ಬಾಲ್ ಮಿಠಾಯಿ (ಹಿಂದಿ:बाल मिठाई) ಚಾಕ್‍ಲೇಟ್‍ನಂತಹ ಒಂದು ಕಂದು ಬಣ್ಣದ ಮಿಠಾಯಿಯಾಗಿದೆ. ಇದನ್ನು ಸುಟ್ಟು ಬೇಯಿಸಿದ ಖೋವಾದಿಂದ ತಯಾರಿಸಲಾಗುತ್ತದೆ. ಮೇಲೆ ಬಿಳಿ ಸಕ್ಕರೆ ಗುಂಡುಗಳಿಂದ ಲೇಪಿಸಲಾಗುತ್ತದೆ. ಇದು ಭಾರತದ ಹಿಮಾಲಯ ರಾಜ್ಯವಾದ ಉತ್ತರಾಖಂಡದ ಅಲ್ಮೋರಾ ಮೂಲದ್ದಾಗಿರುವ ಜನಪ್ರಿಯ ಸಿಹಿ ತಿನಿಸಾಗಿದೆ, ಮತ್ತು ವಿಶೇಷವಾಗಿ ಕುಮಾವ್ಞೂ ಸುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ.

ಖೋವಾವನ್ನು (ಆವಿಯಾಗಿಸಿದ ಹಾಲಿನ ಕೆನೆ) ಕಬ್ಬಿನ ಸಕ್ಕರೆಯೊಂದಿಗೆ ಗಾಢ ಕಂದು ಬಣ್ಣ ಬರುವವರೆಗೆ ಬೇಯಿಸಿ ಬಾಲ್ ಮಿಠಾಯಿಯನ್ನು ತಯಾರಿಸಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು 'ಚಾಕ್‍ಲೇಟ್' ಎಂದು ಕರೆಯಲಾಗುತ್ತದೆ ಏಕೆಂದರೆ ಇದರ ಬಣ್ಣ ಚಾಕ್‍ಲೇಟ್‍ನ್ನು ಹೋಲುತ್ತದೆ. ಇದನ್ನು ಸ್ಥಿರಗೊಳ್ಳಲು ಮತ್ತು ತಣ್ಣಗಾಗಲು ಬಿಡಲಾಗುತ್ತದೆ. ನಂತರ ಘನಾಕಾರದ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನಂತರ ಸಕ್ಕರೆ ಲೇಪಿತ ಹುರಿದ ಗಸಗಸೆ ಬೀಜಗಳಿಂದ ತಯಾರಿಸಲಾದ ಸಣ್ಣ ಬಿಳಿ ಗುಂಡುಗಳಿಂದ ಇವುಗಳನ್ನು ಲೇಪಿಸಲಾಗುತ್ತದೆ.[]

ಉಲ್ಲೇಖಗಳು

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ