬೈದು ಯುನಿಯನ್ ಸದಸ್ಯರಿಗೆ ಜಾಹಿರಾತುಗಳ ಸೇವೆಗಳನ್ನು ನೀಡುತ್ತದೆ.ಜಾಹಿರಾತುದಾರರಿಗೆ ಬೇಕಾದ ವೆಬ್ ಸೈಟ್ ಗಳನ್ನು ನೀಡುತ್ತಾರೆ,ಅವರ ಮೇಲೆ ಸಮರೂಪದ ಜಾಹಿರಾತು ನಿಧಿ ನೆರವಿನೊಂದಿಗೆ ಇದನ್ನು ನಿರ್ವಹಿಸಲಾಗುತ್ತದೆ.ಇಲ್ಲಿ ಟಾರ್ಗೆಟಿಂಗ್ ಮತ್ತು ಮ್ಯಾಚಿಂಗ್ ಪದ್ದತಿ ಅಳವಡಿಸಲಾಗುತ್ತದೆ. ಇದು ಬ್ರಾಂಡ್ ಅಡ್ವರ್ಟೆಜಿಂಗ್ ಸೇವೆಗಳ ಬ್ರಾಂಡ್ -ಲಿಂಕ್ ನ್ನು ಒದಗಿಸಿದೆ. ನಂತರ ಜೂನ್ 2008 ರಲ್ಲಿ ಬೈದು ಮಾಯ್ ಮಾರ್ಕೆಟಿಂಗ್ ಸೆಂಟರ್ ನ್ನು ಆರಂಭಿಸಿ ಉದ್ದಿಮೆಗಳ ಸಮಗ್ರ ಮಾಹಿತಿ ಒದಗಿಸಿ ಮಾರುಕಟ್ಟೆಗಳ ಪ್ರವೃತ್ತಿಯನ್ನು ಗಮನಿಸುತ್ತದೆ.ಉದ್ಯಮಗಳ ಸುದ್ದಿ,ವರದಿಗಳು,ಗ್ರಾಹಕರಿಗೆ ಬೇಕಾದ ಮಾರಾಟಗಳು ಮತ್ತು ಮಾರುಕಟ್ಟೆಯ ಪ್ರಯತ್ನಗಳನ್ನು ಕ್ರೋಢೀಕರಿಸಲಾಗುತ್ತದೆ. ಇನ್ನುಳಿದ ರೂಪದಲ್ಲಿ ಆನ್ ಲೈನ್ ಜಾಹಿರಾತುಗಳ ಸೇವೆಯು ಗ್ರಾಹಕರಿಗೆ ಅದನ್ನು ಪ್ರಶ್ನಾವಳಿ ಪ್ರದರ್ಶನ ಮಾಡುವ ಸೂಕ್ಷ್ಮತೆಯನ್ನು ವೆಬ್ ಸೈಟ್ ಗಳ ಮೂಲಕ ಒದಗಿಸುತ್ತದೆ.
ಬೈದುವಿನ ಬ್ರಾಂಡ್ ಅಡ್ವರ್ಟೈಜಿಂಗ್ ಜಾಹಿರಾತುದಾರರಿಗೆ ತಮ್ಮ ಬ್ರಾಂಡೆಡ್ ಮಾರಾಟ ವಸ್ತುಗಳ ನಿಖರ ಸಂದೇಶಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ.ಇದರಿಂದ ಬ್ರಾಂಡ್ ಜಾಗೃತಿ ಮತ್ತು ಕ್ಲಿಕ್ ಥ್ರು ದರಗಳನ್ನು (75% ರ ವರೆಗಿನ ಮಟ್ಟದಲ್ಲಿ)ಮಾಹಿತಿ ಸಂಗ್ರಹಿಸುತ್ತದೆ.[೨೧]
ಬೈದು ಯುನಿಯನ್
ಬದಲಾಯಿಸಿಬೈದು ಯುನಿಯನ್(union.baidu.com)ಹಲವಾರು ಇನ್ನಿತರ ಮೂರನೆಯ ಪಕ್ಷಗಾರರ ಸದಸ್ಯರ ವೆಬ್ ಸೈಟ್ ಮತ್ತು ಸಫ್ಟ್ ವೇರ್ ಅಳವಡಿಕೆಗಳನ್ನು ಪ್ರದರ್ಶಿಸುತ್ತದೆ. ಬೈದು ಯುನಿಯನ್ ಸದಸ್ಯರು ಬೈದು ಸರ್ಚ್ ಬಾಕ್ಸ್ ಅಥವಾ ಟೂಲ್ ಬಾರ್ ಬಳಸಿ ಅದನ್ನುಆಯೋಜಿತ ಕೊಂಡಿಗಳೊಂದಿಗೆ ಸೇರಿಸುತ್ತಾರೆ.ಇದು ತನ್ನ ಕಾರ್ಯಲಕ್ಷಣಗಳನ್ನು ಇದರಲ್ಲಿ ತೋರಿಸುತ್ತದೆ. ಬಳಕೆದಾರರು ಬೈದು ಸರ್ಚ್ ಮೂಲಕ ಅಥವಾ ಟೂಲ್ ಬಾರ್ ಮುಖಾಂತರ ಆಯೋಜಿತ ಕೌಂಡಿಗಳನ್ನು ಕ್ಲಿಕಿಸಿ ತಮಗೆ ಬೇಕಾದ ಜಾಗದಲ್ಲಿನ ಅಂಶಗಳಿಗೆ ಹೋಗಬಹುದು. ಬೈದು ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ತನ್ನ ಗ್ರಾಹಕರಿಗೆ ಆನ್ ಲೈನ್ ಅಡ್ವೈರ್ಟೈಜಿಂಗ್ ನ್ನು ಬೈದು ಯುನಿಯನ್ ವೈಬ್ ಸೈಟ್ ಗಳ ಮುಖಾಂತರ,ಜಾಹಿರಾತಿನಿಂದ ಬಂದ ಶುಲ್ಕವನ್ನು ಹಂಚಿಕೆ ಮಾಡಲಾಗುತ್ತದೆ.ಇವುಗಳು ಬೈದು ಯುನಿಯನ್ ವೆಬ್ ಸೈಟ್ ಗಳ ಮಾಲಿಕರಲ್ಲಿ ನಮೂದಿಸಲಾಗುತ್ತದೆ.
ಸ್ಪರ್ಧೆ
ಬದಲಾಯಿಸಿಬೈದು ಇವುಗಳೊಂದಿಗೆ ಗೂಗಲ್ ಹಾಂಗ್ ಕಾಂಗ್, ಯಾಹೂ! ಚೀನಾ, ಮೈಕ್ರೊಸಾಫ್ಟ್ನ ಬಿಂಗ್ ಮತ್ತುMSN ಮೆಸೆಂಜರ್, ಸೈನಾ, ಸೊಹುನ ಸೊಗೌ, ವಿಕಿಪಿಡಿಯಾ, ನೆಟ್ ಈಜ್ನ ಯೌಡೌವಾ,ಟೆನ್ಸೆಂಟ್ನ Soso.com ಮತ್ತುಪೈಪೈ, ಅಲಿಬಾಬಾನ ತಾವೊಬಾವೊ, ಟಾಮ್ ಆನ್ ಲೈನ್, ಎಕ್ಸ್ ನೆಲೆ ನ ಗೌಗೌ ಮತ್ತು ಈಚ್ ನೆಟ್ ಅಲ್ಲದೇ ಇನ್ನಿತರರೊಂದಿಗೆ ಸ್ಪರ್ಧಿಸುತ್ತದೆ.
ಬೈದು ಚೀನಾದಲ್ಲಿ ನಂಬರ್ 1 ಸರ್ಚ್ ಎಂಜಿನ್ ಎಂದು ಹೆಸರಾಗಿದೆ.ಚೀನಾ ಮಾರುಕಟ್ಟೆಯ ಶೇಕಡಾ 63 ರಷ್ಟು ಮಾರುಕಟ್ಟೆ ಹೊಂದಿದೆ ಎಂಉ ಜನವರಿ 2010 ಐರಿಸರ್ಚ್ ವರದಿ ಮಾಡಿದೆ.[೨೨] ಚೀನಾದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯು ಜೂನ್ 2009 ರ ಹೊತ್ತಿಗೆ 338 ದಶಲಕ್ಷಗಳಿಗೇರಿದೆ.ಚೀನಾ ಇಂಟರ್ ನೆಟ್ ನೆಟ್ವರ್ಕ್ ಇನ್ ಫಾರ್ಮೇಶನ್ ಸೆಂಟರ್ ವರದಿ ಮಾಡಿದೆ.[೨೩]
ಕಳೆದ ಆಗಷ್ಟ್ 2010 ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್[೨೪] ನಲ್ಲಿ ಬಂದ ಲೇಖನದ ಪ್ರಕಾರ ಗೂಗಲ್ ತನ್ನ ಇಂಟರ್ ನೆಟ್ ಸರ್ಚ್ ಸೇವೆಯನ್ನು ಚೀನಾದಿಂದ ಹೊರ ಹಾಕಿ ಹಾಂಗ್ ಕಾಂಗ್ ಗೆ ಹೋದಾಗ ಅದರ ಆದಾಯವು ಏರಿಕೆಯನ್ನೇ ಕಂಡಿತು.ಆದರೆ ಬೈದುವಿನ ಜಾಹಿರಾತು ಆದಾಯದಲ್ಲಿ ಒಟ್ಟು ಆರರಷ್ಟು ಹೆಚ್ಚಳ ಅಕಂಡಿತು,ಎರಡನೆಯ ವರ್ಷದ ಮೊದಲ ಮೂರು ತಿಂಗಳಲ್ಲಿ ಅದು 70% ರಷ್ಟಾಗಿತ್ತು,ಎಂದು ಬೀಜಿಂಗ್ ಮೂಲದ ಸಂಶೋಧನಾ ಸಂಸ್ಥೆ ಅನ್ ಲೈಸಿಸ್ ಇಂಟರ್ ನ್ಯಾಶನಲ್ ವರದಿ ಮಾಡಿದೆ.
ದೋಷವಿಮರ್ಶನ ಅಧಿಕಾರ (ಕತ್ತರಿ ಪ್ರಯೋಗ)
ಬದಲಾಯಿಸಿಚೀನಾದ ಡಿಜಿಟಲ್ ಟೈಮ್ಸ್ ಪ್ರಕಾರ ಬೈದುಗೆ ಸುದೀರ್ಘ ಇತಿಹಾಸವಿದೆ,ಅದರ ಇತ್ತೀಚಿನ ಆಸ್ತಿ-ಪಾಸ್ತಿ ವಿವರಗಳ ಇಂಟರ್ ನೆಟ್ ಆನ್ ಲೈನ್ ವಿಷಯಗಳು ಕತ್ತರಿ ಪ್ರಯೋಗವು ನಿರ್ಭಂಧವನ್ನು ಮಾಡುತ್ತವೆ. ಬೈದುವಿನ ನೌಕರರೊಬ್ಬರು ಇದರ ಎಲ್ಲಾ ಆಂತರಿಕ ಉಸ್ತುವಾರಿ ವಿಭಾಗ ಮತ್ತು ನಿಯಂತ್ರಣಗಳ ಬಗ್ಗೆ ರಹಸ್ಯಗಳನ್ನು ಹೊರಗೆಡಿವಿದಾಗ ಅದರ ನಿರ್ಭಂದವಾದ ವೆಬ್ ಸೈಟ್ ಗಳ ಉದ್ದಪಟ್ಟಿ ಬೈದು ಟಾಪಿಕ್ಸ್ ಮೇಲಿನ ಸೆನ್ಸಾರ್ ವಿಷಯಗಳು ಹೊರಬಂದವು.[೨೫]
ಡೊಮೇನ್ ಹೆಸರನ್ನು ಕದಿಯಲಾಯಿತು
ಬದಲಾಯಿಸಿಯುನೈಟೆಡ್ ಸ್ಟೇಟ್ಸ್ ನಲ್ಲಿರುವ Baidu.com ನ DNS ದಾಖಲೆ ಪ್ರಕಾರ ಜನವರಿ 12,2010 ನಲ್ಲಿ baidu.com ನ್ನು ಇರಾನಿಯನ್ ಸೈಬರ್ ಆರ್ಮಿಗೆ ಸ್ಥಾನಾಂತರಗೊಳಿಸಿ ಗೊಂದಲ ಸೃಷ್ಟಿಸಲಾಗ್ಯಿತು,ಈ ದಾಳಿ ಸ್ವರೂಪದ ಹಿಂದೆ ಟ್ವಿಟರ್ ದಾಳಿಗೆ ಸಂಬಂಧಿಸಿದವರ ಕೈವಾಡ ಎಂದು ಹೇಳಲಾಯಿತು.ಇದು 2009 ಇರಾನಿಯನ್ ಚುನಾವಣೆ ಪ್ರತಿಭಟನೆಗಳ ಸಂದರ್ಭದಲ್ಲಿ ಈ ವೆಬ್ ಸೈಟ್ ಮೇಲೆ ಅಕ್ರಮವೆಸಗಲಾಯಿತೆನ್ನಲಾಗಿದೆ.ನಿಜವಾದ ಸೈಟ್ ನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಿದ್ದನ್ನು ಇಲ್ಲಿ ದಾಖಲಿಸಲಾಗಿದೆ.[೨೬] ಆಗ ಇಂಟರ್ ನೆಟ್ ಬಳಕೆದಾರರು ತಮ್ಮ ಪೇಜ್ ಗಳಲ್ಲಿ "ದಿಸ್ ಸೈಟ್ ಹ್ಯಾಜ್ ಬೀನ್ ಅಟ್ಯಾಕ್ಡ್ ಬೈ ಇರಾನಿಯನ್ ಸೈಬರ್ ಆರ್ಮಿ".ಎಂಬ ವಾಕ್ಯವನ್ನು ನೋಡುವಂತಾಯಿತು.[೨೭] ಚೀನಾ ಹ್ಯಾಕರ್ ಗಳು ನಂತರ ದಾಳಿ ನಡೆಸಿದ ಇರಾನಿಯನ್ ವೆಬ್ ಸೈಟ್ ಗಳ ಬಗ್ಗೆ ಪ್ರತಿಕ್ರಿಯಿಸಿ ನಂತರ ಸಂದೇಶಗಳ ರವಾನಿಸಿದರು.[೨೮] ಬೈದು ನಂತರ Register.com ಮೇಲೆ ಕಾನೂನು ಕ್ರಮಕ್ಕೆ ಮುಂದಾಯಿತು.ಇದರ ಬೃಹತ್ ಪ್ರಮಾಣದ ನಿರ್ಲಕ್ಷ ಮತ್ತು ತಂತ್ರಜ್ಞಾನದ ಬೆಂಬಲವು ಈ ಮೇಲ್ ವಿಳಾಸಗಳನ್ನುBaidu.com ಮೇಲಿಂದ ಪಡೆಯಲಾಗಿತ್ತು.ಅನಾಮಧೇಯನೊಬ್ಬ ಈ ಕೃತ್ಯ ವೆಸಗಿದ್ದನ್ನು ಇಲ್ಲಿ ಪ್ರಸ್ತಾಪಿಸಲಾಗಿತ್ತು.ಅವರ ವಿಫಲ ಭದ್ರತಾ ಕ್ರಮಗಳಲ್ಲೂ ಈ ದೋಷದ ನಿವಾರಣೆ ಕಠಿಣವಾಯಿತು. ಒಮ್ಮೆ ಈ ವಿಳಾಸವನ್ನು ಬದಲಾಯಿಸಿದಾಗ ಆತನ ಮರೆತ ಪಾಸ್ ವರ್ಡ್ ಮರುಬಳಕೆಗೆ ಕಷ್ಟಕರವಾದಾಗ ಬೈದು ಡೊಮೇನ್ ಪಾಸ್ ವರ್ಡ್ ಗಳು ನೇರವಾಗಿ ಡೊಮೇನ್ ಹೈಜಾಕಿಂಗ್ ಗೆ ರವಾನಿಸಿ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಿತು.[೨೯][೩೦]
ಇವನ್ನೂ ಗಮನಿಸಿ
ಬದಲಾಯಿಸಿ- ಚೈನಾದ ಸಾಫ್ಟ್ ವೇರ್ ಕಂಪನಿಗಳು.
- ಚೀನಾ ಸಾಫ್ಟ್ ವೇರ್ ಇಂಡಸ್ಟ್ರಿ ಅಸೊಶಿಯೇಶನ್
- ಇಂಟಲೆಕ್ಚುವಲ್ ಪ್ರಾಪರ್ಟಿ ಇನ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ Baidu.com (BIDU) annual SEC income statement filing via Wikinvest
- ↑ ೨.೦ ೨.೧ Baidu.com (BIDU) annual SEC balance sheet filing via Wikinvest
- ↑ "Company Profile for Baidu.com Inc (BIDU)". Retrieved 2008-10-21.
- ↑ "Baidu's 57 Products/Services: Introduction and History". China Analyst (CNAnalyst.com). Archived from the original on 2008-04-07. Retrieved 2010-10-26.
- ↑ ೫.೦ ೫.೧ http://ir.baidu.com/phoenix.zhtml?c=188488&p=irol-faq
- ↑ "Alexa Top 500 Global Sites". Archived from the original on 2014-01-09. Retrieved 2010-05-08.
- ↑ "LA Times, 10 December 2007, "Baidu search yields success in China"".
- ↑ "MSN Money - BIDU". MSN Money. Archived from the original on 2006-05-01. Retrieved 2006-05-11.
- ↑ "Baidu's Internal Monitoring and Censorship Document Leaked". China Digital Times.
- ↑ "The Baidu Story". Baidu. Archived from the original on 2006-10-30. Retrieved 2010-10-26.
- ↑ ಟೈಪೈ ಟೈಮ್ಸ್: "ರಾಬಿನ್ ಲೀಜ್ ವಿಜನ್ ಪಾವರ್ಸ್ ಬೈದುಸ್ ಇಂಟರ್ ನೆಟ್ ಸರ್ಚ್ ಡೊಮಿನನ್ಸ್" (17 ನೆಯ ಸೆ.2006)
- ↑ ಗ್ರೀನ್ ಬ್ರಗ್,ಆಂಡಿ,"ದಿ ಮ್ಯಾನ್ ಹೂ ಈಸ್ ಬೀಟಿಂಗ್ ಗೂಗಲ್ " Archived 2012-09-18 at Archive.is,ಫೊರ್ಬ್ಸ್ ಮ್ಯಾಗ್ಜಿನ್, ಅಕ್ಟೋಬರ್ 05,2009
- ↑ ಯಾನ್ ಹಾಂಗ್ ಲಿ,"ಟ್ವರ್ಡ್ ಎ ಕ್ವಾಲಿಟೇಟಿವ್ ಸರ್ಚ್ ಎಂಜಿನ್,"IEEE ಇಂಟರ್ ನೆಟ್ ಕಂಪುಟಿಂಗ್ , vol. 2, no. 4, pp. 24-29, ಜುಲೈ/ಆ. 1998, doi:10.1109/4236.707687
- ↑ "ಅಬೌಟ್: ರಾಂಕ್ ಡೆಕ್ಸ್", rankdex.com
- ↑ USPTO, "ಹೈಪರ್ ಟೆಕ್ಶ್ಟ್ ಡಾಕ್ಯುಮೆಂಟ್ ರಿಟ್ರಿವಲ್ ಸಿಸ್ಟೆಮ್ ಅಂಡ್ ಮೆಥೆಡ್" Archived 2011-12-05 ವೇಬ್ಯಾಕ್ ಮೆಷಿನ್ ನಲ್ಲಿ.,US ಪೇಟೆಂಟ್ ನಂಬರ್:5920859, ಇನ್ವೆಂಟರ್:ಯಾನ್ ಹೊಂಗ್ ಲಿ,ಫೈಲಿಂಗ್ ಡೇಟ್:ಫೆ 5, 1997,ಇಸ್ಯು ಡೇಟ್:Jul 6,1999
- ↑ "关于baiduspider". baidu.com. 18 March 2009.
- ↑ "Baiduspider User-Agent String". HttpUserAgent.org. 17 March 2009. Archived from the original on 3 ಏಪ್ರಿಲ್ 2009. Retrieved 26 ಅಕ್ಟೋಬರ್ 2010.
- ↑ "China's Google in Japan". Infoniac.com. 23 March 2007. Archived from the original on 28 ಮಾರ್ಚ್ 2007. Retrieved 26 ಅಕ್ಟೋಬರ್ 2010.
- ↑ "Google's Lookalike is Expanding in China". Gadget4boys.com. 23 January 2007. Archived from the original on 29 ಸೆಪ್ಟೆಂಬರ್ 2007. Retrieved 26 ಅಕ್ಟೋಬರ್ 2010.
- ↑ [೧] Archived 2011-05-08 ವೇಬ್ಯಾಕ್ ಮೆಷಿನ್ ನಲ್ಲಿ. ಬೈದು ಗ್ರಾಮಾಂತರ ವಿಶ್ವಕೋಶದ ಡಿಜಿಟಲ್ ಸಮಗ್ರತೆ ಸಂಗ್ರಹಿಸಲಿದೆ.
- ↑ "China Search Marketing With Baidu Whitepaper" (PDF). Rocky Fu's digital marketing blog. 14 April 2008.
- ↑ Barboza, David (January 13, 2010). "Baidu's Gain from Departure Could Be China's Loss". ದ ನ್ಯೂ ಯಾರ್ಕ್ ಟೈಮ್ಸ್.
- ↑ "Discovery, Baidu launch website". AFP. July 28, 2009. Archived from the original on April 13, 2010.
- ↑ Fletcher, Owen (August 3, 2010). "Baidu's CEO Pursues Long-Term Growth". The Wall Street Journal.
- ↑ ಬೈದುಸ್’ ಇಂಟರ್ ನಲ್ ಮಾನಿಟರಿಂಗ್ ಅಂಡ್ ಸೆನ್ಸಾಸ್ ಶಿಪ್ ಡಾಕ್ಯುಮೆಂಟ್ ಲೀಕ್ಡ್(1), ಖಿಯೊ ಕಿಯಿಂಗ್ Qiang, ಚೀನಾ ಡಿಜಿಟಲ್ ಟೈಮ್ಸ್ , 30 ಏಪ್ರಿಲ್ 2009
ಬೈದುಸ್ ಇಂತರ್ ನಲ್ ಮಾನಿಟರಿಂಗ್ ಅಂಡ್ ಸೆನ್ಸಾರ್ಶಿಪ್ ಡಾಕ್ಯುಮೆಂಟ್ ಲೀಕ್ಡ್(2)
ಬೈದುಸ್ ಇಂತರ್ ನಲ್ ಮಾನಿಟರಿಂಗ್ ಅಂಡ್ ಸೆನ್ಸಾರ್ಶಿಪ್ ಡಾಕ್ಯುಮೆಂಟ್ ಲೀಕ್ಡ್(3) - ↑ "Baidu hacked by 'Iranian cyber army'". BBC News. 2010-01-12. Retrieved 2010-01-12.
- ↑ "China's top search engine Baidu hacked". People's Daily. January 12, 2010.
{{cite news}}
: Italic or bold markup not allowed in:|publisher=
(help) - ↑ Branigan, Tania (January 12, 2010). "'Iranian' hackers paralyse Chinese search engine Baidu". London: The Guardian.
{{cite news}}
: Italic or bold markup not allowed in:|publisher=
(help) - ↑ http://online.wsj.com/article/SB10001424052748703837004575013742840069602.html?mod=googlenews_wsj Baidu Sues Register.com, Alleges Negligence in Hacking Attack
- ↑ http://www.computerworld.com/s/article/9162118/Baidu_Registrar_incredibly_changed_our_e_mail_for_hacker?source=rss_news
ಮುಂದಿನ ಓದಿಗಾಗಿ
ಬದಲಾಯಿಸಿ- ಲೀ ಮೆಲಾನಿಯಾಮ್ ನಿವ್ಸ್ ಮೇಕರ್ ಬೈದು ಫೌಂಡರ್ ರೂಲ್ಸ್ ಚೈನಾಸ್ ವೆಬ್ ವಿಯಿತ್ ಪ್ರಗ್ಮಾಟಿಸಮ್ ರೂಟರ್ಸ್, ",' , ಮಂಗಳವಾರ ಜನವರಿ 19, 2010
ಬಾಹ್ಯ ಕೊಂಡಿಗಳು
ಬದಲಾಯಿಸಿ- (Chinese) Official website
- Baidu.com (BIDU) (ವಿಕಿನ್ವೆಸ್ಟ್)