ಬೇಥುವಾಡಹರಿ ವನ್ಯಜೀವಿ ಅಭಯಾರಣ್ಯ

ಬೇಥುವಾಡಹರಿ ವನ್ಯಜೀವಿ ಅಭಯಾರಣ್ಯವು ಭಾರತದ ಪಶ್ಚಿಮ ಬಂಗಾಳ ರಾಜ್ಯದ ನಾಡಿಯಾ ಜಿಲ್ಲೆಯ ಬೇಥುವಾಡಹರಿ ಪಟ್ಟಣದಲ್ಲಿ (ನಕಾಶಿಪಾರಾ ಪ್ರದೇಶ) ಸ್ಥಿತವಾಗಿದೆ. ಈ ಅಭಯಾರಣ್ಯವು ರಾಷ್ಟ್ರೀಯ ಹೆದ್ದಾರಿ ೩೪ರ ಪಕ್ಕದಲ್ಲಿದೆ. ಈ ಅಭಯಾರಣ್ಯವು ೬೭ ಹೆಕ್ಟೇರುಗಳನ್ನು ಆವರಿಸಿದೆ. ಮಧ್ಯ ಗಂಗಾ ಮೆಕ್ಕಲು ಮಣ್ಣು ವಲಯದ ಒಂದು ಭಾಗವನ್ನು ಸಂರಕ್ಷಿಸಲು ಇದನ್ನು ೧೯೮೦ರಲ್ಲಿ ಸ್ಥಾಪಿಸಲಾಯಿತು.[]

ಈ ಅಭಯಾರಣ್ಯವು ಚೀತಲ್, ಗುಳ್ಳೆನರಿ, ಬಂಗಾಳ ನರಿ, ಮುಳ್ಳುಹಂದಿ ಮತ್ತು ಲಂಗೂರ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿದೆ.[] ಪಕ್ಷಿ ಜಾತಿಗಳಲ್ಲಿ ಪ್ಯಾರಕೀಟ್‍ಗಳು, ಭಾರತೀಯ ಕೋಗಿಲೆಗಳು, ಮುಲ್ಲಾ ಹಕ್ಕಿಗಳು ಹಾಗೂ ಇತರ ಹೆಚ್ಚು ಚಿಕ್ಕ ಪಕ್ಷಿಗಳು ಸೇರಿವೆ, ಸರೀಸೃಪಗಳು ಮತ್ತು ಉಭಯಚರಗಳಲ್ಲಿ ಹೆಬ್ಬಾವುಗಳು, ಮಾನಿಟರ್ ಹಲ್ಲಿಗಳು ಮತ್ತು ಒಂದು ಪ್ರಕಾರದ ಚಿಕ್ಕ ಮೊಸಳೆಯಾದ ಘಡಿಯಾಲ್‍ಗಳು ಸೇರಿವೆ.[] ಈ ಅಭಯಾರಣ್ಯವು ಆರಂಭಿಕ ಛಾಯಾಗ್ರಾಹಕ್ರು, ಪ್ರವಾಸಿಗಳು ಇತ್ಯಾದಿಗಳಿಗೆ ಅದ್ಭುತ ಸ್ಥಳವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "Nadia District, West Bengal". Pilgrimage and tourist sites. District administration, Government of West Bengal. Retrieved 2009-02-14.
  2. "West Bengal Wildlife Sanctuaries: Bethuadahari Wild Life Sanctuary". Directorate of Forests, Government of West Bengal. Archived from the original on 10 October 2010. Retrieved 2 January 2013.
  3. "Bethuadahari Wildlife Sanctuary". West Bengal Tourism, Official Website, Department of Tourism, Government of West Bengal. Archived from the original on 2 January 2013. Retrieved 2 January 2013.