ಬಸಳೆ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
B. alba
Binomial name
Basella alba
Synonyms[]
  • Basella rubra L.
  • Basella oleracea Landw.
  • Basella lucida L.
  • Basella japonica Burm.f.
  • Basella cordifolia Lam.
  • Basella nigra Lour.
  • Basella crassifolia Salisb.
  • Basella volubilis Salisb.
  • Basella ramosa J.Jacq. ex Spreng.
  • Basella cananifolia Buch.-Ham. ex Wall.
  • Gandola nigra (Lour.) Raf.

ಬಸಳೆ (ಬ್ಯಾಸೆಲಾ ಆಲ್ಬಾ) ಬಸೆಲೇಸಿಯಿ (ಬ್ಯಾಸೆಲೇಸೀ) ಕುಟುಂಬದಲ್ಲಿನ ಒಂದು ತಿನ್ನಲರ್ಹ ಬಹುವಾರ್ಷಿಕ ಬಳ್ಳಿ (ಇಂಡಿಯನ್ ಸ್ಪಿನಿಚ್). ಇದು ಏಷ್ಯಾದ ಉಷ್ಣವಲಯ ಮತ್ತು ಆಫ್ರಿಕಾದಲ್ಲಿ ಕಾಣಸಿಗುತ್ತದೆ ಮತ್ತು ಇಲ್ಲಿ ಇದನ್ನು ಎಲೆ ತರಕಾರಿಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಸಳೆ ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ ಮತ್ತು ನ್ಯೂ ಗಿನಿಗೆ ಸ್ಥಳೀಯವಾಗಿದೆ.

ಬ್ಯಾಸೆಲ ರೂಬ್ರ ಇದರ ವೈಜ್ಞಾನಿಕ ಹೆಸರು. ಭಾರತಾದ್ಯಂತ ಇದನ್ನು ತರಕಾರಿಸಸ್ಯವಾಗಿ ಬೆಳೆಸಲಾಗುತ್ತದೆ. ಇದರಲ್ಲಿ ಎರಡು ಬಗೆಗಳುಂಟು: ಒಂದರ ಎಲೆ ಮತ್ತು ಕಾಂಡಗಳು ಕೆಂಪುಬಣ್ಣದವು. ಇನ್ನೊಂದರವು ಹಸುರು. ಮೊದಲನೆಯದನ್ನು ಬ್ಯಾ. ಕಾರ್ಡಿಫೋಲಿಯ ಎಂದೂ ಎರಡನೆಯದನ್ನು ಬ್ಯಾ. ಆಲ್ಬ ಎಂದೂ ಕರೆಯುವುದಿದೆಯಾದರೂ ಇವೆರಡೂ ರೂಬ್ರ ಪ್ರಭೇದದ ಎರಡು ಬಗೆಗಳು ಎಂಬುದೇ ಬಹುಜನರ ಅಭಿಪ್ರಾಯ.

ಬಸಳೆಸೊಪ್ಪಿನಗಿಡದ ಎಲೆಗಳು ಮತ್ತು ಎಳೆಯಕಾಂಡಗಳು ಮೃದು ಹಾಗು ರಸವತ್ತಾಗಿವೆ. ಎಲೆಗಳ ಮೇಲಾಗಲೀ ಕಾಂಡದ ಮೇಲಾಗಲೀ ಯಾವುದೇ ತೆರನ ರೋಮಗಳಿಲ್ಲವಾದ್ದರಿಂದ ಅವು ನುಣುಪಾಗಿರುವುವು. ಎಲೆ ಅಂಡಾಕಾರದವು. 15 ಸೆಂ ಮೀ ಉದ್ದ 9 ಸೆಂ ಮೀ ಅಗಲ.

ಪೌಷ್ಟಿಕಾಂಶಗಳು

ಬದಲಾಯಿಸಿ

ಬಸಳೆಯು ಪೌಷ್ಟಿಕಾಂಶಭರಿತವಾಗಿದೆ. ಇದರ ಎಳೆಯ ಕಾಂಡ ಮತ್ತು ಎಲೆಗಳನ್ನು ಸೊಪ್ಪು ತರಕಾರಿಯಂತೆ ಹಸಿಯಾಗಿಯೊ ಬೇಯಿಸಿಯೊ ಉಪಯೋಗಿಸುವುದಿದೆ. ಇದರಲ್ಲಿ ಪ್ರತಿಯೊಂದು 100 ಗ್ರಾಮಿಗೆ 1.2% ಪ್ರೋಟೀನ್, 0.15% ಕ್ಯಾಲ್ಸಿಯಮ್, 1.4 ಮಿಲಿ ಗ್ರಾಮ್ ಕಬ್ಬಿಣ, 3250 IU ವಿಟಮಿನ್ A ಇವೆ. ಕೆಂಪು ಎಲೆಯ ಬಗೆಯಿಂದ ಕೆಂಪು ಬಣ್ಣವನ್ನು ಹೊರತೆಗೆದು ಆಹಾರಪದಾರ್ಥಗಳಿಗೆ ಬಣ್ಣಕಟ್ಟಲು ಉಪಯೋಗಿಸುವುದುಂಟು. ಎಲೆಗಳನ್ನು ಕುಟ್ಟಿ ಬೆಚ್ಚಾರವಾಗಿ (ಪೋಲ್ಟೀಸ್) ಬಳಸುತ್ತಾರೆ. ಎಲೆಗಳ ರಸ ಮಲಬದ್ಧತೆ ಮತ್ತು ಪಿತ್ತಗಂದೆಗಳಿಗೆ ಒಳ್ಳೆಯ ಪರಿಹಾರಕೊಡುತ್ತದೆ ಎನ್ನಲಾಗಿದೆ.

ಇದರಲ್ಲಿರುವ ಹಲವಾರು ಪೌಷ್ಟಿಕಾಂಶಗಳ ತಖ್ತೆ ಬದಿಯಲ್ಲಿದೆ.

ಬಸಳೆ, (basella), raw
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz)
ಆಹಾರ ಚೈತನ್ಯ 79 kJ (19 kcal)
ಶರ್ಕರ ಪಿಷ್ಟ 3.4 g
ಕೊಬ್ಬು 0.3 g
ಪ್ರೋಟೀನ್(ಪೋಷಕಾಂಶ) 1.8 g
Vitamin A equiv. 400 μg (50%)
Thiamine (vit. B1) 0.05 mg (4%)
Riboflavin (vit. B2) 0.155 mg (13%)
Niacin (vit. B3) 0.5 mg (3%)
Vitamin B6 0.24 mg (18%)
Folate (vit. B9) 140 μg (35%)
Vitamin C 102 mg (123%)
ಕ್ಯಾಲ್ಸಿಯಂ 109 mg (11%)
ಕಬ್ಬಿಣ ಸತ್ವ 1.2 mg (9%)
ಮೆಗ್ನೇಸಿಯಂ 65 mg (18%)
ಮ್ಯಾಂಗನೀಸ್ 0.735 mg (35%)
ರಂಜಕ 52 mg (7%)
ಪೊಟಾಸಿಯಂ 510 mg (11%)
ಸತು 0.43 mg (5%)
Link to USDA Database entry
Percentages are roughly approximated
using US recommendations for adults.
Source: USDA Nutrient Database

ಆರೋಗ್ಯ ಪ್ರಯೋಜನಗಳು

ಬದಲಾಯಿಸಿ

ಹಳ್ಳಿ ಮನೆಯ ಹಿತ್ತಿಲಲ್ಲಿ ಸಾಮಾನ್ಯವಾಗಿ ಬಸಳೆ ಸೊಪ್ಪಿನ ಬಳ್ಳಿ ಕಾಣಸಿಗುತ್ತದೆ. ಬಸಳೆ ಸೊಪ್ಪು (Spinach leaves) ಸಸ್ಯಹಾರ ಗಳ ಬಗ್ಗೆ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಇದು ಕೇವಲ ಬಾಯಿಗೆ ರುಚಿ ಮಾತ್ರ ಕೊಡುವುದಲ್ಲ. ಇದರಲ್ಲಿ ಅಡಕವಾಗಿರುವ ಕಬ್ಬಿಣದಂಶ ಕ್ಯಾಲ್ಸಿಯಂ ಪ್ರೋಟಿನ್ (Protein) ಮತ್ತು ವಿಟಮಿನ್ ಎ ವಿಟಮಿನ್ ಸಿ (Vitamin C) ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಬಸಳೆಸೊಪ್ಪಿನ ಅಡಕವಾಗಿರುವ ಅನೇಕ ಗುಣಗಳು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಅಡಕವಾಗಿರುವ ಮೆಗ್ನೀಷಿಯಂ (Magnesium) ಅಂಶವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಕೂಡ ಅಧ್ಯಯನ ಹೇಳುತ್ತದೆ.

ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ

ಬದಲಾಯಿಸಿ

ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ ಅಧಿಕವಾಗಿದೆ. (100 ಗ್ರಾಂನಲ್ಲಿ ಸರಿಸುಮಾರು 8,000 ಘಟಕಗಳು) ಇದರಲ್ಲಿ ಉತ್ತಮ ಪ್ರಮಾಣದ ಆ್ಯಂಟಿಆಕ್ಸಿಡೆಂಟ್‌ಗಳಿವೆ, ವಿಶೇಷವಾಗಿ ಬೀಟಾ ಕ್ಯಾರೋಟಿನ್ ಮತ್ತು ಲುಟೀನ್, ನೈಸರ್ಗಿಕವಾಗಿ ಸಿಗುವ ರಾಸಾಯನಿಕಗಳು ನಿಮ್ಮ ಜೀವಕೋಶಗಳನ್ನು ವಯಸ್ಸಾಗದಂತೆ ನೋಡಿಕೊಳ್ಳುತ್ತವೆ. ಇದರ ಜೊತೆಗೆ ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ.

ಮೂಳೆಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ

ಬದಲಾಯಿಸಿ

ಬಸಳೆ ಸೊಪ್ಪಿನ ಅಡಕವಾಗಿರುವ ವಿಟಮಿನ್ ಕೆ ಮೂಳೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದು ದೇಹದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಮತ್ತು ಬಸಳೆಸೊಪ್ಪು ಪ್ರತಿ 250 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಆದ್ದರಿಂದ ಈ ಕ್ಯಾಲ್ಸಿಯಂಗಳು ನಿಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಹೆಚ್ಚು ಅಗತ್ಯವಾಗಿರುತ್ತದೆ. ಮೂಳೆಗಳ ವೃದ್ಧಿಗಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಬಸಳೆ ಸೊಪ್ಪನ್ನು ಸೇವಿಸಬಹುದು ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುವ ಕೆಲಸವನ್ನು ಕೂಡ ಮಾಡುತ್ತದೆ.[]

ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣ ಹೊಂದಿದೆ

ಬದಲಾಯಿಸಿ

ಚರ್ಮ ದೇಹದ ಅತಿ ಸೂಕ್ಷ್ಮವಾದ ಭಾಗವಾಗಿದೆ. ಸಾಮಾನ್ಯವಾಗಿ ಎಲ್ಲರೂ ಚರ್ಮದ ಕಾಂತಿಗಾಗಿ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ನಿಮಗೆ ಹೊಳೆಯುವ ಚರ್ಮವನ್ನು ಪಡೆಯಬೇಕು ಎಂದರೆ ನೀವು ಆಗಾಗ ಬಸಳೆ ಸೊಪ್ಪನ್ನು ಸೇವಿಸಬೇಕು. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಅಗತ್ಯವಾದ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ಬಸಳೆಸೊಪ್ಪು ಒಳಗೊಂಡಿರುವ ಕೆಲವು ಪ್ರಮುಖ ಪೋಷಕಾಂಶಗಳು ವಿಟಮಿನ್ ಎ, ವಿಟಮಿನ್ ಸಿ ವಿಟಮಿನ್ ಹಾಗೂ ವಿಟಮಿನ್ ಕೆ ಇವೆಲ್ಲವೂ ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. []

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Kew World Checklist of Selected Plant Families, Basella alba
  2. "Health Tips: ಬಸಳೆ ಸೊಪ್ಪಿನಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳು ಇವೆ, ಇದರ ಸೇವನೆ ಆರೋಗ್ಯಕ್ಕೆ ಲಾಭ". News18 ಕನ್ನಡ. 9 June 2022. Retrieved 30 August 2024.
  3. "ಬಸಳೆ ಸೊಪ್ಪಿನ, ಪ್ರಯೋಜನಗಳು ಗೊತ್ತಾದ್ರೆ, ದಿನಾ ತಿನ್ನುವಿರಿ!". Vijay Karnataka. Retrieved 30 August 2024.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬಸಳೆ&oldid=1243121" ಇಂದ ಪಡೆಯಲ್ಪಟ್ಟಿದೆ