ಬಾವಂಚಿ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
P. corylifolia
Binomial name
Psoralea corylifolia

ಸೊರೇಲಿಯಾ ಕೋರಿಲಿಪೋಲಿಯ (Psoralea Corylifolia Linn) ಎಂದು ಕರೆಯಲ್ಪಟ್ಟ ಬಾವಂಚಿಯು ಲೆಗ್ಯುಮಿನೇಸಿ ಕುಟುಂಬದ ಪೆಪಿಲಿಯೋನೇಸಿ ಎಂಬ ಉಪ ಕುಟುಂಬಕ್ಕೆ ಸೇರಿದೆ[]. ಸೊರೋಲಿನ್ ಮತ್ತು ಇಸೋಸೊರೇಲಿನ್ ಇದರಲ್ಲಿರುವ ಮುಖ್ಯ ರಾಸಾಯನಿಕ ವಸ್ತುಗಳು. ಸೊರೇಲಿಯಾ ಪ್ರಭೇಧವು ವಿಶ್ವದ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ವ್ಯಾಪಿಸಿದೆ. ಈ ಪ್ರಭೇಧವು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ದಕ್ಷಿಣ ಪೂರ್ವ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬೀಜಗಳನ್ನು ವಾಣಿಜ್ಯಕ್ಕಾಗಿ ಸಂಗ್ರಹಿಸುತ್ತಾರೆ. ರಾಜಾಸ್ಥಾನ್, ಆಂಧ್ರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ಈ ಸಸ್ಯವನ್ನು ಬೆಳೆಸಲಾಗುತ್ತದೆ. ಇದಕ್ಕೆ ಸೂಕ್ಷ್ಮ ಜೀವಿನಿರೋಧಕ, ಭಕ್ಷನಿರೋಧಕ ಮತ್ತು ಕೀಟನಿರೋಧಕ ಗುಣಗಳಿವೆ.[]

ಸಸ್ಯವರ್ಣನೆ

ಬದಲಾಯಿಸಿ

ನೇರವಾಗಿ ಬೆಳೆಯುವ ವಾರ್ಷಿಕ ಪೊದರು. ಸ್ವಾಭಾವಿಕವಾಗಿ ೩೦-೬೦ ಸೆಂ. ಮೀ. ಎತ್ತರವಾಗಿದ್ದು, ಬೇಸಾಯಕ್ಕೆ ಒಳಪಟ್ಟಾಗ ೧೬೦ ಸೆಂ. ಮೀ. ಎತ್ತರಕ್ಕೆ ಬೆಳೆಯುತ್ತದೆ. ಗಿಡಗಳಿಗೆ ಹಲವಾರು ಕವಲುಗಳಿರುತ್ತವೆ. ಕಾಂಡ ಮತ್ತು ಕವಲುಗಳು ಸ್ವಷ್ಟವಾದ ಗ್ರಂಥಿಗಳನ್ನು ಮತ್ತು ಬಿಳಿ ರೋಮಗಳನ್ನು ಹೊಂದಿದೆ. ಇದು ಸಾಧಾರಣ ಪತ್ರಗಳನ್ನು ಬಿಡುತ್ತದೆ. ಎಲೆಯ ಹೂಗೊಂಚಲು ೧೦-೩೦ ಹೂಗಳನ್ನು ಒಳಕೊಡಿದೆ. ಪುಷ್ಪಪಾತ್ರೆ ೩-೪ ಮೀ. ಮೀ. ಇದ್ದು, ಹೊರಭಾಗದಲ್ಲಿ ರೋಮಗಳಿರುತ್ತದೆ. ಹೂದಳವು ಹಳದಿ- ನೇರಳೆ ಬಣ್ಣವಾಗಿದೆ. ಅಂಡಾಶಯವು ಸಣ್ಣದಾಗಿದ್ದು, ಏಕ ಬೀಜದ ಕಾಯಿಗಳನ್ನು ಬಿಡುತ್ತದೆ. ಕಾಯಿಗಳು ಸೀಳುವುದಿಲ್ಲ. ಬೀಜವು ಸಿಪ್ಪೆಯ ಒಳಗೋಡೆಗೆ ಅಂಟಿಕೊಂಡಿರುತ್ತದೆ.

ಬಾವಂಚಿಯು ಸ್ವಕೀಯ ಪರಾಗ ಸ್ಪರ್ಷ ಹೊಂದುವ ಬೆಳೆ. ೧೭-೧೮ ದಿನಲ್ಲಿ ಮೊದಲ ಹೂಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಹೂಗಳು ಬೆಳಗಿನ ವೇಳೆ ಮತ್ತು ಸಂಜೆಯ ವೇಳೆಯಲ್ಲಿ ಅರಳುತ್ತದೆ. ಇದರ ವರ್ಣ ತಂತುಗಳ ಸಂಖ್ಯೆ ೨n=೨೦ ಮತ್ತು ೨೨.

ಬೇಸಾಯ ಕ್ರಮಗಳು

ಬದಲಾಯಿಸಿ
  • ಮಣ್ಣು
  1. ಮರಳುಮಿಶ್ರಿತ ಗೋಡಿನಿಂದ ಹಿಡಿದು ಹತ್ತಿ ಬೆಳೆಯುವ ಕಪ್ಪು ಮಣ್ಣಿನವರೆಗೆ ವಿವಿಧ ಮಣ್ಣುಗಳಲ್ಲಿ ಬೆಳೆಸಲಾಗುತ್ತದೆ.
  2. ಫಲವತ್ತಾದ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತವಾಗಿದ್ದೂ, ರಸಸಾರ ಹೊಂದಿರುವ ಮಣ್ಣಿನಲ್ಲಿಯೂ ಬೆಳೆಯುತ್ತದೆ.
  3. ಆಮ್ಲ ಮತ್ತು ಕ್ಷಾರತೆಯುಳ್ಳ ಮಣ್ಣುಗಳು ಸೂಕ್ತವಲ್ಲ.
  • ಹವಾಗುಣ
  1. ಈ ಬೆಳೆಗೆ ಒಣ ಹವಾಗುಣ ಸೂಕ್ತವಾಗಿದೆ.
  2. ಸಾಮಾನ್ಯವಾಗಿ ಮುಂಗಾರಿನಲ್ಲಿ ಬೆಳೆಸಲಾಗುತ್ತದೆ.
  3. ಇದು ಗಡುತರ ಸಸ್ಯವಾಗಿದ್ದು, ಕಡಿಮೆಯಿಂದ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತದೆ.

ಸಸ್ಯಾಭಿವೃದ್ಧಿ

ಬದಲಾಯಿಸಿ

ಬಾವಂಚಿಯನ್ನು ಬೀಜಗಳಿಂದ ವೃದ್ಧಿಮಾಡಲಾಗುತ್ತದೆ. ಮೊಳಕೆಯ ಪ್ರಮಾಣ ಅತೀ ಕಡಿಮೆ ಇರುತ್ತದೆ (ಶೇ. ೫-೭). ಮೊಳಕೆಯ ಪ್ರಮಾಣವನ್ನು ಹೆಚ್ಚಿಸಲು ಬೀಜಗಳನ್ನು ಶೇ. ೧ರ ಸಲ್ಪ್ಯುರಿಕ್ ಆಮ್ಲದಲ್ಲಿ ಒಂದು ನಿಮಿಷದ ಕಾಲ ಇಡಬೇಕು. ಅವುಗಳನ್ನು ಬಿತ್ತುವ ಮೊದಲು ಸಲ್ಫ್ಯೂರಿಕ್ ಆಮ್ಲ ಹೋಗುವಂತೆ ನೀರಿನಲ್ಲಿ ತೊಳೆಯಬೇಕು.

ಭೂಮಿಸಿದ್ಧತೆ

ಬದಲಾಯಿಸಿ

ಮುಂಗಾರಿನ ಮೊದಲು ಭೂಮಿಯನ್ನು ಲಘುವಾಗಿ ಉಳುಮೆಮಾಡಬೇಕು. ನಂತರ ಎರಡು ಬಾರಿ ಕುಂಟೆ ಹೊಡೆದು, ಕಳೆ ಕೂಳೆಗಳನ್ನು ಆರಿಸಿ ಸಿದ್ಧಗೊಳಿಸಬೇಕು. ನಂತರ ನಿರ್ವಾಹಣೆಗೆ ಅನುಕೂಲವಾಗುವಂತೆ ಭೂಮಿಯನ್ನು ಸಣ್ಣ ಸಣ್ಣ ಮಡಿಗಳನ್ನು ಹಾಗೂ ನೀರು ಕಾಲುವೆಗಳನ್ನು ಮಾಡಬೇಕು.

ಬಿತ್ತನೆ

ಬದಲಾಯಿಸಿ

ಬೀಜಗಳನ್ನು ೪೫-೬೦ ಸೆಂ. ಮೀ. ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ೩೦-೪೫ ಸೆಂ. ಮೀ. ಅಂತರವಿರುವಂತೆ ಬಿತ್ತಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ ೭ಕಿ. ಗ್ರಾಂ. ಬೀಜಗಳು ಬೇಕಾಗುತ್ತದೆ.

ಗೊಬ್ಬರ

ಬದಲಾಯಿಸಿ

ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಹೆಕ್ಟೇರಿಗೆ ಮೂಲ ಗೊಬ್ಬರವಾಗಿ ೨೦ ಟನ್ ಕೊಟ್ಟಿಗೆ ಗೊಬ್ಬರ ಕೊಡುವುದರಿಂದ ಪ್ರಾರಂಭಿಕ ಬೆಳವಣಿಗೆ ಮತ್ತು ಬೀಜದ ಇಳುವರಿ ಹೆಚ್ಚಾಗುತ್ತದೆ.

ನೀರಾವರಿ

ಬದಲಾಯಿಸಿ

ಇದಕ್ಕೆ ನೀರಿನ ಅವಶ್ಯಕತೆ ಕಡಿಮೆ ಇದೆ. ಮಳೆಗಾಲ ಕಳೆದ ಮೇಲೆ(ಜೂನ್- ಸೆಪ್ಟೆಂಬರ್) ೧೫ ದಿನಗಳಿಗೊಮ್ಮೆ ನೀರನ್ನು ಕೊಡಬೇಕು. ಬೆಳೆಯ ಅವಧಿಯಲ್ಲಿ ೬-೮ ಬಾರಿ ನೀರನ್ನು ಹಾಯಿಸಿದರೆ ಸಾಕು.

ಕಳೆ ಹತೋಟಿ ಮತ್ತು ಬೇಸಾಯ

ಬದಲಾಯಿಸಿ

ಬೆಳೆಯಿರುವ ಪ್ರದೇಶವು ಕಳೆ ರಹಿತವಾಗಿರಬೇಕು. ಬೆಳವಣಿಗೆಯ ಪ್ರಾರಂಭದಲ್ಲಿ ೨- ೩ ಬಾರಿ ಕಳೆ ತೆಗೆಯಬೇಕು.

ಕೀಟ ಮತ್ತು ರೋಗಗಳು

ಬದಲಾಯಿಸಿ

ಇದು ಗಡುತರವಾದ ಸಸ್ಯವಾದ್ದರಿಂದ ಕೀಟ ಮತ್ತು ರೋಗಗಳ ಸಮಸ್ಯೆ ಕಡಿಮೆ. ಆದರೆ ಲೆಪೆಡಾಪ್ಟೆರ ವರ್ಗದ ಕೀಟಗಳಾದ ಎಲೆ ಸುರುಳಿ ಹುಳು (ಆರ್ಕಿಪ್ಸ್ ಮೈಕ್ಯಾಸಿಯಾನ), ಕಂಬಳಿ ಹುಳುಗಳು ಹಾನಿ ಮಾಡುತ್ತವೆ. ಈ ಕೀಟಗಳನ್ನು ಶೇ. ೦.೧೫ ರ ಪ್ರಮಾಣದ ಮಾನೊಕ್ರೋಟೋಫಾಸ್ ಸಿಂಪಡಿಸಿ ನಿಯಂತ್ರಿಸಬಹುದು. ಈ ಸಸ್ಯದಲ್ಲಿ ಕಾಣುವ ಮುಖ್ಯ ರೋಗ- ಬೂದಿ ರೋಗ. ಇದನ್ನು ನಿಯಂತ್ರಿಸಲು ನೀರಿನಲ್ಲಿ ಕರಗುವ ಗಂಧಕವನ್ನು(ಶೇ. ೦.೩) ೨-೩ ಬಾರಿ ನಿಗದಿತ ಅಂತರದಲ್ಲಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ

ಬದಲಾಯಿಸಿ

ಬಾವಂಚಿಯು ೭-೮ ತಿಂಗಳ ಬೆಳೆ. ಕೊಯ್ಲಿನ ಸಮಯದಲ್ಲಿ ಗಿಡದಲ್ಲಿ ಬೀಜಗಳು ನಿರಂತರವಾಗಿ ಬಲಿತು ಕೊಯ್ಲಿಗೆ ಬರುತ್ತವೆ. ಸಾಮನ್ಯವಾಗಿ ಡಿಸೆಂಬರ್ ಮಧ್ಯ ಭಾಗದಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಕೊಯ್ಲು ಕಾಲದಲ್ಲಿ ೪-೫ ಬಾರಿ ಕಾಯಿಗಳನ್ನು ಬಿಡಿಸಬಹುದು. ಬೀಜಗಳು ಬಲಿತಾಗ ಕಂದು- ಕಪ್ಪು ಬಣ್ಣಕ್ಕೆ ತಿರುಗಿ ಪರಿಮಳವನ್ನು ಬೀರುತ್ತದೆ. ಪ್ರತೀ ಹೆಕ್ಟೇರ್ ಪ್ರದೇಶದ ಬೆಳೆಯಿಂದ ೨ ಟನ್ ಗಳಷ್ಟು ಒಣಗಿದ ಬೀಜಗಳ ಇರುವರಿ ದೊರೆಯುತ್ತದೆ.[]


ಬಾಹ್ಯಸಂಪರ್ಕಗಳು

ಬದಲಾಯಿಸಿ

http://www.ayurvediccommunity.com/AmaraKannada.asp

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-03-04. Retrieved 2016-05-24.
  2. ಔಷಧೀಯ ಬೆಳೆಗಳ ಬೇಸಾಯ, ಡಾ. ಎ. ಎ. ಫರೂಕಿ, ಶ್ರೀ ಬಿ. ಎಸ್. ಶ್ರೀರಾಮು, ಡಾ. ಕೆ. ಎನ್. ಶ್ರೀನಿವಾಸಪ್ಪ, ಶ್ರೀ ಓ. ಆರ್. ಲಕ್ಷ್ಮಿಪತಯ್ಯ, ಕಾವ್ಯಾಕಲಾ ಪ್ರಕಾಶನ, ಮೊದಲ ಮುದ್ರಣ-೨೦೦೦, ಪುಟ ೧೮೪
  3. ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು, ಎ. ಆರ್. ಎಂ. ಸಾಹೇಬ್, ದಿವ್ಯಚಂದ್ರ ಪ್ರಕಾಶನ, ಮುದ್ರಣ ೨೦೦೨, ಪುಟ ೧೪೧
"https://kn.wikipedia.org/w/index.php?title=ಬಾವಂಚಿ&oldid=1141912" ಇಂದ ಪಡೆಯಲ್ಪಟ್ಟಿದೆ