ಬಿ.ನಾಗೇಂದ್ರ

ಭಾರತೀಯ ರಾಜಕಾರಣಿಯಾಗಿದ್ದು, ಪ್ರಸ್ತುತ ೨೯ ಮೇ ೨೦೨೩ ರಿಂದ ಕರ್ನಾಟಕ ಸರ್ಕಾರದಲ್ಲಿ ಯುವ ಸಬಲೀಕರಣ, ಕ್ರೀಡೆ ಮತ್ತ

ಬಿ. ನಾಗೇಂದ್ರ [] ಅವರು ಭಾರತೀಯ ರಾಜಕಾರಣಿಯಾಗಿದ್ದು, ಪ್ರಸ್ತುತ ೨೯ ಮೇ ೨೦೨೩ ರಿಂದ ಕರ್ನಾಟಕ ಸರ್ಕಾರದಲ್ಲಿ ಯುವ ಸಬಲೀಕರಣ, ಕ್ರೀಡೆ ಮತ್ತು ಬುಡಕಟ್ಟು ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಳ್ಳಾರಿ ಮತ್ತು ಕೂಡ್ಲಿಗಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

ಬಿ. ನಾಗೇಂದ್ರ
ಬಿ.ನಾಗೇಂದ್ರ

ಪ್ರಸಕ್ತ
ಅಧಿಕಾರ ಪ್ರಾರಂಭ 
೨೭ ಮೇ ೨೦೨೩
ಪೂರ್ವಾಧಿಕಾರಿ ನಾರಾಯಣ ಗೌಡ, ಬಿ ಶ್ರೀರಾಮುಲು
ಪೂರ್ವಾಧಿಕಾರಿ ಎನ್.ವಾಯ್ ಗೋಪಾಲಕೃಷ್ಣ
ಅಧಿಕಾರದ ಅವಧಿ
೨೦೦೮ – ೨೦೧೮
ಪೂರ್ವಾಧಿಕಾರಿ ಅನೀಲ್ ಲಾಡ್
ಉತ್ತರಾಧಿಕಾರಿ ಎನ್.ವಾಯ್ ಗೋಪಾಲಕೃಷ್ಣ

ಜನನ (1971-09-15) ೧೫ ಸೆಪ್ಟೆಂಬರ್ ೧೯೭೧ (ವಯಸ್ಸು ೫೩)
ಬಳ್ಳಾರಿ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (೨೦೧೮ - ಪ್ರಸ್ತುತ)
ವೃತ್ತಿ ಗಣಿ ಮಾಲೀಕರು

ಶಿಕ್ಷಣ

ಬದಲಾಯಿಸಿ

ಅವರು ೧೯೯೩ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಳ್ಳಾರಿಯ ವೀರಶೈವ ಕಾಲೇಜಿನಿಂದ ಬಿ.ಕಾಂ. ಪದವಿ [] ಯನ್ನು ಪಡೆದರು.

ವೃತ್ತಿ

ಬದಲಾಯಿಸಿ

ಇವರು INC ಅಭ್ಯರ್ಥಿಯಾಗಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಬಳ್ಳಾರಿ ಜಿಲ್ಲೆಯಿಂದ ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ೨೦೦೮ ರಿಂದ ೨೦೧೮ ರವರೆಗೆ ಕ್ರಮವಾಗಿ ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಕೂಡ್ಲಿಗಿಯಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರು ಗಣಿಗಾರಿಕೆ ಬ್ಯಾರನ್ ಗಾಲಿ ಜನಾರ್ದನ ರೆಡ್ಡಿ ಅವರ ನಿಕಟ ಸಹಾಯಕರಾಗಿದ್ದರು. [] ಬಿ ನಾಗೇಂದ್ರ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರವನ್ನು ಪ್ರತಿನಿಧಿಸುವ ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಅವರನ್ನು 29,500 ಮತಗಳಿಂದ ಸೋಲಿಸಿದರು.

ಚುನಾವಣಾ ಅಂಕಿಅಂಶಗಳು

ಬದಲಾಯಿಸಿ
ವರ್ಷ ಕ್ಷೇತ್ರ ಪಾರ್ಟಿ ಫಲಿತಾಂಶ ಮತಗಳು ವಿರೋಧ ಪಕ್ಷ ವಿರೋಧ ಮತಗಳು
೨೦೦೮ ಕೂಡ್ಲಿಗಿ ಬಿಜೆಪಿ ಗೆಲುವು ೫೪,೪೪೩ INC ೪೫,೬೮೬
೨೦೧೩ ಕೂಡ್ಲಿಗಿ IND ಗೆಲುವು ೭೧,೪೭೭ INC ೪೬,೬೭೪
೨೦೧೮ ಬಳ್ಳಾರಿ ಗ್ರಾಮಾಂತರ INC ಗೆಲುವು ೭೯,೧೮೬ ಬಿಜೆಪಿ ೭೬,೫೦೭
೨೦೨೩ ಬಳ್ಳಾರಿ ಗ್ರಾಮಾಂತರ INC ಗೆಲುವು ೧,೦೩,೮೬೩ ಬಿಜೆಪಿ ೭೪,೫೩೬

ಉಲ್ಲೇಖಗಳು

ಬದಲಾಯಿಸಿ
  1. "B Nagendra - MLA Ballari (Rural) | Jana Nayaka" (in ಅಮೆರಿಕನ್ ಇಂಗ್ಲಿಷ್). 2021-05-19. Archived from the original on 2021-08-09. Retrieved 2021-08-09.
  2. "B Nagendra(Indian National Congress(INC)):Constituency- Bellary - Affidavit Information of Candidate:". myneta.info. Retrieved 2021-08-09.
  3. "B.nagendra(Independent(IND)):Constituency- Kudligi (Bellary) - Affidavit Information of Candidate:". myneta.info. Retrieved 2021-08-09.

ಬಾಹ್ಯ ಕೊಂಡಿಗಳು

ಬದಲಾಯಿಸಿ