ಭಾಸ್ಕರ ಅನಂದ ಸಾಲೆತ್ತೂರು
ಡಾ. ಬಿ ಎ. ಸಾಲ್ತೊರೆ. ಅವರ ಪೂರ್ಣ ಹೆಸರು ಭಾಸ್ಕರ ಆನಂದ ಸಾಲೆತ್ತೂರು(11 ಅಕ್ಟೋಬರ್ 1900 - 18 ಡಿಸೆಂಬರ್ 1963) ಇವರು ಕರ್ನಾಟಕದ ಪ್ರಸಿದ್ಧ ಪ್ರಾಚ್ಯ ಸಂಶೋಧಕರು.
ಬಾಲ್ಯ
ಬದಲಾಯಿಸಿಭಾಸ್ಕರ ಆನಂದ ಸಾಲೆತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಾಲೆತ್ತೂರು ಎಂಬ ಗ್ರಾಮದಲ್ಲಿ 1900ರ ಅಕ್ಟೋಬರ್ 11ರಂದು ಜನಿಸಿದರು. ಲ್ಲಿ 1900ರ ಅಕ್ಟೋಬರ್ 11ರಂದು ಜನಿಸಿದರು. ತಂದೆ ನಾರಾಯಣರಾಯರು, ತಾಯಿ ಪಾರ್ವತಿ.
ಶಿಕ್ಷಣ
ಬದಲಾಯಿಸಿಆರಂಭದ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ ಸಾಲೆತೊರೆಯವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿಯನ್ನು ಹಾಗೂ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದರು. ೧೯೩೧ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಯನವನ್ನು ಮಾಡಿದರು. ೧೯೩೩ರಲ್ಲಿ ಜರ್ಮನಿಯ ಗೈಸೆನ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರವನ್ನು ಅಭ್ಯಸಿಸಿದರು.
ವೃತ್ತಿ
ಬದಲಾಯಿಸಿಭಾಸ್ಕರ ಆನಂದ ಸಾಲೆತ್ತೂರು ಅವರು ದ. ಕನ್ನಡದ ಬೋರ್ಡ್ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕ ವೃತ್ತಿ ನಡೆಸಿದರು. ನಂತರ ಫಾದರ್ ಹೆರಾಸ್‌ರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪಡೆದರು. ಪ್ರಾಚೀನ ತುಳುನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನದ ಸಮಗ್ರ ಅಧ್ಯಯನ ನಡೆಸಿದರು. ‘ವಿಜಯನಗರ ಸಾಮ್ರಾಜ್ಯದ ಸಾಮಾಜಿಕ, ರಾಜಕೀಯ ಜೀವನ’ ಮಹಾಪ್ರಬಂಧ ಮಂಡಿಸಿ ಲಂಡನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದರು.[೧] ಭಾಸ್ಕರ ಆನಂದ ಸಾಲೆತ್ತೂರು ಅವರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಜರ್ಮನ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿತ್ತು. ಇವರು 1936ರಲ್ಲಿ ಪುಣೆಯ ಸರ್ ಪರಶುರಾಮ ಭಾವು ಕಾಲೇಜಿನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ನಂತರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲೂ ಕೆಲಕಾಲ ಪ್ರಾಧ್ಯಾಪಕರ ಹುದ್ದೆ ನಿರ್ವಹಿಸಿದರು. ಇವರ ವಿದ್ವತ್ತನ್ನು ಗಮನಿಸಿದ ಭಾರತ ಸರಕಾರ ಐತಿಹಾಸಿಕ ದಾಖಲೆಗಳ ಸಂಗ್ರಹಾಲಯದ (ನ್ಯಾಷನಲ್ ಆರ‍್ಕೀವ್ಸ್ ಆಫ್ ಇಂಡಿಯಾ) ನಿರ್ದೇಶಕರಾಗಿ ನೇಮಕ ಮಾಡಿತು. ತಮ್ಮ ಸೇವಾವಧಿಯ ಕಡೆಯವರೆಗೂ ಈ ಹುದ್ದೆಯನ್ನು ನಿರ್ವಹಿಸಿ ನಿವೃತ್ತಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕರಾಗಿ, ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಸಂಶೋಧನೆ
ಬದಲಾಯಿಸಿವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಇದು ಲಂಡನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿ.ಎಚ್.ಡಿ ಪದವಿಗಾಗಿ ಸಾಲೆತೊರೆಯವರು ಬರೆದ ಮಹಾಪ್ರಬಂಧ. ವಿಜಯನಗರ ಸ್ಥಾಪಕರಾದ ಸಂಗಮ ವಂಶದವರ ಮೂಲವನ್ನು ಈ ಹೊತ್ತಿಗೆಯಲ್ಲಿ ಸಂಶೋಧಿಸಲಾಗಿದೆ; ಹಾಗೂ ವಿಜಯನಗರ ಸಾಮ್ರಾಜ್ಯ ನಿಸ್ಸಂಶಯವಾಗಿಯೂ ಕನ್ನಡ ಸಾಮ್ರಾಜ್ಯವೆಂದು ಪ್ರಮಾಣಪೂರ್ವಕವಾಗಿ ಸಾಧಿಸಿ ತೋರಿಸಲಾಗಿದೆ.
ಸಂಶೋಧನಾ ಕೃತಿಗಳು
ಬದಲಾಯಿಸಿಕನ್ನಡ ಕೃತಿ
ಬದಲಾಯಿಸಿ- ಕನ್ನಡ ನಾಡಿನ ಚರಿತ್ರೆ ಸಂಪುಟ-೧’ (ದೇಸಾಯಿ ಪಾಂಡುರಂಗರಾಯರೊಡನೆ).
ಅಂಗ್ಲ ಕೃತಿಗಳು
ಬದಲಾಯಿಸಿ- ಸೋಷಿಯಲ್ ಅಂಡ್ ಪೊಲಿಟಿಕಲ್ ಲೈಫ್ ಅಂಡರ್ ವಿಜಯನಗರ್ ಎಂಪೈರ್,
- ಏನ್ಷಿಯಂಟ್ ಕರ್ನಾಟಕ-೧, ಹಿಸ್ಟರಿ ಆಫ್ ದಿ ತುಳುವ,
- ಇಂಡಿಯಾಸ್ ಡಿಪ್ಲೊಮ್ಯಾಟಿಕ್ ರಿಲೇಷನ್ಸ್ ವಿತ್ ದಿ ವೆಸ್ಟ್,
- ಏನ್ಷಿಯಂಟ್ ಇಂಡಿಯನ್ ಪೊಲಿಟಿಕಲ್ ಥಾಟ್ಸ್ ಆಂಡ್ ಇನ್‌ಸ್ಟಿಟ್ಯೂಷನ್ಸ್,
- ಮಿಡೇವಲ್ ಜೈನಿಸಂ,
- ವೈಲ್ಡ್ ಟ್ರೈಬ್ಸ್ ಇನ್ ಇಂಡಿಯನ್ ಹಿಸ್ಟರಿ,
- ದಿ ಮರಾಠ ಡೊಮಿನಿಯನ್ ಇನ್ ಕರ್ನಾಟಕ
ಜರ್ಮನ್ ಕೃತಿ
ಬದಲಾಯಿಸಿ- ವರ್ಟ್ ಡೆರ್ ಉಸ್ಟಿಷೆನ್ ಲೆ ಹ್ರೆನ್ ಫುರ್ ರೈ ಲೂಸಂಗ್
ಭಾಸ್ಕರ ಆನಂದ ಸಾಲೆತೊರೆಯವರು ೧೯೬೩ರಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ Balakrishna, Sandeep (2 September 2024). "Bhasker Anand Saletore: The Historian Extraordinaire". The Dharma Dispatch (in ಇಂಗ್ಲಿಷ್).