ಬಿ.ಎಸ್.ಎಫ್. ಜವಾನ್, ಬಸವರಾಜ ಯರಗಟ್ಟಿ

(ಬಸವರಾಜ್ ಇಂದ ಪುನರ್ನಿರ್ದೇಶಿತ)

ಭಾರತದ ಗಡಿ ಭದ್ರತಾ ಪಡೆಯ ಯೋಧ ಬಸವರಾಜ ಯರಗಟ್ಟಿ, ಕರ್ನಾಟಕದ ಗದಗ್ ಜಿಲ್ಲೆಯವರು. ಅವರು ೬ ವರ್ಷಗಳಿಂದ ಭದ್ರತಾ ಪಡೆಯ ಯೋಧರಾಗಿ ಉತ್ತರ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಂದೆ ತುಳಸಪ್ಪ ಮತ್ತು ತಾಯಿ ಗಿರಿಜಮ್ಮ ದಂಪತಿಗಳಿಗೆ ಒಬ್ಬನೇ ಮಗನಾಗಿದ್ದ ಬಸವರಾಜ್, ಕಲಘಟಗಿ ತಾಲ್ಲೂಕಿನ ಯಶೋದರವರನ್ನು ಲಗ್ನವಾಗಿದ್ದರು. ಜೂನ್ ೨೦೧೩ರಲ್ಲಿ ಉತ್ತರಾಖಂಡದಲ್ಲಿ ಅತಿಮಳೆಯಿಂದಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದ ಸಂತ್ರಸ್ತರನ್ನು ಉಳಿಸುವ ಕೆಲಸದಲ್ಲಿ ನಿರತಾಗಿದ್ದಾಗ ಹೆಲಿಕಾಪ್ಟರ್ ಅಪಘಾತವಾಗಿ ಬಸವರಾಜ್ ಸೇರಿದಂತೆ ಎಲ್ಲರೂ ಮೃತರಾದರು. []

ಚಿತ್ರ:03-basavaraj-big1.jpg
'ಬಸವರಾಜ ಯರಗಟ್ಟಿ'

ಅಂತ್ಯಕ್ರಿಯೆ

ಬದಲಾಯಿಸಿ

೨೦೧೩ ಜುಲೈ ೩ ಬುಧವಾರದಂದು ಬಸವರಾಜರ ಪಾರ್ಥಿವ ಶರೀರವನ್ನು ದೆಹಲಿಯಿಂದ ಮಧ್ಯಾಹ್ನ ೨ ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಅವರ ಸ್ವಗ್ರಾಮವಾದ ನರಗುಂದ ತಾಲ್ಲೂಕಿನ ಜಗಾಪುರಕ್ಕೆ ತರಲಾಯಿತು. ಜಿಲ್ಲಾ ಪೋಲಿಸ್ ವರಿಷ್ಟ ಅಧಿಕಾರಿ ಡಾ. ಶರಣಪ್ಪ ಹಾಗೂ ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ಯೋಧನ ಕುಟುಂಬದವರಿಗೆ ಬಸವರಾಜರ ಶವವನ್ನು ಹಸ್ತಾಂತರಿಸಿದರು. ತಾಲ್ಲೂಕಿನ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ಜರುಗಿತು.

ಪ್ರಾಣದ ಹಂಗು ತೊರೆದು ಜೀವ ರಕ್ಷಿಸುವ ಧೀರರಿಗೆ ಕೊಡುವ ಜೀವನ ರಕ್ಷಾ ಪದಕ ಸರಣಿಯ ಪ್ರಶಸ್ತಿಯನ್ನು ಜನವರಿ೨೫,೨೦೧೫ರಂದು ಘೋಷಿಸಲಾಯಿತು.[]

ಉಲ್ಲೇಖಗಳು

ಬದಲಾಯಿಸಿ

ಹೊರಕೊಂಡಿಗಳು

ಬದಲಾಯಿಸಿ

ಇವುಗಳನ್ನೂ ನೋಡಿ

ಬದಲಾಯಿಸಿ

ಡೆರಿಲ್ ಕ್ಯಾಸ್ಟಲಿನೊ