ಬಾಲಭಾಸ್ಕರ್ ಚಂದ್ರನ್ (ಜುಲೈ ೧೦, ೧೯೭೮ ರಿಂದ ಅಕ್ಟೋಬರ್ ೨ ೨೦೧೮) ಒಬ್ಬ ಭಾರತೀಯ ವಯೋಲಿನ್ ವಾದಕ, ಸಂಗೀತ ಸಂಯೋಜಕ ಮತ್ತು ಧ್ವನಿ ಮುದ್ರಣ ನಿರ್ಮಾಪಕ. ದಕ್ಷಿಣ ಭಾರತದಲ್ಲಿ ಸಮ್ಮಿಳನ ಸಂಗೀತ (ಫ಼್ಯೂಶನ್ ಮ್ಯೂಸಿಕ್) ವನ್ನು ಉತ್ತೇಜಿಸುವಲ್ಲಿ ಅವರು ಗುರುತಿಸಿಕೊಂಡಿದ್ದರು.

ಬಾಲ್ಯ ಮತ್ತು ವೈಯಕ್ತಿಕ ಜೀವನ

ಬದಲಾಯಿಸಿ

ಇವರು ಹುಟ್ಟಿದ್ದು ೧೯೭೮ ರ ಜುಲೈ ೧೦ ರಂದು ಸಿ. ಕೆ. ಉನ್ನಿ ಮತ್ತು ಶಾಂತಕುಮಾರಿ ದಂಪತಿಗಳಿಗೆ. ಮೂಲತಃ ಇವರು ಕೇರಳದ ತಿರುವನಂತಪುರಂನವರು. ಸಂಗೀತದ ಕುಟುಂಬದಿಂದಲೇ ಬಂದವರಾದ ಕಾರಣ, ಮೂರು ವರ್ಷ ವಯಸ್ಸಿನವರಿದ್ದಾಗಲೇ, ಕರ್ನಾಟಿಕ್ ಸಂಗೀತದಲ್ಲಿ ಪರಿಣಿತರಾದ ಅವರ ಚಿಕ್ಕಪ್ಪ ಬಿ. ಸಸಿಕುಮಾರ್ ರಿಂದ ವಾದ್ಯ ಸಂಗೀತದ ಜಗತ್ತಿಗೆ ಪರಿಚಯಿಸಲ್ಪಟ್ಟರು. ಬಾಲಭಾಸ್ಕರ್ ಡಿಸೆಂಬರ್ ೧೬, ೨೦೦೦ ರಂದು ತಮ್ಮ ಗೆಳತಿ ಲಕ್ಷ್ಮಿಯವರನ್ನು ವಿವಾಹವಾದರು. ಅವರ ಏಕೈಕ ಪುತ್ರಿ ತೇಜಸ್ವಿನಿ ಬಾಲ, ಹುಟ್ಟಿದ್ದು ೨೦೧೬ರ ಮೇ ೧೪ ರಂದು.

ವೃತ್ತಿ ಜೀವನ

ಬದಲಾಯಿಸಿ

ಬಾಲಭಾಸ್ಕರ್ ೧೨ನೇ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಮಲಯಾಳಂ ಚಲನಚಿತ್ರ ಮಾಂಗಲ್ಯ ಪಲ್ಲಕ್ಕು (೧೯೯೮) ಗೆ ತಮ್ಮ ೧೭ನೇ ವಯಸ್ಸಿನಲ್ಲಿ ಸಂಗೀತ ನೀಡಿದ್ದರಿಂದ ಮಲಯಾಳಂ ಚಿತ್ರರಂಗದಲ್ಲಿಯೇ ಅತ್ಯಂತ ಕಿರಿಯ ಸಂಗೀತ ನಿರ್ದೇಶಕರೆನಿಸಿಕೊಂಡರು. ಅವರ ಎರಡು ಆಲ್ಬಂಗಳಾದ ನಿನಕೈ (೨೦೧೪) ಮತ್ತು ಆದ್ಯಮಯಿ (೧೯೯೯) ಸಂಯೋಜನೆಗಳು, ಪ್ರಣಯಗೀತೆಗಳಲ್ಲಿ ಇನ್ನೂ ಪ್ರಾಮುಖ್ಯತೆ ಪಡೆದಿವೆ. ಅವರು ಕರ್ನಾಟಿಕ್ ಸಂಗೀತದಲ್ಲಿ ಪಾರಂಗತರಾಗಿದ್ದರು. ಪ್ರೇಕ್ಷಕರನ್ನು ತಮ್ಮ ಸಂಗೀತದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವರಲ್ಲಿದ್ದುದರಿಂದ ಪ್ರಮುಖ ಪ್ರದರ್ಶನಗಳು ಮತ್ತು ಶಾಸ್ತ್ರೀಯ ಸಂಗೀತಗೋಷ್ಠಿಗಳಲ್ಲಿ ಜನ ಮೆಚ್ಚಿನವರಲ್ಲಿ ಒಬ್ಬರಾಗಿದ್ದರು.

ಹಲವಾರು ಕರ್ನಾಟಿಕ್ ಸಂಗೀತ ಕಚೇರಿಗಳಲ್ಲಿ ತಮ್ಮ ಚಿಕ್ಕಪ್ಪ ಮತ್ತು ಗುರುವಾಗಿದ್ದ ಬಿ. ಸಸಿಕುಮಾರ್ ಜೊತೆ ಜೋಡಿಯಾಗಿ ಪಿಟೀಲು ವಾದನದಲ್ಲಿ ಮೆಚ್ಚುಗೆ ಗಳಿಸಿದ್ದರು. ಬಾಲಭಾಸ್ಕರ್ ಅವರು ಉಸ್ತಾದ್ ಜಾಕಿರ್ ಹುಸೇನ್, ಶಿವಮಣಿ, ಲೂಯಿಸ್ ಬ್ಯಾಂಕ್ಸ್, ವಿಕ್ಕು ವಿನಾಯಕ್ರಂ, ಹರಿಹರನ್, ಮಟ್ಟನ್ನೂರ್ ಶಂಕರನ್ ಕುಟ್ಟಿ, ರಂಜಿತ್ ಬಾರೋಟ್, ಫ಼ಜಲ್ ಖುರೇಷಿ ಮುಂತಾದವರೊಂದಿಗೆ ಭಾರತ ಮತ್ತು ವಿದೇಶಗಳಲ್ಲಿ ಸಂಗೀತ ಪ್ರದರ್ಶನ ನೀಡಿದ್ದಾರೆ.

ಇತ್ತೀಚಿನ ಕೃತಿಗಳು

ಬದಲಾಯಿಸಿ

ಬಾಲಭಾಸ್ಕರ್ ಅವರ ಮೊದಲ 'ವಾದ್ಯಗಳ ಸಮ್ಮಿಳನ' (ಇನ್ಸ್ಟ್ರುಮೆಂಟಲ್ ಫ಼್ಯೂಶನ್) ಲೆಟ್ ಇಟ್ ಬಿ ೨೦೧೧ ರಲ್ಲಿ ಬಿಡುಗಡೆಯಾಗಿತ್ತು. ಪ್ರಸಿದ್ಧ ಸಂಗೀತಗಾರರಾದ ಶಿವಮಣಿ, ಲೂಯಿಸ್ ಬ್ಯಾಂಕ್ಸ್, ಫ಼ಜಲ್ ಖುರೇಷಿ, ಗಿನೋ ಬ್ಯಾಂಕ್ಸ್, ಮತ್ತು ಷೆಲ್ಡಿನ್ ಡಿ'ಸಿಲ್ವಾ ಇವರೆಲ್ಲಾ ಈ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ಬಾಲಭಾಸ್ಕರ್ ಅವರ ಭಾರತೀಯ ವಯೋಲಿನ್ ವಾದನದ ಜೊತೆಗೆ ರಾಕ್, ಜಾಝ್, ಹಿಪ್-ಹಾಪ್ ಮತ್ತು ಟೆಕೋ ಸಂಗೀತದ ಮಿಶ್ರಣ ಆ ಅಲ್ಬಂನಲ್ಲಿ ತುಂಬಿದೆ. ಸಂಸ್ಕೃತಿಯನ್ನು ಸಂವಹನ ಭಾಷೆಯಾಗಿ ಉತ್ತೇಜಿಸುವಲ್ಲಿ, ಸಂಸ್ಕೃತ ಸಾಹಿತ್ಯವನ್ನು ಇದು ಒಳಗೊಂಡಿದೆ. ಬಿಗಿನ್ ವಿತ್ ಸೂರ್ಯ ಮತ್ತು ಬಿ ಯೋಂಡ್ ಎಂಬ ಎರಡೂ ಹಾಡುಗಳನ್ನು ದೃಶ್ಯೀಕರಿಸಲಾಗಿದೆ. ಎಂಸಿ ಆಡಿಯೋಸ್ ಆಂಡ್ ವೀಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ನ್ನು ತಯಾರಿಸಲಾಗಿದೆ.

ಅಂತರಾಷ್ಟ್ರೀಯ ಲೇಪವನ್ನು ಹೊಂದಿದ ಕರ್ನಾಟಿಕ್ ಕೀರ್ತನೆ ಗಳನ್ನು ತಮ್ಮದೇ ಶೈಲಿಯಲ್ಲಿ ಹೊರತಂದರು ಬಾಲಭಾಸ್ಕರ್. ಈ ಯೋಜನೆಯನ್ನು ಭಜತಿ ಎಂದು ಕರೆಯಲಾಗಿತ್ತು ಮತ್ತು ಆಡಿಯೋ ಟ್ರಾಕ್ಸ್ ಇದರ ಮಾರಾಟ ಹಕ್ಕನ್ನು ಹೊಂದಿದೆ.

ತಿರುವನಂತಪುರಂನ ಪಲ್ಲಿಪುರಂನಲ್ಲಿ ಸೆಪ್ಟೆಂಬರ್ ೨೫, ೨೦೧೮ ರಂದು ಜರುಗಿದ ಕಾರು ಅಪಘಾತದಲ್ಲಿ ಹಲವಾರು ರೀತಿಯಲ್ಲಿ ಗಾಯಗೊಂಡರು. ಬಳಿಕ ತಿರುವನಂತಪುರಂನಲ್ಲಿನ ಅನಂತಪುರಿ ಆಸ್ಪತ್ರೆಗೆ ಸೇರಿಸಿದಾಗ್ಯೂ ಹಲವು ಶಸ್ತ್ರಚಿಕಿತ್ಸೆಗಳು ನಡೆದರೂ, ಅಕ್ಟೋಬರ್ ೨, ೨೦೧೮ರಂದು ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಾಘಾತದಿಂದ ಮರಣ ಹೊಂದಿದರು. ಇದೇ ಅಪಘಾತದಲ್ಲಿ ಅವರ ಮಗಳು ತೇಜಸ್ವಿನಿ ಬಾಲ ಆಸ್ಪತ್ರೆಗೆ ದಾಖಲಾದಾಗ ಮರಣ ಹೊಂದಿದ್ದರು.[][]

ಸಂಗೀತ ಕೃತಿಗಳ ಪಟ್ಟಿ

ಬದಲಾಯಿಸಿ

ಸಂಗೀತ ಕಚೇರಿಗಳು ಮತ್ತು ವೇದಿಕೆ ಪ್ರದರ್ಶನಗಳಲ್ಲದೆ, ಬಾಲಭಾಸ್ಕರ್ ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ, ಜಾಹೀರಾತು, ಚಲನಚಿತ್ರಗಳು, ಟೆಲಿ-ಸೀರಿಯಲ್ ಶೀರ್ಷಿಕೆಗಳು ಮತ್ತು ಆಲ್ಬಂಗಳಿಗೆ ಸಂಗೀತ ನೀಡಿದ್ದರು.[]

ಹೆಸರು ವರ್ಷ ಪ್ರಕಾರ
ಆಂಬುಲೆನ್ಸ್ ೨೦೧೫ ಕಿರುಚಿತ್ರ
ಜಾಹಿರ್ ೨೦೧೩ ಮಲಯಾಳಂ ಚಲನಚಿತ್ರ
ಭಜತಿ ೨೦೧೧ ಕರ್ನಾಟಿಕ್ ಫ಼್ಯೂಶನ್
ಲೆಟ್ ಇಟ್ ಬಿ ೨೦೧೧ ವರ್ಲ್ಡ್ ಫ಼್ಯೂಶನ್ ಆಲ್ಬಂ
ಪಟ್ಟಿಂದೆ ಪಾಲಜಿಃ ೨೦೧೦ ಮಲಯಾಳಂ ಚಲನಚಿತ್ರ
ಕನ್ನಡಿಕ್ಕಡವತ್ತು ೨೦೦೦ ಮಲಯಾಳಂ ಚಲನಚಿತ್ರ
ಮಾಂಗಲ್ಯ ಪಲ್ಲಕ್ಕು ೧೯೯೮ ಮಲಯಾಳಂ ಚಲನಚಿತ್ರ
ಮೋಕ್ಷಂ ೨೦೦೫ ಮಲಯಾಳಂ ಚಲನಚಿತ್ರ
ನಿನಕ್ಕೈ[] ೨೦೧೪ ಮಲಯಾಳಂ ಆಲ್ಬಂ
ಆದ್ಯಮಯಿ ೧೯೯೯ ಮಲಯಾಳಂ ಆಲ್ಬಂ

ಪ್ರಶಸ್ತಿ

ಬದಲಾಯಿಸಿ

ಸಂಗೀತ ವಾದ್ಯ (ವಯೋಲಿನ್) ಗಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ, ೨೦೦೮ ರ ಬಿಸ್ಮಿಲ್ಲಾ ಖಾನ್ ಯುವ ಸಂಗೀತ ಪುರಸ್ಕಾರ ಬಾಲಭಾಸ್ಕರ್ ಪಡೆದಿದ್ದರು.[]

ಉಲ್ಲೇಖಗಳು

ಬದಲಾಯಿಸಿ