ಬುಗ್ಯಾಲ್
ಬುಗ್ಯಾಲ್ ಭಾರತದ ಉತ್ತರಾಖಂಡ ರಾಜ್ಯದ ಉನ್ನತ ಪ್ರದೇಶಗಳಲ್ಲಿರುವ ಹುಲ್ಲುಗಾವಲು ಅಥವಾ ಗೋಮಾಳ. ಸ್ಥಳೀಯ ಜನರು ಇವನ್ನು ಪ್ರಕೃತಿಯ ಸ್ವಂತ ಉದ್ಯಾನಗಳೆಂದು ಕರೆಯುತ್ತಾರೆ. ಈ ಮಾಳಗಳು ಮಟ್ಟಸವಾಗಿ ಯಾ ಇಳಿಜಾರಾಗಿ ಇರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ಹುಲ್ಲು ಮತ್ತು ಋತುಮಾನಕ್ಕನುಗುಣವಾಗಿ ಅರಳುವ ಹೂವುಗಳ ಹಾಸು ಇರುತ್ತದೆ. ಸ್ಥಳೀಯ ತುರುಗಾಹಿಗಳಿಗೆ ಬುಗ್ಯಾಲ್‌ಗಳು ಅತ್ಯುತ್ತಮ ಗೋಮಾಳವಾಗಿ ನೆರವಾಗುತ್ತವೆ. ಸಮುದ್ರಮಟ್ಟದಿಂದ ೩೦೦೦ ದಿಂದ ೪೦೦೦ ಮೀಟರ್ ಎತ್ತರದಲ್ಲಿರುವ ಈ ಬುಗ್ಯಾಲ್‌ಗಳು ಚಳಿಗಾಲದಲ್ಲಿ ಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತವೆ. ಬೇಸಗೆಯಲ್ಲಿ ಇಲ್ಲಿ ನಾನಾವಿಧವಾದ ಹೂವುಗಳು ಅರಳಿನಿಂತು ನೋಡುಗರಿಗೆ ಅದ್ಭುತ ದೃಶ್ಯ ಕಲ್ಪಿಸುತ್ತವೆ. ನಂದಾದೇವಿ, ಕೇದಾರನಾಥ, ಗಂಗೋತ್ರಿ ಮತ್ತು ಬಂದರ್‌ಪೂಂಛ್ ಪ್ರದೇಶಗಳಲ್ಲಿ ಅನೇಕ ವಿಶಾಲ ಬುಗ್ಯಾಲ್‌ಗಳಿವೆ. ಬುಗ್ಯಾಲ್‌ಗಳು ಅತಿ ನಾಜೂಕಾದ ಪರಿಸರವ್ಯವಸ್ಥೆಯನ್ನು ಹೊಂದಿದ್ದು ಇವುಗಳನ್ನು ಜತನದಿಂದ ಕಾಪಾಡಿಕೊಳ್ಳುವ ಅವಶ್ಯಕತೆಯಿದೆ.
ಉತ್ತರಾಖಂಡದ ಮುಖ್ಯ ಬುಗ್ಯಾಲ್‌ಗಳು
ಬದಲಾಯಿಸಿ- ಔಲಿ - ಜೋಷಿಮಠದ ಬಳಿ ಇರುವ ಔಲಿ ಭಾರತದ ಪ್ರಮುಖ ಸ್ಕೀಯಿಂಗ್ ವಲಯವಾಗಿದೆ. ಇದು ಸಮುದ್ರಮಟ್ಟದಿಂದ ೩೦೪೯ ಮೀ. ಎತ್ತರದಲ್ಲಿದೆ.
- ಗೋರ್ಸೋ - ಜೋಷಿಮಠದ ಬಳಿ ೩೦೫೬ ಮೀ. ಎತ್ತರದಲ್ಲಿ ಓಕ್ ಮತ್ತು ಸೂಚಿಪರ್ಣ ಕಾಡುಗಳ ನಡುವೆ ಇರುವ ಸುಂದರ ಬುಗ್ಯಾಲ್.
- ಕ್ವಾನ್ರಿ ಬುಗ್ಯಾಲ್ - ೩೩೫೦ ಮೀ. ಎತ್ತರದಲ್ಲಿದೆ.
- ಬೇದಿನಿ ಬುಗ್ಯಾಲ್ - ರೂಪಕುಂಡಕ್ಕೆ ಹೋಗುವ ಹಾದಿಯಲ್ಲಿದೆ.
- ಪುಷ್ಪ ಕಣಿವೆ - ೩೩೫೪ ಮೀ. ಎತ್ತರದಲ್ಲಿ.
- ಪನ್ವಾಲಿ ಮತ್ತು ಕುಶ-ಕಲ್ಯಾಣಿ ಬುಗ್ಯಾಲ್‌ಗಳು -ಗಂಗೋತ್ರಿ ಮತ್ತು ಕೇದಾರನಾಥಗಳ ನಡುವೆ ೩೩೫೪ ಮೀ. ಎತ್ತರದಲ್ಲಿವೆ.
- ಮುನ್ಸಿಯಾರಿ ಬುಗ್ಯಾಲ್ - ಪಿಥೋರಾಗಢ್ ಜಿಲ್ಲೆಯಲ್ಲಿದೆ.
- ದಯಾರಾ ಬುಗ್ಯಾಲ್
- ಜಿಯೊಲಿಂಗ್‌ಕಾಂಗ್ ಬುಗ್ಯಾಲ್
- ಬೌನ್ ಬುಗ್ಯಾಲ್
- ಚೌದಾಸ್ ಬುಗ್ಯಾಲ್
- ಬ್ಯಾನ್ಸ್ ಬುಗ್ಯಾಲ್
- ಡರ್ಮಾ ಬುಗ್ಯಾಲ್
- ಛಿಪ್ಲಾಕೋಟ್ ಬುಗ್ಯಾಲ್
- ಅಲಿ ಬುಗ್ಯಾಲ್
- ತಲಿ ಬುಗ್ಯಾಲ್‌ಗಳು