ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫
ಕರ್ನಾಟಕ ಚುನಾವಣಾ ಆಯೋಗ ದಿನಾಂಕ ,16-7-2015ರಂದು ಬಿಬಿಎಂಪಿ ಚುನಾವಣೆಯ ಪ್ರಕಟಣೆ ಹೊರಡಿಸಿದ್ದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತು. ಅದರಂತೆ ಬಿಬಿಎಂಪಿ ಎಲ್ಲಾ ಕ್ಷೇತ್ರಗಳ ಚುನಾವಣೆಯು ದಿ.22-8-2015 ರಂದು ನಡೆದು ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ದಿ. 25-8-2015 ರಂದು ಆಯಿತು.
- ಮತದಾರರು
- ಒಟ್ಟು 73,25,578 ಮತದಾರರ ಪೈಕಿ 36,13,831 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
- ಪುರುಷರು 3843183 ; ಮಹಿಳೆಯರು 3484283; ಇತರೆ 1112 ; ಮತ ಚಲಾಯಿಸಿದವರು --ಪುರುಷರು.1911074 +ಮಹಿಳೆಯರು 1702650 +,ಇತರರು 107=ಒಟ್ಟು 3613831 ಶೇ.49.36 ಮತದಾನ
- ವಾರ್ಡುಗಳು -ಅಭ್ಯರ್ಥಿಗಳು
- ಒಟ್ಟು ವಾರ್ಡುಗಳು 198 ಅದರಲ್ಲಿ ಒಂದು ವಾರ್ಡಿನಲ್ಲಿ ಅವಿರೋಧ ಆಯ್ಕೆ ಯಾಯಿತು.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 197 ವಾರ್ಡ್‌ಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು.
- ಒಟ್ಟು ಅಭ್ಯರ್ಥಿಗಳು 1,121.
ಬಿಬಿಎಂಪಿ: ಮೇಯರ್ ಆಯ್ಕೆಗೆ ಮತ ಹಾಕುವವರು
ಬದಲಾಯಿಸಿ- ಬೆಂಗಳೂರಿನ ಐವರು ಲೋಕಸಭಾ ಸದಸ್ಯರು ಹಾಗೂ 28 ಜನ ಶಾಸಕರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಹೊಂದಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿರುವ ರಾಜ್ಯಸಭಾ ಸದಸ್ಯರು (ಉದಾ : ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್) ಹಾಗೂ ವಿಧಾನಪರಿಷತ್ ಸದಸ್ಯರು ಮತದಾನ ಮಾಡುವ ಮೂಲಕ ಮೇಯರ್ ಅವರನ್ನು ಆಯ್ಕೆ ಮಾಡಲಿದ್ದಾರೆ.
- ಬಲಾಬಲ: ಬಿಜೆಪಿ 23, ಕಾಂಗ್ರೆಸ್ 22ಜನ ಪಾಲಿಕೇತರ ಸದಸ್ಯರನ್ನು ಹೊಂದಿದೆ. ಜೆಡಿಎಸ್ 7 ಜನ ಹಾಗೂ ಪಕ್ಷೇತರ ವಿಧಾನಪರಿಷತ್ ಸದಸ್ಯ (ಡಿಯು ಮಲ್ಲಿಕಾರ್ಜುನ) ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ವಿಜಯ್ ಮಲ್ಯ ಅವರು ಮತದಾನದ ಹಕ್ಕು ಹೊಂದಿದ್ದಾರೆ.
- ಒಟ್ಟು ಮತ : ಪಾಲಿಕೆ ಒಟ್ಟು ಸದಸ್ಯ ಬಲ (ಪಾಲಿಕೇತರ ಸದಸ್ಯರು ಸೇರಿ): 260
- ಮೇಯರ್ ಆಗಿ ಆಯ್ಕೆಯಾಗಲು 131 ಮತಗಳ ಅಗತ್ಯವಿದೆ.
- ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮತ ಹಾಕುವವರು:
- ಲೋಕಸಭೆ ಸದಸ್ಯರು: ಬಿಜೆಪಿ * ಅನಂತಕುಮಾರ್ (ಬೆಂಗಳೂರು ದಕ್ಷಿಣ) * ಡಿ.ವಿ ಸದಾನಂದ ಗೌಡ (ಬೆಂಗಳೂರು ಉತ್ತರ) * ಪಿ.ಸಿ ಮೋಹನ್ (ಬೆಂಗಳೂರು ಸೆಂಟ್ರಲ್) ಕಾಂಗ್ರೆಸ್ * ಡಿ. ಕೆ ಸುರೇಶ್ (ಬೆಂಗಳೂರು ಗ್ರಾಮಾಂತರ) * ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ)
- ರಾಜ್ಯ ಸಭಾ ಸದಸ್ಯರು ಬಿಜೆಪಿ: ಎಮ್. ವೆಂಕಯ್ಯ ನಾಯ್ಡು ಕಾಂಗ್ರೆಸ್ : ಬಿ.ಕೆ ಹರಿಪ್ರಸಾದ್, ರಾಜೀವ್ ಗೌಡ. ಜೆಡಿಎಸ್: ಕುಪೇಂದ್ರ ರೆಡ್ಡಿ ಪಕ್ಷೇತರರು: ವಿಜಯ್ ಮಲ್ಯ, ರಾಜೀವ್ ಚಂದ್ರಶೇಖರ್.
- ಶಾಸಕರು: ಬಿಜೆಪಿ : ಆರ್ ಅಶೋಕ್, ಎನ್ ಸುರೇಶ್ ಕುಮಾರ್, ಬಿ.ಎನ್ ವಿಜಯ್ ಕುಮಾರ್, ಸಿ.ಎನ್ ಅಶ್ವತ್ಥನಾರಾಯಣ, ಎಸ್. ಆರ್ ವಿಶ್ವನಾಥ್, ಎಚ್ ಮುನಿರಾಜು, ಎಸ್ ರಘು, ಸತೀಶ್ ರೆಡ್ಡಿ, ಆರ್ ಜಗದೀಶ್ ಕುಮಾರ್,ರವಿ ಸುಬ್ರಮಣ್ಯ, ಅರವಿಂದ್ ಲಿಂಬಾವಳಿ, ಎಂ ಕೃಷ್ಣಪ್ಪ. ಕಾಂಗ್ರೆಸ್ : ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಆರ್ ರೋಷನ್ ಬೇಗ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಿ.ಎ ಬಸವರಾಜು, ಎಚ್. ಟಿ ಸೋಮಶೇಖರ್, ಮುನಿರತ್ನ, ಎನ್.ಎ ಹ್ಯಾರಿಸ್, ಎಂ ಕೃಷ್ಣಪ್ಪ, ಪ್ರಿಯಕೃಷ್ಣ, ಆರ್ ವಿ ದೇವರಾಜ್, ಬಿ ಶಿವಣ್ಣ ಜೆಡಿಎಸ್ : ಕೆ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಖಾನ್.
- ವಿಧಾನ ಪರಿಷತ್ ಸದಸ್ಯರು ಬಿಜೆಪಿ : ವಿ.ಸೋಮಣ್ಣ, ರಾಮಚಂದ್ರಗೌಡ, ವಿಮಲಾ ಗೌಡ, ಲೇಹರ್ ಸಿಂಘ್, ಬಿ.ಜೆ ಪುಟ್ಟಸ್ವಾಮಿ, ಅಶ್ವತ್ಥನಾರಾಯಣ. ಕಾಂಗ್ರೆಸ್ : ಆರ್ ವಿ ವೆಂಕಟೇಶ್, ಬಿ.ಎ ಸುರೇಶ್, ದಯಾನಂದ, ಕೆ ಗೋವಿಂದ ರಾಜ್, ಎಂ.ಆರ್ ಸೀತಾರಾಂ ಜೆಡಿಎಸ್ : ಪುಟ್ಟಣ್ಣ, ಟಿ ಎ ಶರವಣ, ಇ ಕೃಷ್ಣಪ್ಪ ಪಕ್ಷೇತರ: ಡಿ. ಯು ಮಲ್ಲಿಕಾರ್ಜುನ (ಬಿಜೆಪಿ ಬೆಂಬಲಿತ).
- ಆಯ್ಕೆಯಾದ ಸದಸ್ಯರು :ಬಿಬಿಎಂಪಿ ಫಲಿತಾಂಶ: ಬಿಜೆಪಿ 100; ಕಾಂಗ್ರೆಸ್ 76; ಜೆಡಿಎಸ್ 14; ಇತರೆ : 8
- ಮೇಯರ್ ಆಯ್ಕೆಗೆ ಬೇಕಾದ ಸಂಖ್ಯೆ: ಸಂಖ್ಯೆ: 131 {126 ? ಒನ್ ಇಂಡಿಯಾ ಸುದ್ದಿ)
ಸಾರಾಂಶ
ಬದಲಾಯಿಸಿ- ಮೇಯರ್ ಆಯ್ಕೆಗೆ ಮತ ಹಾಕುವವರು
ಸದಸ್ಯರು | ಬಿ.ಜೆ.ಪಿ | ಕಾಂಗ್ರೆಸ್ | ಜೆ.ಡಿ.ಎಸ್ | ಪಕ್ಷೇತರ | |
---|---|---|---|---|---|
ಲೋಕಸಭಾ ಸದಸ್ಯರು | 03 | 02 | - | - | |
ರಾಜ್ಯಸಭಾ ಸದಸ್ಯರು | 01 | 04 | 01 | 02 | |
ಶಾಸಕರು | 12 | 13 | 03 | - | |
ವಿಧಾನ ಪರಿಷತ್ ಸದಸ್ಯರು | 08 | 08 | 03 | 02 | |
ಪಾಲಿಕೆ ಸದಸ್ಯರು=25-8-2015 ರ ಫಲಿತಾಂಶ | 100 | 76 | 14 | 08 | |
ಒಟ್ಟು | 124 | 103 | 21 | 12 | 260 |
ಗೆಲವು ->ಕಾಂಗ್ರೆಸ್+ಜೆಡಿ(ಎಸ್)+ಇತರೆ> ಮೈತ್ರಿ | 126 | 103 + | 21 + | 07 | 131 |
- ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು
- ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು, ಬಿಜೆಪಿ 111 ಸ್ಥಾನ ಗಳಿಸಿತ್ತು. ಜೆಡಿಎಸ್ 15 ಸ್ಥಾನ ಪಡೆದಿತ್ತು. [ಬಿಬಿಎಂಪಿ ಈಗಿನ ಫಲಿತಾಂಶ:ಬಿಜೆಪಿ 100 ಸ್ಥಾನಗಳಿಸಿದೆ. ] [೮]
- ಸಿ, ವೋಟರ್ ಸಮೀಕ್ಷೆ
‘ಸಿ–ವೋಟರ್’ ಸಮೀಕ್ಷೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬಿಬಿಎಂಪಿಯಲ್ಲಿ ಯಾವುದೇ ಪಕ್ಷಕ್ಕೂ ಸರಳ ಬಹುಮತ ಸಿಗುವುದಿಲ್ಲ ಎಂದು ‘ಸಿ–ವೋಟರ್’ ನಡೆಸಿದ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. 197 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 90 ರಿಂದ 98, ಬಿಜೆಪಿ 83 ರಿಂದ 91, ಜೆಡಿಎಸ್ 9 ರಿಂದ 17 ಸ್ಥಾನಗಳಲ್ಲಿ ಜಯ ಗಳಿಸಬಹುದು. 8 ಕ್ಷೇತ್ರಗಳು ಪಕ್ಷೇತರರ ಪಾಲಾಗಬಹುದು ಎಂದು ಹೇಳಿದೆ. (August 22, 2015BW News Bureau )[೯]
ಮೇಯರ್ ಮತ್ತು ಉಪಮೇಯರ್ ಆಯ್ಕೆ
ಬದಲಾಯಿಸಿದಿ.೩೧-೮-೨೦೧೫
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಬಿ.ಎನ್. ಮಂಜುನಾಥ್ ರೆಡ್ಡಿ ಆಯ್ಕೆಯಾಗಿದ್ದಾರೆ:ಪಡೆದ ಮತ: 131.
- (ಬಿಬಿಎಂಪಿ) ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ನ ಎಸ್.ಪಿ. ಹೇಮಲತಾ ಆಯ್ಕೆಯಾಗಿದ್ದಾರೆ.ಪಡೆದ ಮತ: 131. ಫೋಟೋ ಕ್ಕೆ- *(ಮೇಯರ್)[[https://web.archive.org/web/20160321055403/http://bbmp.gov.in/kn_IN/mayor Archived 2016-03-21 ವೇಬ್ಯಾಕ್ ಮೆಷಿನ್ ನಲ್ಲಿ.]]
- ಉಪ ಮೇಯರ್ ಫೋಟೋ ಕ್ಕೆ [[https://web.archive.org/web/20160112100646/http://bbmp.gov.in/en/web/guest/deputy-mayor Archived 2016-01-12 ವೇಬ್ಯಾಕ್ ಮೆಷಿನ್ ನಲ್ಲಿ.]]
ಮೇಯರ್ ಆಗಿ ಜಿ. ಪದ್ಮಾವತಿ ಆಯ್ಕೆ
ಬದಲಾಯಿಸಿ- 28 Sep, 2016
- ಬೆಂಗಳೂರು ನಗರದ 50ನೇ ಮೇಯರ್ ಆಗಿ ಕಾಂಗ್ರೆಸ್‌ನ ಜಿ.ಪದ್ಮಾವತಿ (ಪ್ರಕಾಶನಗರ ವಾರ್ಡ್) ಹಾಗೂ 51ನೇ ಉಪಮೇಯರ್ ಆಗಿ ಜೆಡಿಎಸ್‌ನ ಎಂ. ಆನಂದ್ (ರಾಧಾಕೃಷ್ಣ ದೇವಸ್ಥಾನ ವಾರ್ಡ್) ಬುಧವಾರ ಆಯ್ಕೆಯಾದರು.
- ಬುಧವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿ ಅವರು 142 ಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಲಕ್ಷ್ಮಿ ಅವರಿಗೆ ಒಟ್ಟು 120 ಮತ ಲಭಿಸಿದೆ. ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ ಅವರು 142 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
- ಸ್ಪರ್ಧೆ:ಮೇಯರ್ ಸ್ಥಾನ: ಪ್ರಕಾಶ್ ನಗರದ ಸದಸ್ಯೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ VS ಗಣೇಶ ಮಂದಿರ ವಾರ್ಡ್ ಸದಸ್ಯೆ ಬಿಜೆಪಿ ಅಭ್ಯರ್ಥಿ ಡಿ.ಎಚ್. ಲಕ್ಷ್ಮಿ
- ಉಪಮೇಯರ್ ಸ್ಥಾನ: ರಾಧಾಕೃಷ್ಣ ನಗರದ ಸದಸ್ಯ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ VS ಹೆಚ್‍ಎಸ್‍ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ
- ಚುನಾವಣಾ ಪ್ರಕ್ರಿಯೆ:
- ಮೇಯರ್ ಚುನಾವಣೆ ಪ್ರಕ್ರಿಯೆ ದಿ.28 Sep, 2016 ಬುಧವಾರ ಬೆಳಗ್ಗೆ 11.30ಕ್ಕೆ ಆರಂಭವಾಗಿತ್ತು, ಬಿಬಿಎಂಪಿ ಕಚೇರಿಯಲ್ಲಿ ಒಟ್ಟಾರೆ 269 ಸದಸ್ಯರು ಮತದಾನದ ಹಕ್ಕು ಹೊಂದಿದ್ದು ಕೈ ಎತ್ತುವ ಮೂಲಕ ಮತದಾನ ಮಾಡಿದ್ದಾರೆ.ಪ್ರಾದೇಶಿಕ ಆಯುಕ್ತೆ ವಿ.ಜಯಂತಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿದ್ದರು.[೧೨]
ಏಳನೇ ಮಹಿಳಾ ಮೇಯರ್
ಬದಲಾಯಿಸಿ- 29 Sep,2016;
- ಜಿ.ಪದ್ಮಾವತಿ ಅವರು ನಗರದ ಏಳನೇ ಮಹಿಳಾ ಮೇಯರ್ ಆಗಿದ್ದಾರೆ. ಸೀತಮ್ಮ, ಪದ್ಮಾವತಿ ಗಂಗಾಧರಗೌಡ, ಪ್ರೇಮಾ ಕಾರ್ಯಪ್ಪ, ಮುಮ್ತಾಜ್ ಬೇಗಂ, ಶಾರದಮ್ಮ ಹಾಗೂ ಎನ್.ಶಾಂತಕುಮಾರಿ ಅವರು ನಗರದ ಮೇಯರ್ ಆಗಿ ಕಾರ್ಯನಿರ್ವಹಿಸಿದ ಇತರ ಮಹಿಳೆಯರು.
- ಗುಣಶೇಖರ್ ಆಡಳಿತ ಪಕ್ಷದ ನಾಯಕ;
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಪಕ್ಷದ ನೂತನ ನಾಯಕರಾಗಿ ಜಯಮಹಲ್ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಎಂ.ಕೆ. ಗುಣಶೇಖರ್ ನೇಮಕಗೊಳ್ಳುವುದು ಖಚಿತವಾಗಿದೆ.
- ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿಯ ಉಮೇಶ್ ಶೆಟ್ಟಿ, ಮಂಜುನಾಥ್ ರಾಜು ಹಾಗೂ ಪೂರ್ಣಿಮಾ ಶ್ರೀನಿವಾಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ಗೆ ನಾಲ್ಕು ಸ್ಥಾಯಿ ಸಮಿತಿಗಳು ಸಿಗಲಿವೆ (ನಗರ ಯೋಜನೆ, ಆರೋಗ್ಯ, ವಾರ್ಡ್‌ಮಟ್ಟದ ಕಾಮಗಾರಿ ಹಾಗೂ ಲೆಕ್ಕಪತ್ರ) ಎಂದು ಉಪಮೇಯರ್ ಎಂ.ಆನಂದ್ ತಿಳಿಸಿದ್ದಾರೆ.[೧೩]
- ಬಿಬಿಎಂಪಿಯಲ್ಲಿ ಬಿಜೆಪಿ 125, ಕಾಂಗ್ರೆಸ್ 110, ಜೆಡಿಎಸ್ 23 ಹಾಗೂ ಪಕ್ಷೇತರರು 9 ಬಲಾಬಲ ಇದೆ. 142 ಮತಗಳನ್ನು ಪಡೆಯುವ ಮೂಲಕ ಪ್ರಕಾಶ್ ನಗರ ವಾರ್ಡ್ ನ ಪದ್ಮಾವತಿ ಮೇಯರ್ ಆಗಿ ಆಯ್ಕೆಯಾದರು. ಇನ್ನು ಉಪಮೇಯರ್ ಆಗಿ ರಾಧಾಕೃಷ್ಣ ನಗರದ ಎಂ.ಆನಂದ್ ಆಯ್ಕೆಯಾದರು. ಬಿಬಿಎಂಪಿಯಲ್ಲಿ 100 ಸ್ಥಾನ ಪಡೆಯುವ ಮೂಲಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.[ಗೌಡ್ರ ರಾಜಕೀಯಕ್ಕೆ ಮೇಲುಗೈ)[೧೪]
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-01-12. Retrieved 2016-01-13.
- ↑ "ಆರ್ಕೈವ್ ನಕಲು". Archived from the original on 2016-02-05. Retrieved 2016-01-13.
- ↑ http://karsec.gov.in/BBMP-2015/BBMP_calender2.pd[ಶಾಶ್ವತವಾಗಿ ಮಡಿದ ಕೊಂಡಿ]
- ↑ www.prajavani.net/article/62-ಇತರ-ಸದಸ್ಯರಿಗೆ-ಮತಾಧಿಕಾರ
- ↑ http://kannada.oneindia.com/news/bangalore/the-electoral-college-bbmp-mayor-election-2015-096486.html
- ↑ http://vijaykarnataka.indiatimes.com/state/bbmp-polls-Counting-will-be-on-25/articleshow/48641245.cms#write
- ↑ "ಆರ್ಕೈವ್ ನಕಲು". Archived from the original on 2023-04-07. Retrieved 2016-01-13.
- ↑ http://kannada.oneindia.com/news/bangalore/bbmp-election-result-2015-bjp-register-big-win-congress-suffers-huge-defeat-096394.html
- ↑ http://www.bangalorewaves.com/news/bangalorewaves-news.php?detailnewsid=18836
- ↑ "ಆರ್ಕೈವ್ ನಕಲು". Archived from the original on 2016-03-21. Retrieved 2016-01-13.
- ↑ "ಆರ್ಕೈವ್ ನಕಲು". Archived from the original on 2016-01-12. Retrieved 2016-01-13.
- ↑ ಪದ್ಮಾವತಿ ಆಯ್ಕೆ
- ↑ ಕಾಂಗ್ರೆಸ್‌ನ ಪದ್ಮಾವತಿ ನೂತನ ಮೇಯರ್
- ↑ [೧]