ಬೆಳವಲ
ಬೆಳವಲ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Limonia |
ಪ್ರಜಾತಿ: | L. acidissima
|
Binomial name | |
Limonia acidissima | |
Synonyms[೧][೨] | |
|
ಬೆಳವಲ (ಬೇಲದ ಹಣ್ಣು) (ಲೀಮೊನಿಯಾ ಆಸಿಡಿಸೀಮಾ) ಏಕೈಕ ಮಾದರಿಯ ಪಂಗಡ ಲೀಮೋನಿಯಾದಲ್ಲಿರುವ ಏಕೈಕ ಪ್ರಜಾತಿ. ಇದು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಮತ್ತು ಇಂಡೋಚೈನಾಗೆ ಸ್ಥಳೀಯವಾಗಿದೆ. ಈ ಸಸ್ಯ ಅದರ ಔಷಧೀಯ ಗುಣಗಳಿಗೆ ಖ್ಯಾತವಾಗಿದೆ. ಇದು ಒರಟು, ಮುಳ್ಳಿರುವ ತೊಗಟೆ ಹೊಂದಿದ್ದು ೯ ಮೀ. ಎತ್ತರಕ್ಕೆ ಬೆಳೆಯುವ ಒಂದು ದೊಡ್ಡ ಮರ. ಎಲೆಗಳು ೫-೭ ಪರ್ಣಕಗಳನ್ನು ಹೊಂದಿ ಗರಿಯಂಥವಾಗಿದ್ದು, ಪ್ರತಿಯೊಂದು ಪರ್ಣಕ ೨೫-೩೫ ಮಿ.ಮಿ. ಉದ್ದ ಹಾಗೂ ೧೦-೨೦ ಮಿ.ಮಿ. ಅಗಳವಾಗಿದ್ದು, ಜಜ್ಜಿದಾಗ ಸಿಟ್ರಸ್ ಪರಿಮಳ ಹೊಂದಿರುತ್ತವೆ. ಹಣ್ಣು ೫-೯ ಸೆ.ಮಿ. ವ್ಯಾಸದ ಒಂದು ಬೆರಿಯಾಗಿದ್ದು, ಹುಳಿ ಅಥವಾ ಸಿಹಿಯಾಗಿರಬಹುದು. ಅದು ಒಡೆದು ತೆರೆಯಲು ಕಷ್ಟವಾಗಿರುವ ಬಹಳ ಗಟ್ಟಿ ತೊಗಟೆ ಹೊಂದಿದ್ದು, ಅಂಟಂಟಾಗಿರುವ ಕಂದು ತಿರುಳು ಮತ್ತು ಸಣ್ಣ ಬಿಳಿ ಬೀಜಗಳನ್ನು ಹೊಂದಿರುತ್ತದೆ. ಹಣ್ಣು ನೋಡಲು ಬಿಲ್ವದ ಹಣ್ಣನ್ನು ಹೋಲುತ್ತದೆ.
ಭಾರತ ಮೂಲದ ಈ ಹಣ್ಣಿಗೆ ಇರುವ ಕನ್ನಡದ ಹೆಸರುಗಳ ಬೇಲ,ಬ್ಯಾಲ,ಮಳೂರ,ಮನ್ಮಥ-ಪುಷ್ಪಫಲ ಎಂದು.ಸಂಸ್ಕ್ರತದಲ್ಲಿ ದಾದಿಫಲ,ದಂತಫಲ,ಗಂಧಫಲ,ಗೋಪಕರ್ಣ,ಗ್ರಾಹಿ,ಗ್ರಂಥಿಫಲ,ಕಪಿಪ್ರಿಯ,ಕರಂಜಫಲಕ,ಮನ್ಮಥ ಎಂಬ ಹೆಸರುಗಳು ಇವೆ. ಇದು ಫೆರೋನಿಯ ಎಂಬ ಉಪವರ್ಗಕ್ಕೆ ಸೇರಿದ ನಿಂಬೆಹಣ್ಣಿನ ಜಾತಿಗೆ ಸೇರಿದ ಮರ.ಇದು ಮಧ್ಯಮ ಗಾತ್ರದ ಎಲೆ ಉದುರಿಸುವ ಮರ.ದ್ವಿಲಿಂಗಿ ಮತ್ತು ಗಂಡು ಹೂಗಳ ಒಂದೇ ಗೊಂಚಲಿನಲ್ಲಿ ಇರುತ್ತದೆ. ಮಥ್ಯಮ ಗಾತ್ರದಿಂದ ದೊಡ್ದ ಗಾತ್ರದ ಹಣ್ಣುಗಳು ಗೋಲಾಕಾರವಾಗಿರುತ್ತದೆ. ಹಣ್ಣಿನ ಮೇಲ್ಮೆ ಒರಟ್ಟಾಗಿದ್ದು ಬೂದಿಬಣ್ಣ ಹೊಂದಿರುತ್ತದೆ.ಕರಟ ಗಡಸು,ಅದನ್ನು ಹೋಳು ಮಾಡಿದಲ್ಲಿ ವಿಶಿಷ್ಟವಾದ ವಾಸನೆಯ ಮೃದುವಾದ, ಸಿಹಿ-ಹುಳಿಗಳ ಮಿಶ್ರಣದ ತಿರುಳಿದ್ದು ಅದರಲ್ಲಿ ಅನೇಕ ಸಣ್ಣ ಬೀಜಗಳು ಇರುತ್ತದೆ. ಪ್ರಾಚೀನ್ಯ ಕಾಲದ ಈ ಹಣ್ಣಿನ ವೈದ್ಯಕೀಯ ಉಪಯೋಗಳ ಬಗ್ಗೆ ನಮ್ಮ ಪ್ರಾಚೀನ ಸಂಸ್ಕ್ರತ ವೈದ್ಯಗ್ರಂಥಗಳಾದ ಚರಕ ಮತ್ತು ಸುಶ್ರುತ ಸಂಹಿತಗಳಲ್ಲಿ ವಿವರಿಸಲಾಗಿದೆ.
ಔಷಧಿಯ ಗುಣಗಳು
ಬದಲಾಯಿಸಿದೋರೆಗಾಯಿಗಳು ಹೆಚ್ಚು ಒಗರಾಗಿದ್ದು ಹಣ್ಣಾದಾಗ ಈ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ರುಚಿ ಹೆಚ್ಚುತ್ತದೆ.ತಿರುಳು ಚೈತನ್ಯದಾಯಕವಾಗಿದ್ದು ಹೃದಯಕ್ಕೆ ಬಲ ನೀಡುತ್ತದೆ. ವಿರೇಚನಕ್ಕೆ ಇದು ಒಳ್ಳೆಯದು. ತಿರುಳು ಶೈತ್ಯಕಾರಕ, ವಾತಹರ ಮತ್ತು ಜೀರ್ಣಕಾರದ ಗುಣಗಳನ್ನು ಹೊಂದಿರುತ್ತದೆ.ಹಣ್ಣಿನ ತಿರುಳಿನ ಸೇವನೆಯೂ ಹಲ್ಲಿನ ವಸಡುಗಳನ್ನು ಬಲಪಡಿಸುತ್ತದೆ. ಕೆಮ್ಮು , ಗೊರಲು , [೩]ಮತ್ತು ಕಣ್ಣಿನ ದೋಷಗಳಿಗೆ ಇದು ಒಳ್ಳೆಯದು. ಬಿಕ್ಕಳಿಕೆ, ಗಂಟಲು ನೋವು ಮತ್ತು ಕಿವಿನೋವುಗಳಿಗೆ ಇದು ಪರಿಣಾಮಕಾರಿ ಔಷಧ. ಪ್ರತಿದಿನ ತಿರುಳನ್ನು ಒಣಗಿಸಿ ಪುಡಿಮಾಡಿ ಬಳಸಬಹುದು ಅಥವಾ ರಸವನ್ನು ಹಿಂದಿಟ್ಟುಕೊಂಡು ಬಳಸಬಹುದು. ಬೇಲದ ಕಾಯಿ ತಿರುಳನ್ನು (ಬೀಜ ಸಹಿತ) ಚೆನ್ನಾಗಿ ಕುಟ್ಟಿ ತಿನ್ನುವುದರಿಂದ ಆಮಶಂಕೆ ಮತ್ತು ಅತಿಸಾರ ನಿಲ್ಲುವುದು. ಬೇಲದ ಹಣ್ಣಿನ ತಿರುಳನ್ನು ಸಕ್ಕರೆ ಜೊತೆ ಸೇರಿಸಿ ಹಸುವಿನ ಹಾಲಿನ ಜೊತೆ ತೆಗೆದುಕೊಂಡರೆ ಪಿತ್ತ ಶಮನವಾಗುವುದು. ಹಣ್ಣಿನ ತಿರುಳ್ಳನ್ನು ಶುಂಠಿಯ ರಸದೊಂದಿಗೆ ಸೇರಿಸಿ ಕುಡಿದರೆ ಬಹುಮೂತ್ರ ಪರಿಹಾರವಾದೀತು. ಇದರಲ್ಲಿ ರಂಜಕದ ಅಂಶ ಇರುವುದರಿಂದ ಹಣ್ಣಿನ ಸೇವನೆಯು ಮೆದುಳು ಮತ್ತು ನರ Archived 2016-12-21 ವೇಬ್ಯಾಕ್ ಮೆಷಿನ್ ನಲ್ಲಿ.ಗಳನ್ನು ಬಲಗೊಳಿಸಿ ಜ್ನಾಪಕಶಕ್ತಿಯನ್ನು ಹೆಚ್ಚಿಸುವುದು.
ತಳಿಗಳು
ಬದಲಾಯಿಸಿಬೇಲದಲ್ಲಿ ನಿರ್ದಿಷ್ತವಾದ ತಳಿಗಳಿಲ್ಲವಾದಾರೂ ಸಣ್ಣ ಗಾತ್ರ ಮತ್ತು ದೊಡ್ದ ಗಾತ್ರದ ಎರಡು ಬಗೆಗಳಿವೆ. ಮೊದಲನೆ ಬಗೆಯು ಹುಳಿಯಿಂದ ಕೂಡಿದ್ದರೆ ಎರಡನೆಯದು ಸಿಹಿಯಾಗಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "The Plant List: A Working List of All Plant Species". Archived from the original on 5 ಅಕ್ಟೋಬರ್ 2018. Retrieved 1 August 2015.
- ↑ "Arguments for Limonia acidissima L. (Rutaceae) and against Its Rejection as a nomen ambiguum". 27. Taxon. November 1978: 551–552. JSTOR 1219924. Retrieved 2011-04-19.
{{cite journal}}
: Cite journal requires|journal=
(help); Unknown parameter|authors=
ignored (help) - ↑ https://www.organicfacts.net/health-benefits/fruit/health-benefits-of-wood-apple-or-bel-fruit.html