[೧]. ಬಿ.ಎಂ.ಹನೀಫ್ ಇವರು ಕಥೆಗಾರ ಮತ್ತು ಕವಿಯಾಗಿಯೂ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರು[೨]. ಇವರ ಹಲವಾರು ಕವಿತೆಗಳು, ಕಥೆಗಳು ಪ್ರಜಾವಾಣಿ ಮತ್ತು ಮಯೂರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಹುಟ್ಟೂರುಸಂಪಾದಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬೆಳ್ಳಾಯರು ಗ್ರಾಮದಲ್ಲಿ ದಿನಾಂಕ 12-12-1961ರಲ್ಲಿ ಜನಿಸಿದರು.

ವಿದ್ಯಾಭ್ಯಾಸಸಂಪಾದಿಸಿ

ಇವರು ಮಂಗಳೂರಿನ ಸುರತ್ಕಲ್‍ನ ಗೋವಿಂದದಾಸ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು, ಮಂಗಳೂರಿನ ಎಸ್‍ಡಿಎಂ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಜರ್ಮನಿಯ ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಜರ್ನಲಿಸಂ ನಿಂದ ವಾಣಿಜ್ಯ ಪತ್ರಿಕೋದ್ಯಮದಲ್ಲಿ ವಿಶೇಷ ಕೋರ್ಸ್ ಮಾಡಿದ್ದಾರೆ.

ವೃತ್ತಿಸಂಪಾದಿಸಿ

1984ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರ ನೇತೃತ್ವದ "ಮುಂಗಾರು' ದಿನಪತ್ರಿಕೆಯಲ್ಲಿ ಹಲವು ವರ್ಷ ಉಪ ಸಂಪಾದಕರಾಗಿ, ಹಿರಿಯ ಉಪಸಂಪಾದಕರಾಗಿ ಮತ್ತು ಸಹಾಯಕ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ನಂತರ ವಿಜಾಪುರ ಜಿಲ್ಲೆಯ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ವಿಜಾಪುರ, ಬಾಗಲಕೋಟೆ,ಧಾರವಾಡ, ಗುಲ್ಬರ್ಗಾಗಳಲ್ಲಿ ಓಡಾಟ ಪತ್ರಕರ್ತನಾಗಿ ಅನುಭವ ಪಡೆದಿದ್ದಾರೆ. ಭಡ್ತಿ ಪಡೆದು ಹಿರಿಯ ಉಪಸಂಪಾದಕರಾಗಿ, ಪ್ರಜಾವಾಣಿಯಲ್ಲಿ ವಾಣಿಜ್ಯ ವಿಭಾಗದ ಸುದ್ದಿಗಳ ಮತ್ತು ವಾಣಿಜ್ಯ ಪುರವಣಿಯ ಮುಖ್ಯಸ್ಥರಾಗಿ ಮೈಸೂರಿಗೆ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.ಬ್ಯಾರಿ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ, ಆನಂತರ ಬೆಂಗಳೂರಿಗೆ ವರ್ಗಾವಣೆಯಾಗಿ ಸಹಾಯಕ ಸಂಪಾದಕರಾಗಿ ಭಡ್ತಿ ಪಡೆದು, ಬೆಂಗಳೂರಿನಲ್ಲಿ ಸುಧಾ ವಾರಪತ್ರಿಕೆಯ ಮುಖ್ಯಸ್ಥರಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಆಸಕ್ತಿಯ ವಿಷಯಗಳುಸಂಪಾದಿಸಿ

ಕನ್ನಡ ಭಾಷಾ ಚಳವಳಿ * ಕನ್ನಡ ಸಿನಿಮಾ * ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಅಧ್ಯಯನ.

ಕೃತಿಗಳುಸಂಪಾದಿಸಿ

 1. ಅನನ್ಯ ಸಮಾಜವಾದಿ ಲೋಹಿಯಾ (ಲೋಹಿಯಾ ಜೀವನ ಕುರಿತು ಪುಸ್ತಕ
 2. ಇತಿಹಾಸ ಮತ್ತು ಇಸ್ಲಾಂ (ಎಂ.ಎನ್.ರಾಯ್ ಅವರ ಆಂಗ್ಲ ಪುಸ್ತಕದ ಕನ್ನಡ ಅನುವಾದ)
 3. ಕತ್ತಲೆಗೆ ಯಾವ ಬಣ್ಣ(ಕವನ ಸಂಕಲನ)
 4. ಮಾತೇ ಮಾತು (ಸುಧಾ ಪತ್ರಿಕೆಯಲ್ಲಿ ಪ್ರಕಟವಾದ, ಕನ್ನಡದ ಪ್ರಮುಖ ಸಾಹಿತಿಗಳ ಸಂದರ್ಶನಗಳ ಸಂಕಲನ)
 5. ಬಣ್ಣದ ಬುಗುರಿ
 6. ಸಜ್ಜನ ರಾಜಕಾರಣಿ ಎಸ್.ಎಂ.ಯಾಹ್ಯಾ (ವಿಧಾನ ಮಂಡಲ ಗ್ರಂಥಾಲಯಕ್ಕೆ ಬರೆದ ಅಧ್ಯಯನ ಪುಸ್ತಕ)
 7. ಕೆಂಪರಾಜ ಅರಸು (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿದ ಪುಸ್ತಕ)
 8. ಕನಸು ಕನ್ನಡಿ (ಪ್ರಜಾವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ)
 9. ಕೊಲಾಝ್ (ಕಥೆ, ಕವಿತೆ, ಪ್ರವಾಸ ಕಥನ, ಸಂದರ್ಶನ, ವಿಡಂಬನೆಗಳ ಸಂಕಲನ)
 10. ಮೈನಾರಿಟಿ ಕಾಂಪ್ಲೆಕ್ಸ್ (ಮುಸ್ಲಿಮರ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ತಲ್ಲಣಗಳ ಕುರಿತು ಬರಹಗಳ ಸಂಕಲನ)
 11. ಮಾಂಜಿ ರವಾ ಫ್ರೈ (ಕಥಾ ಸಂಕಲನ)[೩].

ಸಂಪಾದಿತ ಕೃತಿಗಳುಸಂಪಾದಿಸಿ

 1. “ಬ್ಯಾರಿ-ಕನ್ನಡ-ಇಂಗ್ಲಿಷ್” ಶಬ್ದಕೋಶ[೪]
 2. ಮೈಕಾಲ ಎನ್ನುವ ಅಹ್ಮದ್ ನೂರೀ ಅವರ ಬ್ಯಾರಿಗಳ ಕುರಿತ ಸಂಶೋಧನಾ ಗ್ರಂಥ
 3. ನವರಸ ನಗು (ನವರಸಪುರ ಉತ್ಸವದ ಅಂಗವಾಗಿ ರಾಜ್ಯ ಮಟ್ಟದ ಹಾಸ್ಯ ಕವಿಗೋಷ್ಠಿಯ ಸಂಕಲನ)
 4. ನವರಸ ಕಾವ್ಯ (ನವರಸಪುರ ಉತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯ ಸಂಕಲನ)
 5. ಮುತ್ತುಮಾಲೆ (ಬ್ಯಾರಿ ಭಾಷೆಯ ನುಡಿಮುತ್ತುಗಳ ಸಂಗ್ರಹ)

ಸಾಧನೆಸಂಪಾದಿಸಿ

ರಾಜ್ಯದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ, ಬೆಂಗಳೂರಿನಲ್ಲಿರುವ ಬ್ಯಾರೀಸ್ ವೆಲ್‍ಫೇರ್ ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಳೆದ 20 ವರ್ಷಗಳಿಂದ ಕೆಲಸ, ಈ ಸಂಸ್ಥೆಯ ಬ್ಯಾರಿ ಸಮುದಾಯದಲ್ಲಿ ಶಿಕ್ಷಣ ಪ್ರಸಾರಕ್ಕೆ ಒತ್ತುಕೊಟ್ಟು ಹಲವು ಯೋಜನೆಗಳ ಜಾರಿಗೆ, ಬೆಂಗಳೂರು ದೂರದರ್ಶನದಲ್ಲಿ ಮೂರು ವರ್ಷಗಳ ಕಾಲ ಪ್ರದರ್ಶನವಾಗುವ ಸಿನಿಮಾ ಸೆನ್ಸಾರ್ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಎರಡು ಬಾರಿ ಕೆಲಸ ಮಾಡಿದ್ದಾರೆ. ಕನಕ ಅಧ್ಯಯನ ಕೇಂದ್ರ ಹೊರತರುತ್ತಿರುವ ಬ್ಯಾರಿ ಭಾಷೆಯಲ್ಲಿ ‘ಕನಕದಾಸ ಜೀವನ ಚರಿತ್ರೆ’[೫] ಪುಸ್ತಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾರಿ ಸಾಕ್ಷ್ಯಚಿತ್ರದ ನಿರ್ದೇಶನ ಮಾಡಿರುತ್ತಾರೆ. ಹಾಗೂ ಸಂತ-ಕನಕದಾಸರ ಜೀವನ-ಕಾವ್ಯ-ದರ್ಶನ ಬ್ಯಾರಿ ಭಾಷೆಗೆ ಅನುವಾದಿಸಿದ್ದಾರೆ.

ಪ್ರವಾಸಸಂಪಾದಿಸಿ

ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪತ್ರಕರ್ತರಾಗಿ, ಫ್ರಾನ್ಸ್, ದುಬೈ, ಮಲೇಶಿಯಾ ಮತ್ತು ಹಾಂಕಾಂಗ್‍ಗೆ ಪತ್ರಕರ್ತರಾಗಿ ಪ್ರವಾಸ ಮಾಡಿದ್ದಾರೆ.

ಪ್ರಶಸ್ತಿಗಳುಸಂಪಾದಿಸಿ

 1. ಬೆಂಗಳೂರು ತುಳು ಕೂಟದಿಂದ ತೌಳವಶ್ರೀ ಪ್ರಶಸ್ತಿ
 2. ಗದಗದ ಡಂಬಳ ಸ್ವಾಮೀಜಿಯವರ ನೇತೃತ್ವದ ಸಾಂಸ್ಕøತಿಕ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ "ಮಾಧ್ಯಮ ಮಂದಾರ" ಪ್ರಶಸ್ತಿ
 3. ಬೆಂಗಳೂರಿನ ಕರಾವಳಿ ಒಕ್ಕೂಟದಿಂದ- ಕರಾವಳಿ ಸಿರಿ ಪ್ರಶಸ್ತಿ
 4. ಕರ್ನಾಟಕ ಪತ್ರಿಕಾ ಅಕಾಡೆಮಿ 2013ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಉಲ್ಲೇಖಸಂಪಾದಿಸಿ

 1. https://www.prajavani.net/authors/%E0%B2%AC%E0%B2%BF%E0%B2%8E%E0%B2%82%E0%B2%B9%E0%B2%A8%E0%B3%80%E0%B2%AB%E0%B3%8D%E2%80%8C
 2. https://pusthakapreethi.wordpress.com/tag/%E0%B2%AC%E0%B2%BF-%E0%B2%8E%E0%B2%82-%E0%B2%B9%E0%B2%A8%E0%B3%80%E0%B2%AB%E0%B3%8D/
 3. https://chinthanapusthaka.wordpress.com/tag/%E0%B2%AC%E0%B2%BF-%E0%B2%8E%E0%B2%82-%E0%B2%B9%E0%B2%A8%E0%B3%80%E0%B2%AB%E0%B3%8D/
 4. https://www.udayavani.com/kannada/news/sudina-today-special-story/186117/sudina-special
 5. "ಆರ್ಕೈವ್ ನಕಲು". Archived from the original on 2018-11-12. Retrieved 2018-11-16.