ಬಾಬ್ ಡಿಲಾನ್
ಬಾಬ್ ಡೈಲನ್/ಬಾಬ್ ಡಿಲಾನ್
ಬದಲಾಯಿಸಿ- ಹಿಂದಿನ ಜೀವನದ ಹೆಚ್ಚನ ವಿವರ:ಬಾಬ್ ಡೈಲನ್;-:ಬಾಬ್ ಡೈಲನ್
- ಬಾಬ್ ಡೈಲನ್ ಅಮೆರಿಕನ್ ಗೀತರಚನೆಕಾರ, ಗಾಯಕ, ಕಲಾವಿದ, ಮತ್ತು ಬರಹಗಾರ. ಅವರು ಐದು ದಶಕಗಳಿಂದ ಜನಪ್ರಿಯ ಸಂಗೀತ ಹಾಗೂ ನಾಟಕಗಳಲ್ಲಿ ಪ್ರಭಾವ ಬೀರಿದ್ದಾರೆ. 1960 ಕಾಲಾನುಕ್ರಮದ ನಂತರ ಅವರ ಹಾಡುಗಳಲ್ಲಿ ಸಾಮಾಜಿಕ ಚಳುವಳಿಯ/ಅಶಾಂತಿಯ ಬಗೆಗಿನ ಅವರ ಅತ್ಯಂತ ಪ್ರಸಿದ್ಧ ಕೃತಿಗಳು ಹೊರ ಬಂದವು.
- ಬಾಬ್ ಡೈಲನ್ ಅಮೆರಿಕನ್ ಗೀತರಚನೆಕಾರ, ಗಾಯಕ, ಕಲಾವಿದ, ಮತ್ತು ಬರಹಗಾರ. ಅವರು ಐದು ದಶಕಗಳಿಂದ ಜನಪ್ರಿಯ ಸಂಗೀತ ಹಾಗೂ ನಾಟಕಗಳಲ್ಲಿ ಪ್ರಭಾವ ಬೀರಿದ್ದಾರೆ. 1960 ಕಾಲಾನುಕ್ರಮದ ನಂತರ ಅವರ ಹಾಡುಗಳಲ್ಲಿ ಸಾಮಾಜಿಕ ಚಳುವಳಿಯ/ಅಶಾಂತಿಯ ಬಗೆಗಿನ ಅವರ ಅತ್ಯಂತ ಪ್ರಸಿದ್ಧ ಕೃತಿಗಳು ಹೊರ ಬಂದವು. ಈ ಬಾರಿ, ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- "ಬ್ಲೋಯಿಂಗ್ ಇನ್ ದ ವಿಂಡ್'’ ಮತ್ತು ‘’ಟೈಮ್ಸ್ ದೇ ಆರ್ ಎ-ಚೇಂಜಿಂಗ್" ಆರಂಭಿಕ ಹಾಡುಗಳು ಅಮೆರಿಕನ್ ನಾಗರಿಕ ಹಕ್ಕುಗಳ ಗೀತೆಗಳು, ಯುದ್ಧ ವಿರೋಧಿ ಚಳುವಳಿಗಳ ಗೀತೆಗಳಾಯಿತು . ಅವರ ಆರಂಭಿಕ ಗೀತರಚನೆ ಅಮೆರಿಕದ ಜನಪದ ಸಂಗೀತದ ಪುನಶ್ಚೇತನ ಮತ್ತು ತಳಪಾಯವಾಗಿದೆ, 1965 ರಲ್ಲಿ ಧ್ವನಿಮುದ್ರಣವಾದ ಆರು-ನಿಮಿಷಗಳ ಅವಧಿಯ "ಲೈಕ್ ಎ ರಾಲಿಂಗ್ ಸ್ಟೋನ್" ಒಂದು ಜನಪ್ರಿಯ ಹಾಡು ಸಂಗೀತದ ವ್ಯಾಪ್ತಿಯನ್ನು ವಿಸ್ತರಿಸಿತು.
- ಅಮೆರಿಕದ ಸಾರ್ವಕಾಲಿಕ ಹಾಡುಗಾರ ಬಾಬ್ ಡಿಲಾನ್, ಅಬ್ರಹಾಂ ಜಿಮ್ಮೆರ್‌ಮ್ಯಾನ್ ಮತ್ತು ಬೆಟ್ಟಿಸ್ಟೋನ್‌ರ ಮಗನಾಗಿ ಮಿನ್ನೆಸೋಟದ ದಲತ್‌ನಲ್ಲಿ 1941ರ ಮೇ 24ರಂದು ಡಿಲಾನ್ ಜನಿಸಿದರು. ಇವರ ಮೂಲ ಹೆಸರು ರಾಬರ್ಟ್ ಅಲೆನ್ ಜಿಮ್ಮೆರ್‌ಮ್ಯಾನ್. ಜೆವಿಷ್ ಎನ್ನುವ ಪುಟ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಟರ್ಕಿ ಮೂಲದ ಪೂರ್ವಜರು ಯುದ್ಧಕಾಲದಲ್ಲಿ ವಲಸೆ ಬಂದವರು. ನಂತರ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಗೊಂಡರು.[೧][೨][೩]
ವೈಯಕ್ತಿಕ ಜೀವನ
ಬದಲಾಯಿಸಿ- ಕುಟುಂಬ ;
- ಡೈಲನ್ ಸಾರಾ ಲೌಂಡ್ಸ್ರನ್ನು ನವೆಂಬರ್ 22, 1965 ರಂದು ಮದುವೆಯಾದರು; ಮೊದಲ ಮಗು, ಜೆಸ್ಸೆ ಬೈರನ್ ಡೈಲನ್, ಜನವರಿ 6, 1966 ರಂದು ಜನಿಸಿತು, ಮತ್ತು ಅವರಿಗೆ ಮತ್ತೂ ಮೂರು ಮಕ್ಕಳಾದವು: ಅನ್ನಾ ಲೀ (ಜುಲೈ 11, 1967 ರಂದು ಜನನ), ಸ್ಯಾಮ್ಯುಯೆಲ್ ಐಸಾಕ್ ಅಬ್ರಾಮ್ (ಜುಲೈ 30 ಜನನ , 1968), ಹಾಗೂ ಜಾಕೋಬ್ ಲ್ಯೂಕ್ (ಜನನ ಡಿಸೆಂಬರ್ 9, 1969). ಡೈಲನ್ ಹಿಂದಿನ ಮದುವೆಯ ಸಾರಾ ಅವರ ಮಗಳು, ಮಾರಿಯಾ ಲೌಂಡ್ಸ್ರನ್ನು (ನಂತರ ಡೈಲನ್, ಅಕ್ಟೋಬರ್ 21, 1961 ರಂದು ಜನನ) ದತ್ತಾಗಿ ಅಳವಡಿಸಿಕೊಂಡರು. ಬಾಬ್ ಹಾಗೂ ಸಾರಾ ಡೈಲನ್ ಜೂನ್ 29, 1977 ರಂದು ವಿಚ್ಛೇದನ ಪಡೆದುಕೊಂಡರು 1988 ರಲ್ಲಿ ಮಾರಿಯಾ ಸಂಗೀತಗಾರ ಪೀಟರ್ ಹಿಮ್ಮೆಲ್ಮನ್ರ ಮದುವೆಯಾದರು. [394] 1990 ರಲ್ಲಿ, ಡೈಲನ್ ಮಗ ಜಾಕೋಬ್ ವಾಲ್ಫ್ಲವರ್ಸ್ ಎಂಬ ವಾದ್ಯತಂಡದ ಪ್ರಮುಖ ಹಾಡುಗಾರರಾಗಿ ಹೆಸರಾಗಿದ್ದಾರೆ. ಜೆಸ್ಸೆ ಡೈಲನ್ ಓರ್ವ ಚಿತ್ರ ನಿರ್ದೇಶಕ ಹಾಗೂ ಯಶಸ್ವಿ ಉದ್ಯಮಿ.
- ಡಿಸೈರೀ ಗೇಬ್ರಿಯಲ್ ಡೆನ್ನಿಸ್ ಡೈಲನ್, ಇವರ ಬ್ಯಾಕ್ಅಪ್ ಗಾಯಕ (ಸಾಮಾನ್ಯವಾಗಿ ವೃತ್ತಿಪರವಾಗಿ ಕರೋಲ್ ಡೆನ್ನಿಸ್ ಎಂದು ಕರೆಯಲ್ಪಡುವರು); ಕೆರೋಲಿನ್ ಡೆನ್ನಿಸ್ ಡೈಲನ್,ರ ಮಗಳು, ಜನವರಿ 31, 1986 ರಂದು ಜನಿಸಿದರು, ಮತ್ತು ಡೈಲನ್ ರು ಕ್ಯಾರೊಲಿನ್ ಡೆನ್ನಿಸ್ ರನ್ನು ಜೂನ್ 4, 1986 ರಂದು ವಿವಾಹವಾದರು. ಅಕ್ಟೋಬರ್ 1992 ರಲ್ಲಿ ವಿಚ್ಛೇದನ ಪಡೆದರು. ಅವರ ಮದುವೆ ಹಾಗೂ ಮಗುವಿನ ವಿಷಯವನ್ನು, 2001 ರಲ್ಲಿ ಹೊವರ್ಡ್ ಸೋನ್ಸ್ 'ಬಯೋಗ್ರಫಿ ಹೈವೇ: ದ ಲೈಫ್ ಆಫ್ ಬಾಬ್ ಡೈಲನ್,ಪ್ರಕಟಣೆಯ ವರೆಗೂ ರಹಸ್ಯವಾಗಿತ್ತು.
- ಇವರು ಪ್ರವಾಸ ಇಲ್ಲದಾಗ, ಡೈಲನ್ ಅವರು ವಿಶ್ವದಾದ್ಯಂತ ಆಸ್ತಿಯನ್ನು ಹೊಂದಿದ್ದಾರೆ ಆದರೂ, ಕ್ಯಾಲಿಫೋರ್ನಿಯಾದಲ್ಲಿ ತೀರದಲ್ಲಿರುವ ಭೂಶಿರ ಪಾಯಿಂಟ್ ಡೂಮೆ ಮಾಲಿಬುದಲ್ಲಿ ಹೆಚ್ಚಾಗಿ ವಾಸಿಸುವರೆಂದು ನಂಬಲಾಗಿದೆ.
ಯುದ್ಧಪರ ನೀತಿಗೆ ವಿರೋಧ
ಬದಲಾಯಿಸಿ- ಇವರು ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್ ಈ ಬಾರಿ, ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಡಿಲಾನ್ ಅವರ ಸಂಗೀತದ ವಿಸ್ತರಣೆಯು ಅವರ ಕಲಾಕೃತಿಗಳಲ್ಲೂ ಮುಂದುವರಿದಿದೆ. ಅವರ ರೇಖೆ ಮತ್ತು ಚಿತ್ರಕಲೆಯನ್ನು ಒಳಗೊಂಡ ಆರು ಪುಸ್ತಕಗಳು ಪ್ರಕಟವಾಗಿವೆ. ಜಗತ್ತಿನ ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಅವರ ಕಲಾಕೃತಿಗಳಿವೆ. ಅವರ ಸಂಗೀತದಲ್ಲಿ ಅಡಕವಾದ ಭಗ್ನಪ್ರೇಮ, ಯುದ್ಧದ ನಿರರ್ಥಕತೆ, ಸ್ವಾರ್ಥ, ವಿಶ್ವಾಸದ್ರೋಹ, ವೇದನೆ, ಸಾವು, ನೈತಿಕ ಅಧಃಪತನ, ಪರಿಶುದ್ಧ ಪ್ರೇಮ ಮುಂತಾದವುಗಳನ್ನು ಗುರುತಿಸಲು ಈ ಕಲಾಕೃತಿಗಳು ನೆರವಾಗುತ್ತವೆ. ಸಂಗೀತದ ಲಯದೊಳಗೆ ಬೆರೆತ ಸಂವೇದನೆ ಅವರ ಕಲಾಕೃತಿಗಳಲ್ಲಿ ಚಿತ್ರರೂಪ ಪಡೆದಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.[೪]
- ಅಮೆರಿಕದ ಸಾರ್ವಕಾಲಿಕ ಹಾಡುಗಾರನೆಂಬ ಖ್ಯಾತಿಗೆ ಒಳಗಾದ ಕವಿಯೊಬ್ಬನಿದ್ದರೆ ಆತನೇ ಬಾಬ್ ಡಿಲಾನ್. ಈತನ ಪ್ರಭಾವ ಎಷ್ಟೆಂದರೆ ‘ಬಾಬ್ ಡಿಲಾನ್ ಮ್ಯೂಜಿಕ್’ ಮಾದರಿಯೊಂದು ರೂಪುಗೊಂಡಿದೆ. ಇದನ್ನು ಕಲಿಯುವ ಮತ್ತು ಹಾಡುವ ಶಿಷ್ಯಕೋಟಿ ಜಗತ್ತಿನಾದ್ಯಂತ ಹರಡಿದೆ. ಈತ ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್ ಈ ಬಾರಿ, ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶಿಷ್ಟ ಸಂಗೀತಗಾರ
ಬದಲಾಯಿಸಿ- ಸಾಮಾನ್ಯ ಕುಟುಂಬದ ಹಿನ್ನೆಲೆಯ ಡಿಲಾನ್, ಅಮೆರಿಕದ ಜನಪ್ರಿಯ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಸತತ ಆರು ದಶಕಗಳ ಕಾಲ ಇನ್ನಿಲ್ಲದ ಪ್ರಭಾವವನ್ನು ಬೀರಿದ ಏಕೈಕ ಸಂಗೀತಗಾರ. ಇವರ ‘ಬ್ಲೋವಿನ್ ಇನ್ ದ ವಿಂಡ್’ ಮತ್ತು ‘ದ ಟೈಮ್ಸ್ ದೆ ಆರ್ ಎ ಚೇಂಜಿನ್’ ಎನ್ನುವ ಹಾಡುಗಳು ಅಮೆರಿಕದ ನಾಗರಿಕ ಹಕ್ಕು ಮತ್ತು ಯುದ್ಧವಿರೋಧಿ ಚಳವಳಿಗಳ ರಾಷ್ಟ್ರಗೀತೆಗಳಂತಿವೆ. ಅವರ ನೂರಾರು ಹಾಡುಗಳು ಹೋರಾಟಕ್ಕೆ ಪ್ರೇರಣೆಯಾಗಿವೆ. ಅಮೆರಿಕದಂತಹ ಯುದ್ಧದಾಹದ ದೇಶದಲ್ಲಿದ್ದೂ ಇದೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವ ಅಚ್ಚರಿಯ ಕಾರಣಕ್ಕೂ ಇವರು ಜಾಗತಿಕ ಸಾಹಿತ್ಯ ವಲಯದಲ್ಲಿ ಚರ್ಚೆಯ ಕುತೂಹಲ ಹುಟ್ಟಿಸಿದ್ದಾರೆ. ನೊಬೆಲ್ ಪ್ರಶಸ್ತಿಯ ಮೂಲಕ ‘ಗೀತ ರಚನೆ’ ಮತ್ತು ‘ಜನತೆಯ ನುಡಿಗಟ್ಟಿನ ಹಾಡುಗಾರಿಕೆ’ಗೆ ಮೊತ್ತಮೊದಲು ಮನ್ನಣೆ ತಂದುಕೊಡುವ ಮೂಲಕ, ಜಗದ ಮೌಖಿಕ ಪರಂಪರೆಯ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.
- ಡಿಲಾನ್ ಅವರ ಸಂಗೀತದ ವಿಸ್ತರಣೆಯು ಅವರ ಕಲಾಕೃತಿಗಳಲ್ಲೂ ಮುಂದುವರಿದಿದೆ. ಅವರ ರೇಖೆ ಮತ್ತು ಚಿತ್ರಕಲೆಯನ್ನು ಒಳಗೊಂಡ ಆರು ಪುಸ್ತಕಗಳು ಪ್ರಕಟವಾಗಿವೆ. ಜಗತ್ತಿನ ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಅವರ ಕಲಾಕೃತಿಗಳಿವೆ. ಅವರ ಸಂಗೀತದಲ್ಲಿ ಅಡಕವಾದ ಭಗ್ನಪ್ರೇಮ, ಯುದ್ಧದ ನಿರರ್ಥಕತೆ, ಸ್ವಾರ್ಥ, ವಿಶ್ವಾಸದ್ರೋಹ, ವೇದನೆ, ಸಾವು, ನೈತಿಕ ಅಧಃಪತನ, ಪರಿಶುದ್ಧ ಪ್ರೇಮ ಮುಂತಾದವುಗಳನ್ನು ಗುರುತಿಸಲು ಈ ಕಲಾಕೃತಿಗಳು ನೆರವಾಗುತ್ತವೆ. ಸಂಗೀತದ ಲಯದೊಳಗೆ ಬೆರೆತ ಸಂವೇದನೆ ಅವರ ಕಲಾಕೃತಿಗಳಲ್ಲಿ ಚಿತ್ರರೂಪ ಪಡೆದಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.
- ಡಿಲಾನ್ ಅವರು ಸಂಯೋಜಿಸಿದ ಲಕ್ಷಾಂತರ ಆಲ್ಬಮ್‌ಗಳು ಜಗತ್ತಿನಾದ್ಯಂತ ಮಾರಾಟವಾಗಿವೆ. ಹೀಗೆ ಜನಸಾಮಾನ್ಯರ ಮನದಲ್ಲಿ ನೆಲೆಸಿರುವ ಡಿಲಾನ್ ‘ಪ್ರಶಾಂತ ಪರ್ವತವೊಂದರಲ್ಲಿ ವಿರಮಿಸುವಿಕೆಯೇ ನನ್ನ ಸಂಗೀತದ ಎಳೆ. ಸಂಗೀತದ ಆಳದಲ್ಲಿ ನನಗೊಂದು ಬೆಳಕು ಕಾಣುತ್ತದೆ, ಅದೇ ನನ್ನ ಧರ್ಮ’ ಎಂದು ವಿವರಿಸುತ್ತಾರೆ. ಅಮೆರಿಕದ ಸಂಗೀತ ತಜ್ಞರು ‘ಹಳ್ಳಿಗಾಡಿನ ಜನಪದ ಸಂಗೀತ ಮತ್ತು ಬ್ಲೂಸ್ ಮ್ಯೂಜಿಕ್ ಅನ್ನು ರಾಕ್ ಹಿನ್ನೆಲೆಯಲ್ಲಿ ಸಂಯೋಜಿಸುವುದು ಬಹುದೊಡ್ಡ ಸವಾಲು. ಇಂತಹ ಸಂಯೋಜನೆಯೇ ಡಿಲಾನ್ ಅವರ ಮಹತ್ವದ ಕೊಡುಗೆ. ಅದುವೇ ಆತನನ್ನು ಸರ್ವಶ್ರೇಷ್ಠ ಸಂಗೀತಗಾರನನ್ನಾಗಿಸಿದೆ’ ಎಂದು ಹೇಳುತ್ತಾರೆ. ಹೀಗೆ ಜನಸಾಮಾನ್ಯರ ನುಡಿಗಟ್ಟನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ದು ಅದರ ಬಗೆಗೆ ಕ್ಲಾಸಿಕಲ್ ಕವಿಗಳು ಮತ್ತು ಸಂಗೀತಗಾರರಿಗಿದ್ದ ತಾತ್ಸಾರದ ಮನಸ್ಥಿತಿಗೆ ಸೆಡ್ಡು ಹೊಡೆದದ್ದು ಡಿಲಾನ್ ಅವರ ಶಕ್ತಿಯಾಗಿದೆ.
ಒಬಾಮಾರಿಂದ ಆಮೇರಿಕಾದ ಪ್ರಶಸ್ತಿ
ಬದಲಾಯಿಸಿ- ‘ಟೈಮ್ಸ್’ ಪತ್ರಿಕೆ ಸಿದ್ಧಪಡಿಸಿದ ‘ಶತಮಾನದ ನೂರು ಶ್ರೇಷ್ಠ ವ್ಯಕ್ತಿಗಳ’ ಪಟ್ಟಿಯಲ್ಲಿ ಡಿಲಾನ್ ಅವರನ್ನೂ ಸೇರಿಸಿ ಒಂದು ಟಿಪ್ಪಣಿ ಬರೆದು ‘ಡಿಲಾನ್ ಮಾಸ್ಟರ್ ಪೊಯಟ್, ಸಾಮಾಜಿಕ ವಿಮರ್ಶೆಯ ತೀಕ್ಷ್ಣಮತಿ, ಪ್ರತಿಸಂಸ್ಕೃತಿಯ ಪ್ರೇರಕ ಶಕ್ತಿ’ ಎಂದು ಬಣ್ಣಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಅನ್ನು ಡಿಲಾನ್ ಅವರಿಗೆ ನೀಡುತ್ತಾ ‘ಈತನಿಗಿಂತ ದೊಡ್ಡ ಸಂಗೀತಗಾರ ಅಮೆರಿಕದ ಚರಿತ್ರೆಯಲ್ಲಿ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಲಿಂಗ್ ಸ್ಟೋನ್ ಎಂಬ ಸಂಸ್ಥೆ 2011ರಲ್ಲಿ ಮಾಡಿದ ‘ಸಾರ್ವಕಾಲಿಕ ನೂರು ಶ್ರೇಷ್ಠ ಕಲಾವಿದರ’ ಪಟ್ಟಿಯಲ್ಲಿ ಡಿಲಾನ್ ಎರಡನೆಯವರು. ‘ಲೈಕ್ ಎ ರೋಲಿಂಗ್ ಸ್ಟೋನ್’ ಎನ್ನುವ ಅವರ ಹಾಡು ‘ಎಲ್ಲಾ ಕಾಲದ ಸರ್ವಶ್ರೇಷ್ಠ ಗೀತೆ’ ಎನ್ನುವ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೆಲ್ಲಾ ಕಾರಣಗಳಿಂದಾಗಿ ಅಮೆರಿಕದ ಪ್ರಜ್ಞಾವಂತರು ಕಳೆದ 20 ವರ್ಷಗಳಿಂದ ಡಿಲಾನ್ ಅವರಿಗೆ ನೊಬೆಲ್ ಬರಬೇಕೆಂದು ‘ಸ್ವೀಡಿಷ್ ಅಕಾಡೆಮಿಗೆ’ ಸಾರ್ವಜನಿಕ ಒತ್ತಡ ತಂದಿದ್ದರು.[೫][೬]
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ Bob Dylan. The Rock and Roll Hall of Fame and Museum
- ↑ "Rolling Stone - The 100 Greatest Albums Of The 80s". Archived from the original on 2011-07-18. Retrieved 2016-10-24.
- ↑ Bob Dylan
- ↑ "ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್;23 Oct, 2016;ಅರುಣ್". Archived from the original on 2016-10-23. Retrieved 2016-10-24.
- ↑ "ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್". Archived from the original on 2016-10-23. Retrieved 2016-10-24.
- ↑ Bob Dylan Awarded Presidential Medal of Freedom