ಬಿ. ಪಿ. ಆಶಾಕುಮಾರಿ
ಬಡುವಂಡ್ರ ಪೂವಯ್ಯ ಆಶಾಕುಮಾರಿ (ಆಂಗ್ಲ:B. P. Asha Kumari) (ಜನನ: ೧೯೭೦), ಕನ್ನಡ ಭಾಷೆಯಲ್ಲಿ ಬರೆಯುವ ಪ್ರಮುಖ ಸಂಶೋಧನಾ ಲೇಖಕಿ.[೧] ವರ್ತಮಾನದ ನೆಲೆಯಲ್ಲಿ ಆಧುನಿಕ ಕನ್ನಡ ಸಾಹಿತ್ಯ, ಜಾನಪದ ಮತ್ತು ಐತಿಹ್ಯಗಳನ್ನು ಬಿಡಿಸಿ ನೋಡುವ ಅವರ ಸಂಶೋಧನಾ ಪುಸ್ತಕಗಳು ಮತ್ತು ಲೇಖನಗಳು ಮಹಿಳಾವಾದದ ಒಳದನಿಯನ್ನೂ ಹೊಂದಿವೆ.
ಬಿ. ಪಿ. ಆಶಾಕುಮಾರಿ | |
---|---|
ಜನನ | ೧೩ ಸೆಪ್ಟೆಂಬರ್ ೧೯೭೦ ಕೊಡಗು, ಕರ್ನಾಟಕ |
ವೃತ್ತಿ |
|
ಭಾಷೆ | ಕನ್ನಡ, ಕೊಡವ |
ವಿಷಯ |
|
ವೈಯಕ್ತಿಕ ಜೀವನ
ಬದಲಾಯಿಸಿಆಶಾಕುಮಾರಿ, ಕೊಡಗಿನಲ್ಲಿ ಬಡುವಂಡ್ರ ಪೂವಯ್ಯ ಮತ್ತು ಸೀತಮ್ಮ ದಂಪತಿಗಳ ಮಗಳಾಗಿ ೧೯೭೦ರ ಸೆಪ್ಟೆಂಬರ್ ೧೩ರಂದು ಹುಟ್ಟಿದರು.[೧] ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪದವಿ ಓದಿದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದ ಮೊದಲ ಅಂಧ ಸಂಶೋಧನಾ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ ಆಶಾ, ರಾಜ್ಯದ ಅಂತಹ ಮೂರನೇ ಮಾರ್ಗದರ್ಶಕರಾಗಿದ್ದಾರೆ. [೨][೩][೪]
ಕೃತಿಗಳು
ಬದಲಾಯಿಸಿ- ಮಹಿಳಾಕಾವ್ಯದಲ್ಲಿ ಹೆಣ್ಣಿನ ಪರಿಕಲ್ಪನೆ (೨೦೦೩)[೫]
- ಯಾರು ಹೆಚ್ಚು? (೨೦೦೩)
- ಹೊನ್ನ ಹೊಂಗೆ (೨೦೦೪)
- ಉಳ್ಳವರು ಶಿವಾಲಯ ಮಾಡುವರು (೨೦೦೪)
- ನಂಬಿಕೆಗಳು (೨೦೦೪)
- ಸ್ವಾವಲಂಬನೆ ಅಥವಾ ಸ್ವಉದ್ಯೋಗ (೨೦೦೪)
- ಸ್ಪಂದನ (೨೦೦೫)
- ಕಾಸ್ತಾಳಿ (೨೦೦೫)
- ಬಿ. ಎಂ. ಶ್ರೀಕಂಠಯ್ಯ (೨೦೦೬)
- ಜಿ. ಎಸ್. ಶಿವರುದ್ರಪ್ಪ (೨೦೦೭)[೬]
- ಕೊಡಗಿನ ಗೌರಮ್ಮ (೨೦೦೭)
- ಜಿ. ಎಸ್. ಭಟ್ (೨೦೦೭)
- ಕನ್ನಡ ಸಾಹಿತ್ಯ ಮೊದಲ ಹೆಜ್ಜೆ (೨೦೧೧)[೭][೮]
- ತೀ. ನಂ. ಶ್ರೀಕಂಠಯ್ಯ (೨೦೧೩)
- ಹೊಳವು (೨೦೧೬)
ಕೊಡಗಿನ ಜಾನಪದ ಕುರಿತು ಆಸಕ್ತಿ ಹೊಂದಿರುವ ಆಶಾಕುಮಾರಿ ಅಲ್ಲಿನ ಸ್ಥಳನಾಮ, ಹಬ್ಬಗಳು, ಮದುವೆ ಮತ್ತು ಇತರೆ ಆಚರಣೆಗಳ ಕುರಿತ ವೈಜ್ಞಾನಿಕ ವಿಶ್ಲೇಷಣೆಯುಳ್ಳ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
- ಕೊಡಗಿನ ಸಂಪ್ರದಾಯಗಳು[೯]
- ಬೇಡರ ಕುಣಿತ
- ಕೃಷಿ ಆಚಾರಣೆಗಳು
- ಆಡು ಸೋಗೆ
ಮುಂತಾದವು.
ಉಲ್ಲೇಖನಗಳು
ಬದಲಾಯಿಸಿ- ↑ ೧.೦ ೧.೧ "Writer BP Ashakumari". Bookbrahma.com. Retrieved 15 April 2021.
- ↑ "ನೈಜೀರಿಯಾ ಹುಡುಗಿಗೆ 20 ಚಿನ್ನದ ಪದಕ!". Vijaya Karnataka. 18 March 2019. Retrieved 15 April 2021.
- ↑ "ಮೈಸೂರು ವಿವಿ ಘಟಿಕೋತ್ಸವ: ನೈಜೀರಿಯಾ ವಿದ್ಯಾರ್ಥಿನಿ 'ಗೋಲ್ಡನ್ ಗರ್ಲ್', ಅಂಧನಿಗೆ ಡಾಕ್ಟರೇಟ್!". Kannada Prabha. 18 March 2019. Retrieved 15 April 2021.
- ↑ "ಕನ್ನಡದಲ್ಲೇ ಟೈಪಿಸಿ ಪಿಎಚ್. ಡಿ. ಪಡೆದ ಅಂಧ". Prajavani. 18 March 2019. Retrieved 15 April 2021.
- ↑ 'ಮಹಿಳಾಕಾವ್ಯದಲ್ಲಿ ಹೆಣ್ಣಿನ ಪರಿಕಲ್ಪನೆ', ISBN:81-7877024-5, ಅಭಿರುಚಿ ಪ್ರಕಾಶನ
- ↑ "Rashtrakavi G. S. Shivarudrappa - Chetana Suvarna". Sapna Online. Retrieved 15 April 2021.
- ↑ "ಕನ್ನಡ ಸಾಹಿತ್ಯ ಮೊದಲ ಹೆಜ್ಜೆ". Library catalog. Chetana Book house. Retrieved 15 April 2021.
- ↑ "Kannada Sahitya Modala Hejje". Sapna Online. Retrieved 15 April 2021.
- ↑ South Indian Folklore Dictionary, ISBN:978-93-80-994-90-1, Volume I, p. 271, Year-2011