ಭಾರತ್ ಸಂಚಾರ್ ನಿಗಮ್ ಲಿಮಿಟೆಡ್

(ಬಿಎಸ್ಎನ್ಎಲ್ ಇಂದ ಪುನರ್ನಿರ್ದೇಶಿತ)

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಸಂಕ್ಷಿಪ್ತವಾಗಿ ಬಿಎಸ್ಎನ್ಎಲ್) ಭಾರತೀಯ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆ. ಇದರ ಕೇಂದ್ರ ಕಛೇರಿ ಭಾರತದ ರಾಜಧಾನಿ ನವದೆಹಲಿಯಲ್ಲಿದೆ ಇದು ಸೆಪ್ಟೆಂಬರ್ ೧೫, ೨೦೦೦ರಂದು ಅಸ್ತಿತ್ವಕ್ಕೆ ಬಂತು. ಪ್ರಸ್ತುತ ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಸಂವಹನ ಇಲಾಖೆಯ ಅಡಿಯಲ್ಲಿದ್ದ ಟೆಲಿಕಾಂ ಸೇವೆಗಳು ಮತ್ತು ನೆಟ್‌ವರ್ಕ್ ಸೇವೆಗಳನ್ನು ಒದಗಿಸುವ ವ್ಯವಹಾರವನ್ನು ಬೇರ್ಪಡಿಸಿ ಪ್ರತ್ಯೇಕ ಸಂಸ್ಥೆಯನ್ನು ಸೃಜಿಸುವ ಉದ್ದೇಶದಿಂದ ೧ನೇ ಅಕ್ಟೋಬರ್ ೨೦೦೦ರಿಂದ ಜಾರಿಗೆ ಬರುವಂತೆ ಸಂಯೋಜಿಸಲಾಗಿದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್
ಸಂಸ್ಥೆಯ ಪ್ರಕಾರಸರ್ಕಾರಿ ಸ್ವಾಮ್ಯ
ಸ್ಥಾಪನೆ15 ಸೆಪ್ಟೆಂಬರ್ 2000 (2000-09-15)
ಮುಖ್ಯ ಕಾರ್ಯಾಲಯನವ ದೆಹಲಿ, ಭರತ
ಪ್ರಮುಖ ವ್ಯಕ್ತಿ(ಗಳು)ಅನುಪಮ್ ಶ್ರೀವಾಸ್ತವ (ಅಧ್ಯಕ್ಷರು ಮತ್ತು MD)
ಉದ್ಯಮದೂರಸಂಪರ್ಕ
ಸೇವೆಗಳು
  • ಸ್ಥಿರ ದೂರವಾಣಿ
  • ಮೊಬೈಲ್ ಟೆಲಿಫೋನಿ
  • ಅಂತರಜಾಲ ಸೇವೆಗಳು
  • ಐಪಿಟಿವಿ
ಆದಾಯ₹ ೩೨,೯೧೮ ಕೋಟಿ (2016)[]
ನಿವ್ವಳ ಆದಾಯ₹ ೩,೮೫೫ ಕೋಟಿ (2016)[]
ಒಟ್ಟು ಆಸ್ತಿ  ೮೯೩ ಶತಕೋಟಿ (ಯುಎಸ್$೧೯.೮೨ ಶತಕೋಟಿ) (2014)[]
ಮಾಲೀಕ(ರು)ಭಾರತ ಸರ್ಕಾರ
ಉದ್ಯೋಗಿಗಳು211,086 (2016)
ಜಾಲತಾಣwww.bsnl.co.in

ಎಲ್ಲಾ ವಿಭಾಗಗಳನ್ನು- ಧ್ವನಿ ಕರೆ ಸೇವೆ, ಅಂತರಜಾಲ ಸೇವೆ ಇತ್ಯಾದಿ- ಗಣನೆಗೆ ತೆಗೆದುಕೊಂಡಾಗ ಪ್ರಸ್ತುತ ಬಿಎಸ್‌ಎನ್‌ಎಲ್ ಕೇವಲ ೯%ದಷ್ಟು ಮಾತ್ರ ಮಾರುಕಟ್ಟೆ ಪಾಲನ್ನು ಹೊಂದಿದೆ[]. ಪ್ರಾರಂಭದಲ್ಲಿ ಗುಣಮಟ್ಟದ ಸ್ಥಿರ ದೂರವಾಣಿ ಸೇವೆಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದ ಬಿಎಸೆನ್ನೆಲ್, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ದೂರಸಂಪರ್ಕವಲಯದಲ್ಲಿ ಖಾಸಗಿ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದಾಗಿ ಗಮನಾರ್ಹ ಮಟ್ಟದಲ್ಲಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ[].

ಬಿಎಸ್ಎನ್ಎಲ್ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಸಂವಹನ ಸೇವೆ ಒದಗಿಸುವವ (ಸಿಎಸ್ಪ್) ಕಂಪೆನಿಯಾಗಿದೆ. ಇದು ಜನವರಿ ೨೦೧೪ರ೦ತೆ ೧೧೭ ಮಿಲಿಯನ್ ಗ್ರಾಹಕ ಮೂಲವನ್ನು ಹೊಂದಿದೆ. ಇದು ಮುಂಬಯಿ ಮತ್ತು ದಹಲಿ ಮೆಟ್ರೋಪಾಲಿಟನ್ ನಗರಗಳನ್ನು ಹೊರತುಪಡಿಸಿ ಭಾರತದಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಹೊಂದಿದೆ. ಮಹಾನಗರ್ ಟೆಲಿಫೋನ್ ನಿಗಮ (ಎಂಟಿಎನ್ಎಲ್) ಮುಂಬಯಿ ಮತ್ತು ದಹಲಿ ಮೆಟ್ರೋಪಾಲಿಟನ್ ನಗರಗಳಿಗೆ ದೂರಸಂಪರ್ಕವನ್ನು ಒದಗಿಸುತ್ತದೆ.

ಇತಿಹಾಸ

ಬದಲಾಯಿಸಿ

ಬಿಎಸ್‌ಎನ್‌ಎಲ್ ಇತಿಹಾಸವನ್ನು ಬ್ರಿಟಿಷ್ ಇಂಡಿಯಾದಲ್ಲಿ ಗುರುತಿಸಬಹುದು. ಭಾರತದಲ್ಲಿ ಟೆಲಿಕಾಂ ನೆಟ್‌ವರ್ಕ್‌ಗಳ ಅಡಿಪಾಯವನ್ನು ೧೯ನೇ ಶತಮಾನದಲ್ಲಿ ಬ್ರಿಟಿಷರು ಹಾಕಿದರು. ಬ್ರಿಟಿಷರ ಕಾಲದಲ್ಲಿ, ಮೊದಲ ಟೆಲಿಗ್ರಾಫ್ ಲೈನ್ ಅನ್ನು ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ ೧೮೫೦ರಲ್ಲಿ ಸ್ಥಾಪಿಸಲಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ೧೮೫೧ರಲ್ಲಿ ಟೆಲಿಗ್ರಾಫ್ ಅನ್ನು ಬಳಸಲು ಪ್ರಾರಂಭಿಸಿತು ಮತ್ತು ೧೮೫೪ರವರೆಗೆ ದೇಶದಾದ್ಯಂತ ಟೆಲಿಗ್ರಾಫ್ ಲೈನ್‌ಗಳನ್ನು ಹಾಕಲಾಯಿತು. ೧೮೫೪ರಲ್ಲಿ, ಟೆಲಿಗ್ರಾಫ್ ಸೇವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು ಮತ್ತು ಮೊದಲ ಟೆಲಿಗ್ರಾಮ್ ಅನ್ನು ಮುಂಬೈನಿಂದ ಪುಣೆಗೆ ಕಳುಹಿಸಲಾಯಿತು. ೧೮೮೫ರಲ್ಲಿ, ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬ್ರಿಟಿಷ್ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅಂಗೀಕರಿಸಿತು. ೧೯೮೦ ರ ದಶಕದಲ್ಲಿ ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯ ವಿಭಜನೆಯ ನಂತರ, ಟೆಲಿಕಾಂ ಇಲಾಖೆಯ ರಚನೆಯು ಅಂತಿಮವಾಗಿ ಸರ್ಕಾರಿ ಸ್ವಾಮ್ಯದ ಟೆಲಿಗ್ರಾಫ್ ಮತ್ತು ಟೆಲಿಫೋನ್ ಉದ್ಯಮದ ಹೊರಹೊಮ್ಮುವಿಕೆಗೆ ಕಾರಣವಾಯಿತು, ಇದು ಬಿಎಸ್‌ಎನ್‌ಎಲ್ ಸ್ಥಾಪನೆಗೆ ಕಾರಣವಾಯಿತು.

೧೬೦ ವರ್ಷಗಳಿಂದ ಬಿಎಸ್‌ಎನ್‌ಎಲ್ ಸಾರ್ವಜನಿಕ ಟೆಲಿಗ್ರಾಂ ಸೇವೆಯನ್ನು ನಿರ್ವಹಿಸುತ್ತಿದೆ. ೨೦೧೦ ರಲ್ಲಿ ಅದರ 182 ಕಚೇರಿಗಳ ನಡುವಿನ ಟೆಲೆಕ್ಸ್ ನೆಟ್‌ವರ್ಕ್ ಅನ್ನು "ವೆಬ್ ಆಧಾರಿತ ಟೆಲಿಗ್ರಾಮ್ ಮೆಸೇಜಿಂಗ್ ಸಿಸ್ಟಮ್" ನೊಂದಿಗೆ ಬದಲಾಯಿಸಲಾಯಿತು, ಇದು ಟೆಲೆಕ್ಸ್ ಲೈನ್‌ಗಳಿಗಿಂತ ಇಂಟರ್ನೆಟ್ ಸಂಪರ್ಕಗಳನ್ನು ಅವಲಂಬಿಸಿದೆ (ವಿದ್ಯುತ್ ಕಡಿತವು ಹೆಚ್ಚು ಸಾಮಾನ್ಯವಾಗಿರುವಲ್ಲಿ ಇದು ಹೆಚ್ಚು ವಿಶ್ವಾಸಾರ್ಹವಾಗಿದೆ). ಇದು ಸೇವೆಯಲ್ಲಿ ಕುಸಿತಕ್ಕೆ ಕಾರಣವಾಯಿತು ಮತ್ತು ಕಂಪನಿಯು 2010 ರಲ್ಲಿ ಟೆಲಿಗ್ರಾಮ್‌ಗಳಿಗೆ "ಕಡಿಮೆಯಾದ ಸೇವೆ" ಎಂಬ ಶೀರ್ಷಿಕೆಯನ್ನು ಅನ್ವಯಿಸಿತು. ಅಂತಿಮವಾಗಿ, 15 ಜುಲೈ 2013 ರಂದು, ಸಾರ್ವಜನಿಕ ಟೆಲಿಗ್ರಾಮ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.

ಉತ್ಪನ್ನಗಳು ಮತ್ತು ಸೇವೆಗಳು

ಬದಲಾಯಿಸಿ

ಬಿಎಸ್‌ಎನ್‌ಎಲ್ ಮೊಬೈಲ್- ಚರ ದೂರವಾಣಿ ಸೇವೆ

ಬದಲಾಯಿಸಿ

ಸಂಸ್ಥೆಯು ದೇಶದಾದ್ಯಂತ ಸೆಲ್‌ವನ್ ಮತ್ತು ಬಿಎಸ್‌ಎನ್‌ಎಲ್ ಮೊಬೈಲ್ ಹೆಸರಿನಲ್ಲಿ ಚರ ದೂರವಾಣಿ ಸೇವೆಯನ್ನು ನೀಡುತ್ತಿದೆ. ಪ್ರಸ್ತುತ ೧೦೩.೬೮ ಮಿಲಿಯನ್ ಚಂದಾದಾರನ್ನು ಹೊಂದಿರುವ ಬಿಎಸ್‌ಎನ್‌ಎಲ್ ಚರದೂರವಾಣಿ ವಿಭಾಗದಲ್ಲಿ ಒಟ್ಟು ಮಾರುಕಟ್ಟೆಯ ೯.೨೭ ಶೇ. ಪಾಲನ್ನು ಹೊಂದಿದೆ[]. ಗ್ರಾಮೀಣ ಪ್ರದೇಶದ ಬಳಕೆದಾರರು ಬಿಎಸ್‌ಎನ್‌ಎಲ್ ಸಂಸ್ಥೆಯ ಬಗ್ಗೆ ಉತ್ತಮವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಯಾಕೆಂದರೆ, ಇತರ ಖಾಸಗಿ ಸಂಸ್ಥೆಗಳ ದೂರವಾಣಿ ಸಂಕೇತಗಳು ತಲುಪದ ಜಾಗದಲ್ಲಿಯೂ ಬಿಎಸ್‌ಎನ್‌ಎಲ್ ಸಂಕೇತಗಳು ಸಾವಕಾಶವಾಗಿ ತಲುಪುತ್ತವೆ ಮತ್ತು ಬಳಕೆದಾರರನ್ನು ಪರಸ್ಪರ ಸಂಪರ್ಕದಲ್ಲಿ ಇರುವಂತೆ ಮಾಡುತ್ತದೆ.

ಬಿಎಸ್‌ಎನ್‌ಎಲ್ ಮೊಬೈಲ್ ಪೂರ್ವಪಾವತಿ ಸೇವೆ, ಪೋಸ್ಟ್‌ಪೇಯ್ಡ್ ಸೇವೆಗಳು ಮತ್ತು ಉಚಿತ ಫೋನ್ ಸೇವೆ, ಇಂಡಿಯಾ ಟೆಲಿಫೋನ್ ಕಾರ್ಡ್ (ಪೂರ್ವಪಾವತಿ ಕಾರ್ಡ್), ಖಾತೆ ಕಾರ್ಡ್ ಕರೆ ಸೌಲಭ್ಯ, ವರ್ಚುವಲ್ ಖಾಸಗಿ ಜಾಲಬಂಧ (ವಿಪಿಎನ್), ಟೆಲಿ-ವೋಟಿಂಗ್, ಪ್ರೀಮಿಯಂ ದರ ಸೇವೆಯಂತಹ ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತದೆ. ಅಂತರಜಾಲಾಧಾರಿತ ದೂರದರ್ಶನ ಸೇವೆ(IPTV)ಯನ್ನು ಸಹ ನೀಡುತ್ತದೆ. (ಇದರ ಮೂಲಕ ಗ್ರಾಹಕರು ಅಂತರಜಾಲ ಸಂಪರ್ಕದ ಮೂಲಕ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು) ಇದಲ್ಲದೆ ಅಂತರಜಾಲ ಶಿಷ್ಟಾಚಾರದ ಮೂಲಕ ಧ್ವನಿ ಮತ್ತು ಚಿತ್ರ (VVoIP) ಸೇವೆಯನ್ನು ಸಹ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ನೀಡುತ್ತದೆ.

ಸ್ಥಿರ ದೂರವಾಣಿ ಸೇವೆ

ಬದಲಾಯಿಸಿ

ನಷ್ಟದಲ್ಲಿ

ಬದಲಾಯಿಸಿ
  • ಮಾಧ್ಯಮ ವರದಿಗಳ ಪ್ರಕಾರ, 2018-19ನೇ ಆರ್ಥಿಕ ವರ್ಷದಲ್ಲಿ ಬಿಎಸ್ಎನ್ಎಲ್ ರೂ. 14 ಸಾವಿರ ಕೋಟಿ ಹಾಗೂ ಎಂಟಿಎನ್ಎಲ್ ರೂ. 10 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಿವೆ. ಎರಡೂ ಸಂಸ್ಥೆಗಳು ಕ್ರಮವಾಗಿ 1.67 ಲಕ್ಷ ಹಾಗೂ 22 ಸಾವಿರ ಸಿಬ್ಬಂದಿಯನ್ನು ಹೊಂದಿವೆ. ಮಾರುಕಟ್ಟೆ ಹಾಗೂ ಬ್ಯಾಂಕುಗಳಲ್ಲಿ ಅವು ಹೊಂದಿರುವ ಒಟ್ಟು ಸಾಲದ ಮೊತ್ತ ರೂ.40 ಸಾವಿರ ಕೋಟಿ. ಸರ್ಕಾರವು ಘೋಷಿಸಿದ ಪರಿಹಾರ ಕ್ರಮದ ಭಾಗವಾಗಿ, ನವೆಂಬರ್ 2019 ಎರಡನೇ ವಾರದ ಅಂತ್ಯದಲ್ಲಿ ಸ್ವಯಂ ನಿವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಿಎಸ್‌ಎನ್‌ಎಲ್‌ ಸಿಬ್ಬಂದಿಯ ಸಂಖ್ಯೆ 70,000.[]
  • ಕಾರಣ:ಎಲ್ಲಖಾಸಗಿ ಟೆಲಿಕಾಂ ಕಂಪನಿಗಳು ತೀವ್ರ ವೇಗದ ತರಂಗಾಂತರ ಪಡೆದು ಮಾರುಕಟ್ಟೆಯಲ್ಲಿ ಉತ್ತಮ ಸ್ಪರ್ಧೆ ನೀಡುತ್ತಿದ್ದರೆ, ಬಿಎಸ್ಸೆನ್ನೆಲ್‌ ಸ್ವತಃ ಹಿಂದೆ ಬೀಳುವಂತೆ ಕೇಂದ್ರ ಸರಕಾರವೇ ಮಾಡಿದೆ. ಸರಕಾರ "4ಜಿಯನ್ನು ಬಿಎಸ್ಸೆನ್ನೆಲ್‌ಗೆ ತಡೆಹಿಡಿದಿದೆ" ಎಂಬ ಆರೋಪ ಬಿಎಸ್ಸೆನ್ನೆಲ್‌ನ ಹಿರಿಯ ಉದ್ಯೋಗಿಗಳದ್ದು.[]
  • 2015ರಲ್ಲಿ ಮಾರುಕಟ್ಟೆಗೆ ರಿಲಯನ್ಸ್‌ ಜಿಯೊ ಪ್ರವೇಶ ಮಾಡಿತು. ಟೆಲಿಕಾಂನಲ್ಲಿ ಯಾವ ಹಿನ್ನೆಲೆಯೂ ಇಲ್ಲದ ಈ ಸಂಸ್ಥೆಗೆ ಸರಕಾರ 3ಜಿ ಹಾಗೂ 4ಜಿಯನ್ನು ಧಾರಾಳವಾಗಿ ನೀಡಿತು. ಅತ್ಯಂತ ಅಗ್ಗದ ದರಗಳ ಸ್ಪರ್ಧೆಯನ್ನು ಜಿಯೊ ಒಡ್ಡಿತು. ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ಕಾಪಾಡಲು ಟೆಲಿಕಾಂ ನಿಯಂತ್ರಣ ಸಂಸ್ಥೆ (ಟ್ರಾಯ್‌) ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಈಗ ಬಹುತೇಕ ಎಲ್ಲ ಟೆಲಿಕಾಂ ಸಂಸ್ಥೆಗಳೂ ನಷ್ಟದಲ್ಲಿವೆ; ಒಂದು ಕಾಲದಲ್ಲಿ ದೇಶದ ಟೆಲಿಕಾಂ ವಲಯದಲ್ಲಿಕ್ರಾಂತಿ ಮಾಡಿದ ಬಿಎಸ್‌ಎನ್‌ಎಲ್‌, ಗ್ರಾಮೀಣ ಭಾರತದಲ್ಲಿ ಇಂದಿಗೂ ಬಲಿಷ್ಠವಾದ ಜಾಲವನ್ನು ಹೊಂದಿದೆ. ಗುಡ್ಡಗಾಡು, ಮರುಭೂಮಿ ಎಲ್ಲೆಲ್ಲೂಇದೆ. ಗ್ರಾಮೀಣ ಪ್ರದೇಶದಲ್ಲಿಯೂ ಅದಕ್ಕೆ ಸಿಬ್ಬಂದಿಗಳಿದ್ದಾರೆ. ಇದೊಂದು ಸೇವೆ ಎಂದು ತಿಳಿದಿರುವವರು ಸಾಕಷ್ಟಿದ್ದಾರೆ. []

ಬಿಎಸ್‍ಎನ್‍ಎಲ್‍ ಸಂಕಷ್ಟಕ್ಕೆ ಕಾರಣ

ಬದಲಾಯಿಸಿ
  • ‘ಬಿ.ಎಸ್.ಎನ್.ಎಲ್.ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ’ ಎಂಬ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆಯನ್ನು ಬಿ.ಎಸ್.ಎನ್.ಎಲ್ನ ಎಲ್ಲ ಒಕ್ಕೂಟಗಳು ಮತ್ತು ಸಂಘದ (ಎ.ಯು.ಎ.ಬಿ) ಪದಾಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ದೇಶದಲ್ಲಿ ಪ್ರವಾಹ, ಚಂಡಮಾರುತ ಮುಂತಾದ ಪ್ರಾಕೃತಕ ವಿಕೋಪ ಉಂಟಾದಾಗ ಖಾಸಗಿ ದೂರವಾಣಿ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಸೇವೆ ನೀಡಿದೆ. ಪರಿಹಾರ ಕಾರ್ಯಗಳಿಗೆ ನೆರವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಬಿ.ಎಸ್.ಎನ್.ಎಲ್.ಗೆ ಸರ್ಕಾರವು ಹಣಕಾಸು ಮತ್ತು ತಂತ್ರಜ್ಞಾನ ನೀಡಿದೆ ಎಂದು ಸಂಸದರು ಹೇಳಿದ್ದಾರೆ. ಆದರೆ, ಸರ್ಕಾರದಿಂದ ಒಂದು ಏನೂ ಸಿಕ್ಕಿಲ್ಲ’ ಎಂದರು. ‘ಸರ್ಕಾರವು ಬಿ.ಎಸ್.ಎನ್.ಎಲ್.ಗೆ 4ಜಿ ಸ್ಪೆಕ್ಟ್ರಂ ಅನ್ನು ಹಂಚಿಕೆ ಮಾಡಿತ್ತು. ಇದರ ಆಧಾರದಲ್ಲಿ ಸೇವೆ ನೀಡಲು ಪರಿಕರಗಳನ್ನು ಪೂರೈಕೆಗೆ ಈ ವರ್ಷ ಮಾರ್ಚ್‌ನಲ್ಲಿ ರೂ. 9 ಸಾವಿರ ಕೋಟಿ ಮೌಲ್ಯದ ಟೆಂಡರ್ ಅನ್ನು ಸಂಸ್ಥೆ ಪ್ರಕಟಿಸಿತ್ತು. ಆದರೆ, ಮರುಕ್ಷಣವೇ ಸರ್ಕಾರವು ಈ ಟೆಂಡರ್ ಅನ್ನು ರದ್ದು ಮಾಡಿತ್ತು. ಇದರಿಂದ 4ಜಿ ಸ್ಪೆಕ್ಟ್ರಂನಿಂದ ಬಿಎಸ್‍ಎನ್‍ಎಲ್‍ ವಂಚಿತವಾಗಬೇಕಾಯಿತು’ ಎಂದು ಹೇಳಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Balance Sheet and Profit & Loss" (PDF). BSNL. Retrieved 10 June 2014.
  2. http://www.thehindu.com/business/Industry/BSNL’s-operating-profit-jumps-six-fold-to-Rs-3855-cr-in-FY16/article16720236.ece. {{cite web}}: Missing or empty |title= (help)
  3. https://startuptalky.com/top-telecommunication-companies-india/
  4. https://www.business-standard.com/article/companies/jio-adds-3-28-mn-new-mobile-subscribers-in-aug-airtel-0-3-mn-users-trai-122101801196_1.html
  5. https://www.newindianexpress.com/business/2023/jun/08/bsnl-will-stop-losing-users-from-oct-nov-telecom-min-2582988.html
  6. ಬಿಎಸ್‌ಎನ್‌ಎಲ್‌: ಕಾಯಕಲ್ಪ ಮತ್ತು ಬದ್ಧತೆ;ಮಂಜುನಾಥ ಸ್ವಾಮಿ ಕೆ.ಎಂ.d: 15 ನವೆಂಬರ್ 2019,
  7. BSNL ಸ್ಪೀಡ್ ಟೆಸ್ಟ್
  8. ದೇಶಸೇವೆಯ ಬಿಎಸ್‌ಎನ್‌ಎಲ್‌ ‘ದೇಶದ್ರೋಹಿ’ ಆದದ್ದು ಹೇಗೆ?! ಇದರಲ್ಲಿ ಕೇಂದ್ರದ ಪಾಲೆಷ್ಟು?;Banuprasada N | Vijaya KarnatakaUpdated: 11 Aug 2020,
  9. ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಆಘಾತಕಾರಿ, ಖಂಡನೀಯ’;ಪ್ರಜಾವಾಣಿ;d: 12 ಆಗಸ್ಟ್ 2020