ಬಾಟಿ
ಬಾಟಿ ರಾಜಸ್ಥಾನದ ಬಹುತೇಕ ಪ್ರದೇಶಗಳಲ್ಲಿ,[೧] ಮದ್ಯಪ್ರದೇಶದ ಕೆಲವು ಭಾಗಗಳಲ್ಲಿ[೨]ಮತ್ತು ಗುಜರಾತ್ ರಾಜ್ಯದಲ್ಲಿ ತಯಾರಿಸಲಾದ ಗಟ್ಟಿಯಾದ, ಹುದುಗು ಬರಿಸದ ಬ್ರೆಡ್. ಇದು ಇದರ ದೀರ್ಘವಾದ ಬಡು ಅವಧಿ ಮತ್ತು ಅಧಿಕ ಪ್ರಮಾಣದ ಪೌಷ್ಟಿಕತೆಗಾಗಿ ಮಹತ್ವ ಪಡೆದಿದೆ.[೩] ಇದರ ತಯಾರಿಕೆಗೆ ಅತಿ ಕಡಿಮೆ ಪ್ರಮಾಣದಲ್ಲಿ ನೀರು ಬೇಕಾಗಿರುವುದರಿಂದ ಮರೂಭೂಮಿ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಬಾಟಿಯನ್ನು ಸಾಮಾನ್ಯವಾಗಿ ದಾಲ್‍ನೊಂದಿಗೆ ತಿನ್ನಲಾಗುತ್ತದೆ, ಹಾಗಾಗಿ ಈ ಸಂಯೋಜನೆಯನ್ನು ದಾಲ್ ಬಾಟಿ ಎಂದೂ ಕರೆಯಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಮಧ್ಯ ಪ್ರದೇಶದಲ್ಲಿ, ಇದನ್ನು ಸುಟ್ಟ ಬದನೆಕಾಯಿಯ ಖಾದ್ಯವಾದ ಭರ್ತಾದ ಜೊತೆಗೆ ಬಡಿಸಲಾಗುತ್ತದೆ. ಬಾಟಿ ಲಿಟ್ಟಿಗೆ ನಿಕಟವಾಗಿ ಸಂಬಂಧಿಸಿದೆ.
ಬಾಟಿ ಸಾದಾ ಆಗಿರಬಹುದು ಅಥವಾ ಈರುಳ್ಳಿ, ಬಟಾಣಿ ಮತ್ತು ಸಟ್ಟು ಸೇರಿದಂತೆ ವಿವಿಧ ಬಗೆಯ ಹೂರಣಗಳನ್ನು ಹೊಂದಿರಬಹುದು. ಬಾಫ಼ಲಾ ಹೆಚ್ಚು ಮೃದುವಾಗಿರುವ ಒಂದು ಬಗೆಯ ಬಾಟಿ ಆಗಿದೆ. ಬಾಫ಼ಲಾ ಮತ್ತು ಬಾಟಿಯನ್ನು ಯಾವಾಗಲೂ ಬಿಸಿ ದಾಲ್, ತುಪ್ಪ ಹಾಗೂ ಚಟ್ನಿಯೊಂದಿಗೆ ತಿನ್ನಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Rajasthani Cookbook by Tarla Dala, p. 102
- ↑ "7 Must Have Dishes From Madhya Pradesh You Just Cannot Miss". HolidayIQ (in ಇಂಗ್ಲಿಷ್). Archived from the original on 2018-10-18. Retrieved 2019-01-08.
- ↑ "About Dal Bati". ifood.tv (in ಇಂಗ್ಲಿಷ್). Retrieved 2019-01-08.