"ಪ್ರೇಮ ಪರ್ವ", "ಕಲ್ಲರಳಿ ಹೂವಾಗಿ", "ಒಲವಿನ ಉಡುಗೂರೆ", "ವಿರಪ್ಪನಾಯ್ಕ", "ದೇವ" ಹೀಗೆ ಮುಂತಾದ ಹೆಸರುವಾಸಿಯಾದ ಚಲನಚಿತ್ರಗಳ ಕಥೆಗಳಿಂದ ಮನೆಮಾತಾಗಿರುವ ಬಿ. ಎಲ್. ವೇಣುರವರು ೧೪ ಕಥಾ ಸಂಕಲನಗಳು, ೭ ಸಣ್ಣ ಕಾದಂಬರಿಗಳು, ೩೩ ಕಾದಂಬರಿಗಳು, ಅದರಲ್ಲಿ ೭ ಐತಿಹಾಸಿಕ ಕಾದಂಬರಿಗಳು,೫ ನಾಟಕಗಳು ೪ ಅಂಕಣ ಬರಹಗಳ ಸಂಕಲನಗಳು ಮತ್ತು ಅವರ ಆತ್ಮಕಥೆಯನ್ನು ಸೇರಿ ಒಟ್ಟು ೬೫ ಕ್ಕೂ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ಧಾರೆ.

ಡಾ. ಬಿ. ಎಲ್. ವೇಣು
[[File:
ಡಾ. ಬಿ ಎಲ್‌ ವೇಣು
|200px|center=yes|alt=]]
ಶ್ರೀ ಬಿ. ಎಲ್. ವೇಣುರವರು
ಜನನ೧೯೪೫ ಮೇ ೨೭
ಚಿತ್ರದುರ್ಗ
ವೃತ್ತಿಕಛೇರಿ ಆಧೀಕ್ಷಕರು, ಆರೋಗ್ಯ ಇಲಾಖೆ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ.ಎಸ್ಸಿ, ಪ್ರಥಮದರ್ಜೆ ಕಾಲೇಜು, ಚಿತ್ರದುರ್ಗ
ಪ್ರಕಾರ/ಶೈಲಿಕಥೆ, ಕಾದಂಬರಿ, ಸಿನಿಮಾ ಚಿತ್ರಕಥೆ ಮತ್ತು ಸಂಭಾಷಣೆ
ವಿಷಯಐತಿಹಾಸಿಕ, ಸಾಮಾಜಿಕ ಮತ್ತು ಜನಜೀವನ
ಪ್ರಮುಖ ಪ್ರಶಸ್ತಿ(ಗಳು)ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭), ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩), ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦),
ಬಾಳ ಸಂಗಾತಿಜಿ.ಆರ್. ನಾಗವೇಣಿ
ಮಕ್ಕಳುಸಿ.ವಿ. ಮಂಜುನಾಥ್ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್
ತಂದೆಬಿ. ಲಕ್ಷ್ಮಯ್ಯ (ರಂಗಕಲಾವಿದರು)
ತಾಯಿಬಿ. ಸುಶೀಲಮ್ಮ

ವೇಣುರವರು ೧೯೪೫ನೆಯ ಇಸವಿ ಮೇ ೨೭ ರಂದು ಜನಿಸಿದರು. ತಂದೆ ಬಿ. ಲಕ್ಷ್ಮಯ್ಯ (ರಂಗಕಲಾವಿದರು), ತಾಯಿ ಬಿ.ಸುಶೀಲಮ್ಮ (ಗೃಹಿಣಿ)ಯವರ ಮಗನಾಗಿ ಕರ್ನಾಟಕ ರಾಜ್ಯದ ಚಿತ್ರದುರ್ಗದಲ್ಲಿ ಜನನ. ಮಡದಿ ಜಿ. ಆರ್ ನಾಗವೇಣಿ ಹಾಗೂ ಮಕ್ಕಳು ಸಿ.ವಿ. ಮಂಜುನಾಥ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್ ಹೊಂದಿರುವ ಸುಖಿ ಕುಟುಂಬ. ಚಿತ್ರದುರ್ಗದಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ, ಅಧ್ಯಯನ ಮಾಡಿ, ಆರೋಗ್ಯ ಇಲಾಖೆಯ ಜಿಲ್ಲಾ ಆಸ್ಪ್ರತ್ರೆಗಳಲ್ಲಿ ದಿನಾಂಕ: ೧೭-೦೯-೧೯೭೦ ರಿಂದ ೨೦೦೩ ರ ವರೆಗೆ ದ್ವಿತೀಯ ದರ್ಜೆ ಗುಮಾಸ್ತ, ಪ್ರಥಮ ದರ್ಜೆ ಗುಮಾಸ್ತ, ಸಹಾಯಕ ಮತ್ತು ಕಛೇರಿ ಅಧೀಕ್ಷರಾಗಿ ಗುಲ್ಬರ್ಗ, ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

ಬದುಕಿನ ಏರಿಳಿತಗಳಿಗೆ ಅಂಜದೆ ಕುಗ್ಗದೆ ಸಾಹಿತ್ಯ ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ಮಹತ್ತರವಾದ ಮೈಲಿಗಲ್ಲು ಸೃಷ್ಠಿಸಿದ್ದಾರೆ. ಇವರ "ನಿರೀಕ್ಷಣೆ" ಎಂಬ ಕಾದಂಬರಿಯಿಂದ ಪ್ರಾರಂಭವಾದ ಸಾಹಿತ್ಯದ ಹೆಜ್ಜೆಯು ಎನ್ನು ಓದುಗರಲ್ಲಿ ನಿರೀಕ್ಷಣೆಯನ್ನು ಕಡಿಮೆ ಮಾಡದ ರೀತಿ ಬೆಳೆದು ಹೆಮ್ಮರವಾಗಿದ್ದಾರೆ.

ಸಾಹಿತ್ಯ

ಬದಲಾಯಿಸಿ

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಥೆಗಳನ್ನು ಕಟ್ಟಿದರು. ವಿಸ್ತಾರವಾಗುತ್ತಾ ಹೋದಂತೆ ಸಾಹಿತ್ಯದಲ್ಲಿ ಮೇರು ಕೀರ್ತಿಯನ್ನು ಪಡೆದರು. ಇವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕಥೆಗಳು, ಕಾದಂಬರಿಗಳು, ನಾಟಕಗಳು, ಅದರಲ್ಲೂ ಐತಿಹಾಸಿಕ ಕಾದಂಬರಿಗಳಂತು ಹೆಸರುವಾಸಿಯಾಗಿದ್ದಾವೆ.

ಕಾದಂಬರಿಗಳು

ಬದಲಾಯಿಸಿ
  1. ನಿರೀಕ್ಷಣೆ (ಮೊದಲ ಕಾದಂಬರಿ)
  2. ಮೆಟ್ಟಿಲುಗಳು
  3. ಮೊಬ್ಬಳ್ಳಿಯೋಯ ಬೆತ್ತಲೆ ಸೇವೆ (ಮೂರನೇ ಮುದ್ರಣ)
  4. ಅತಂತ್ರರು
  5. ಪರಾಜಿತ (ನಿಗೂಡ, ಎರಡನೇಯ ಮುದ್ರಣ)
  6. ಗಂಡುಗಲಿ ಮದಕರಿನಾಯಕ (ಐತಿಹಾಸಿಕ, ಏಳನೇಯ ಮುದ್ರಣ)
  7. ಪ್ರೇಮಪರ್ವ (ಎರಡನೇಯ ಮುದ್ರಣ)
  8. ಅಜೇಯ
  9. ಪ್ರೀತಿ ವಾತ್ಸಲ್ಯ (ಎರಡನೇಯ ಮುದ್ರಣ)
  10. ಪ್ರೇಮ ಜಾಲ (ಎರಡನೇಯ ಮುದ್ರಣ)
  11. ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ (ನೃತ್ಯ ಪ್ರಧಾನ)
  12. ಹೃದಯರಾಗ (ಸಂಗೀತ ಪ್ರಧಾನ)
  13. ರಾಮರಾಜ್ಯದಲ್ಲಿ ರಾಕ್ಷಸರು (ರಾಜಕೀಯ)
  14. ಪ್ರೀತಿಯ ಹೂಗಳು
  15. ಕೆಂಡಸಂಪಿಗೆ
  16. ವಜ್ರಕಾಯ
  17. ಮಹಾನದಿ
  18. ಪಾರಿವಾಳ
  19. ಹಾಡುಹಕ್ಕಿ
  20. ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ (ಐತಿಹಾಸಿಕ)
  21. ಕ್ರಾಂತಿಯೋಗಿ ಮರುಳಸಿದ್ಧ (ಐತಿಹಾಸಿಕ)
  22. ಕಲ್ಲರಳಿ ಹೂವಾಗಿ (ಐತಿಹಾಸಿಕ)
  23. ಬಣ್ಣದ ಜಿಂಕೆ (ರಂಗಭೂಮಿ ಬಗ್ಗೆ)
  24. ವಿಂಚಿನ ಬಳ್ಳಿ
  25. ಮಿಡಿನಾಗರ
  26. ಹೆಬ್ಬುಲಿ ಹಿರೇ ಮದಕರಿನಾಯಕ (ಐತಿಹಾಸಿಕ)
  27. ನವಿಲುಗರಿ []
  28. ಸಮರ್ಥರು
  29. ಚಿತ್ರದುರ್ಗ ವೀರರಾಣಿ ಓಬವ್ವನಾಗತಿ (ಐತಿಹಾಸಿಕ)
  30. ಗೋಮುಖ
  31. ಹಗಲು ಕಗ್ಗೋಲೆ ಮಾನ್ಯ ರಾಜಾಮತ್ತಿ ತಿಮ್ಮಣ್ಣನಾಯಕ (ಐತಿಹಾಸಿಕ)
  32. ದುರ್ಗದ ಬೇಡರ್ದಂಗೆ (೧೮೪೯ ರಲ್ಲಿ ಬ್ರಿಟಿಷರ ವಿರುದ್ದ ನಡೆದ ಸಂಗ್ರಾಮ, ಐತಿಹಾಸಿಕ)
  33. ರಾಜಾಸುರಪುರದ ವೆಂಕಟ್ಟಪ್ಪನಾಯಕ (ಐತಿಹಾಸಿಕ)

ಕಥಾಸಂಕಲನಗಳು

ಬದಲಾಯಿಸಿ
  1. ಬಣ್ಣಗಳು
  2. ದೊಡ್ಡಮನೆ ಎಸ್ಟೇಟ್‌
  3. ಪ್ರೇಮ ಮದುವೆ ಮತ್ತ ಶೀಲ
  4. ನನ್ನ ಪ್ರೀತಿಯ ಹುಡುಗಿಗೆ
  5. ನೀಲವರ್ಣ
  6. ದಲಿತಾವತಾರ
  7. ಗೋಪಾಲಸ್ವಾಮಿ ಹೊಂಡವೂ ಜಲನಾರಾಯಣನು
  8. ಬಣ್ಣದ ಗೊಂಬಿ
  9. ಚಿತ್ರದುರ್ಗದ ವೀರ ಪಾಳೇಗಾರರು
  10. ತಿಪ್ಪಜ್ಜಿ ಸರ್ಕಲ್‌
  11. ಸಂಶೋಧನೆ
  12. ಮುಗಿಲು
  13. ಕಾಮನಬಿಲ್ಲು ಇತರೆ ಕಥೆಗಳು
  14. ವೇಣು ಅವರ ಆಯ್ದ ಪ್ರೇಮ ಕಥೆಗಳು (೪೧ ಪ್ರೇಮ ಕಥೆಗಳು)

ನಾಟಕಗಳು

ಬದಲಾಯಿಸಿ
  1. ಯಮಲೋಕದಲ್ಲಿ ಮಾನವ (ನಗೆ ನಾಟಕ)
  2. ಭೂಲೋಕ್ಕೆ ಬಂದ ಬಸನಣ್ಣ (ವಿಡಂಬನೆ)
  3. ರಾಜವೀರ ಗಂಡುಗಲಿ ಮದಕರಿ ನಾಯಕ (ಐತಿಹಾಸಿಕ)
  4. ಹೋರಾಟ (ಏಡ್ಸ್‌ ಬಗ್ಗೆ)
  5. ಜೀವಜಾಲ

ಸಣ್ಣ ಕಾದಂಬರಿಗಳು

ಬದಲಾಯಿಸಿ
  1. ಗುಹೆ ಸೇರಿದವಳು (ಮಕ್ಕಳಿಗಾಗಿ)
  2. ಸಹೃದಯಿ
  3. ಬೇರು ಬಿಟ್ಟವರು
  4. ಮನಸ್ಸುಗಳು
  5. ವೀರವನಿತೆ ಒನಕೆ ಓಬವ್ವ (ಮಕ್ಕಳಿಗಾಗಿ)
  6. ಶೋಧನೆ
  7. ಕ್ರಾಂತಿ

ಅಂಕಣ ಬರಹಗಳು

ಬದಲಾಯಿಸಿ
  1. ಚುನಾವಣೆಗೆ ನಿಂತ ಮಠಾಧೀಶರು
  2. ಗೋಹತ್ಯೆ ನಿಷೇದ ಇತರೆ ಲೇಖನಗಳು
  3. ಸಂಕೀರ್ಣ
  4. ಮಠಗಳು ದೇಶಕ್ಕೇ ಶಾಪ

ಆತ್ಮಕಥೆ

ಬದಲಾಯಿಸಿ
  1. ಲೋಕದಲ್ಲಿ ಜನಿಸಿದ ಬಳಿಕ

ಸಿನಿಮಾ

ಬದಲಾಯಿಸಿ

ಸಾಹಿತ್ಯ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರಲ್ಲಿ ವೇಣುರವರ ಪಾತ್ರ ತುಂಬಾ ಅಧಿಕವಾಗಿದೆ. ಎರಡನ್ನು ಸಮತೋಲನೆ ಮಾಡಿಕೊಂಡು ಮುಂದುವರೆದಿದ್ದಾರೆ. ಮೂರೂ ತಲೆಮಾರಿನ ನಾಯಕ ನಟರ ಜೊತೆ ಸಿನಿಮಾರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಹೀಗೇ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಟಿ.ವಿ ಧಾರಾವಾಹಿ ಯಲ್ಲೂ ಕೂಡಾ ತಮ್ಮ ಕಾರ್ಯವನ್ನು ವಿಸ್ತರಿಸಿದ್ದಾರೆ. ಸಿನಿಮಾ ರಂಗದಲ್ಲಿ ಇಲ್ಲಿಯವರೆಗೂ ೮ ಚಿತ್ರಕಥೆ ರಚನೆ, ೬೬ ಚಲನಚಿತ್ರಗಳ ಸಂಭಾಷಣೆ ರಚನೆ ಇದರಲ್ಲಿ ೮ ಚಿತ್ರಗಳು ಶತದಿನ ಕಂಡಿದ್ದಾವೆ. ಸಿದ್ಧಲಿಂಗಯ್ಯ,ಪುಟ್ಟಣ್ಣ ಕಣಗಲ್‌, ದೂರೆ ಭಗವಾನ್‌, ನಾಗಾಭರಣ, ವಿಜಯ್‌, ಸೋಮಶೇಖರ್‌, ಭಾರ್ಗವ, ಡಿ. ರಾಜೇಂದ್ರಬಾಬು, ಎಸ್.‌ ನಾರಾಯಣ್‌ ಫಣಿ ರಾಮಚಂದ್ರ ಹೀಗೆ ಹಲವಾರು ಹೆಸರಾಂತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

ಸಂಭಾಷಣೆ ರಚಿಸಿದ ಚಲನಚಿತ್ರಗಳು []

ಬದಲಾಯಿಸಿ
ಕ್ರ.ಸಂ ಚಲನಚಿತ್ರದ ಹೆಸರು ಬಿಡುಗಡೆಯ ವರ್ಷ
೦೧ ಬೆತ್ತಲೆ ಸೇವೆ ೧೯೮೨
೦೨ ಪ್ರಾಯ ಪ್ರಾಯ ಪ್ರಾಯ ೧೯೮೨
೦೩ ಪರಾಜಿತ ೧೯೮೨
೦೪ ಪ್ರೇಮ ಪರ್ವ ೧೯೮೩
೦೫ ಮುಕ್ಕೋಪಿ (ತೆಲುಗು) ೧೯೮೪
೦೬ ಪ್ರೀತಿ ವಾತ್ಸಲ್ಯ ೧೯೮೪
೦೭ ಮೂರು ಜನ್ಮ ೧೯೮೪
೦೮ ಅಮೃತ ಘಳಿಗೆ ೧೯೮೪
೦೯ ಪುವಿಳಂಗು (ತಮಿಳು) ೧೯೮೪
೧೦ ಸೇಡಿನ ಹಕ್ಕಿ ೧೯೮೫
೧೧ ಬಿಡುಗಡೆಯ ಬೇಡಿ ೧೯೮೫
೧೨ ಅಜೇಯ ೧೯೮೫
೧೩ ತಾಯಿಯೇ ನನ್ನ ದೇವರು ೧೯೮೬
೧೪ ಪುದಿರ್‌ (ತಮಿಳ್) ‌೧೯೮೬
೧೫ ಪ್ರೇಮ ಜಾಲ ೧೯೮೬
೧೬ ಪ್ರೇಮ ಗಂಗೆ ೧೯೮೬
೧೭ ನನ್ನವರು ೧೯೮೬
೧೮ ಹೆಣ್ನೀನ ಕೂಗು ೧೯೮೬
೧೯ ಒಲವಿನ ಊಡುಗೊರೆ ೧೯೮೭
೨೦ ಸಂಭಾವಾಮಿ ಯುಗೇ ಯುಗೇ ೧೯೮೮
೨೧ ಮಾತೃ ವಾತ್ಸಲ್ಯ ೧೯೮೮
೨೨ ಕೃಷ್ಣ ರುಕ್ಮಿಣಿ ೧೯೮೮
೨೩ ಜನ ನಾಯಕ ೧೯೮೮
೨೪ ಸಿಂಗಾರಿ ಬಂಗಾರಿ ೧೯೮೯
೨೫ ಒಂದಾಗಿ ಬಾಳು ೧೯೮೯
೨೬ ಮಾಧುರಿ ೧೯೮೯
೨೭ ಡಾಕ್ಟರ್‌ ಕೃಷ್ಣ ೧೯೮೯
೨೮ ದೇವ ೧೯೮೯
೨೯ ಅವತಾರ ಪುರುಷ ೧೯೮೯
೩೦ ಅಂತಿಂಥ ಗಂಡು ನಾನಲ್ಲ ೧೯೮೯
೩೧ ರಾಮರಾಜ್ಯದಲ್ಲಿ ರಾಕ್ಷಸರು ೧೯೯೦
೩೨ ಪ್ರತಾಪ್ ೧೯೯೦
೩೩ ಕೆಂಪು ಗುಲಾಬಿ ೧೯೯೦
೩೪ ಭಲೇ ಚತುರ ೧೯೯೦
೩೫ ಲಯನ್‌ ಜಗಪತಿ ರಾವ್‌ ೧೯೯೧
೩೬ ಗಂಡನಿಗೆ ತಕ್ಕ ಹೆಂಡತಿ ೧೯೯೧
೩೭ ಕ್ರಾಂತಿ ಗಾಂಧಿ ೧೯೯೨
೩೮ ಜೀನಾ ಮರ್ನಾ ತೆರೆ ಸಂಗ್‌ (ಹಿಂದಿ) ೧೯೯೨
೩೯ ಎಂಟೆದೆ ಭಂಟ ೧೯೯೨
೪೦ ರಾಜಾಧಿರಾಜ ೧೯೯೨
೪೧ ಗೂಂಡಾರಾಜ್ಯ ೧೯೯೨
೪೨ ರಾಜಕೀಯ ೧೯೯೩
೪೩ ಮಿಲ್ಟ್ರಿ ಮಾವ ೧೯೯೩
೪೪ ಮಕ್ಕಳ ಸಾಕ್ಷಿ ೧೯೯೪
೪೫ ಇಂಡಿಯನ್‌ ೧೯೯೪
೪೭ ಮಿಸ್ಟರ್‌ ಅಭಿಷೇಕ್‌ ೧೯೯೫
೪೮ ಬಂಗಾರದ ಕಳಶ ೧೯೯೫
೪೯ ಪಾಳೇಗಾರ ೨೦೦೩
೫೦ ಅಜ್ಜು ೨೦೦೪
೫೧ ಆಟೋ ಶಂಕರ್ ‌೨೦೦೫
೫೨ ಕಲ್ಲರಳಿ ಹೂವಾಗಿ ೨೦೦೬
೫೩ ತಂದೆಗೆ ತಕ್ಕ ಮಗ ೨೦೦೬
೫೪ ಸಂಗಾತಿ ೨೦೦೮
೫೫ ಸಿಟಿಜೆನ್‌ ೨೦೦೮
೫೬ ನನ್ನೆದೆಯ ಹಾಡು ೨೦೦೯
೫೭ ವಂಶೋದ್ಧಾರಕ ೨೦೧೫
೫೮ ತಿಪ್ಪಜ್ಜಿಯ ಸರ್ಕಲ್ ‌೨೦೧೫
೫೯ ಜಿಲ್ಲಾಧಿಕಾರಿ
೬೦ ಕೆಲಸದಾಕೆ
೬೧ ದನಗಳು
೬೨ ಅಪರಂಜಿ
೬೩ ರಾಜ ಮಹಾರಾಜ
೬೪ ಸಮರ ಸಿಂಹ
೬೫ ಚಿತ್ರದುರ್ಗದ ಒನಕೆ ಓಬವ್ವ
೬೬ ಗಂಡುಗಲಿ ಮದಕರಿ ನಾಯಕ

ಟಿ.ವಿ ಧಾರಾವಾಹಿಗಳು

ಬದಲಾಯಿಸಿ
  • ಭಾರ್ಗವಿ - ಕಥೆ, ಚಿತ್ರಕಥೆ ಮತ್ತು ಸಂಭಾಷಣೆ
  • ಕೆಳದಿ ಚೆನ್ನಮ್ಮ - ಚಿತ್ರಕಥೆ ಮತ್ತು ಸಂಭಾಷಣೆ
  • ಅಪ್ಪ - ಸಂಭಾಷಣೆ
  • ನಾಳೆಗಳಿಲ್ಲದವರು - ಕಥೆ

ವೇಣುರವರ ಕುರಿತ ಸಾಕ್ಷ್ಯಚಿತ್ರಗಳು

ಬದಲಾಯಿಸಿ
  • ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ - ನಿರ್ದೇಶಕರು - ಬಾಲಾಜಿ - ೨೦೧೨
  • ಕರ್ನಾಟಕ ಸರ್ಕಾರದ ಕನ್ನಡ ಸಾಹಿತ್ಯ ಅಕಾಡೆಮಿ - ನಿರ್ದೇಶಕರು - ನಾಗರಾಜ ಅದವಾನಿ - ೨೦೧೭
  • ಕರ್ನಾಟಕ ಸಾಹಿತ್ಯ ಕನ್ನಡ ಸಾಹಿತ್ಯ ಸಂಸ್ಕೃತಿ ಇಲಾಖೆ - ನಿರ್ದೇಶಕರು - ಶ್ರೀನಿವಾಸಮೂರ್ತಿ - ೨೦೧೮
  • ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು - ನಿರ್ದೇಶಕರು - ಕೆ. ಎಸ್.‌ ಪರಮೇಶ್ವರಪ್ಪ - ೨೦೧೮ []

ಪ್ರಶಸ್ತಿ, ಪುರಸ್ಕಾರ, ಬಿರುದು

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು

ಬದಲಾಯಿಸಿ
  • "ಸುಡುಗಾಡು ಸಿದ್ದನ ಪ್ರಸಂಗ" ಕ್ಕೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
  • "ಅತಂತ್ರರು" ಗೆ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
  • "ಗೋಮುಖ" ಗೆ ತರಂಗ ಕಾದಂಬರಿ ಸ್ಪರ್ಧಯಲ್ಲಿ ದ್ವಿತೀಯ ಬಹುಮಾನ

ಪ್ರಜಾಮತ ಕಥಾ ಸ್ಪರ್ಧೆ ಪ್ರಥಮ ಬಹುಮಾನ

ಬದಲಾಯಿಸಿ
  • ಲಿಂಗನೆಟ್ಟ
  • ಬೆತ್ತಲೆ ಸೇವೆ

ಸಂದ ಪ್ರಮುಖ ಪ್ರಶಸ್ತಿಗಳು

ಬದಲಾಯಿಸಿ
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫)
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭)
  • ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩)
  • ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦)

ಇತರೆ ಮುಖ್ಯ ಪ್ರಶಸ್ತಿಗಳು

ಬದಲಾಯಿಸಿ
  • ಅ.ನ.ಕೃ ಪ್ರಶಸ್ತಿ
  • ಮಾಸ್ತಿ ಪ್ರಶಸ್ತಿ
  • ಬರಗೂರು ಪ್ರಶಸ್ತಿ
  • ಗೊರೂರು ಪ್ರಶಸ್ತಿ
  • ಆರ್ಯಭಟ ಪ್ರಶಸ್ತಿ
  • ಹಾವನೂರು ಪ್ರಶಸ್ತಿ
  • ಗಳಗನಾಥ ಪ್ರಶಸ್ತಿ
  • ಮಾಸ್ತಿ ಕಾದಂಬರಿ ಪ್ರಶಸ್ತಿ
  • ಶಿಮುಶ ಪ್ರಶಸ್ತಿ
  • ಸರ್.‌ ಎಂ, ವಿ ನವರತ್ನ ಪ್ರಶಸ್ತಿ
  • ರನ್ನ ಸಾಹಿತ್ಯ ಪ್ರಶಸ್ತಿ
  • ಗೋರೂರು ಸಾಹಿತ್ಯ ಪ್ರಶಸ್ತಿ
  • ಹುಣಸೂರು ಪ್ರಶಸ್ತಿ
  • ಮಹರ್ಷಿ ವಾಲ್ಮಿಕಿ ಪ್ರಶಸ್ತಿ ೨೦೨೦-೨೧

ಗೌರವ ಸನ್ಮಾನಗಳು

ಬದಲಾಯಿಸಿ
  • ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ ಸರ್ವಾಧ್ಯಕ್ಷರಾಗಿ ಗೌರವ - ೧೯೯೮
  • ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ - ೨೦೧೩
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆ - ೨೦೦೧
  • ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ (ದೇವರಹಳ್ಳಿ) ಸರ್ವಾಧ್ಯಕ್ಷರಾಗಿ ಗೌರವ - ೨೦೦೩
  • ಹೊಳಲ್ಕೆರೆ ತರಳಬಾಳು ಹುಣ್ಣಿಮೆಯಲ್ಲಿ ಸಿರಿಗೆರೆ ಶ್ರೀಗಳಿಂದ ಸನ್ಮಾನ - ೨೦೦೮
  • "ಒಲವಿನ ಊಡುಗೊರೆ" ಚಿತ್ರದ ಸಂಭಾಷಣೆಗಾಗಿ ಚಿತ್ರ ರಸಿಕರ ಸಂಘ ಬೆಂಗಳೂರು ರವರಿಂದ ಪ್ರಶಸ್ತಿ - ೧೯೮೭-೮೮
  • "ಪ್ರೇಮಪರ್ವ" ಚಿತ್ರದ ಕಥೆಗಾಗಿ ಚಿತ್ರ ರಸಿಕರ ಸಂಘ ಬೆಂಗಳೂರು ರವರಿಂದ ಪ್ರಶಸ್ತಿ - ೧೯೮೩-೮೪
  • ಚಿತ್ರದುರ್ಗದ ಮುರುಘಾ ಬೃಹನ್ಮಠದಿಂದ "ಸಾಹಿತ್ಯ ಭೂಷಣ ಪ್ರಶಸ್ತಿ" ಸನ್ಮಾನ - ೧೯೮೯-೯೦
  • ಚಿತ್ರದುರ್ಗದ ಮುರುಘಾ ಬೃಹನ್ಮಠದಿಂದ "ಸಾಹಿತ್ಯರತ್ನಾಕರ ಪ್ರಶಸ್ತಿ" ಸನ್ಮಾನ - ೨೦೦೧-೦೨
  • ಹಿರಿಯೂರಿನ ಮಂಗಳ ಸಾಹಿತ್ಯ ಕಲಾ ವೇದಿಕೆಯಿಂದ "ಸಾಹಿತ್ಯ ಚತುರ ಪ್ರಶಸ್ತಿ" ಸನ್ಮಾನ - ೧೯೯೪
  • ಚೆನ್ನೈನ ಸಿಕಾ ಅವಾರ್ಡ್‌ "ಕಲ್ಲರಳಿ ಹೂವಾಗಿ" ಚಿತ್ರಕ್ಕಾಗಿ "ದಕ್ಷಿಣ ಭಾರತದ ಅತ್ಯುತ್ತಮ ಕಥೆಗಾರ" ಪ್ರಶಸ್ತಿ - ೨೦೦೮
  • "ಕಲ್ಲರಳಿ ಹೂವಾಗಿ" ಪೆನೋರಮಾ ವಿಭಾಗದಲ್ಲಿ ಪ್ರದರ್ಶನ
  • "ಕಲ್ಲರಳಿ ಹೂವಾಗಿ" ಚಿತ್ರದ ಸಂಭಾಷಣೆಗಾಗಿ ಕನ್ನಡ ಚಿತ್ರ ಪ್ರೇಮಿಗಳು ಬೆಂಗಳೂರು ರವರಿಂದ ಪ್ರಶಸ್ತಿ
  • "ಕಲ್ಲರಳಿ ಹೂವಾಗಿ" ಸಿನಿಮಾದ ಕಥೆ ಮತ್ತು ಸಂಭಾಷಣೆಗಾಗಿ "ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ"
  • ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸದಸ್ಯರಾಗಿ ಆಯ್ಕೆ - ೨೦೦೪
  • ಚಿತ್ರದುರ್ಗದ ನಗರಸಭೆಯಿಂದ ಪೌರ ಸನ್ಮಾನ - ೨೦೦೮
  • ಅಭಿನಂದನಾ ಗ್ರಂಥ "ಚಿನ್ಮೂಲಾದ್ರಿ ಸಿರಿ" ಸಮರ್ಪಣೆ - ಕೆ. ವೆಂಕಣ್ಣಾಚಾರ್ - ೨೦೦೯
  • ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ - ೨೦೦೮
  • ಅಭಿನಂದನಾ ಗ್ರಂಥ "ಕೋಟೆ ನಾಡಿನ ಒಂಟಿ ಸಲಗ" ಸಮರ್ಪಣೆ - ಕೆ,ಎಸ್. ಪರಮೇಶ್ವರ - ೨೦೨೧
  • ಇನ್ನಿತರ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನ

ಚಲನಚಿತ್ರಗಳಿಗೆ ಸಂದ ಪ್ರಶಸ್ತಿಗಳು

ಬದಲಾಯಿಸಿ
  • ಕರ್ನಾಟಕ ರಾಜ್ಯ ಪ್ರಶಸ್ತಿ -
    • ಅಪರಂಜಿ - ೧೯೮೩-೮೪
    • ತಿಪ್ಪಜ್ಜಿ ಸರ್ಕಲ್‌ - ೨೦೧೫-೧೬
  • ಕರ್ನಾಟಕ ಚಲನಚಿತ್ರ ಅಕಾಡೆಮಿ ಗೌರವ ಪ್ರಶಸ್ತಿ - ೨೦೧೭
  • ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ "ಬೆಳ್ಳಿಹೆಜ್ಜೆ" - ೨೦೧೮
 
ರಾಜಾ ವೀರ ಮದಕರಿನಾಯಕ  ಚಲನಚಿತ್ರದ ಸ್ಕ್ರಿಪ್ಟ್ ಮತ್ತು ಡೈಲಾಗ್ ಡಿಸ್ಕಶನ್
 
ರಾಜಾ ವೀರ ಮದಕರಿನಾಯಕ  ಚಲನಚಿತ್ರದ ಸ್ಕ್ರಿಪ್ಟ್ ಮತ್ತು ಡೈಲಾಗ್ ಡಿಸ್ಕಶನ್
 
ರಾಜಾ ವೀರ ಮದಕರಿನಾಯಕ ಚಿತ್ರತಂಡ  ನಟ ದರ್ಶನ ಅವರೊಂದಿಗೆ
 
ವಿಷ್ಣು ಮತ್ತು ನಿರ್ದೇಶಕ ಭಾರ್ಗವ ಅವರೊಂದಿಗೆ ವೇಣು
 
ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ. ತಿಪ್ಪಜ್ಜಿ ಸರ್ಕಲ್  ಚಿತ್ರದ ಸಂಭಾಷಣೆಗಾಗಿ
 
ಖ್ಯಾತ ನಿರ್ದೇಶಕರಾದ ದೊರೆ -ಭಗವಾನ್ ಅವರೊಂದಿಗೆ
 
ನಾದಬ್ರಹ್ಮ ಹಂಸಲೇಖ ಅವರೊಂದಿಗೆ
 
ಕಲ್ಲರಳಿ ಹೂವಾಗಿ  ಚಿತ್ರತಂಡದೊಂದಿಗೆ
 
ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ
 
ನಟ ವಿಜಯ ರಾಘವೇಂದ್ರ , ಛಾಯಾಗ್ರಾಹಕ ವೇಣು , ನಿರ್ದೇಶಕ ನಾಗಾಭರಣ ಅವರೊಂದಿಗೆ
 
ಗಂಡುಗಲಿ ಮದಕರಿನಾಯಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ ಅವರೊಂದಿಗೆ
 
ಕವಿ ದೊಡ್ಡರಂಗೇಗೌಡ ಅವರೊಂದಿಗೆ
 
೬೦ ವರ್ಷದ ಅಭಿನಂದನಾ ಸಮಾರಂಭ
 
ಕಲ್ಲರಳಿ ಹೂವಾಗಿ  ಸಂಭಾಷಣೆಗೆ ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಸಮಾರಂಭದಲ್ಲಿ
 
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ೨೦೦೭  ಸಮಾರಂಭ
 
ದುರ್ಗದ ಸಿರಿ  ಸಮಾರಂಭದಲ್ಲಿ , ಗಾಯಕ ಪಿ ಬಿ ಶ್ರೀನಿವಾಸ್ , ನಿರ್ದೇಶಕ ಸಿದ್ದಲಿಂಗಯ್ಯ , ನಟ ಎಂ .ಪಿ ಶಂಕರ್ ಅವರೊಂದಿಗೆ
 
ಗೌರವಾನ್ವಿತ  ಎಂ ಪಿ ಪ್ರಕಾಶ್ ಅವರೊಂದಿಗೆ
 
ಡಾ . ಬಿ ಎಲ್ ವೇಣು ವೃತ್ತ ಉದ್ಘಾಟನಾ ಸಮಾರಂಭ
 
ಕುವೆಂಪು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್
 
ನಟ ಸಾಯಿಕುಮಾರ್ ಅವರೊಂದಿಗೆ
 
ಕಲ್ಲರಳಿ ಹೂವಾಗಿ ಸಂಭಾಷಣೆಗೆ ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಸಮಾರಂಭದಲ್ಲಿ
 
೧೯೮೦ ರ ದಶಕದಲ್ಲಿ
 
ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಟ ರಾಜಾರಾಮ್ ಅವರೊಂದಿಗೆ
 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೦೫ ಸಮಾರಂಭದಲ್ಲಿ
 
ಖ್ಯಾತ ನಿರ್ದೇಶಕ ಕೆ ವಿ ಜಯರಾಮ್ ಅವರೊಂದಿಗೆ
 
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರೊಂದಿಗೆ
 
ಏಳು ಸುತ್ತಿನ ಕೋಟೆಯಲ್ಲಿ
 
ದೊಡ್ಡ ಮನೆ ಎಸ್ಟೇಟ್  ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ
 
ಪರಾಜಿತ  ಚಿತ್ರ ಬಿಡುಗಡೆ ಸಂದರ್ಭ ಬಸವೇಶ್ವರ ಚಿತ್ರಮಂದಿರ
 
ನಿರ್ದೇಶಕ ಭಾರ್ಗವ ಮತ್ತು  ಛಾಯಾಗ್ರಾಹಕ ಡಿ  ವಿ  ರಾಜಾರಾಮ್  ಅವರೊಂದಿಗೆ
 
ಪ್ರೀತಿ ವಾತ್ಸಲ್ಯ  ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ
 
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ  ಸಮಾರಂಭದಲ್ಲಿ
 
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಸಮಾರಂಭದಲ್ಲಿ ಗೌರವ ಸನ್ಮಾನ
 
ಚಿತ್ರದುರ್ಗ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ
 
ಚಿತ್ರದುರ್ಗ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಮೆರವಣಿಗೆ
 
ಚಿತ್ರದುರ್ಗ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ
 
ಸಮಾರಂಭವೊಂದರಲ್ಲಿ .....
 
ರಾಜಾ ವೀರ ಮದಕರಿನಾಯಕ ಚಿತ್ರದ ಸಂಭಾಷಣೆಯ ಫೈಲ್ ಒಪ್ಪಿಸಿದ ಶುಭ ಸಂದರ್ಭ
 
ಬಿಡುಗಡೆಯ ಬೇಡಿ  ಚಿತ್ರದಲ್ಲಿ  ಅನಂತ್ ನಾಗ್ ಅವರೊಂದಿಗೆ
 
ಮದಕರಿನಾಯಕನಿಗೆ   ರಾಜಾ ವೀರ ಮದಕರಿನಾಯಕ  ಚಿತ್ರತಂಡದಿಂದ ಮಾಲಾರ್ಪಣೆ

ಉಲ್ಲೇಖಗಳು

ಬದಲಾಯಿಸಿ