ಹಲವಷ್ಟು ನಿಗೂಢತೆಗಳನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವ ಬರ್ಮುಡಾ ತ್ರಿಕೋನ (ಬರ್ಮುಡಾ ಟ್ರಯಾಂಗಲ್) ಸೈತಾನನ ತ್ರಿಕೋನ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಅಂಟ್ಲಾಂಟಿಕ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ ಬರ್ಮುಡಾ ತ್ರಿಕೋನ ವೈಜ್ಞಾನಿಕತೆಗೆ ಸವಾಲಾಗಿದೆ. ಸೈತಾನನ ತ್ರಿಕೋನ ಎಂದು ಕುಖ್ಯಾತವಾಗಿರುವ ಈ ಬರ್ಮುಡಾ ತ್ರಿಕೋನ ದ ಮೇಲೆ ಹಾದು ಹೋಗುವ ವಿಮಾನಗಳು, ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತದೆ. ಸುಸಜ್ಜಿತ ಯಂತ್ರಗಳು, ಪರಿಣಿತಿ ಪಡೆದ ಪೈಲೆಟ್ ಮತ್ತು ನಾವಿಕರಿದ್ದರೂ, ಯಾವುದೇ ನೈಸರ್ಗಿಕ ವಿಕೋಪಗಳಿಲ್ಲದೆ ವಿಮಾನಗಳು, ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುವುದು ವೈಜ್ಞಾನಿಕ ಸಂಶೋಧನೆಗಳಿಗೆ ಸವಾಲಾಗಿ ಪರಿಣಮಿಸಿದೆ. ಯಾವುದೇ ಕ್ಲಿಷ್ಟಕರ ಪ್ರಶ್ನೆಗೂ ವೈಜ್ಞಾನಿಕವಾಗಿ ಉತ್ತರ ನೀಡುವ ಅದೆಷ್ಟೊ ವಿಜ್ಞಾನಿಗಳು ತಲೆಕೆಡಿಸಿಕೊಂಡರೂ ಈ ನಿಗೂಢ ಕಣ್ಮರೆಗೆ ಕಾರಣ ತಿಳಿಯುತ್ತಿಲ್ಲ. ಅಲ್ಲಿನ ಸ್ಥಳಿಯ ಪತ್ರಿಕೆಗಳು ಈ ಘಟನೆಯನ್ನು 'ಅಸ್ವಾಭಾವಿಕ ಮತ್ತು ಭೌತಶಾಸ್ತ್ರದ ನಿಯಮಗಳನ್ನು ಮೀರಿಸುವ ಶಕ್ತಿ ಈ ಬರ್ಮುಡಾ ತ್ರಿಕೋನದಲ್ಲಿದೆ' ಎಂದು ಹೇಳಿವೆ.

ಹಡಗು ಮತ್ತು ವಿಮಾನಗಳ ನಿಗೂಢ ಕಣ್ಮರೆ: ಸಂಪಾದಿಸಿ

1962 ಏಪ್ರೀಲ್ನಲ್ಲಿ ಲಿಜಿಯಾನ್ ಮ್ಯಾಗ್ಜಿನ್ ಫೈಟ್ 19ರ ನಾಯಕ ನಾವು ಬಿಳಿಯಾದ ನೀರಿನೊಳಗೆ ಬೀಳುತ್ತಿದ್ದೇವೆ. ನಾವು ಎಲ್ಲಿದ್ದೇವೆಂದು ತಿಳಿಯುತ್ತಿಲ್ಲ, ನೀರೂ ಹಸಿರಾಗಿದೆ ಎಂದು ಹೇಳಿರುವುದಾಗಿ ವರದಿ ಮಾಡಿತ್ತು. ಇದೊಂದು ನಿಸರ್ಗಾತೀತ ಶಕ್ತಿ ಎಂದು ಹಲವರು ವ್ಯಾಖ್ಯಾನಿಸಿದ್ದರಾದರೂ ಇದರ ಸ್ಪಷ್ಟ ಕಾರಣಗಳು ಇನ್ನೂ ಕಂಡುಹಿಡಿಯಲು ಸಧ್ಯವಾಗಿಲ್ಲ. ಕೆಲವು ಸಂಶೋಧಕರು ಹೇಳುವ ಪ್ರಕಾರ ಬರ್ಮುಡಾ ತ್ರಿಕೋನದಲ್ಲಿ ಕಾಣೆಯಾದ ಹಡಗು ಮತ್ತು ವಿಮಾನಗಳು ಸಂಖ್ಯೆಯನ್ನು ಇತರ ಸಮುದ್ರ ಭಾಗಗಳಿಗೆ ಹೋಲಿಸಿದರೆ ಇದು ದೊಡ್ಡದೇನಲ್ಲ ಮತ್ತು ಕಾಣೆಯಾದ ಹಡಗು ಮತ್ತು ವಿಮಾನಗಳಲ್ಲಿ ಕೆಲವೊಂದು ಹಿಂದಿರುಗಿ ಬಂದಿವೆ ಎಂದು ಹೇಳಲಾಗುತಿದ್ದರೂ ಇದಕ್ಕೂ ಸ್ಪಷ್ಟವಾದ ವರದಿಗಳಿಲ್ಲ. ಯುದ್ಧದ ನೆಪದಲ್ಲಿ ಹಡಗು ಮತ್ತು ವಿಮಾನಗಳನ್ನು ನಾಶಗೊಳಿಸಿರಬಹುದು, ಕಡಲ್ಗಳ್ಳತನಕ್ಕೆ ಸಿಲುಕಿರಬಹುದು, ಸುಂಟರಗಾಳಿ ಅಪ್ಪಳಿಸಿರಬಹುದು, ರಾಕ್ಷಸ ಅಲೆಗಳ ಅಬ್ಬರಗಳು ಈ ನಿಗೂಢ ಕಣ್ಮರೆಗೆ ಕಾರಣವೆನ್ನಲಾಗುತ್ತಿದ್ದರೂ ಇದಕ್ಕೂ ಕೂಡ ಸ್ಪಷ್ಟವಾದ ಉತ್ತರ ಯಾರಿಂದಲೂ ದೊರಕುತ್ತಿಲ್ಲ. 1945 ಡಿಸೆಂಬರ್ 5ರಂದು ಫ್ಲೈಟ್ 19 ಟಿ.ಬಿ.ಎಮ್. ಎವೆಂಜರ್ ಬಾಂಬರ್ ವಿಮಾನಗಳು ತರಬೇತಿ ನಿರತವಾಗಿದ್ದ ಸಂದರ್ಭ ಧಿಡೀರ್ ಕಣ್ಮರೆಯಾಗಿತ್ತು.ಈ ವಿಮಾನಗಳನ್ನು ಹುಡುಕಲೆಂದು ಸಾಕಷ್ಟು ತರಬೇತಿ ಪಡೆದಿದ್ದ ಪೈಲೆಟ್ಗಳನ್ನು ಹೊಂದಿದ್ದ ವಾಯುಸೇನಾ ವಿಮಾನ ಫ್ಲೈಟ್ 19ನ್ನು ಕಳುಹಿಸಲಾಗಿತ್ತು. ಈ ವಿಮಾನವು ಹೊರಟು ಕೆಲ ಸಮಯಗಳಲ್ಲೆ ಅದೂ ಕೂಡ ನಾಪತ್ತೆಯಾಗಿತ್ತು. 282ಟನ್ ತೂಕದ ಮೇರಿ ಸೆಲೆಟ್ ಹಡಗು ಕೂಡ ಬರ್ಮುಡಾ ತ್ರಿಕೋನದಲ್ಲಿ ಕಣ್ಮರೆಯಾಗಿತ್ತು. 1881ರಲ್ಲಿ ನ್ಯೂಯಾರ್ಕ್ ಕಡೆ ತೆರಳುತ್ತಿದ್ದ ದಿ ಎಲೆನ್ ಆಸ್ಟಿನ್ ಹಡಗಿಗೆ ಬರ್ಮುಡಾ ತ್ರಿಕೋನದ ವ್ಯಾಪ್ತಿಯಲ್ಲಿ ಸಿಬ್ಬಂದಿಗಳಿಲ್ಲದೆ ಹಡಗೊಂದು ತೇಲಾಡುತ್ತಿರುವುದು ಕಾಣಿಸಿತ್ತು. ಮತ್ತೆ ಮರೆಯಾಗುತ್ತಿದ್ದ ಖಾಲಿ ಹಡಗು ಮತ್ತೆ ಪ್ರತ್ಯಕ್ಷಗೊಳ್ಳುತ್ತಿತ್ತು. ಕೂಡಲೆ ಪರಿಣಿತಿ ಹೊಂದಿದ ಸಿಬ್ಬಂದಿಗಳನ್ನು ಮತ್ತು ನಾವಿಕರನ್ನು ಆ ಹಡಗಿಗೆ ಕಳುಹಿಸಲಾಯಿತು. ಕೆಲ ಸಮಯಗಳಲ್ಲೆ ಸಿಬ್ಬಂದಿ ಮತ್ತು ನಾವಿಕರೊಂದಿಗೆ ಮತ್ತೆ ಕಣ್ಮರೆಯಾಗಿದ್ದ ಹಡಗು ಮತ್ತೆಂದು ಕಾಣಿಸಲೇ ಇಲ್ಲ. 1918ರಲ್ಲಿ 309 ಜನ ಪ್ರಯಾಣಿಕರನ್ನು ಕರೆದೊಯ್ಯತ್ತಿದ್ದ ವಿ.ಎಸ್.ಎಸ್. ಸೈಕ್ಲೋಪ್ಲ್ ಹಡಗು ಕೂಡ ಇದೇ ರೀತಿ ನಿಗೂಢವಾಗಿ ಪ್ರಯಾಣಿಕರೊಂದಿಗೆ ಕಣ್ಮರೆಯಾಗಿತ್ತು. ಅಮೇರಿಕಾ ಸಂಯುಕ್ತ ಸಂಸ್ಥಾನ]ದ ಉಪರಾಷ್ಟ್ರಪತಿ ಅರಾನ್ ಬರ್ ಅವರ ಮಗಳು ಥಿಯೊಡೋಸಿಯ ಬರ್ ಅಟ್ಸ ಟನ್, ದಿ ಪೆಟ್ರಿಯಾಟ್ ಹಡಗಿನೊಂದಿಗೆ 1812 ಡಿಸೆಂಬರ್ 30ರಂದು ಬರ್ಮುಡಾ ತ್ರಿಕೋನದಲ್ಲಿ ನಿಗೂಢವಾಗಿಯೆ ಕಣ್ಮರೆಯಾಗಿದ್ದರು. 1902ರಲ್ಲಿ ಎಸ್.ವಿ.ಸ್ಟ್ರೇ ಮೀನುಗಾರಿಕ ಹಡಗಿನಲ್ಲಿ ಏಕವ್ಯಕ್ತಿಸಾಗರ ಪರ್ಯಟನೆಗೆಂದು ತೆರಳಿದವರು ಹಿಂದಿರುಗಲೇ ಇಲ್ಲ. 1948 ಡಿಸೆಂಬರ್ 28ರಂದು ಡೇಗ್ಲೆಸ್ ಡಿ.ಸಿ.-3 ವಿಮಾನವು 32ಜನ ಪ್ರಯಾಣಿಕರೊಂದಿಗೆ ಬರ್ಮುಡಾ ತ್ರಿಕೋನದಲ್ಲಿ ಕಣ್ಮರೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. 1948 ಜನವರಿ 30ರಲ್ಲಿ ಸ್ಟಾರ್ ಟೈಗರ್ ಹಾಗೂ 1949 ಜನವರಿ 17ರಂದು 'ಸ್ಟಾರ್ ಏರಿಯಲ್$ ಕೂಡ ಹೀಗೆಯೆ ನಿಗೂಢವಾಗಿ ನಾಪತ್ತೆಯಾಗಿತ್ತು. 1963ಫೆಬ್ರವರಿ 4ರಂದು ಎಸ್.ಎಸ್. ಮೆರೈನ್ ಸಲ್ಫರ್ ಕ್ಲೀನ್ ಎಂಬ ಹಡಗು ಕೂಡ 39 ಜನರೊಂದಿಗೆ ಬರ್ಮುಡಾ ತ್ರಿಕೋನದಲ್ಲಿ ರಹಸ್ಯವಾಗಿಯೆ ಕಾಣೆಯಾಗಿತ್ತು. ಇದಷ್ಟೆ ಅಲ್ಲದೆ 1925 ಏಪ್ರಿಲ್ 21ರಂದು 'ರಾಯ್ ಪುಕು ಮಾರ್ ಜಪಾನ್ ಯುದ್ಧ ಹಡಗು ಎಲ್ಲ ಯೋಧರೊಂದಿಗೆ ಕಣ್ಮರೆಯಾದರೆ, 1964 ಜೂನ್ 7ರಂದು ಕ್ಯಾರೊಲಿನ್ ಕ್ಯಾಸ್ಕಿಯೋ ವಿಮಾನ ಒಬ್ಬ ಪ್ರಯಾಣಿಕನ ಜೊತೆ ಕಣ್ಮರೆಯಾಗಿತ್ತು. ಇದರೊಂದಿಗೆ ವಿಹಾರದ ಹಾಯಿದೊಣಿ ಕೂಡ ಬರ್ಮುಡಾ ತ್ರಿಕೋನದಲ್ಲಿ ಲೀನವಾಗಿತ್ತು. ಇಷ್ಟೆಲ್ಲ ಘಟನೆಗಳು ನಡೆದಿದರೂ ಬರ್ಮುಡಾ ತ್ರಿಕೋನ ಮಾತ್ರ ತನ್ನಲ್ಲಿನ ನಿಗೂಢತೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ವಿಜ್ಞಾನಿಗಳಿಗೆ, ಸಂಶೋಧಕರಿಗೆ ತಲೆನೋವಾಗಿ ಕಾಡುತ್ತಿದೆ.

ಬರ್ಮುಡಾ ತ್ರಿಕೋಣ , ಇದನ್ನು ಸೈತಾನನ ತ್ರಿಕೋಣ ಎಂತಲೂ ಕರೆಯಲಾಗುತ್ತದೆ, ಉತ್ತರ ಅಟ್ಲಾಂಟಿಕ್‌ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಕಂಡು ಬರುತ್ತದೆ. ಈ ಭಾಗದಲ್ಲಿ ಹಲವು ವಿಮಾನಗಳು, ಹಡಗುಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ನಿಗೂಢವಾಗಿ ಕಣ್ಮರೆಯಾಗಿವೆ ಎಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಇವು ಕಣ್ಮರೆಯಾಗುವುದಕ್ಕೆ ಯಂತ್ರಗಳ ದೋಷ, ಕಡಲ್ಗಳ್ಳತನ, ಯಂತ್ರ ನಡೆಸುವವರ ತಪ್ಪುಗಳು ಅಥವಾ ನೈಸರ್ಗಿಕ ಪ್ರಕೋಪಗಳು ಕಾರಣ ಎಂದು ಹೇಳಲಾಗುವುದಿಲ್ಲ.

ಜನಪ್ರಿಯ ಸಂಸ್ಕೃತಿಯೊಂದು ಈ ನಿಗೂಢ ಕಣ್ಮರೆಯನ್ನು ಅಸ್ವಾಭಾವಿಕ, ಭೌತಶಾಸ್ತ್ರದ ನಿಯಮಗಳನ್ನು ಮೀರಿಸುವ ಅಥವಾ ಹೊರಪ್ರಪಂಚದ ಶಕ್ತಿಗಳು ನಡೆಸುವ ಕಾರ್ಯ ಎಂದು ಹೇಳುತ್ತದೆ.[೧]

ಒಂದು ಸತ್ವಶಾಲಿಯಾದ ದಾಖಲೆಗಳು ಇಲ್ಲಿ ನಡೆದ ನಿಗೂಢ ಘಟನೆಗಳನ್ನು ಈ ಹಿಂದೆ ಬರೆದಿರುವ ಲೇಖಕರು ಅತಾರ್ಕಿಕವಾಗಿ ಬರೆದಿದ್ದಾರೆ ಎಂದು ಆರೋಪಿಸುತ್ತವೆ. ಅಲ್ಲದೇ ಹಲವಾರು ಸಂಶೋಧಕರು ಹಾಗೂ ಅಧಿಕಾರಿಗಳು ಹೇಳುವ ಪ್ರಕಾರ ಇಲ್ಲಿ ನಡೆಯುತ್ತಿರುವ ಕಣ್ಮರೆಯ ರೀತಿ ಮತ್ತು ಘಟನೆಗಳು ಜಗತ್ತಿನ ಬೇರೆಯ ಸಾಗರ ಪ್ರದೇಶದಲ್ಲಿ ನಡೆಯುವ ಅವಘಡಗಳಿಗೆ ಹೋಲಿಸಿದರೆ ಸಮನಾಗಿವೆ ಎಂದು ಹೇಳುತ್ತಾರೆ.[೨][೩][೪]

ತ್ರಿಕೋಣದ ಪ್ರದೇಶಸಂಪಾದಿಸಿ

thumb|ತ್ರಿಕೋಣದ ಸ್ಥಳವು ಲೇಖಕರಿಂದ ಲೇಖಕರಿಗೆ ಬದಲಾಗುತ್ತದೆ

ಈ ತ್ರಿಕೋಣದ ಗಡಿ ಪ್ರದೇಶವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ, ಬಹಾಮಾ ಮತ್ತು ಸಂಪೂರ್ಣ ಕೆರಿಬಿಯನ್ ದ್ವೀಪ ಮತ್ತು ಪೂರ್ವ ಅಟ್ಲಾಂಟಿಕ್‌ನಿಂದ ಅಜೋರ್ಸ್‌ ಮತ್ತು ಗಲ್ಫ್‌ ಆಫ್‌ ಮೆಕ್ಸಿಕೋದ ಇತರೆ ಪ್ರದೇಶಗಳು ಒಳಗೊಳ್ಳುತ್ತವೆ. ಅತಿ ಹೆಚ್ಚು ಕಡೆ ಉಲ್ಲೇಖಿತವಾಗಿರುವ ಹಾಗೂ ಹೆಚ್ಚು ಚಾಲ್ತಿಯಲ್ಲಿರುವಂತೆ ಅಟ್ಲಾಂಟಿಕ್ ತೀರದ ಮಿಯಾಮಿ, ಸಾನ್‌ಜುವಾನ್, ಪೊರ್ಟೊರಿಕೊ; ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪವಾಗಿರುವ ಬರ್ಮುಡಾ ಪ್ರದೇಶಗಳಲ್ಲಿ ಈ ವಿಸ್ಮಯ ತ್ರಿಕೋಣದ ವ್ಯಾಪ್ತಿ ಇದ್ದು, ದಕ್ಷಿಣ ಗಡಿಯ ಸುತ್ತಮುತ್ತ ಹಾಗೂ ಬಹಾಮಾ, ಫ್ಲೋರಿಡಾ ಜಲಸಂಧಿಗಳಲ್ಲಿ ಹೆಚ್ಚು ಅವಘಡಗಳು ಸಂಭವಿಸಿವೆ ಎಂದು ಹೇಳಲಾಗಿದೆ.

ಈ ಸ್ಥಳವು ಪ್ರತಿದಿನ ಅತಿಹೆಚ್ಚು ಹಡಗುಗಳು ಸಂಚರಿಸುವ ಮಾರ್ಗವಾಗಿದೆ. ಪ್ರತಿದಿನ ಅಮೇರಿಕಾ, ಯುರೋಪ್ ಮತ್ತು ಕೆರಿಬಿಯನ್ ದ್ವೀಪಗಳ ಬಂದರುಗಳಿಗೆ ಈ ಮಾರ್ಗವಾಗಿ ಹಡಗುಗಳು ಸಂಚರಿಸುತ್ತವೆ. ಅನೇಕ ಪ್ರಯಾಣಿಕ ಹಡಗುಗಳು ಹಾಗೂ ಪ್ರವಾಸಿ ಹಡಗುಗಳೂ ಕೂಡ ಇಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಹೆಯಲ್ಲಿ ಫ್ಲೋರಿಡಾ ಮತ್ತು ಇಲ್ಲಿಯ ಸುತ್ತಮುತ್ತಲಿನ ದ್ವೀಪಗಳ ನಡುವೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತವೆ. ಉತ್ತರದ ಕಡೆಯಿಂದ ಫ್ಲೊರಿಡಾ, ಕೆರಿಬಿಯನ್ ಮತ್ತು ದಕ್ಷಿಣ ಅಮೇರಿಕಾದ ಕಡೆಗೆ ಪ್ರತಿನಿತ್ಯ ವಾಣಿಜ್ಯ ಮತ್ತು ಖಾಸಗಿ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳವನ್ನು ಹಾಯ್ದು ಹಾರಾಟ ನಡೆಸುತ್ತವೆ.

ಇತಿಹಾಸಸಂಪಾದಿಸಿ

ಮೂಲಗಳುಸಂಪಾದಿಸಿ

ಬರ್ಮುಡಾ ಪ್ರದೇಶದ ಅಪರೂಪದ ಆದೃಶ್ಯಗಳ ಬಗೆಗಿನ ಅತ್ಯಂತ ಆರಂಭದ ದೋಷಾರೋಪಣೆ 1950 ಸೆಪ್ಟೆಂಬರ್ 16 ರಲ್ಲಿ ಇ.ವಿ. ಡಬ್ಲೂ ಜೋನ್ಸ್‌ರವರ ಅಸೋಸಿಯೇಟೆಡ್ ಪ್ರೆಸ್‌ನಲ್ಲಿ ಬಂದ ಲೇಖನದ ಮೂಲಕ ಬೆಳಕಿಗೆ ಬಂದಿತು.[೫]ಎರಡು ವರ್ಷಗಳ ನಂತರ, ಫೇಟ್ ನಿಯತಕಾಲಿಕೆಯು, ತರಬೇತಿ ಉದ್ದಿಷ್ಟಕಾರ್ಯದ ಮೇಲೆ ಹೊರಟಿದ್ದ ಐದು ಯು.ಎಸ್ ನೌಕಾದಳ ಟಿಬಿಎಮ್ ಆ‍ಯ್‌ವೆಂಜರ್ ಬಾಂಬರ್‌ಗಳ ಸಮೂಹವಾದ ಫ್ಲೈಟ್ 19 ಒಳಗೊಂಡಂತೆ ಕಳೆದು ಹೋದ ಹಲವಾರು ವಿಮಾನಗಳು ಮತ್ತು ಹಡಗುಗಳ ವಿಷಯದ ಕುರಿತ ಜಾರ್ಜ್ ಎಕ್ಸ್. ಸ್ಯಾಂಡ್ ಅವರ ಚಿಕ್ಕ ಲೇಖನವಾದ "ಸೀ ಮಿಸ್ಟರಿ ಅಟ್ ಅವರ್ ಬ್ಯಾಕ್ ಡೋರ್"[೬] ಅನ್ನು ಪ್ರಕಟಿಸಿತು. ಈಗ ಪರಿಚಯವಿರುವ ನಷ್ಟ ಸಂಭವಿಸಿದ್ದ ತ್ರಿಕೋಣ ಪ್ರದೇಶವನ್ನು ಮೊಟ್ಟ ಮೊದಲು ಮಂಡಿಸಿದ್ದು ಸ್ಯಾಂಡ್ ಅವರ ಲೇಖನ. ಫ್ಲೈಟ್ 19 ರ ಕುರಿತಾದ ಘಟನೆಯೊಂದೇ ಏಪ್ರಿಲ್ 1962ರ ಅಮೇರಿಕನ್ ಲಿಜಿಯಾನ್ ಮ್ಯಾಗ್‌ಜಿನ್ ಸಂಚಿಕೆಯಲ್ಲಿ ಪ್ರಕಟಿಸಲ್ಪಟ್ಟಿತು.[೭] ವಿಮಾನದ ನಾಯಕನು "ನಾವು ಬಿಳಿಯಾದ ನೀರಿನೊಳಗೆ ಬೀಳುತ್ತಿದ್ದೇವೆ, ಏನೂ ಸರಿಯಿಲ್ಲ ಎಂದು ಎನಿಸುತ್ತಿದೆ. ನಾವು ಎಲ್ಲಿದ್ದೇವೆ ಎಂದು ನಮಗೆ ತಿಳಿಯುತ್ತಿಲ್ಲ, ನೀರು ಹಸಿರಾಗಿದೆ ಎಲ್ಲೂ ಬಿಳಿಯ ಛಾಯೆ ಕಾಣುತ್ತಿಲ್ಲ." ಎಂದು ಹೇಳಿದ್ದು ಮಾತ್ರ ಕೇಳಿಸಿತು ಎಂದು ತಿಳಿಸಲಾಯಿತು. ನೌಕಾನೆಲೆಯ ಅಧಿಕಾರಿಗಳು ವಿಮಾನಗಳು "ಮಂಗಳ ಗ್ರಹಕ್ಕೆ ಹಾರಿಹೋದವು" ಎಂದು ಹೇಳಿಕೆಯನ್ನು ನೀಡಿದರು. ಸ್ಯಾಂಡ್ಸ್ ಅವರ ಲೇಖನವೇ ಮೊದಲ ಬಾರಿಗೆ ಫ್ಲೈಟ್ 19ರ ಘಟನೆಯಲ್ಲಿ ಇರಬಹುದಾದ ನಿಸರ್ಗಾತೀತ ಸಂಗತಿಯ ಕುರಿತಾಗಿ ಸೂಚಿಸಿತು. ಅರ್ಗೋಸಿ ಮ್ಯಾಗ್‌ಜಿನ್‌ನ 1964ರ ಫೆಬ್ರುವರಿ ಸಂಚಿಕೆಯಲ್ಲಿ ಪ್ರಕಟವಾದ ವಿನ್ಸೆಂಟ್ ಗಡ್ಡೀಸ್ ಅವರ "ದಿ ಡೆಡ್ಲಿ ಬರ್ಮುಡಾ ಟ್ರಿಯಾಂಗಲ್" ಲೇಖನದಲ್ಲಿ ಮೊಟ್ಟಮೊದಲನೇ ಬಾರಿಗೆ, ಈ ಪ್ರದೇಶದಲ್ಲಿ ನಡೆದ ಕಣ್ಮರೆಗಳು ಈ ಪ್ರದೇಶದಲ್ಲಿ ನಡೆಯುವ ವಿಚಿತ್ರ ಘಟನೆಗಳ ಭಾಗವೇ ಎಂದು ವಾದಿಸಿದರು.[೮] ಅದರ ಮುಂದಿನ ವರ್ಷ, ಗಡ್ಡೀಸ್ ಅವರು ಇನ್‌ವಿಸಿಬಲ್ ಹೊರೈಜನ್ಸ್ ಎಂಬ ಪುಸ್ತಕದಲ್ಲಿ ಈ ಕುರಿತು ವಿವರಿಸಿದರು.[೯]

ಗಡ್ಡೀಸ್ ಅವರ ಈ ಯೋಚನೆಗಳನ್ನು ವಿಸ್ತರಿಸುತ್ತ, ಇನ್ನೂ ಹಲವಾರು ಜನ ಪುಸ್ತಕಗಳನ್ನು ರಚಿಸಿದರು. ಉದಾಹರಣೆಗೆ ಜಾನ್ ವಾಲ್ಲೆಸ್ ಸ್ಪೆನ್ಸರ್ ಲಿಂಬೊ ಆಫ್ ದಿ ಲಾಸ್ಟ್ ಎಂಬ ಪುಸ್ತಕವನ್ನು 1969ರಲ್ಲಿ (ಮರುಮುದ್ರಣ) ಪ್ರಕಟಿಸಿದರು.1973);[೧೦] ಚಾರ್ಲ್ಸ್‌ ಬರ್ಲಿಟ್ಜ್ (ದಿ ಬರ್ಮುಡಾ ಟ್ರಿಯಾಂಗಲ್ , 1974);[೧೧] ರಿಚರ್ಡ್ ವೈನರ್ (ದಿ ಡೆವಿಲ್ಸ್ ಟ್ರಿಯಾಂಗಲ್ , 1974),[೧೨] ಮತ್ತು ಇನ್ನು ಹಲವಾರು ಲೇಖಕರು ಎಕರ್ಟ್‌ರಿಂದ ಬರೆಯಲ್ಪಟ್ಟ ನಿಸರ್ಗಾತೀತ ಶಕ್ತಿಗಳ ಕುರಿತಾದ ಉಲ್ಲೇಖಗಳನ್ನೇ ಆಧಾರವಾಗಿರಿಸಿಕೊಂಡು ಪುಸ್ತಕಗಳನ್ನು ಬರೆದರು.[೧೩]

ಲ್ಯಾರಿ ಕಶ್ಚೆಸಂಪಾದಿಸಿ

ಅರಿಜಾನ್ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕ ಗ್ರಂಥಪಾಲಕ ಹಾಗೂ ದಿ ಬರ್ಮುಡಾ ಟ್ರಿಯಾಂಗಲ್ ಮಿಸ್ಟರಿ:ಸಾಲ್ವ್‌ಡ್ (1975)[೧೪] ಪುಸ್ತಕದ ಲೇಖಕರಾಗಿರುವ ಲಾರೆನ್ಸ್‌ ಡೇವಿಡ್ ಕಶ್ಚೆ ಅವರು ಗಡ್ಡೀಸ್ ಅವರು ಬರೆದ ಹೇಳಿಕೆಗಳು ಹಾಗೂ ಅವರ ಸಮಕಾಲೀನ ಲೇಖಕರ ಹೇಳಿಕೆಗಳು ಉತ್ಪ್ರೇಕ್ಷೆಯಿಂದ ಕೂಡಿದ್ದಾಗಿದ್ದು, ಸಂದೇಹಪೂರಿತವಾಗಿವೆ ಹಾಗೂ ಸರಿಯಾದ ಆಧಾರಗಳಿಲ್ಲದವುಗಳಾಗಿವೆ ಎಂದು ವಾದಿಸುತ್ತಾರೆ.

ಮೊದಮೊದಲು ನಡೆದ ಘಟನೆಯಲ್ಲಿ ಭಾಗಿಯಾದವರು ಪ್ರತ್ಯಕ್ಷದರ್ಶಿಗಳು ಮತ್ತು ಬರ್ಲಿಟ್ಜ್‌ ಅವರ ಹೇಳಿಕೆಗಳ ನಡುವೆ ಇರುವ ಅತಾರ್ಕಿಕತೆ ಮತ್ತು ಅಸಮಂಜಸತೆಯನ್ನು ಕಶ್ಚೆ ಅವರ ಸಂಶೋಧನೆಯು ಹೊರಗೆಡಹುತ್ತದೆ. ಕಶ್ಚೆ ಅವರು ಪ್ರಸ್ತುತಪಡಿಸಿದ ಕೆಲವು ವಿಚಾರ‍ಗಳು, ಸಮಂಜಸವಾಗಿದ್ದ ಆದರೆ ಕೆಲವು ಘಟನೆಗಳ ಕುರಿತಾಗಿ ಸರಿಯಾಗಿ ವರದಿ ಮಾಡದೇ ಹೋದದ್ದನ್ನು ತಿಳಿಸುತ್ತವೆ. ಉದಾಹರಣೆಗೆ ವಿಶ್ವಪರ್ಯಟನೆ ಹೊರಟ ನೌಕಾಯಾತ್ರಿ ಡೊನಾಲ್ಡ್ ಕ್ರೊವ್‌ಹರ್ಸ್ಟ್‌ನ ಘಟನೆ. ಈ ಘಟನೆಗೆ ಬರ್ಲಿಟ್ಜ್ ಸರಿಯಾದ ಆಧಾರ ಇದ್ದರೂ ವಿಸ್ಮಯ ಎಂದು ಕರೆದಿದ್ದ.

ಇನ್ನೊಂದು ಘಟನೆ ಹೀಗಿದೆ, ಬರ್ಲಿಟ್ಜ್ ಪ್ರಕಾರ ಅಟ್ಲಾಂಟಿಕ್ ಬಂದರಿನಿಂದ ಹೊರಟ ಅದಿರು ತುಂಬಿಕೊಂಡ ಹಡಗು ಮೂರು ದಿನಗಳ ನಂತರ ಕಾಣೆಯಾಯ್ತು ಎಂಬ ಹೇಳಿಕೆ ಇದೆ, ಆದರೆ ಇದು ಅಟ್ಲಾಂಟಿಕ್ ಬಂದರಿನಿಂದ ಹೊರಟ ಹಡಗಿನ ಕುರಿತಾಗಿರದೇ ಅದೇ ದಿನಗಳಲ್ಲಿ ಫೆಸಿಫಿಕ್ ಮಹಾಸಾಗರ ದಲ್ಲಿ ಕಾಣೆಯಾದ ಅದೇ ಹೆಸರಿನ ಹಡಗಿನ ಕುರಿತಾದುದಾಗಿದೆ. ಕಶ್ಚೆ ಹೇಳುವ ಪ್ರಕಾರ ತ್ರಿಕೋಣದ ಸುತ್ತಳತೆಯಲ್ಲೇ ನಡೆದಿದೆ ಎಂದು ಉಲ್ಲೇಖಿಸಲಾದ ಹಾಗೂ ಸುದ್ದಿಗೊಳಗಾದ ಬಹಳಷ್ಟು ಘಟನೆಗಳು ಈ ತ್ರಿಕೋಣದ ಹೊರಗೆ ನಡೆದಂತ ಘಟನೆಗಳಾಗಿವೆ. ಅವರ ಈ ಸಂಶೋಧನೆಯು ಬಹಳ ಸರಳವಾಗಿದೆ : ಅವರು ಈ ಘಟನೆ ನಡೆದ ಸಮಯದ ವರದಿಗಳಿರುವ ಪತ್ರಿಕೆಗಳನ್ನು ಕಲೆಹಾಕಿ, ಅದರಲ್ಲಿ ಬಂದಿರುವ ಉದಾಹರಣೆಗೆ ಅಸಾಮಾನ್ಯ ಹವಾಮಾನ, ಸುದ್ದಿಗೂ ಹಾಗೂ ಕಣ್ಮರೆಯ ಕಥೆಗಳಲ್ಲಿ ಅದನ್ನು ಲೇಖಕರು ತಿಳಿಸಿಲ್ಲದ್ದನ್ನು ಗುರುತಿಸಿದರು.


ಕಶ್ಚೆ ವಿಶದಪಡಿಸಿದ್ದೇನೆಂದರೆ :

 • ಈ ಪ್ರದೇಶದಲ್ಲಿ ಕಾಣೆಯಾದ ಹಾಗೂ ಅವಘಡಕ್ಕೆ ಒಳಗಾದ ಹಡಗು ಹಾಗೂ ವಿಮಾನಗಳ ಸಂಖ್ಯೆಯು ಸಮುದ್ರದ ಇತರ ಭಾಗಗಳಲ್ಲಿ ಕಣ್ಮರೆಯಾದವುಗಳಿಗೆ ಹೋಲಿಸಿದರೆ ದೊಡ್ಡದೇನು ಅಲ್ಲ.
 • ಪದೆ ಪದೇ ಬಿರುಗಾಳಿ ಉತ್ಪತ್ತಿಯಾಗುವ ಕೆಲವು ಪ್ರದೇಶಗಳ ಕುರಿತಾಗಿ ಹಾಗೂ ಇಲ್ಲಿ ನಡೆದ ಘಟನೆಗೂ ಬಿರುಗಾಳಿ ಕೇಂದ್ರಿತ ಕೆಲವು ಪ್ರದೇಶದ ಕುರಿತು ತುಲನಾತ್ಮಕ ಅಧ್ಯಯನ ನಡೆಸಿ ಇದು ವಿಸ್ಮಯ ಎಂದು ಹೇಳಿಕೆ ನೀಡಿದರು. ಈ ಬಿರುಗಾಳಿಗಳ ಬಗ್ಗೆ ಬರ್ಲಿಟ್ಜ್ ಮತ್ತು ಇತರ ಬರಹಗಾರರು ಸೂಚಿಸುವಲ್ಲಿ ವಿಫಲರಾಗಿದ್ದಾರೆ.
 • ಇಲ್ಲಿ ನಡೆದ ಘಟನೆಗಳ ಕುರಿತಾದ ಅಂಕಿ ಅಂಶಗಳನ್ನೇ ಜಾಳು ಜಾಳಾದ ಸಂಶೋಧನೆಯ ಮೂಲಕ ಉತ್ಪ್ರೇಕ್ಷೆ ಮಾಡಲಾಗಿದೆ. ದೋಣಿ ಅಥವಾ ಹಡಗು ಕಣ್ಮರೆಯಾದ ಕುರಿತು ಹೇಳಲಾಗಿದೆಯೇ ಹೊರತು ಕೆಲ ದಿನಗಳ ನಂತರ ಅದು ಮರಳಿ ಬಂದದ್ದರ ಕುರಿತಾಗಿ ಯಾವುದೇ ಉಲ್ಲೇಖವನ್ನು ಇವರುಗಳು ಮಾಡಲಿಲ್ಲ.
 • ಕೆಲವೊಂದು ಕಣ್ಮರೆಗಳು ಇಲ್ಲಿ ಸಂಭವಿಸಲೇ ಇಲ್ಲ. ನೂರಾರು ಜನರ ಸಾಕ್ಷಿಗಳ ಎದುರು ಒಂದು ವಿಮಾನದ ಕಣ್ಮರೆಯು 1937ರಲ್ಲಿ ಡೆಟೊನಾ ಬೀಚ್, ಫ್ಲೋರಿಡಾದಲ್ಲಿ, ನಡೆಯಿತು ಎಂದು ನಮೂದಿಸಲಾದ ಬಗ್ಗೆ ಅಲ್ಲಿನ ಸ್ಥಳೀಯ ಪತ್ರಿಕೆಗಳು ಏನೊಂದೂ ವಿವರಣೆಯನ್ನು ನೀಡುವುದಿಲ್ಲ.
 • ಬರ್ಮುಡಾ ತ್ರಿಕೋಣದ ಪುರಾಣವು ಕಲ್ಪಿಸಲ್ಪಟ್ಟ ವಿಸ್ಮಯ, ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೆಯೋ ಕೆಲವು ತಪ್ಪು ಗ್ರಹಿಕೆ, ತಪ್ಪುತಿಳುವಳಿಕೆ ಹಾಗೂ ಪ್ರಚಾರಪ್ರೀಯತೆಯಿಂದಾಗಿ ಕೆಲವು ಲೇಖಕರು ಹುಟ್ಟುಹಾಕಿರುವುದಾಗಿದೆ.[೧೪]

ಇತರ ಕಾರಣಗಳುಸಂಪಾದಿಸಿ

ಜಿಯೋ‌ಫಿಲ್ಮ್ಸ್ ನ ಜಾನ್ ಸಿಮ್ಮೊನ್ಸ್ ಅವರು ಎಕ್ವಿನಿಕ್ಸ್ ಪ್ರೊಗ್ರಾಮ್ ಕಂಪೆನಿಗೆ ನಿರ್ಮಿಸಿಕೊಟ್ಟ UKಯ ಚಾನೆಲ್ 4 ವಾಹಿನಿಯು ಪ್ರಸಾರ ಮಾಡಿದ "ದಿ ಬರ್ಮುಡಾ ಟ್ರಿಯಾಂಗಲ್"(c.1992) ಕಾರ್ಯಕ್ರಮದಲ್ಲಿ ಕಡಲು ಸಂಬಂಧಿ ವಿಮಾ ಕಂಪೆನಿ ಲಾಯ್ಡ್ಸ್‌ ಆಫ್ ಲಂಡನ್‌‌ನನ್ನು ಬರ್ಮುಡಾ ತ್ರಿಕೋಣದ ಪ್ರದೇಶದಲ್ಲಿ ಹೆಚ್ಚಿನ ಹಡಗುಗಳು ಮುಳುಗುತ್ತವೆಯೇ ಎಂದು ಪ್ರಶ್ನಿಸಲಾಯ್ತು. ಲಾಯ್ಡ್ಸ್ ಆಫ್ ಲಂಡನ್ ಈ ಪ್ರಶ್ನೆಗೆ ಹೆಚ್ಚಿನ ಹಡಗುಗಳು ಅಲ್ಲಿ ಮುಳುಗಿಲ್ಲ ಎಂದು ಹೇಳಿಕೆ ನೀಡಿತು.[೧೫]

ಸಂಯುಕ್ತ ಸಂಸ್ಥಾನದ ಕಡಲು ಕಾವಲು ಪಡೆಯ ಕಡತಗಳು ಇದನ್ನು ಸಮರ್ಥಿಸಿದವು. ಸತ್ಯಸಂಗತಿಯೆಂದರೆ, ಪ್ರತಿದಿನ ಇಲ್ಲಿ ಹಾಯ್ದು ಹೋಗುವ ವಿಮಾನ ಹಾಗೂ ಹಡಗುಗಳ ಸಂಖ್ಯೆಯನ್ನು ಗಮನಿಸಿದರೆ ಇಲ್ಲಿ ಸಂಭವಿಸಿದ ಕಣ್ಮರೆಗಳ ಸಂಖ್ಯೆ ಕಡಿಮೆಯೇ ಎನ್ನಬೇಕು.[೧೪]

ಕಡಲು ಕಾವಲು ಪಡೆ ಕೂಡಾ ತ್ರಿಕೋಣದಲ್ಲಿ ನಡೆಯಿತು ಎನ್ನಲಾದ ಘಟನೆಗಳ ಕುರಿತು ಸಂದೇಹಗಳನ್ನು ಹೊಂದಿದೆ. ಕಾವಲು ಪಡೆಯವರು ಈವರೆಗೆ ಘಟನೆಗಳ ಕುರಿತಾಗಿ ಮಾಹಿತಿ ಕಲೆಹಾಕಿ ಬರೆದಿರುವುದು, ತ್ರಿಕೋಣದ ಕುರಿತು ಬರೆಯುವ ಲೇಖಕರ ವಾದಗಳನ್ನು ಅಲ್ಲಗಳೆಯುತ್ತವೆ.

1972ರಲ್ಲಿ ಎಸ್‌ಎಸ್‌ ವಿ.ಎ.ಫಾಗ್ ಎನ್ನುವ ಟ್ಯಾಂಕರ್ ಒಂದು ಸ್ಪೋಟಗೊಂಡು ಮೆಕ್ಸಿಕೊ ಕೊಲ್ಲಿಯಲ್ಲಿ ಮುಳುಗಿತು. ಕಡಲು ಕಾವಲು ಪಡೆ ಈ ಘಟನೆಯಲ್ಲಿ ಹಾಳಾದ ಹಡಗಿನ ಛಾಯಾಚಿತ್ರ ತೆಗೆಯಿತು ಹಾಗೂ ಸತ್ತವರ ಹಲವಾರು ದೇಹಗಳನ್ನು ಹೊರತೆಗೆಯಿತು.[೧೬] ಇದಕ್ಕೆ ವಿರುದ್ಧವಾಗಿ, ಈ ಘಟನೆಯನ್ನು ಒಬ್ಬ ತ್ರಿಕೋಣ ಘಟನೆಗಳ ಬರಹಗಾರ, ’ಘಟನೆಯಲ್ಲಿ ಎಲ್ಲ ದೇಹಗಳೂ ಕಣ್ಮರೆಯಾದವು, ಆದರೆ ಹಡಗಿನ ಕ್ಯಾಫ್ಟನ್ ಮಾತ್ರ ತನ್ನ ಕ್ಯಾಬಿನ್‌ನಲ್ಲಿ ತನ್ನ ಕೈಯಲ್ಲಿ ಕಾಫಿ ತಟ್ಟೆಯನ್ನು ಗಟ್ಟಿ ಹಿಡಿದು ಕುಳಿತ ರೀತಿಯಲ್ಲಿ ಕಂಡುಬಂದ’ ಎಂದು ವಿವರಿಸಿದ್ದ.[೧೦]

ದಿ ನೊವಾ ಮತ್ತು ಹೊರೈಜನ್ ಕುರಿತಂತೆ ಬರೆದಿರುವ ’ದಿ ಕೇಸ್ ಆಫ್ ಬರ್ಮುಡಾ ಟ್ರಯಾಂಗಲ್ (1976-06-27)’ ಇದು ಬಹಳ ವಿಮರ್ಶಾತ್ಮಕವಾಗಿ ಘಟನೆಯ ಕುರಿತು ತನಿಖೆ ನಡೆಸಿ "ನಾವು ಘಟನೆಗೆ ಸಾಕ್ಷಿಯಾಗಿದ್ದ ಕೆಲವರನ್ನು, ಹಾಗೂ ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಕೆಲವರನ್ನು ಭೇಟಿ ಮಾಡಿದಾಗ ಈವರೆಗೆ ಸುದ್ದಿಯಲ್ಲಿದ್ದ ವಿಸ್ಮಯ ಕಣ್ಮರೆಯಾಗಿತ್ತು.ವಿಜ್ಞಾನವು ಈ ಕುರಿತಂತೆ ಯಾವುದೇ ವ್ಯಾಖ್ಯಾನವನ್ನು ನೀಡಲು ಒಪ್ಪುವುದಿಲ್ಲ, ಏಕೆಂದರೆ ಅಲ್ಲಿಯ ಆ ಕುರಿತ ಪ್ರಶ್ನೆಗಳೇ ಅಸಮಂಜಸವಾದುದಾಗಿವೆ. ... ಹಡಗು ಮತ್ತು ವಿಮಾನಗಳು ಬೇರೆ ಕಡೆಗಳಲ್ಲಿ ವರ್ತಿಸುವಂತೆಯೆ ಈ ಸ್ಥಳದಲ್ಲಿಯೂ ಕೂಡಾ ವರ್ತಿಸುತ್ತವೆ".[೧೭]ಎಂದು ಹೇಳಿಕೆ ನೀಡುತ್ತದೆ.

ಬರ್ಮುಡಾ ವಿಸ್ಮಯ ವಿರೋಧಿ ಸಂಶೋಧಕರಾದ ಅರ್ನೆಸ್ಟ್ ಟೇವ್ಸ್[೧೮] ಮತ್ತು ಬ್ಯಾರಿ ಸಿಂಗರ್ [೧೯] ರಂತಹವರು ವಿಸ್ಮಯ ಮತ್ತು ಅಭೌತಿಕತೆ ಅನ್ನುವುದು ಹೇಗೆ ಜನಪ್ರಿಯ ಹಾಗೂ ಲಾಭದಾಯಕ ಎಂದು ಗುರುತಿಸಿದರು. ಈ ವಾದವನ್ನಿಟ್ಟುಕೊಂಡು ಹೇಗೆ ಬರ್ಮುಡಾ ತ್ರಿಕೋಣದಂತ ವಿಷಯದಲ್ಲಿ ಬಹಳಷ್ಟು ವ್ಯವಹಾರಗಳು ಹುಟ್ಟಿಕೊಂಡವು ಎಂಬುದನ್ನು ತಿಳಿಸಿದರು. ಹೇಗೆ ಕೆಲವು ಅಭೌತಿಕತೆಯ ಕುರಿತಾದ ವಸ್ತುಗಳು ಜನರನ್ನು ತಪ್ಪುದಾರಿಗೆಳೆಯುತ್ತಿವೆ ಅಥವಾ ಇವು ಸರಿಯಾಗಿಲ್ಲ, ಆದರೂ ಕೂಡ ಇವುಗಳನ್ನು ಮಾರುಕಟ್ಟೆಗೆ ಬಿಟ್ಟು ಹೇಗೆ ಲಾಭಗಳಿಸುತ್ತಿದ್ದಾರೆ ಎಂಬುದನ್ನು ತೋರ್ಪಡಿಸಿದರು. ಅವರು ಹೇಳುವ ಪ್ರಕಾರ, ಮಾರುಕಟ್ಟೆಯು ಪಕ್ಷಪಾತಿಯಾಗಿದ್ದು ತ್ರಿಕೋಣದ ವಿಸ್ಮಯ ಕುರಿತಾದಂತೆ ಬರುವ ಪುಸ್ತಕ ಹಾಗೂ ಕಿರುತೆರೆಯ ಕಾರ್ಯಕ್ರಮಗಳ ಕುರಿತಾಗಿ ಧನಾತ್ಮಕ ಪ್ರತಿಕ್ರಿಯೆಯನ್ನು ಹೊಂದಿದ್ದು, ತ್ರಿಕೋಣ ವಿಸ್ಮಯದ ಕುರಿತು ಬರುವ ಉತ್ತಮ ಸಂಶೋಧಿತ ಬರಹಗಳನ್ನು, ಪ್ರಕಟಣೆಗಳನ್ನು ತ್ರಿಕೋಣ ವಿಸ್ಮಯ ವಿರೋಧಿ ಎಂದು ತಿರಸ್ಕರಿಸುತ್ತದೆ ಎಂದು ಪ್ರತಿಪಾದಿಸಿದರು.

ಒಂದುವೇಳೆ ತ್ರಿಕೋಣದ ಪರಿಧಿಯು ಅಲ್ಲಿಯ ಸುತ್ತಮುತ್ತಲಿನ ಭೂಮಿಗೂ ಸಂಬಂಧಿಸುತ್ತದೆ ಎಂದಾದರೆ ಪೊರ್ಟೋರಿಕೊ, ಬಹಾಮಾಸ್, ಅಥವಾ ಸ್ವತಹ: ಬರ್ಮುಡಾ ಪ್ರದೇಶದಲ್ಲಿಯೂ ಕೂಡ ಭೂಮಿಯ ಮೇಲೆ ಚಲಿಸುವ ಯಾವುದೇ ವಾಹನಗಳು ಅಥವಾ ಮನುಷ್ಯರು ಕಾಣೆಯಾದ ನಿದರ್ಶನಗಳಿಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ] ತ್ರಿಕೋಣದ ಒಳಗಡೆಯೇ ಇರುವ ಫ್ರೀಫೋರ್ಟ್ ಎಂಬ ಪಟ್ಟಣವು ಒಂದು ಗುರುತರ ಬಂದರು ಪ್ರದೇಶ ಹಾಗೂ ವಿಮಾನ ನಿಲ್ದಾಣವಾಗಿದೆ ಇಲ್ಲಿಂದ ಪ್ರತಿವರ್ಷ ಸುಮಾರು 50.000 ವಿಮಾನಗಳು ಹಾರಾಟ ನಡೆಸುತ್ತವೆ ಹಾಗೂ ಮಿಲಿಯನ್‌ಗಳಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.


ನಿಸರ್ಗಾತೀತ ವಿವರಣೆಗಳುಸಂಪಾದಿಸಿ

ತ್ರಿಕೋಣದ ಬರಹಗಾರರು ಇಲ್ಲಿ ನಡೆದಿರುವ ಘಟನೆಯನ್ನು ವಿವರಿಸಲು ಹಲವಾರು ನಿಸರ್ಗಾತೀತ ವಿವರಣೆಗಳನ್ನು ನೀಡುತ್ತಾರೆ. ಇಲ್ಲಿ ನಡೆಯುವ ಘಟನೆಗಳಿಗೆ ಕಣ್ಮರೆಗೊಂಡ ಪೌರಾಣಿಕ ಅಟ್ಲಾಂಟಿಸ್‌ನಲ್ಲಿದ್ದು ಈಗ ಆ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿರುವ ತಂತ್ರಜ್ಞಾನ ಕಾರಣ ಎಂಬುದು ಕೆಲವರ ವಾದ. ಈ ಅಟ್ಲಾಂಟಿಸ್ ಕುರಿತಾದ ಕಥೆಗೆ ಸೇರ್ಪಡೆಯಾಗಿ ಇನ್ನೊಂದು ಕಥೆಯನ್ನು ಹೇಳಲಾಗುತ್ತದೆ. ಬಹಾಮಾಸ್‌ನ ಬಿಮಿನಿಯಲ್ಲಿರುವ ಕಲ್ಲುಗಳ ಒಂದು ರಚನೆ ಬಿಮಿನಿ ರೋಡ್. ಇದು ಬಿಮಿನಿ ದ್ವೀಪವನ್ನು ದಾಟಿ ತ್ರಿಕೋಣದ ಪ್ರದೇಶದಲ್ಲಿಯೂ ಕೂಡಾ ಇರಬಹುದೇನೋ ಎಂದು ಸ್ವಯಂಘೋಷಿತ ಅತೀಂದ್ರೀಯ ಶಕ್ತಿಯುಳ್ಳವನಾಗಿದ್ದ ಎಡ್ಗರ್ ಕೇಸಿಯು ಹೇಳುತ್ತಾನೆ. 1968ರಲ್ಲಿ ಬೆಳಕಿಗೆ ಬಂದ ಬಿಮಿನಿ ರೋಡ್‌ ಕುರಿತು ಹೇಳುತ್ತ, ಈ ರಚನೆಯ ಮುಂದುವರೆದ ಭಾಗ ತ್ರಿಕೋಣ ಪ್ರದೇಶದಲ್ಲಿ ಇರಬಹುದೇನೋ ಎಂದು ಹೇಳಿದ್ದನ್ನು ಅವನ ಹಿಂಬಾಲಕರು ಹೇಳುತ್ತಾರೆ. ರಸ್ತೆ, ಗೋಡೆ ಅಥವಾ ಉಳಿದ ರಚನೆಗಳು ಭೂಶಾಸ್ತ್ರಜ್ಞರ ಪ್ರಕಾರ ಸ್ವಾಭಾವಿಕ ಎಂದು ಗುರುತಿಸಲ್ಪಟ್ಟಿದ್ದರೂ ಕೂಡ ತ್ರಿಕೋಣದ ವಿಸ್ಮಯಗಳನ್ನು ನಂಬುವವರ ಪ್ರಕಾರ ಇದು ನಿಸರ್ಗಾತೀತ ಶಕ್ತಿಯ ಪ್ರಭಾವ.[೨೦]

ಈ ಘಟನೆಗಳಿಗೆ UFOಗಳು ಕಾರಣವೆಂದು ಉಳಿದ ಲೇಖಕರು ಹೇಳುತ್ತಾರೆ.[೨೧]ಕ್ಲೋಸ್ ಎನ್‌ಕೌಂಟರ್ಸ್ ಆಫ್ ದಿ ಥರ್ಡ್ ಕೈಂಡ್ ಎಂಬ ವೈಜ್ಞಾನಿಕ ಕಥೆಯ ಸಿನೆಮಾದಲ್ಲಿ ಸ್ಟಿವನ್ ಸ್ಪಿಲ್‌ಬರ್ಗ್ ಈ ಪರಿಕಲ್ಪನೆಯನ್ನು ಬಳಸಿಕೊಂಡಿದ್ದಾನೆ. ಇದರಲ್ಲಿ ಫ್ಲೈಟ್ 19 ವಿಮಾನವನ್ನು ಅನ್ಯಲೋಕದ ಜೀವಿಗಳು ಅಪಹರಿಸುತ್ತಾರೆ.

ಪ್ರಸಿದ್ಧ ಭಾಷಾ ಶಾಸ್ತ್ರಜ್ಞ ಮತ್ತು ಅಪೂರ್ವ ಘಟನೆಗಳ ಕುರಿತಾಗಿ ಅನೇಕ ಪುಸ್ತಕಗಳನ್ನು ರಚಿಸಿರುವ ಚಾರ್ಲ್ಸ್‌ ಬರ್ಲಿಟ್ಜ್ ತ್ರಿಕೋಣದಲ್ಲಿ ನಡೆಯುತ್ತಿರುವ ಈ ವಿಶಿಷ್ಠ ಘಟನೆಯನ್ನು ಅಸಾಧಾರಣ ಹಾಗೂ ವಿವರಿಸಲಾಗದ ಶಕ್ತಿಯಿಂದಾಗಿ ನಡೆದ ಘಟನೆ ಎಂದು ವಿವರಿಸಿದ್ದಾರೆ.[೧೧]

ಸ್ವಾಭಾವಿಕ ವಿವರಣೆಗಳುಸಂಪಾದಿಸಿ

ದಿಕ್ಸೂಚಿ ಏರಿಳಿತಗಳುಸಂಪಾದಿಸಿ

ದಿಕ್ಸೂಚಿಯಲ್ಲಿ ಕಂಡುಬಂದ ಸಮಸ್ಯೆಗಳು ತ್ರಿಕೋಣಲ್ಲಿ ನಡೆದ ಕೆಲವು ಘಟನೆಗಳಿಗೆ ಕಾರಣವಾಗಿವೆ. ಕೆಲವರ ಪ್ರಕಾರ ಆ ಜಾಗದಲ್ಲಿ ಆಯಸ್ಕಾಂತೀಯ ಶಕ್ತಿಯ ಕೇಂದ್ರ ಇರಬಹುದು[೨೨] ಆದರೆ ಆ ರೀತಿಯ ಕೇಂದ್ರದ ಬಗ್ಗೆ ಯಾವುದೇ ಸುಳಿವು ಕಂಡುಬರುವುದಿಲ್ಲ. ದಿಕ್ಸೂಚಿಯು ಆಯಸ್ಕಾಂತೀಯ ಧೃವಗಳಿಗೆಗಳಿಗೆ ಸಂಬಂಧಿಸಿದಂತೆ ಸ್ವಾಭಾವಿಕ ಆಯಸ್ಕಾಂತೀಯ ಏರಿಳಿತಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಸಂಯುಕ್ತ ಸಂಸ್ಥಾನದಲ್ಲಿ, ವಿಸ್ಕೊಸಿನ್‌ನಿಂದ ಮೆಕ್ಸಿಕೊ ಕೊಲ್ಲಿಗೆ ಹೋಗುವಾಗ ಮಾತ್ರ ಆಯಸ್ಕಾಂತೀಯ (ದಿಕ್ಸೂಚಿಯ)ಉತ್ತರ ಮತ್ತು ಭೌತಿಕ (ನೈಜ) ಉತ್ತರ ನಿಖರವಾಗಿ ಒಂದೇ ಆಗಿರುತ್ತವೆ ಅಥವಾ ಒಂದೇ ನೇರದಲ್ಲಿರುತ್ತವೆ. ಇದು ಸಮುದ್ರಯಾನ ಮಾಡುವವರಿಗೆ ಶತಮಾನಗಳಿಂದ ತಿಳಿದ ವಿಷಯವಾಗಿದೆ. ಆದರೆ ಈ ವಿಷಯವನ್ನು ಜನಸಾಮಾನ್ಯರಿಗೆ ತಿಳಿಸಿಲ್ಲ, ಮತ್ತು ದಿಕ್ಸೂಚಿ ಬದಲಾವಣೆಯಾಗುವುದು ಅಸಾಮಾನ್ಯ ಸಂಗತಿ ಎಂದು ಅವರು ಯೋಚಿಸುತ್ತಾರೆ. ತ್ರಿಕೋಣದ ಆ ಸ್ಥಳದಲ್ಲಿ ದಿಕ್ಸೂಚಿ ಬದಲಾಗುವುದು ಸಾಮಾನ್ಯವಾದ ವಿಷಯವಾಗಿದೆ.[೧೪]

ಉದ್ದೇಶಪೂರ್ವಕವಾಗಿ ಕೈಗೊಂಡ ವಿನಾಶ ಕ್ರಿಯೆಗಳುಸಂಪಾದಿಸಿ

ಉದ್ದೇಶಪೂರ್ವಕವಾದ ವಿನಾಶ ಕ್ರಿಯೆಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು: ಯುದ್ಧದಿಂದಾಗಿ ನಡೆಯುವ ಕ್ರಿಯೆಗಳು ಹಾಗೂ ಕಡಲ್ಗಳ್ಳತನದಿಂದ ನಡೆಯುವ ಕ್ರಿಯೆಗಳು. ಶತ್ರು ದೇಶಗಳ ಕಡತವನ್ನು ಪರಿಶೀಲಿಸಿದಾಗ ಹಲವಾರು ಘಟನೆಗಳ ಉಲ್ಲೇಖ ಕಂಡುಬರುತ್ತದೆ; ಪ್ರಪಂಚ ಯುದ್ಧದ ಸಮಯದಲ್ಲಿ ಕೆಲವು ಹಡಗುಗಳ ಮುಳುಗುವಿಕೆಯು ಮೇಲ್ಮಟ್ಟದ ದಾಳಿಗಳಿಂದ ಹಡಗು ಮುಳುಗಿದ್ದರೆ ಇನ್ನು ಕೆಲವು ಸಬ್‌ಮರೀನ್‌ಗಳಿಂದ ಮಾಡಿದ ದಾಳಿಯಿಂದಾಗಿದೆ. ಅಲ್ಲದೆ ಇವುಗಳನ್ನು ಆಜ್ಞೆಯ ಪುಸ್ತಕಗಳಲ್ಲಿ ನೋಡಬಹುದಾಗಿದೆ. ಇನ್ನು ಕೆಲವು ಘಟನೆಗಳಿಗೆ ಇನ್ನುವರೆವಿಗೂ ಕಾರಣವನ್ನು ಪತ್ತೆ ಹಚ್ಚಲಾಗಿಲ್ಲ. 1918ರಲ್ಲಿ ಕಳೆದುಹೋದ ಯುಎಸ್‌ಎಸ್‌ನ ಸೈಕ್ಲೋಪ್ಸ್ ಮತ್ತು ಅದರ ಜೊತೆಯ ಎರಡು ಹಡಗುಗಳು ಪ್ರೋಟ್ಯೂಸ್ ಮತ್ತು ನೆರ್ಯೂಸ್ ಇವು ಎರಡನೇ ಪ್ರಪಂಚ ಯುದ್ದದಲ್ಲಿನ ಸಬ್‌ಮರೀನ್‌ಗಳಿಗೆ ಬಲಿಯಾಗಿವೆ ಎಂದು ಊಹಿಸಲಾಗಿದೆ. ಆದರೆ ಜರ್ಮನ್‌ನ ದಾಖಲೆಗಳಲ್ಲಿ ಇದರ ಉಲ್ಲೇಖ ಕಂಡುಬರುವುದಿಲ್ಲ.

ಕಡಲ್ಗಳ್ಳತನದಲ್ಲಿ ಸಾಮಾನ್ಯವಾಗಿ ಒಂದು ಹಡಗನ್ನು ಅಥವಾ ದೋಣಿಯನ್ನು ಸಮುದ್ರದಲ್ಲಿ ಆಕ್ರಮಿಸಿ, ಲೂಟಿಮಾಡಿ ನಾಶಮಾಡಲಾಗುತ್ತದೆ. ಇದು ಈಗಲೂ ಮುಂದುವರೆದಿದೆ. ಪಶ್ಚಿಮ ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರಗಳಲ್ಲಿ ಸರಕು ಸಾಗಣೆಯ ಹಡಗುಗಳನ್ನು ಲೂಟಿ ಮಾಡುವುದು ಸಾಮಾನ್ಯವಾಗಿದೆ. ಮಾಧಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವವರು ಪ್ರವಾಸಿ ದೋಣಿಗಳನ್ನು ಅಪಹರಿಸಿ ತಮ್ಮ ಕೆಲಸಗಳಿಗೆ ಬಳಸಿಕೊಳ್ಳುವುದು ಕೂಡಾ ಹೆಚ್ಚುತ್ತಿದೆ. ಕೆರಿಬಿಯನ್ ಸಮುದ್ರಗಳಲ್ಲಿ ಹಾಯಿದೋಣಿ ಮತ್ತು ಸಿಬ್ಬಂದಿಗಳ ನಾಪತ್ತೆಗೆ ಇದೂ ಕೂಡ ಕಾರಣವಾಗಿರಬಹುದು. ಕೆರಿಬಿಯನ್ ಸಮುದ್ರಗಳಲ್ಲಿ ಕಡಲ್ಗಳ್ಳತನ 1560ರಿಂದ 1760ರವರೆಗೆ ಸಾಮಾನ್ಯವಾಗಿತ್ತು, ಮತ್ತು ಪ್ರಸಿದ್ಧ ಕಡಲ್ಗಳ್ಳರಲ್ಲಿ ಎಡ್ವರ್ಡ್ ಟೀಚ್, ಬ್ಲಾಕ್‌ಬಿಯರ್ಡ್ ಮತ್ತು ಜೀನ್ ಲಾಫಿಟ್ಟೆ ರವರು ಮುಖ್ಯರಾಗಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ]

 
ಪಶ್ಚಿಮ ಅಟ್ಲಾಂಟಿಕ್ ಸಾಗರದಿಂದ ಉತ್ತರಕ್ಕೆ ಬೀಸುವ ಗಲ್ಫ್ ಸ್ಟ್ರೀಮ್ ನಿರ್ಮಿಸುವ ಕಾಲ್ಪನಿಕ ಬಣ್ಣ ನಾಸಾ


ಗಲ್ಫ್ ಸ್ಟ್ರೀಮ್ಸಂಪಾದಿಸಿ

ಗಲ್ಫ್ ಸ್ಟ್ರೀಮ್ ಇದೊಂದು ಸಾಗರ ಪ್ರವಾಹವಾಗಿದ್ದು, ಇದು ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಹುಟ್ಟುತ್ತದೆ ಮತ್ತು ಈ ಪ್ರವಾಹವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ ಮೂಲಕ ಉತ್ತರ ಅಟ್ಲಾಂಟಿಕ್‌ಗೆ ಸಾಗುತ್ತದೆ.

ಮೂಲತಃ, ಇದು ಸಮುದ್ರದೊಳಗಿನ ಒಂದು ನದಿ, ಮತ್ತು ಒಂದು ನದಿಯಾಗಿ ತೇಲುವ ವಸ್ತುಗಳನ್ನು ಸೆಳೆದೊಯ್ಯುತ್ತದೆ.ಇದರ ಮೇಲ್ಮುಖ ವೇಗದ ಪ್ರಮಾಣವು ಸಾಮಾನ್ಯವಾಗಿ 2.5 metres per second (5.6 mph)[೨೩] ನೀರಿನ ಮೇಲೆ ಇಳಿಯುವಂತಹ ಸಣ್ಣ ವಿಮಾನವೊಂದನ್ನು ಸೆಳೆದುಕೊಳ್ಳುವಷ್ಟು ಅಥವಾ ಇಂಜಿನ್‌ನಲ್ಲಿ ಯಾಂತ್ರಿಕ ದೋಷವಿರುವ ದೋಣಿಯನ್ನು ಸಾಮಾನ್ಯವಾಗಿ ತನ್ನ ಹರಿವಿನ ದಿಕ್ಕಿನೆಡೆಗೆ ಸೆಳೆದೊಯ್ಯುವಷ್ಟು ಸಾಮರ್ಥ್ಯವನ್ನು ಹೊಂದಿರುತ್ತದೆ.

ಮನುಷ್ಯನ ತಪ್ಪುಗಳುಸಂಪಾದಿಸಿ

ಅದಿಕೃತ ಮೂಲಗಳು ತನಿಖೆ ನಡೆಸಿದಾಗ ಹೆಚ್ಚಾಗಿ ಹಡಗು ಮತ್ತು ಯಾವುದೇ ವಿಮಾನಗಳ ಕಣ್ಮರೆಗೆ ಕಂಡುಬಂದ ಕಾರಣವೆಂದರೆ ಮಾನವ ಸಹಜ ತಪ್ಪುಗಳು.[೨೪] ಉದ್ದೇಶ ಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಮನುಷ್ಯರು ಮಾಡುವ ತಪ್ಪುಗಳು ದು:ಖದಾಯಕ ಫಲಿತಾಂಶ ನೀಡುತ್ತಿರುತ್ತವೆ. ಇದಕ್ಕೆ ಬರ್ಮುಡಾ ತ್ರಿಕೋಣಕ್ಕೆ ಸಂಬಂಧಿಸಿದ ಘಟನೆಗಳು ಹೊರತಲ್ಲ. ಉದಾಹರಣೆಗೆ, ಕಡಲು ಕಾವಲು ಪಡೆ ಕಂಡುಕೊಂಡಂತೆ ವಾತಾವರಣದ ಶಾಖಕ್ಕೆ ಆವಿಯಾಗುವ ಬೆಂಜಿನ್‌ ತುಂಬುವ ಟ್ಯಾಂಕರ್‌ ಅನ್ನು ಶುಚಿ ಮಾಡುವ ಕುರಿತಾಗಿ ಸರಿಯಾದ ತರಬೇತಿಯನ್ನು ಹಡಗಿನಲ್ಲಿನ ಪರಿಚಾರಕರಿಗೆ ನೀಡದ್ದರಿಂದ 1972ರ ಎಸ್‌ಎಸ್‌ ವಿ.ಎ.ಫಾಗ್‌ ಟ್ಯಾಂಕರ್‌ ಅವಘಡಕ್ಕೆ ಈಡಾಗಬೇಕಾಯ್ತು.[ಸಾಕ್ಷ್ಯಾಧಾರ ಬೇಕಾಗಿದೆ] ಮನುಷ್ಯನ ಮೊಂಡುತನ ಕೂಡಾ ಕೆಲವೊಮ್ಮೆ ಅವಘಡಕ್ಕೆ ಕಾರಣವಾಗುತ್ತದೆ. ವ್ಯಾಪಾರಸ್ಥ ಹಾರ್ವೆ ಕೊನೊವರ್ ತನ್ನ ಯಾನದ ಹಾಯಿದೋಣಿಯನ್ನು ಕಳೆದುಕೊಳ್ಳಲು ಇದು ಕಾರಣ ಎನ್ನಬಹುದು. ಅವರು ಜನವರಿ 1,1958ರಂದು ತಮ್ಮ ಹಾಯಿದೋಣಿ ರೆವೊನಾಕ್‌ ದೊಂದಿಗೆ ಫ್ಲೋರಿಡಾದ ದಕ್ಷಿಣಕ್ಕೆ ಪ್ರವಾಹದ ನೆಲೆಯ ದಾರಿಯಲ್ಲಿ ಪ್ರಯಾಣಕ್ಕೆ ತೆರಳಿದಾಗ ಕಳೆದುಕೊಂಡರು.[೨೫] ಸಮುದ್ರದ ಯಾವ ವಾತಾವರಣವು ಹಡಗಿಗೆ ಹಾನಿಯುಂಟು ಮಾಡುತ್ತದೆ ಎಂಬ ಪ್ರಾಥಮಿಕ ಮಾಹಿತಿಯ ಕೊರತೆಯಿಂದ ಹಲವಾರು ಅವಘಡಗಳು ಉಂಟಾದುದಾಗಿದೆ ಎಂಬುದನ್ನು ಅಧಿಕೃತ ಮೂಲಗಳು ತಮ್ಮ ವರದಿಯ ಸಂದರ್ಭದಲ್ಲಿ ಕಂಡುಕೊಂಡಿದ್ದಾರೆ.

ಸುಂಟರಗಾಳಿಗಳುಸಂಪಾದಿಸಿ

ಸುಂಟರಗಾಳಿ ಶಕ್ತಿಯುತ ಮಾರುತವಾಗಿದ್ದು ಭೂಮಧ್ಯ ರೇಖೆಯ ನೀರಿನಲ್ಲಿ ಹುಟ್ಟುತ್ತದೆ. ಈವರೆಗೆ ಸಾವಿರಾರು ಜನರ ಪ್ರಾಣಹಾನಿ ಹಾಗೂ ಬಿಲಿಯನ್‌ಗಟ್ಟಲೆ ಡಾಲರ್ ಹಣದ ಹಾನಿಗೆ ಕಾರಣವಾಗಿದೆ. ಫ್ರಾನ್ಸಿಸ್ಕೊ ಡೆ ಬೊಬಾಡಿಲ್ಲಾ ಎಂಬ ಸ್ಪಾನಿಷ್ ಹಡಗು 1502ರಲ್ಲಿ ಮುಳುಗಿದ್ದು ಅಪಾಯಕಾರಿ ಸುಂಟರಗಾಳಿಗೆ ಸಿಲುಕಿ ನಾಶವಾದ ಮೊದಲ ದಾಖಲಿತ ಘಟನೆಯಾಗಿದೆ. ತ್ರಿಕೋಣಕ್ಕೆ ಹೋಲಿಸಿದರೆ ಈ ಮಾರುತಗಳು ಹಿಂದೆ ಹೆಚ್ಚಿನ ಘಟನೆಗಳಿಗೆ ಕಾರಣವಾಗಿದೆ.

ಮೀಥೇನ್ ಹೈಡ್ರೇಟ್ಸ್ಸಂಪಾದಿಸಿ

 
ಪ್ರಪಂಚದಾದ್ಯಂತ ಸಮುದ್ರ ಪ್ರದೇಶದಲ್ಲಿ ಇರುವ ಗ್ಯಾಸ್ ಹೈಡ್ರೇಟ್ ಅಂಶ ಇರುವ ಮೂಲಗಳ ಗುರುತಿಸಲಾದ ಹಾಗೂ ನಿರ್ಧರಿಸಲಾದ ಹಂಚಿಕೆ, 1996 ಮೂಲ: USGS

ಕೆಲವು ಕಣ್ಮರೆಗಳಿಗೆ ಸಮುದ್ರದೊಳಗಿನ ಭೂ ಪದರಗಳಲ್ಲಿ ದೊಡ್ಡ ಮೀಥೇನ್ ಹೈಡ್ರೇಟ್ಸ್ (ಒಂದು ರೀತಿಯ ನೈಸರ್ಗಿಕ ಅನಿಲ) ನಿಕ್ಷೇಪವಿದ್ದು ಅದರಿಂದ ಉತ್ಪತ್ತಿಯಾಗುವ ಅನಿಲವು ಇಲ್ಲಿನ ಕೆಲವು ಘಟನೆಗಳಿಗೆ ಕಾರ‍ಣವಾಗಿದೆ ಎಂದು ಕೆಲವೊಮ್ಮೆ ವಿವರಿಸಲಾಗುತ್ತದೆ.[೨೬] ಆಸ್ಟ್ರೇಲಿಯಾದ ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳು ನೀರಿನಿಂದೇಳುವ ಬಿಸಿನೀರ ಬುಗ್ಗೆಗಳು ನೀರಿನ ಸಾಂದ್ರತೆಯನ್ನು ಕಡಿಮೆ ಮಾಡುವುದರಿಂದ ನೀರ ಮೇಲೆ ತೇಲುವ ವಸ್ತುಗಳು ಮುಳುಗುವ ಸಾಧ್ಯತೆ ಇದೆ ಎಂದು ಕಂಡುಕೊಳ್ಳಲಾಯ್ತು.[೨೭] ಗಲ್ಫ್ ಸ್ಟ್ರೀಮ್‌ದಿಂದಾಗಿ ಸಮುದ್ರದ ಭೂತಳದಿಂದ ಮೇಲೇಳುವ ಚೂರುಗಳೂ ಕೂಡ ಈ ಅವಘಡಗಳಿಗೆ ಕಾರಣವಾಗಿರಬಹುದು. ಕೆಲವೊಮ್ಮೆ ಸಮುದ್ರದಲ್ಲಿನ ಮಿಥೇನ್ ನೀರಿನ ಮೆಲ್ಮೈಗೆ ಚಿಮ್ಮುವುದರಿಂದಾಗಿ (ಕೆಲವೊಮ್ಮೆ ಇದನ್ನು ಮಣ್ಣು ಚಿಮ್ಮುವ ಜ್ವಾಲಾಮುಖಿಎಂದು ಕರೆಯಲಾಗುತ್ತದೆ )ಬುರುಗಿನಿಂದ ಕೂಡಿದ ನೀರಿನ ಮೇಲ್ಮೈ ರಚಿತವಾಗುತ್ತದೆ. ಈ ಜಾಗದಲ್ಲಿ ಹಡಗು ತೇಲುವಷ್ಟು ಸಾಂದ್ರತೆ ನೀರಿಗೆ ಇರುವುದು ಸಾಧ್ಯವಿಲ್ಲ. ಆಗ ಕೂಡ ಹಡಗು ಮುಳುಗುವ ಸಾಧ್ಯತೆ ಇದೆ ಎಂಬುದನ್ನು ಕೆಲವು ವಾದಗಳು ಮಂಡಿಸುತ್ತವೆ. ಹಡಗಿನ ಸುತ್ತ ಈ ರೀತಿಯ ಸ್ಥಳಗಳಿದ್ದಲ್ಲಿ ಯಾವುದೇ ಮುನ್ಸೂಚನೆ ಕೂಡ ನೀಡದೆ ಅದು ಮುಳುಗುವ ಸಾಧ್ಯತೆ ಇದೆ.

ಅಮೇರಿಕಾ ಸಂಯುಕ್ತ ಸಂಸ್ಥಾನದ ಆಗ್ನೆಯ ಭಾಗದ ಸಮುದ್ರ ಹಾಗೂ ಬ್ಲೇಕ್‌ ರಿಟ್ಜ್ ಪ್ರದೇಶಗಳನ್ನೊಳಗೊಂಡು ಯುಎಸ್‌ಜಿಎಸ್‌ ಪ್ರಕಟಿಸಿದ ಪುಸ್ತಕಗಳಲ್ಲಿ ಪ್ರಪಂಚದಾದ್ಯಂತ ಸಮುದ್ರದೊಳಗೆ ಆಗಾಧವಾದ ಹೈಡ್ರೇಟ್ಸ್ ನಿಕ್ಷೇಪವಿದೆ ಎಂದು ಹೇಳಲಾಗಿದೆ.[೨೮] ಅದೇನೆ ಇದ್ದರೂ ಕೂಡ ಅವರ ಇತರೆ ಕೆಲವು ಪ್ರಬಂಧಗಳ ಪ್ರಕಾರ, ಕಳೆದ 15,000 ವರ್ಷಗಳ ಸಮಯದಲ್ಲಿ ಬರ್ಮುಡಾ ತ್ರಿಕೋಣದ ಜಾಗದಲ್ಲಿ ಹೆಚ್ಚಿನ ಹೈಡ್ರೇಟ್ ಗ್ಯಾಸ್ ಬಿಡುಗಡೆಯಾದ ಬಗ್ಗೆ ಕುರುಹುಗಳಿಲ್ಲ.[೧೫]

ಅದಲ್ಲದೆ ಸಮುದ್ರೊಳಗಿನ ಮೀಥೇನ್ ಹೈಡ್ರೇಟ್ಸ್‌ ಬರ್ಮುಡಾ ತ್ರಿಕೋಣದಲ್ಲಿ ನಡೆದ ಘಟನೆಗಳಿಗೆ ಕಾರಣವಾಗಿದೆ ಎಂದು ಊಹಿಸಿದಂತೆ ಇದು ಪ್ರಪಂಚದ ಇತರ ಭಾಗಗಳಲ್ಲಿ ಅವಘಡಗಳಿಗೆ ಕಾರಣವಾಗಿಲ್ಲ. ನೀರೊಳಗಿನಿಂದ ಉತ್ಪತ್ತಿಯಾಗುವ ಗ್ಯಾಸ್‌ನಿಂದ ಏಳುವ ಗುಳ್ಳೆಗಳು ವಿಮಾನ ಕಣ್ಮರೆಗೆ ಕಾರಣವಾಗುವುದು ಸಾಧ್ಯವಿಲ್ಲ.

ರಾಕ್ಷಸ ಅಲೆಗಳುಸಂಪಾದಿಸಿ

ಪ್ರಪಂಚದ ವಿವಿಧೆಡೆಯ ಸಮುದ್ರಗಳಲ್ಲಿ ರಾಕ್ಷಸ ಅಲೆಗಳಿಂದಾಗಿ ಹಲವಾರು ಹಡಗುಗಳು ಮುಳುಗಲು[೨೯] ಹಾಗೂ ತೈಲ ಸಾಗಿಸುತ್ತಿದ್ದ ಹಡಗುಗಳ ಉರುಳುವುದಕ್ಕೆ ಕಾರಣವಾಗಿದೆ.[೩೦] ಈ ಅಲೆಗಳನ್ನು ವಿಸ್ಮಯ ಎಂದು ನಂಬಲಾಗಿತ್ತು ಹಾಗೂ ಇತ್ತೀಚಿನವರೆಗೂ ಈ ರೀತಿಯ ಅಲೆಗಳು ಇರುವುದು ದಂತಕಥೆ ಎಂದು ನಂಬಲಾಗಿತ್ತು.[೩೧][೩೨] ಅದೇನೇ ಇದ್ದರೂ ಈ ರಾಕ್ಷಸ ಅಲೆಗಳು ವಿಮಾನಗಳ ಕಣ್ಮರೆಗೆ ಕಾರಣವಾಗುವುದಂತೂ ಸಾಧ್ಯವಿಲ್ಲ.

ಗುರುತರ ಘಟನೆಗಳುಸಂಪಾದಿಸಿ

Flight 19ಸಂಪಾದಿಸಿ

 
19ನೇ ಫ್ಲೈಟ್‌ನಂತೆ ಇದ್ದ ಯುಎಸ್ ನೇವಿ ಟಿಬಿಎಫ್ ಗ್ರುಮನ್ ಎವೆಂಜರ್ ಫ್ಲೈಟ್ಈ ಛಾಯಾಚಿತ್ರವನ್ನು ಬಹಳಷ್ಟು ತ್ರಿಕೋಣ ಬರಹಗಾರರು 19ನೇ ಫ್ಲೈಟ್ ಅನ್ನು ಉದಾಹರಿಸುವ ಸಲುವಾಗಿ ಬಳಸಿದ್ದಾರೆ.(ಯು.ಎಸ್ ನೇವಿ)

ತರಬೇತಿ ನಿರತ ಫ್ಲೈಟ್ 19 ಟಿಬಿಎಮ್ ಎವೆಂಜರ್ ಬಾಂಬರ್ ಐದು ವಿಮಾನಗಳ ಗುಂಪೊಂದು ಡಿಸೆಂಬರ್ 5, 1945ರಂದು ಅಟ್ಲಾಂಟಿಕ್ ಮೇಲೆ ಹಾದು ಹೋಗುವಾಗ ಕಣ್ಮರೆಯಾಯಿತು. ವಾಯುದಳದ ಸೇನಾ ವಿಮಾನಗಳನ್ನು ಪೂರ್ವಕ್ಕೆ ೧೨೦ ಮೈಲು, ಉತ್ತರಕ್ಕೆ 73 ಮೈಲು ಮತ್ತು ಅಲ್ಲಿಂದ ಹಿಂದಿರುಗಿ 120 ಮೈಲುಗಳ ಹಾರಾಟ ನಡೆಸಿ ಹಿಂದಿರುಗಿ ನೌಕಾನೆಲೆಗೆ ಬರುವಂತೆ ನಿರ್ದೇಶಿಸಲಾಗಿತ್ತು. ಆದರೆ ವಾಯುಸೇನಾ ಪಡೆಯ ಫ್ಲೈಟ್ 19 ಕಣ್ಮರೆಯಾಯಿತು. ಉತ್ತಮ ವಾತಾವರಣ ಹಾಗೂ ಸಾಕಷ್ಟು ಪರಿಣಿತಿ ಹೊಂದಿದ್ದ ವಿಮಾನ ಚಾಲಕ ಲೆಫ್ಟಿನೆಂಟ್ ಚಾರ್ಲ್ಸ್‌ ಕ್ಯಾರೊಲ್ ಟೈಲರ್ ನೇತೃತ್ವದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಲು ಯಾವುದೋ ಅಸ್ವಾಭಾವಿಕ ಶಕ್ತಿ ಹಾಗೂ ಅತಾರ್ಕಿಕವಾದ ದಿಕ್ಕೂಚಿ ಓದುವಿಕೆ ಕಾರಣ ಎಂದು ಬಿಂಬಿಸಲಾಯ್ತು. ಈ ಗೊಂದಲಕ್ಕೆ ಇನ್ನಷ್ಟು ಸೇರಿಸುತ್ತಾ ನೌಕಾದಳವು ಈ ಅವಘಡ ನಡೆಯಲು ಕಾರಣ "ಯಾವುದೋ ಗುರುತಿಸಲಾಗದ ವಿಷಯ" ಎಂದು ಹೇಳಿಕೆ ನೀಡಿತು. ಲೆಫ್ಟಿನಂಟ್ ಟೈಲರ್ ಅವರ ತಾಯಿಯು ತನ್ನ ಮಗನ ಕೀರ್ತಿಗೆ ದಕ್ಕೆಯಾಗುವುದನ್ನು ತಡೆಯಲು ನೌಕಾದಳವು ಈ ಅವಘಡಕ್ಕೆ "ಯಾವುದೋ ಗುರುತಿಸಲಾಗದ ವಿಷಯ" ಎಂದು ಬರೆಯುವಂತೆ ಮಾಡಿದಳು ಎಂದು ನಂಬಲಾಗಿದೆ. ಈ ಅವಘಡ ನಡೆದ ಸಮಯದಲ್ಲಿ ಟೈಲರ್ ಎಲ್ಲಿ ಇದ್ದಿರಬಹುದು ಎಂದುಕೊಂಡಿದ್ದರೋ ಅಲ್ಲಿಗಿಂತ 50ಕಿಮಿ ದೂರ ವಾಯವ್ಯ ದಿಕ್ಕಿನಲ್ಲಿ ಇದ್ದರು.[೩೩]

ಕಣ್ಮರೆಯಾದ ವಾಯುದಳ ವಿಮಾನದ ಕುರುಹನ್ನು ಹುಡುಕಲು ಹೊರಟ 13 ಜನರಿದ್ದ ರಕ್ಷಣಾ ಪಡೆಯ ಮಾರಿನರ್ ವಿಮಾನವು ತಿರುಗಿ ಬರದೇ ಕಣ್ಮರೆಯಾಗಿ ಈಗಾಗಲೇ ಆಗಿದ್ದ ಅವಘಡದ ವಿಸ್ಮಯಕ್ಕೆ ಇನ್ನೊಂದು ಸೇರ್ಪಡೆಯಾಯ್ತು. ಫ್ಲೋರಿಡಾದಿಂದ ಹೊರಟ ತೈಲಟ್ಯಾಂಕರ್ ನೌಕೆಯೊಂದು ಸ್ಪೋಟವೊಂದನ್ನು ಕಂಡದ್ದಾಗಿ ವರದಿ ಮಾಡಿತು. ಮಾರಿನರ್ ಗಸ್ತು ನಡೆಸುತ್ತಿದ್ದಾಗ ಸ್ಪೋಟಗೊಂಡಿರಬಹುದು ಎಂದು ತೀರ್ಮಾನಿಸಲಾಯಿತು.

ಈ ವಿವರಣೆಗಳು ಸಾಮಾನ್ಯವಾಗಿ ನಿಖರ ಎಂದು ಎನಿಸಿದರೂ ಕೂಡ ಕೆಲವೂ ಮುಖ್ಯವಿಷಯಗಳು ಬಿಟ್ಟು ಹೋಗಿವೆ ಎಂದೆನಿಸುತ್ತದೆ. ಈ ಅವಘಡ ನಡೆದ ಕೊನೆ ಗಳಿಗೆಯಲ್ಲಿ ಅಲ್ಲಿಯ ಹವಾಮಾನ ವಿಪರೀತ ಗಾಳಿಯಿಂದ ಕೂಡಿದ್ದರಿಂದ ನೌಕಾ ಪಡೆಯು ಫ್ಲೈಟ್ 19ರ ಇತರೆ ವಿಮಾನ ಚಾಲಕರ ಜೊತೆಗೆ ಟೈಲರ್ ನಡೆಸಿದ ಸಂಭಾಷಣೆಯನ್ನು ಆಧಾರವಾಗಿರಿಸಿಕೊಂಡು ಇಲ್ಲಿ ನಡೆದ ಅವಘಡಕ್ಕೆ ಆಯಸ್ಕಾಂತಿಯ ಶಕ್ತಿ ಕಾರಣವಲ್ಲ ಎಂಬುದನ್ನು ಪಟ್ಟಿ ಮಾಡಿತು.[೩೩]

ಮೇರಿ ಸೆಲೆಸ್ಟ್‌ಸಂಪಾದಿಸಿ

1872ರಲ್ಲಿ ಕಾಣೆಯಾದ 282 ಟನ್ ತೂಕದ ಮೇರಿ ಸೆಲೆಸ್ಟ್ ಹಡಗು ಪೊರ್ಚುಗಲ್ ಕಡಲು ತೀರವನ್ನು ಬಿಟ್ಟಾಗ ಮುಳುಗಿದ್ದು ಇದು ಅಷ್ಟು ನಿಖರವಾಗಿ ಅಲ್ಲದಿದ್ದರೂ ಕೂಡ ಇದನ್ನು ಈ ತ್ರಿಕೋಣದಲ್ಲೇ ಮುಳುಗಿದ್ದು ಎಂದು ನಮೂದಿಸಲಾಗುತ್ತದೆ. ಬಹುಶ: ಮುಳುಗಿದ 207ಟನ್ ತೂಕದ ಮೇರಿ ಸೆಲೆಸ್ಟ್‌ ಎಂಬ ಇನ್ನೊಂದು ಉಗಿಹಡಗು ಸೆಪ್ಟೆಂಬರ್ 13, 1864ರಲ್ಲಿ ಮಂಜುಗಡ್ಡೆಯೊಂದಕ್ಕೆ ಬಡಿದು ತಕ್ಷಣ ಮುಳುಗಿತು. ಇದನ್ನು ಮೇರಿ ಸೆಲೆಸ್ಟ್‌ ಹಡಗು ಎಂದು ನಮೂದಿಸಲಾಯಿತು ಎಂದುಕೊಳ್ಳಲಾಗಿದೆ.[೩೪][೩೫] ಮೇರಿ ಸೆಲೆಸ್ಟೆ ಕುರಿತಾಗಿ ಕುಶ್ಚೆ ಗುರುತಿಸಿದ ಹಲವಾರು ’ವಿಷಯಗಳು’ ಅರ್ಥರ್ ಕಾನನ್ ಡಯಲ್ ಬರೆದ ಸಣ್ಣ ಕಥೆ "ಜೆ.ಹಬಾಕುಕ್ ಜೊಸೆಫನ್ಸ್‌ ಸ್ಟೇಟ್‌ಮೆಂಟ್" (ನಿಜವಾದ ಮೇರಿ ಸೆಲೆಸ್ಟೆ ಘಟನೆಯ ಕುರಿತು ಬರೆದ ಕಾಲ್ಪನಿಕ ಕತೆ) ಕುರಿತಾದುದಾಗಿದೆ.

ಎಲೆನ್ ಆಸ್ಟಿನ್ಸಂಪಾದಿಸಿ

ದಿ ಎಲೆನ್ ಆಸ್ಟಿನ್ ಎಂಬ ಹಡಗು 1881ರಲ್ಲಿ ನ್ಯೂಯಾರ್ಕ್ ಕಡೆಗಿನ ತನ್ನ ಪ್ರಯಾಣದಲ್ಲಿ ಒಂದು ಬಿಟ್ಟುಹೋಗಲ್ಪಟ್ಟಿದ್ದ ಒಂದು ಹಡಗನ್ನು ಕಂಡರು. ಅದೊಂದು ಖಾಲಿ ತೇಲುತ್ತಿದ್ದ ಹಡಗಾಗಿತ್ತು. ಅದನ್ನು ಪ್ರಮುಖ ನೌಕಾ ಸಿಬ್ಬಂದಿಯವರಿಗೆ ಹಡಗಿನ ಜೊತೆಗೇ ತರಲು ಹೇಳಲಾಯಿತು. ಆದರೆ, ಚಾಲ್ತಿಯಲ್ಲಿರುವ ಕಥೆಗಳ ಪ್ರಕಾರ, ಆ ಹಡಗು ಒಮ್ಮೆ ಕಣ್ಮರೆಯಾಯ್ತು. ಕೆಲವರ ಪ್ರಕಾರ, ಅದು ಮತ್ತೊಮ್ಮೆ ಕಾಣಿಸಿಕೊಂಡಿತು, ಆದರೆ ಅದರಲ್ಲಿದ್ದ ಪ್ರಮುಖ ಸಿಬ್ಬಂದಿಯಿರಲಿಲ್ಲ. ನಂತರ ಮತ್ತೊಂದು ಸಿಬ್ಬಂದಿ ತಂಡವನ್ನು ಕಳುಹಿಸಿದರು. ಆದರೆ ಮತ್ತೆ ಅದು ಅವರನ್ನೂ ಸೇರಿ ಮರೆಯಾಗಿಹೋಯಿತು.

ಲಾಯ್ಡ್ ಆಫ್ ಲಂಡನ್‌ನ ಕಡತಗಳ ಪ್ರಕಾರ ಮೆಟಾ ಎಂಬ ಹಾಯಿದೋಣಿಯನ್ನು 1854ರಲ್ಲಿ ನಿರ್ಮಿಸಲಾಗಿದ್ದು ಅದನ್ನು 1880ರಲ್ಲಿ ಅದನ್ನು ಮೆಟಾ ದ ಬದಲಿಗೆ ಎಲೆನ್ ಆಸ್ಟಿನ್ ಎಂದು ಮರುನಾಮಕರಣ ಮಾಡಲಾಯ್ತು. ಇದರ ಕುರಿತು ಯಾವುದೇ ರೀತಿಯ ಅಪಘಾತ ವರದಿಯಾಗಿಲ್ಲ. ಅಲ್ಲದೆ, ಇದರಿಂದ ಬಹಳಷ್ಟು ಜನ ಕಾಣೆಯಾದ ಬಗ್ಗೆಯೂ ಕೂಡ ಸುಳುವುಗಳು ದೊರೆಯುವುದಿಲ್ಲ.[೩೬]

ಯುಎಸ್‌ಎಸ್‌ ಸೈಕ್ಲೋಪ್ಸ್‌‍ಸಂಪಾದಿಸಿ

ಯುಎಸ್‌ಎಸ್‌ "ಸೈಕ್ಲೋಪ್ಸ್‌" ಕಣ್ಮರೆಯಾದ ಘಟನೆಯ ಅಮೇರಿಕಾ ಸಂಯುಕ್ತ ಸಂಸ್ಥಾನದ ನೌಕಾಪಡೆಯ ಇತಿಹಾಸದಲ್ಲೇ ಭೀಕರವಾದ ಸಾವು ಸಂಭವಿಸಿದ ಘಟನೆಯಾಗಿದೆ. ಬಾರ್ಬಡೋಸ್ ದ್ವೀಪದಿಂದ ಹೊರಟ Lt Cdr ಜಿ.ಡಬ್ಲ್ಯೂ.ವರ್ಲೇ ನೇತೃತ್ವದಲ್ಲಿದ್ದ ಸೈಕ್ಲೋಪ್ಸ್‌ ಅದರಲ್ಲಿದ್ದ ಸುಮಾರು 309 ಜನರೊಂದಿಗೆ ಮಾರ್ಚ್ 4, 1918ರ ಸುಮಾರಿನಲ್ಲಿ ಕಣ್ಮರೆಯಾಯಿತು. ಈ ಘಟನೆಯ ಕುರಿತಾದ ಯಾವುದೇ ಸೂಕ್ತ ಆಧಾರಗಳಿಲ್ಲದಿದ್ದರೂ ಕೂಡ ಬಹಳಷ್ಟು ಜನ ತಮ್ಮದೇ ವಾದವನ್ನು ಮಂಡಿಸಿದ್ದಾರೆ. ಕೆಲವರು ಬಿರುಗಾಳಿ ಇದಕ್ಕೆ ಕಾರಣ ಎಂದು ಇನ್ನು ಕೆಲವರು ಹಡಗು ಮಗುಚಿಕೊಂಡಿದ್ದರಿಂದ ಈ ಘಟನೆ ನಡೆದಿರಬಹು ಹಾಗೂ ಕೆಲವೊಬ್ಬರ ಪ್ರಕಾರ ಯುದ್ಧ ವೈರಿಗಳ ದಾಳಿಯಿಂದ ಇದು ಸಂಭವಿಸಿರಬಹುದು ಎಂದು ನಡೆದ ಘಟನೆಗೆ ವಿವಿಧ ವಿವರಣೆಗಳನ್ನು ನೀಡುತ್ತಾರೆ.[೩೭][೩೮]


ಥಿಯೊಡೋಸಿಯಾ ಬರ್ ಅಲ್ಸ್‌ಟನ್ಸಂಪಾದಿಸಿ

ಥಿಯೊಡೋಸಿಯಾ ಬರ್ ಆಲ್ಸ್ಟಾನ್ ಇವರು ಅಮೇರಿಕಾ ಸಂಯುಕ್ತ ಸಂಸ್ಥಾನದ ಮಾಜಿ ಉಪರಾಷ್ಟ್ರಪತಿ ಅರಾನ್ ಬರ್ ಅವರ ಮಗಳಾಗಿದ್ದಳು. ಇವರ ಕಣ್ಮರೆಯನ್ನು ತ್ರಿಕೋಣದ ಕುರಿತಾದ ಹೇಳಿಕೆಗಳು ಬಂದಾಗೆಲ್ಲಾ ಒಮ್ಮೆಯಾದರೂ ಉದಾಹರಿಸಲಾಗುತ್ತದೆ. [೩೯] ಡಿಸೆಂಬರ್ 30, 1812ರಂದು ದಕ್ಷಿಣ ಕೆರೋಲಿನಾದ ಚಾರ್ಲ್ಸ್‌ಟನ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಹೊರಟ ದಿ ಪೆಟ್ರಿಯಾಟ್ ಹಡಗಿನಲ್ಲಿ ಥಿಯೊಡೋಸಿಯಾ ಪ್ರಯಾಣಿಕರಾಗಿದ್ದರು. ಈ ಪ್ರಯಾಣವನ್ನು ಆದಷ್ಟು ಬರ್ಮುಡಾ ತ್ರಿಕೋಣದ ಆಚೆಯಲ್ಲೇ ಸಾಗುವಂತೆ ನಿರ್ಧರಿಸಲಾಗಿದ್ದರೂ ಕೂಡ ಈ ಪ್ರಯಾಣದ ಸ್ಥಳವು ತ್ರಿಕೋಣದ ಕೊನೆಯ ಪರಿಧಿಯಲ್ಲೇ ಇತ್ತು ಎಂಬುದು ವಿಪರ್ಯಾಸ. ಕಡಲ್ಗಳ್ಳತನ ಹಾಗೂ 1812ರ ಯುದ್ದವನ್ನು ಈ ಕಣ್ಮರೆಯ ಕಾರಣ ಎಂದು ಹಲವಾರು ಜನ ವಾದ ಮಂಡಿಸಿದರು. ಹಾಗೂ ತ್ರಿಕೋಣದ ಹೊರಗೆ ಟೆಕ್ಸಾಸ್‌ ಮೂಲಕ ಕೂಡ ಇವರನ್ನು ಕಳುಹಿಸಬಹುದಾಗಿತ್ತು ಎಂಬ ವಾದಗಳು ಕೇಳಿಬಂದವು.

ಸ್ಪ್ರೇಸಂಪಾದಿಸಿ

ಎಸ್.ವಿ. ''ಸ್ಪ್ರೇ ಇದೊಂದು ತೊರೆಯಲ್ಪಟ್ಟಿದ್ದ ಮೀನುಗಾರಿಕಾ ಹಡಗು ಆಗಿದ್ದು, ಇದನ್ನು ದೀರ್ಘ ಪ್ರಯಾಣದ ಹಡಗಾಗಿ ಮರುಜೋಡಿಸಿ ಜೊಷುವಾ ಸ್ಲೋಕಮ್ ಅವರು 1895ರಿಂದ 1898ರೊಳಗೆ ಏಕವ್ಯಕ್ತಿ ಸಾಗರ ಪರ್ಯಟನೆಯನ್ನು ಪೂರೈಸುವ ಉದ್ದೇಶಕ್ಕೆ ಬಳಸಿದರು.

1909 ರಲ್ಲಿ ಸ್ಲೋಕಮ್ ಅವರು ವೆನಿಜ್ಯುವೆಲಾಕ್ಕೆ ವೈನ್ ಯಾರ್ಡ್ ಹೆವನ್‌ನಿಂದ ಪ್ರಯಾಣವನ್ನು ಪ್ರಾರಂಬಿಸಿದರು. ಅವರಾಗಲಿ ಅಥವಾ ಸ್ಪ್ರೇ ಆಗಲಿ ಆ ನಂತರ ಕಾಣಿಸಿಕೊಳ್ಳಲಿಲ್ಲ. ಅವರ ಕಣ್ಮರೆಯ ಈ ಘಟನೆ ನಡೆದಾಗ ಅವರು ಬರ್ಮುಡಾ ತ್ರಿಕೋಣದ ಪ್ರದೇಶದಲ್ಲಿದ್ದದ್ದು ಅಥವಾ ಅತಿಶಯ ಶಕ್ತಿಯ ಪ್ರಭಾವದಿಂದ ಹೀಗಾಯಿತು ಎಂಬುದಕ್ಕೆ ಯಾವುದೇ ಸಾಕ್ಷ್ಯಾದಾರಗಳಿಲ್ಲ. ಈ ಹಡಗು ತುಂಬಾ ದುಸ್ಥಿಯಲ್ಲಿತ್ತು ಹಾಗೂ ಈ ಹಡಗನ್ನು ನಡೆಸುವಷ್ಟು ಪರಿಣಿತಿ ಸ್ಲೋಕಮ್‌ಗೆ ಇರಲಿಲ್ಲ ಎಂಬುದನ್ನು ಈ ಘಟನೆಯ ಕಾರಣ ಎಂದು ಪರಿಗಣಿಸಲಾಯ್ತು.[೧೪]

 
ಉತ್ತರ ಕೆರೋಲಿನಾದಲ್ಲಿ ಹಾಳಾದ ಸ್ಥಿತಿಯಲ್ಲಿ ಸಿಗುವ ಮೊದಲು ಸ್ಕೂನರ್ ಕೆರೊಲ್ ಎ.ಡೀರಿಂಗ್ ಜನವರಿ 29,1921ರಲ್ಲಿ ಕೇಪ್ ಲುಕ್ ಔಟ್ ದೀಪದ ಹಡಗಿನಿಂದ ನೋಡಲಾಗಿತ್ತು. (ಯು.ಎಸ್ ಕರಾವಳಿ ಕಾವಲು ಪಡೆ)

ಕ್ಯಾರೊಲ್ ಎ.ಡೀರಿಂಗ್‌ಸಂಪಾದಿಸಿ

1919ರಲ್ಲಿ ನಿರ್ಮಿಸಲಾಗಿದ್ದ ಐದು ಜನರಿರಬಹುದಾದ ವೇಗದ ಹಡಗು ಕ್ಯಾರೊಲ್ ಎ.ಡೀರಿಂಗ್ ತೀರಾ ಹಾಳಾದ ಸ್ಥಿತಿಯಲ್ಲಿ ಉತ್ತರ ಕೆರೋಲಿನಾಕೇಪ್ ಹ್ಯಾಟ್ಟರಾಸ್‌ ಸಮೀಪದ ಡೈಮಂಡ್ ಶೋಲ್ಸ್‌ನಲ್ಲಿ ಜನವರಿ 31,1921ರಂದು ಕಂಡುಬಂದಿತು. ಡೀರಿಂಗ್‌ ನ ಈ ಸ್ಥಿತಿಗೆ ಕಾರಣ ಕಡಲ್ಗಳ್ಳತನ. ನಿಷೇಧಿತ ಸಮಯದಲ್ಲಿ ಅಕ್ರಮವಾಗಿ ರಮ್ ಸಾಗಾಣಿಕೆ ಮಾಡುತ್ತಿದ್ದ ಗುಂಪಿಗೆ ಸೇರಿದ್ದ ಎಸ್‌.ಎಸ್‌.ಹೆವಿಟ್ ಎನ್ನುವ ಹಡಗು ಇದೇ ಸಮಯಕ್ಕೆ ಕಣ್ಮರೆಯಾಗಿದ್ದು ಅವರ ಜೊತೆ ಈ ಡೀರಿಂಗ್ ಕೂಡಾ ಸೇರಿರಬಹುದು ಎಂಬ ಗಾಳಿಸುದ್ದಿ ಹಾಗೂ ಆ ಘಟನೆಯ ಜೊತೆ ಇದನ್ನು ಗುರುತಿಸಲಾಯಿತು. ಡೀರಿಂಗ್ ಹೋದ ದಿಕ್ಕಿನಲ್ಲೇ ಅದರ ದಾರಿಗೇ ಸಮನಾಗಿ ಒಂದು ತಾಸುಗಳ ನಂತರ ಕಡಲಿನಲ್ಲಿ ಗಸ್ತಿನಲ್ಲಿದ್ದ ದೀಪದ ಹಡಗಿನ ಎಲ್ಲ ಸಂಜ್ಞೆಗಳನ್ನು ದಿಕ್ಕರಿಸಿ ಹಡಗೊಂದು ಹಾಯ್ದು ಹೋಯ್ತು.

ಡಿರಿಂಗ್‌ ನಲ್ಲಿದ್ದ ಸಿಬ್ಬಂದಿಗಳು ಕಾಣೆಯಾಗುವುದಕ್ಕೆ ಈ ಹೆವಿಟ್ ಎನ್ನುವ ಈ ವಿಸ್ಮಯದ ಹಡಗೇ ಕಾರಣ ಎಂದು ಊಹಿಸಲಾಯಿತು.[೪೦]


ಡೊಗ್ಲಸ್ DC-3ಸಂಪಾದಿಸಿ

ಡಿಸೆಂಬರ್ 28, 1948ರಂದು ಡೌಗ್ಲಾಸ್ DC-3, NC16002 ಸಂಖ್ಯೆಯ ವಿಮಾನವು ಸ್ಯಾನ್‌ಜ್ಯೂವಾನ್, ಪೊರ್ಟೊರಿಕೊದಿಂದ ಮಿಯಾಮಿಗೆ ಹೊರಟು ಕಣ್ಮರೆಯಾಯಿತು. ವಿಮಾನದ ಯಾವುದೇ ಕುರುಹುಗಳು ಹಾಗೂ ಅದರಲ್ಲಿದ್ದ 32 ಜನರ ಬಗ್ಗೆ ಸುಳಿವು ಕೂಡಾ ಪತ್ತೆಯಾಗಲಿಲ್ಲ. ಸಿವಿಲ್ ಏರೊನಾಟಿಕ್ಸ್ ಬೋರ್ಡ್ ತನಿಖೆಯಿಂದ ಈ ಘಟನೆಗೆ ಮುಖ್ಯ ಕಾರಣವು ತಿಳಿದು ಬಂತು. ಆದರೆ ತ್ರಿಕೋಣದ ಬರಹಗಾರರು ಇದನ್ನು ಒಪ್ಪದೇ ಈ ವಾದವನ್ನು ಮುಂದಿಟ್ಟರು:ಸ್ಯಾನ್‌ಜ್ಯೂವಾನ್‌ನಿಂದ ಹಾರಾಟಕ್ಕೆ ಮೊದಲು ವಿಮಾನದ ಬ್ಯಾಟರಿಯನ್ನು ಪರೀಕ್ಷಿಸಿದ್ದು, ಅದು ಕನಿಷ್ಠ ಶಕ್ತಿಯನ್ನು ಹೊಂದಿದ್ದು ತಿಳಿದು ಬಂದಿತು. ಆದರೆ ಅದನ್ನು ಮರುಪೂರಣ ಮಾಡದೇ ಹಾಗೆಯೇ ವಿಮಾನ ಚಾಲಕ ವಿಮಾನ ಹಾರಾಟವನ್ನು ಕೈಗೊಂಡಿದ್ದು ಈ ಘಟನೆಗೆ ಕಾರಣವಾಯ್ತು ಎಂದು ಹೇಳಲಾಗಿದೆ.

ಇದು ಸಂಪೂರ್ಣವಾಗಿ ವಿದ್ಯುತ್ ಕೈಕೊಡಲು ಕಾರಣವಾಯ್ತೋ ಹೇಗೆ ಎಂದು ಹೇಳುವುದು ಗೊತ್ತಾಗುವುದಿಲ್ಲ. ಅದೇನೆ ಇದ್ದರೂ ಪಿಸ್ಟನ್-ಎಂಜಿನ್ ಇರುವ ವಿಮಾನದಲ್ಲಿ ಇಂಜಿನ್ನಿಗೆ ಅಗತ್ಯವಾದ ಶಾಖದ ಕಿಡಿಯನ್ನು ಕೊಡಲು ಹೆಚ್ಚಾಗಿ ಆಯಸ್ಕಾಂತೀಯ ಶಕ್ತಿಯನ್ನು ಬಳಸಲಾಗುತ್ತದೆಯೇ ಹೊರತು ಬ್ಯಾಟರಿ ಶಕ್ತಿಯನ್ನು ಅವಲಂಭಿಸಿರುವ ಇಗ್ನಿಷನ್ ಕಾಯಿಲ್‌ ಬಳಸುವುದು ಕಡಿಮೆ. ಏರೋನಾಟಿಕ್ ಬೋರ್ಡ್ ತನಿಖೆಯ ಅಂಶ ಹುರುಳಿಲ್ಲದ್ದು.[೪೧]


ಸ್ಟಾರ್ ಟೈಗರ್ ಮತ್ತು ಸ್ಟಾರ್ ಏರಿಯಲ್ ಸಂಪಾದಿಸಿ

ಅಜೋರ್ಸ್‌ನಿಂದ ಬರ್ಮುಡಾಗೆ ಹೊರಟ G-AHNP ಸ್ಟಾರ್ ಟೈಗರ್ ವಿಮಾನವು ಜನವರಿ 30,1948ರಂದು ನಾಪತ್ತೆಯಾಯಿತು; ಬರ್ಮುಡಾದಿಂದ ಜಮೈಕಾದ ಕಿಂಗ್ಸ್‌ಟನ್‌ಗೆ ಹೊರಟ G-AGRE ಸ್ಟಾರ್ ಏರಿಯಲ್ ಜನವರಿ 17, 1949ರಂದು ಕಣ್ಮರೆಯಾಯಿತು. ಎರಡೂ ವಿಮಾನಗಳು Avro Tudor IV ಕಂಪೆನಿಗಳ ಪ್ರಯಾಣಿಕ ವಿಮಾನಗಳಾಗಿದ್ದು ಬ್ರಿಟಿಷ್ ಸೌಥ್ ಅಮೇರಿಕನ್ ಏರ್‌ವೇಯ್ಸ್‌‌ನಿಂದ ನಡೆಸಲ್ಪಡುತ್ತಿದ್ದವು.[೪೨] ಎರಡೂ ವಿಮಾನಗಳೂ ತಮ್ಮ ಮಿತಿಯಲ್ಲೇ ಹಾರಾಟ ನಡೆಸಿದ್ದು ಸಣ್ಣದೊಂದು ತಪ್ಪು ಅಥವಾ ಯಾಂತ್ರಿಕ ದೋಷದಿಂದಾಗಿ ಇವುಗಳು ಆ ಸಣ್ಣ ದ್ವೀಪವನ್ನು ತಲುಪುವುದು ಸಾಧ್ಯವಾಗದೇ ಇದ್ದಿರಬಹುದು. ಒಂದು ವಿಮಾನವಂತೂ ತ್ರಿಕೋಣದ ಸ್ಥಳ ಸೇರುವ ಮೊದಲೇ ಕಣ್ಮರೆಯಾಗಿತ್ತು.[೧೪]

KC-135 ಸ್ಟ್ರ್ಯಾಟೋ ಟ್ಯಾಂಕರ್ಸ್ಸಂಪಾದಿಸಿ

ಆಗಸ್ಟ್ 28,1963 ಎರಡು ಯು.ಎಸ್.ಏರ್‌ಫೋರ್ಸ್‌ನ ಇಂದನ ತುಂಬುವ KC-135 ಸ್ಟ್ರ್ಯಾಟೊ ಟ್ಯಾಂಕರ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಮಹಾಸಾಗರದಲ್ಲಿ ಬಿದ್ದವು. ತ್ರಿಕೋಣದ ಅವಘಡಕ್ಕೆ ಸಂಬಂಧಿಸಿದಂತೆ ಈ ಘಟನೆಯ ವಿವರಗಳನ್ನು ವಿನರ್, ಬರ್ಲಿಟ್ಜ್, ಗಡ್ಡಿಸ್[೮][೧೧][೧೨] ಈ ರೀತಿ ಹೇಳುತ್ತಾರೆ, "ಅವುಗಳು ಪರಸ್ಪರ ಡಿಕ್ಕಿ ಹೊಡೆದಿದ್ದರೂ ಕೂಡ ಸಮುದ್ರದಲ್ಲಿ 160 miles (260 km) ನೀರಿನಷ್ಟು ಬೇರ್ಪಟ್ಟ ಎರಡು ಜಾಗಗಳು ಈ ಅವಘಡಕ್ಕೆ ಸಂಬಂಧಿಸಿದಂತೆ ತೋರುತ್ತವೆ. ಕುಶ್ಚೆ ಅವರ ಸಂಶೋಧನೆಯ[೧೪] ಪ್ರಕಾರ ವಾಯುದಳದ ವರ್ಗೀಕರಿಸದ ವರದಿಯಲ್ಲಿ ಗುರುತಿಸಿರುವಂತೆ, ಎರಡನೇ "ಅವಘಡದ ಸ್ಥಳ"ದಲ್ಲಿ ತುಂಬಿಕೊಂಡಿದ್ದ ಕಸವನ್ನು ಹುಡುಕಾಟ ಮತ್ತು ಪಾರುಮಾಡುವ ಹಡಗುಗಳು ಕಂಡುಕೊಂಡಿದ್ದು, ಅದು ಸಮುದ್ರದ ಕಳೆ, ಒದ್ದೆಯಾದ ಕಟ್ಟಿಗೆ ತುಂಡುಗಳು ಒಂದು ಹಳೆಯ ದೋಣಿಗೆ ಸಿಲುಕಿಕೊಂಡಿದ್ದವು.

SS ಮರೈನ್ ಸಲ್ಫರ್ ಕ್ವೀನ್ಸಂಪಾದಿಸಿ

ತೈಲ ಸಾಗಣೆ ಮಾಡುತ್ತಿದ್ದ ಕೆಲವು ಸಮಯದ ನಂತರ ಸಲ್ಫರ್ ಸಾಗಣೆ ಮಾಡುವಂತೆ ಬದಲಾಯಿಸಲಾದ ಎಸ್‌ಎಸ್‌ ಮರೈನ್ ಸಲ್ಫರ್ ಕ್ವೀನ್ T2 ಟ್ಯಾಂಕರ್ ಫೆಬ್ರುವರಿ 4, 1963ರ ನಂತರ ಫ್ಲೋರಿಡಾ ಸರಣಿ ದ್ವೀಪದ ಸಮೀಪದಲ್ಲಿ ಅದರಲ್ಲಿದ್ದ 39 ಜನರೊಂದಿಗೆ ಕಣ್ಮರೆಯಾಯಿತು.ಮರೈನ್ ಸಲ್ಫರ್ ಕ್ವೀನ್ ಹಡಗು ವಿನ್ಸೆಂಟ್ ಗಡ್ಡೀಸ್ ಅವರು 1964 ’ಅರ್ಗೊಸಿ ಮ್ಯಾಗಜಿನ್‌’ನಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಹೆಸರಿಸಿದ ಹಡಗಾಗಿದೆ. ಆದರೆ ಇವರು ಅದನ್ನು ಗುರುತಿಲ್ಲದ ಜಾಗಕ್ಕೆ ಪಯಣ ಬೆಳೆಸಿದ ಹಡಗು ಎಂದು ತಿಳಿಸಿದ್ದಾರೆ. ಆದರೆ ಕಡಲು ಕಣ್ಗಾವಲು ಪಡೆಯು ಈ ಹಡಗಿನ ಕುರಿತಾಗಿ ಇದು ಸರಿಯಾಗಿ ನಿರ್ವಹಣೆ ಇಲ್ಲದ ಅತ್ಯಂತ ಕೆಳಮಟ್ಟದ ನಿರ್ವಹಣೆ ಇರುವ ಈ ಹಡಗನ್ನು ಯಾನಕ್ಕೆ ಯೋಗ್ಯವಾದುದಲ್ಲ ಎಂದು ಪಟ್ಟಿ ಮಾಡಿತ್ತು.[೮][೪೩][೪೪]

ರಾಯ್‌ಫುಕು ಮಾರುಸಂಪಾದಿಸಿ

ತ್ರಿಕೋಣದದಲ್ಲಿ ಜರುಗಿದ ಪ್ರಸಿದ್ಧವಾದ ಒಂದು ಘಟನೆಯಾಗಿ ’ರಾಯ್‌ಫುಕು ಮಾರು’ ವನ್ನು ಹೆಸರಿಸಬಹುದಾಗಿದೆ. 1921ರಲ್ಲಿ (ಕೆಲವೊಬ್ಬರ ಪ್ರಕಾರ ಕೆಲವು ವರ್ಷಗಳ ನಂತರ )ಜಪಾನ್‌ನ ಯುದ್ಧ ಹಡಗು ರಾಯ್‌ಫುಕು ಮಾರು (ಕೆಲವು ಸಲ ರಾಯ್‌ಕುಕೆ ಮಾರು ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ) ಅದರಲ್ಲಿದ್ದ ಎಲ್ಲ ಯೋಧರ ಜೊತೆ ಕಣ್ಮರೆಯಾಯಿತು. ಅಪಾಯವಿರುವ "ಖಡ್ಗದಂತೆ ಅಪಾಯ ಎದುರಿಗಿದೆ, ಬೇಗ ಬನ್ನಿ", ಅಥವಾ "ಇದು ಖಡ್ಗದಂತಿದೆ, ಬೇಗ ಬನ್ನಿ !"ಬರಹಗಾರರು "ಖಡ್ಗ" ಶಬ್ದವನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುವಂತಾಯ್ತು. ಹೆಚ್ಚಾಗಿ ಇದನ್ನು ನೀರಿನ ಬುಗ್ಗೆ ಎಂದೇ ಎಲ್ಲರೂ ವ್ಯಾಖ್ಯಾನಿಸಿದರು (ವೈನರ್). ನೈಜವಾಗಿ ಹಡಗು ತ್ರಿಕೋಣದ ಹತ್ತಿರವೇ ಹೋಗಿಲ್ಲವಾಗಿತ್ತು. ಅಲ್ಲದೇ ಅವರು ಕಳುಹಿಸಿದ ಸಂದೇಶದಲ್ಲಿ ಖಡ್ಗ ಎನ್ನುವ ಶಬ್ಧವೇ ಇಲ್ಲವಾಗಿತ್ತು. ಅವರು ಕಳುಹಿಸಿದ್ದು ("ಈಗ ಅಪಾಯವಿದೆ. ಬೇಗ ಬನ್ನಿ."); ಎಪ್ರಿಲ್ 21,1925ರಂದು ಜರ್ಮನಿಯ ಹ್ಯಾಮ್‌ಬರ್ಗ್ ಪ್ರಯಾಣಕ್ಕಾಗಿ ಬೋಸ್ಟನ್ ಬಿಟ್ಟಾಗ ರಾಯ್‌ಫುಕು ಮಾರಾ ಬಿರುಗಾಳಿಗೆ ಸಿಲುಕಿ ಉತ್ತರ ಅಟ್ಲಾಂಟಿಕ್‌ನಲ್ಲಿ ತನ್ನಲ್ಲಿದ್ದ ಎಲ್ಲರೊಡನೆ ಮುಳುಗಿತು. ಅದೇ ಸಮಯದಲ್ಲಿ ಬಿರುಗಾಳಿಗೆ ಸಿಲುಕಿದ ಇನ್ನೊಂದು ಹಡಗು RMS "ಹೊಮರಿಕ್"ನ ರಕ್ಷಣಾ ಕಾರ್ಯ ಕೈಗೂಡಲಿಲ್ಲ.[೪೫]

ಕನ್ನೆಮಾರಾ IV ಸಂಪಾದಿಸಿ

ವಿಹಾರಕ್ಕೆ ಬಳಸುತ್ತಿದ್ದ ಹಾಯಿದೋಣಿಯೊಂದು ಸೆಪ್ಟೆಂಬರ್ 26, 1955ರಂದು ದಕ್ಷಿಣ ಅಟ್ಲಾಂಟಿಕ್‌ನ ಬರ್ಮುಡಾ ಪ್ರದೇಶದ ತೀರದಲ್ಲಿ ದಿಕ್ಕು ತಪ್ಪಿ ಅನಾಥವಾಗಿ ಬಿದ್ದಿರುವುದು ಕಂಡುಬಂದಿತು. ಈ ಘಟನೆಗೆ ಕುರಿತಂತೆ ವಿವಿಧ ರೀತಿಯ ಹೇಳಿಕೆಗಳು ಕೇಳಿಬಂದವು. (ಬರ್ಲಿಟ್ಜ್, ವೈನರ್[೧೧][೧೨])ಮೂರು ಸುಂಟರಗಾಳಿಗೆ ಸಿಲುಕಿದ ಈ ಹಾಯಿದೋಣಿಯನ್ನು ರಕ್ಷಿಸಲಾಯಿತು ಆದರೆ ಅದರಲ್ಲಿದ್ದ ನಾವಿಕನನ್ನು ರಕ್ಷಿಸುವುದು ಸಾಧ್ಯವಾಗಲಿಲ್ಲ, ಎಂಬುದು ಅವುಗಳಲ್ಲಿ ಒಂದು ಹೇಳಿಕೆ.

1955ರ ಅಟ್ಲಾಂಟಿಕ್‌ನಲ್ಲಿ ಸುಂಟರಗಾಳಿ ಬೀಸುವ ಕಾಲದಲ್ಲಿ ’ಎಡಿತ್‌ ’ ಎನ್ನುವ ಒಂದೇ ಒಂದು ಸುಂಟರಗಾಳಿಯು ಬರ್ಮುಡಾ ಸಮೀಪ ಆಗಸ್ಟ್ ಕೊನೆಯಲ್ಲಿ ಬೀಸಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇನ್ನುಳಿದಂತೆ "ಫ್ಲೋರಾ" ಪೂರ್ವದಲ್ಲಿ ತುಂಬಾ ದೂರದಲ್ಲಿ ಬೀಸಿತ್ತು ಮತ್ತು "ಕೇಟಿ" ಇದು ಹಾಯಿ ದೋಣಿ ಸಿಕ್ಕ ನಂತರದಲ್ಲಿ ಬೀಸಿದೆ. ಕನ್ನೆಮಾರಾ IV ಇದು ಖಾಲಿಯಿದ್ದು, ದಡದಲ್ಲಿಯೇ ಇತ್ತು. ಆದರೆ ’ಎಡಿತ್’ಸುಂಟರಗಾಳಿಗೆ ಸಿಲುಕಿ, ಅದರ ಲಂಗರು ತಪ್ಪಿ ಸಮುದ್ರದಲ್ಲಿ ಬಿದ್ದಿರಬಹುದು ಎಂಬುದನ್ನು ಕೊನೆಗೆ ಕಂಡುಕೊಳ್ಳಲಾಯಿತು.[೧೪]


ಕ್ಯಾರೊಲಿನ್ ಕ್ಯಾಸ್ಕಿಯೋಸಂಪಾದಿಸಿ

ಕ್ಯಾರೋಲಿನ್ ಕ್ಯಾಸ್ಕಿಯೋನಿಂದ ನಡೆಸಲ್ಪಡುತ್ತಿದ್ದ ಸೆಸ್ನಾ ಜೂನ್ 7,1964ರಂದು ಒಬ್ಬ ಪ್ರಯಾಣಿಕನ ಜೊತೆ ಬಹಾಮಾದ ನ್ಯಾಸಾವ್‌ನಿಂದ ಗ್ರ್ಯಾಂಡ್ ಟರ್ಕ್ ದ್ವೀಪದ ಕೋಕ್‌ಬರ್ನ್‌ಗೆ ಪ್ರಯಾಣಿಸುತ್ತಿತ್ತು. ಈ ವಿಮಾನವು 30 ನಿಮಿಷದವರೆಗೆ ದ್ವೀಪವನ್ನು ಸುತ್ತುಹಾಕುತ್ತಿದ್ದುದನ್ನು ಕೊಕ್‌ಬರ್ನ್ ವಿಮಾನ ನಿಲ್ದಾಣದಲ್ಲಿಯ ನಿಯಂತ್ರಕರು ಗಮನಿಸಿದರು. ನಂತರದಲ್ಲಿ ಇದು ಅಲ್ಲಿಂದ ಇನ್ನೊಂದು ದ್ವೀಪದೆಡೆಗೆ ಹಾರಿ ಹೋದದ್ದನ್ನು ಗುರುತಿಸಿದರು. ರೇಡಿಯೋದ ಸಂಜ್ಞೆಗೆ ಅದನ್ನು ಜೋಡಿಸುವುದು ನಿಲ್ದಾಣದಲ್ಲಿ ಕುಳಿತ ನಿಯಂತ್ರಕರಿಗೆ ಸಾಧ್ಯವಾಗಲಿಲ್ಲ.

ತ್ರಿಕೋಣದ ಕುರಿತ ಬರಹಗಾರರುಸಂಪಾದಿಸಿ

ಈ ಮೇಲೆ ಉದಾಹರಿಸಿದ ಪ್ರಸಿದ್ದ ತ್ರಿಕೋಣ ಸಂಬಂಧಿ ಘಟನೆಗಳು ಅಧಿಕೃತ ದಾಖಲೀಕರಣದಿಂದ ತೆಗೆಯಲ್ಪಟ್ಟದ್ದಲ್ಲದೇ ಈ ಕೆಳಗಿನ ಪುಸ್ತಕಗಳಿಂದ ಕೂಡ ತೆಗೆದುಕೊಂಡದ್ದಾಗಿದೆ. ತ್ರಿಕೋಣದ ಸುತ್ತಮುತ್ತ ನಡೆದ ಕೆಲವು ಘಟನೆಗಳ ಬಗ್ಗೆ ವಿವರಣೆಗಳು ಈ ಪುಸ್ತಕಗಳಲ್ಲಿ ಮಾತ್ರ ಲಭ್ಯವಿದೆ :

 • Gian J. Quasar (2003). Into the Bermuda Triangle: Pursuing the Truth Behind the World's Greatest Mystery ((Reprinted in paperback (2005) ISBN 0-07-145217-6) ed.). International Marine / Ragged Mountain Press. ISBN 0-07-142640-X.
 • [೧೧] Charles Berlitz (1974). The Bermuda Triangle (1st ed.). Doubleday. ISBN 0-385-04114-4.
 • [೧೪] Lawrence David Kusche (1975). The Bermuda Triangle Mystery Solved. ISBN 0-87975-971-2.
 • [೧೦] John Wallace Spencer (1969). Limbo Of The Lost. ISBN 0-686-10658-X.
 • David Group (1984). The Evidence for the Bermuda Triangle. ISBN 0-85030-413-X.
 • [೩೪] Daniel Berg (2000). Bermuda Shipwrecks. ISBN 0-9616167-4-1.
 • [೧೨] Richard Winer (1974). The Devil's Triangle. ISBN 0553106880.
 • Richard Winer (1975). The Devil's Triangle 2. ISBN 0553024647.
 • [೩೯] Adi-Kent Thomas Jeffrey (1975). The Bermuda Triangle. ISBN 0446599611.


ವಿವರಗಳಿಗಾಗಿ ನೋಡಿಸಂಪಾದಿಸಿ

ಆಕರಗಳುಸಂಪಾದಿಸಿ

 1. Cochran-Smith, Marilyn (2003). "Bermuda Triangle: dichotomy, mythology, and amnesia". Journal of Teacher Education. 54: 275. doi:10.1177/0022487103256793.
 2. "Introduction". Bermuda Triangle .org. External link in |publisher= (help)
 3. "Aircraft Losses". Bermuda Triangle .org. External link in |publisher= (help)
 4. "Missing Vessels". Bermuda Triangle .org. External link in |publisher= (help)
 5. E.V.W. Jones (September 16, 1950). "unknown title, newspaper articles". Associated Press.
 6. George X. Sand (1952). "Sea Mystery At Our Back Door". Fate. Unknown parameter |month= ignored (help)
 7. Allen W. Eckert (1962). "The Lost Patrol". American Legion. Unknown parameter |month= ignored (help)
 8. ೮.೦ ೮.೧ ೮.೨ Vincent Gaddis (1964). "The Deadly Bermuda Triangle". Argosy: 28–29, 116–118. Unknown parameter |month= ignored (help)
 9. Vincent Gaddis (1965). Invisible Horizons.
 10. ೧೦.೦ ೧೦.೧ ೧೦.೨ John Wallace Spencer (1969). Limbo Of The Lost. ISBN 0-686-10658-X.
 11. ೧೧.೦ ೧೧.೧ ೧೧.೨ ೧೧.೩ ೧೧.೪ Charles Berlitz (1974). The Bermuda Triangle (1st ed.). Doubleday. ISBN 0-385-04114-4.
 12. ೧೨.೦ ೧೨.೧ ೧೨.೨ ೧೨.೩ Richard Winer (1974). The Devil's Triangle. ISBN 0553106880.
 13. "Strange fish: the scientifiction of Charles F. Berlitz, 1913–2003". Skeptic. Altadena, CA. March , 2004. Archived from the original on 2007-09-30. Check date values in: |date= (help)
 14. ೧೪.೦ ೧೪.೧ ೧೪.೨ ೧೪.೩ ೧೪.೪ ೧೪.೫ ೧೪.೬ ೧೪.೭ ೧೪.೮ Lawrence David Kusche (1975). The Bermuda Triangle Mystery Solved. ISBN 0-87975-971-2.
 15. ೧೫.೦ ೧೫.೧ "Bermuda Triangle". Gas Hydrates at the USGS. Woods Hole.
 16. "V A Fogg" (PDF). USCG.
 17. "The Case of the Bermuda Triangle". NOVA / Horizon. 1976-06-27. PBS. 
 18. Taves, Ernest (1978). The Skeptical Inquirer. 111 (1): p.75–76. Missing or empty |title= (help)CS1 maint: extra text (link)
 19. Singer, Barry (1979). The Humanist. XXXIX (3): p.44–45. Missing or empty |title= (help)CS1 maint: extra text (link)
 20. "A Geologist's Adventures with Bimini Beachrock and Atlantis True Believers". Skeptical Inquirer. 2004. Unknown parameter |month= ignored (help)
 21. "UFO over Bermuda Triangle". Ufos.about.com. 2008-06-29. Retrieved 2009-06-01.
 22. "Bermuda Triangle". US Navy. Retrieved 2009-05-26.
 23. Phillips, Pamela. "The Gulf Stream". USNA/Johns Hopkins. Retrieved 2007-08-02.
 24. "Bermuda Triangle: Behind the Intrigue". National Geographic. Retrieved 2009-05-26.
 25. Scott, Captain Thomas A. Histories & Mysteries: The Shipwrecks of Key Largo.
 26. "Office of Scientific & Technical Information, OSTI, U.S. Department of Energy, DOE". OTSI.
 27. "Could methane bubbles sink ships?". Monash Univ.
 28. Paull, C.K. and W.P., D., 1981, (1981). "Appearance and distribution of the gas hydrate reflection in the Blake Ridge region, offshore southeastern United States". Gas Hydrates at the USGS. Woods Hole. MF-1252.CS1 maint: extra punctuation (link) CS1 maint: multiple names: authors list (link)
 29. http://www.nytimes.com/2006/07/11/science/11wave.html?8dpc
 30. [೧][dead link]
 31. "ESA Portal - Ship-sinking monster waves revealed by ESA satellites". Esa.int. 1995-01-01. Retrieved 2009-06-01.
 32. "Secret to Towering Rogue Waves Revealed". LiveScience. 2008-08-04. Retrieved 2009-06-01.
 33. ೩೩.೦ ೩೩.೧ "The Disappearance of Flight 19". Bermuda Triangle .org. External link in |publisher= (help)
 34. ೩೪.೦ ೩೪.೧ Daniel Berg (2000). Bermuda Shipwrecks. ISBN 0-9616167-4-1.
 35. "Mari Celeste Wreck". Shipwreckexpo.com. Retrieved 2009-06-01.
 36. "Ellen Austin". Bermuda Triangle .org. External link in |publisher= (help)
 37. "Bermuda triangle". D Merrill. Archived from the original on 2002-11-24.
 38. "Myths and Folklore of Bermuda". Bermuda Cruises.
 39. ೩೯.೦ ೩೯.೧ Adi-Kent Thomas Jeffrey (1975). The Bermuda Triangle. ISBN 0446599611.
 40. "Carroll A Deering". Graveyard of the Atlantic.
 41. "Airborne Transport, Miami, December 1948" (PDF). Aviation Safety.
 42. "The Tudors". Bermuda Triangle .org. External link in |publisher= (help)
 43. "Marine Sulphur Queen" (PDF). USCG.
 44. "The Queen with the Weak Back". TIME. Archived from the original on 2012-09-12.
 45. "The Case of the Bermuda Triangle". NOVA / Horizon. 1976-06-27. PBS. 

ಇತರ ಮೂಲಗಳುಸಂಪಾದಿಸಿ

ವೃತ್ತ ಪತ್ರಿಕೆ ಲೇಖನಗಳುಸಂಪಾದಿಸಿ

ಪ್ರೊಕ್ವೆಸ್ಟ್ http://proquest.umi.com ಇದರಲ್ಲಿ ವೃತ್ತ ಪತ್ರಿಕೆಯಲ್ಲಿ ಪ್ರಕಟವಾದ ಹಲವಾರು ಘಟನೆಗಳ ಕುರಿತಾದ ಲೇಖನಗಳ ಸಂಗ್ರಹವನ್ನು ಪಿಡಿಎಫ್ ಫಾರ್ಮಾಟ್‌ ನಲ್ಲಿ ಕೊಡಲಾಗಿದೆ. ಈ ಸಂಗ್ರಹದಲ್ಲಿ ನ್ಯೂಯಾರ್ಕ್ ಟೈಮ್ಸ್‌, ವಾಷಿಂಗ್ಟನ್ ಪೋಸ್ಟ್‌ ಮತ್ತು ಅಟ್ಲಾಂಟಾ ಕಾನ್ಟಿಟ್ಯೂಷನ್ ವೃತ್ತ ಪತ್ರಿಕೆಗಳ ಲೇಖನಗಳು ಲಭ್ಯವಿದೆ. ಈ ಅಂತರ್ಜಾಲ ತಾಣವನ್ನು ವೀಕ್ಷಿಸಲು ನೋಂದಣಿ ಅಗತ್ಯವಿದೆ. ಸಾಮಾನ್ಯವಾಗಿ ಕಾಲೇಜ್ ಅಥವಾ ವಿಶ್ವವಿದ್ಯಾಲಯದ ವಾಚಲನಾಲಯಗಳ ಮೂಲಕ ಇದರ ವೀಕ್ಷಣೆ ಮಾಡಬಹುದಾಗಿದೆ.


ಫ್ಲೈಟ್ 19ಸಂಪಾದಿಸಿ

 • "ಗ್ರೇಟ್ ಹಂಟ್ ಆನ್ ಫಾರ್ 27 ನೇವಿ ಫ್ಲೈಯರ್ಸ್‌ ಮಿಸ್ಸಿಂಗ್‌ ಇನ್‌ ಫೈವ್ ಪ್ಲೇನ್ಸ್ ಆಫ್ಪ್‌ ಫ್ಲೋರಿಡಾ", ನ್ಯೂಯಾರ್ಕ್‌ ಟೈಮ್ಸ್‌, ಡಿಸೆಂಬರ‍್ 7, 1945
 • "ವೈಡ್ ಹಂಟ್ ಫಾರ್ 27 ಮೆನ್ ಇನ್ ಸಿಕ್ಸ್‌ ನೇವಿ ಪ್ಲೇನ್ಸ್‌," ವಾಷಿಂಗ್ಟನ್ ಪೋಸ್ಟ್‌, ಡಿಸೆಂಬರ್ 7, 1945.
 • "ಫೈರ್ ಸಿಗ್ನಲ್ಸ್‌‌ ಸೀನ್ ಇನ್ ಏರಿಯಾ ಆಫ್ ಲೊಸ್ಟ್ ಮೆನ್," ವಾಷಿಂಗ್‌ಟನ್ ಪೊಸ್ಟ್‌, ಡಿಸೆಂಬರ್ 9, 1945.

ರೈಫ್ಯೂಕು ಮ್ಯಾರು ಸಂಪಾದಿಸಿ

 • "ಜಪನೀಸ್ ಶಿಪ್ಸ್ ಸಿಂಕ್ಸ್ ವಿತ್ ಎ ಕ್ರ್ಯೂ ಆಫ್ 38; ಲೈನ್ಸ್ ಅನೇಬಲ್ ಟು ಏಡ್," ನ್ಯೂಯಾರ್ಕ್ ಟೈಮ್ಸ್‌, ಏಪ್ರಿಲ್ 22, 1925.
 • "ಪ್ಯಾಸೆಂಜರ್ಸ್ ಡಿಫರ‍್ ಆನ್ ಹೋಮರಿಕ್ ಎಫರ್ಟ್ ಟು ಸೇವ್ ಸಿಂಕಿಂಗ್ ಶಿಫ್," ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 23, 1925.
 • ಹೊಮರಿಕ್ ಕ್ಯಾಪ್ಟನ್ ಅಪ್‌ಹೆಲ್ಡ್ ಬೈ ಸ್ಕಿಪ್ಪರ್ಸ್‌, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 24, 1925.
 • "ಲೈನರ್ ಇಸ್ ಬ್ಯಾಟ್ಟರ್ಡ್ ಇನ್ ರೆಸ್ಕ್ಯೂ ಅಟೆಂಪ್ಟ್," ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 25, 1925.

ಎಸ್‌ಎಸ್‌ ಕಟಾಪ್ಯಾಕ್ಸಿಸಂಪಾದಿಸಿ

 • ಲಾಯ್ಡ್ಸ್‌ ಪೋಸ್ಟ್ಸ್‌ ಕ್ಯೂಟೊಪಾಕ್ಷಿ ಆಸ್ "ಮಿಸ್ಸಿಂಗ್," ನ್ಯೂಯಾರ್ಕ್ ಟೈಮ್ಸ್‌, ಜನವರಿ 7, 1926.
 • "ಎಫರ್ಟ್‌ ಟು ಲೊಕೇಟ್ ಮಿಸ್ಸಿಂಗ್ ಶಿಫ್ ಫೇಲ್," ವಾಷಿಂಗ್‌ಟನ್ ಪೋಸ್ಟ್, ಡಿಸೆಂಬರ್ 6, 1925.
 • "ಲೈಟ್‌ ಹೌಸ್‌ ಕೀಪರ್ಸ್ ಸೀಕ್ ಮಿಸ್ಸಿಂಗ್ ಶಿಫ್," ವಾಷಿಂಗ್‌ಟನ್ ಪೋಸ್ಟ್, ಡಿಸೆಂಬರ್ 7, 1925.
 • "53 ಆನ್ ಮಿಸ್ಸಿಂಗ್ ಕ್ರಾಫ್ಟ್ ಆರ್ ರಿಪೋರ್ಟೆಡ್ ಸೇವ್ಡ್," ವಾಷಿಂಗ್‌ಟನ್ ಪೋಸ್ಟ್, ಡಿಸೆಂಬರ್ 13, 1925.

USS ಸೈಕ್ಲೋಪ್ಸ್‌ (AC-4) ಸಂಪಾದಿಸಿ

 • "ಕೊಲ್ಡ್ ಹೈ ವಿಂಡ್ಸ್‌ ಡು $25,000 ಡ್ಯಾಮೆಜ್," ವಾಷಿಂಗ್‌ಟನ್ ಪೋಸ್ಟ್, ಮಾರ್ಚ್‌ 11, 1918.
 • "ಕೊಲ್ಲಿಯರ್ ಒವರ್‌ಡ್ಯೂ ಎ ಮಂತ್," ನ್ಯೂಯಾರ್ಕ್ ಟೈಮ್ಸ್‌, ಎಪ್ರಿಲ್ 15,1918.
 • "ಮೋರ್ ಶಿಪ್ಸ್‌ ಹಂಟ್ ಫಾರ್ ಮಿಸ್ಸಿಂಗ್ ಸೈಕ್ಲೋಪ್ಸ್," ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 16,1918.
 • "ಹ್ಯಾವ್‌ನಾಟ್ ಗಿವನ್ ಅಪ್ ಹೋಪ್ ಫಾರ್ ಸೈಕ್ಲೋಪ್ಸ್‌," ನ್ಯೂಯಾರ್ಕ್ ಟೈಮ್ಸ್‌‍, ಎಪ್ರಿಲ್ 17, 1918.
 • ಕೋಲಿಯರ‍್ ಸೈಕ್ಲೋಪ್ಸ್ ಈಸ್ ಲೊಸ್ಟ್‌; 293 ಪರ್ಸ್‌ನ್ಸ್ ಆನ್ ಬೋರ್ಡ್‌‍; ಎನಿಮಿ ಬ್ಲೋವ್ ಸಸ್ಪೆಕ್ಟೆಡ್," ವಾಷಿಂಗ್‌ಟನ್ ಪೋಸ್ಟ್, ಎಪ್ರಿಲ್ 15,1918.
 • "ಯು.ಎಸ್. ಕಾನ್ಸೋಲ್ ಗೊಟ್ಸ್‌ಚಾಲ್ಕ್ ಕಮಿಂಗ್ ಟು ಎಂಟರ್ ದಿ ವಾರ್," ವಾಷಿಂಗ್‌ಟನ್ ಪೋಸ್ಟ್, ಎಪ್ರಿಲ್ 15,1918.
 • "ಸೈಕ್ಲೋಪ್ಸ್‌ ಸ್ಕಿಪ್ಪರ್ ಟ್ಯೂಟೊನ್, ’ಟಿಸ್ ಸೆಡ್," ವಾಷಿಂಗ್‌ಟನ್ ಪೋಸ್ಟ್, ಎಪ್ರಿಲ್ 16,1918.
 • "ಫೇಟ್ ಆಫ್ ಶಿಫ್ ಬ್ಯಾಫ್‌ಲೆಸ್," ವಾಷಿಂಗ್‌ಟನ್ ಪೋಸ್ಟ್, ಎಪ್ರಿಲ್ 16, 1918.
 • "ಸ್ಟೀಮರ್‌ ಮೆಟ್ ಗೇಲ್ ಆನ್ ಸೈಕ್ಲೋಪ್ಸ್’ ಕೋರ್ಸ್‌," ವಾಷಿಂಗ್‌ಟನ್ ಪೋಸ್ಟ್, ಎಪ್ರಿಲ್ 19, 1918.


ಕ್ಯಾರೊಲ್ ಎ.ಡೀರಿಂಗ್‌ಸಂಪಾದಿಸಿ

 • "ಪೈರಸಿ ಸಸ್ಪೆಕ್ಟೆಡ್ ಇನ್ ಡಿಸ್‌ಅಪಿಯರೆನ್ಸ್‌ ಆಪ್ 3 ಅಮೇರಿಕನ್‌ ಶಿಪ್ಸ್‌," ನ್ಯೂ ಯಾರ್ಕ್‌ ಟೈಮ್ಸ್‌, ಜುಲೈ 21,1921.
 • "ಬಾಥ್ ಒನರ್ಸ್‌ ಸ್ಕೆಪ್ಟಿಕಲ್, "ನ್ಯೂಯಾರ್ಕ್ ಟೈಮ್ಸ್‌, ಜೂನ್ 22, 1921. ಪಿಯೆರಾ ಅಂಟೊನೆಲ್ಲಾ.
 • ಡೀರಿಂಗ್ ಸ್ಕಿಪ್ಪರ್ಸ್ ವೈಫ್ ಕಾಸ್ಡ್‌ ಇನ್ವೆಸ್ಟಿಗೇಷನ್," ನ್ಯೂಯಾರ್ಕ್ ಟೈಮ್ಸ್, ಜೂನ್ 22, 1921.
 • "ಮೋರ್ ಶಿಪ್ಸ್ ಆ‍ಯ್‌ಡೆಡ್ ಟು ಮಿಸ್ಟರಿ ಲಿಸ್ಟ್," ನ್ಯೂಯಾರ್ಕ್ ಟೈಮ್ಸ್‌‍, ಜೂನ್ 22, 1921
 • "ಹಂಟ್ ಆನ್ ಫಾರ್ ಪೈರೇಟ್ಸ್," ವಾಷಿಂಗ್‌‍ಟನ್ ಪೋಸ್ಟ್, ಜೂನ್ 21, 1921
 • ಕಾಂಬ್‌ ಸೀಸ್ ಫಾರ್‌ ಶಿಪ್ಸ್‌," ವಾಷಿಂಗ್‌ಟನ್ ಪೋಸ್ಟ್ತ್, ಜೂನ್‌ 22, 1921.
 • "ಪೋರ್ಟ್ ಆಫ್ ಮಿಸ್ಸಿಂಗ್ ಶಿಪ್ಸ್ ಕ್ಲೇಮ್ಸ್ 3000 ಇಯರ್ಲಿ," ವಾಷಿಂಗ್‌ಟನ್ ಪೋಸ್ಟ್ ಜುಲೈ 10,1921.

ವ್ರೆಕ್ಕರ್ಸ್ಸಂಪಾದಿಸಿ

 • "ವ್ರೆಕ್ರಿಯೇಷನ್’ ವಾಸ್ ದಿ ನೇಮ್‌ ಆಪ್‌ ದಿ ಗೇಮ್ ದಟ್ ಫ್ಲರೀಷ್ಡ್ 100 ಇಯರ್ಸ್ ಎಗೊ," ನ್ಯೂಯಾರ್ಕ್‌ ಟೈಮ್ಸ್‌, ಮಾರ್ಚ್ 30, 1969.

ಎಸ್‌.ಎಸ್‌.ಸುಡಫ್ಕೋಸಂಪಾದಿಸಿ

 • ‌"ಟು ಸರ್ಚ್‌ ಫಾರ್ ಮಿಸ್ಸಿಂಗ್ ಫ್ರೈಟರ್," ನ್ಯೂಯಾರ್ಕ್ ಟೈಮ್ಸ್‌, ಎಪ್ರಿಲ್ 11, 1926.
 • "ಅಬಾಂಡನ್ ಹೋಪ್ ಫಾರ್ ಶಿಪ್," ನ್ಯೂಯಾರ್ಕ್ ಟೈಮ್ಸ್‌‍, ಎಪ್ರಿಲ್ 28,1926.

ಸ್ಟಾರ್ ಟೈಗರ್ ಆ‍ಯ್‌೦ಡ್ ಸ್ಟಾರ್ ಏರಿಯಲ್ಸಂಪಾದಿಸಿ

 • "ಹೋಪ್ ವೇನ್ಸ್‌ ಇನ್ ಸೀ ಸರ್ಚ್‌ ಫಾರ್ 28 ಅಬೋರ್ಡ್ ಲೊಸ್ಟ್ ಏರ್‌ಲೈನರ್," ನ್ಯೂಯಾರ್ಕ್ ಟೈಮ್ಸ್, ಜನವರಿ 31, 1948.
 • "72 ಪ್ಲೇನ್ಸ್‌ ಸರ್ಚ್‌ ಸೀ ಫಾರ್‌ ಏರ್‌ಲೈನರ್," ನ್ಯೂಯಾರ್ಕ್ ಟೈಮ್ಸ್‌‍, ಜನವರಿ 19, 1949.

DC-3 ಏರ್‌ಲೈನರ್ NC16002 ಕಣ್ಮರೆಸಂಪಾದಿಸಿ

 • "30ಪ್ಯಾಸೆಂಜರ್ ಏರ್‌ಲೈನರ್ ಡಿಸಪಿಯರ್ಸ್ ಇನ್ ಫ್ಲೈಟ್ ಫ್ರಾಮ್ ಸ್ಯಾನ್ ಜುವಾನ್ ಟು ಮಿಯಾಮಿ," ನ್ಯೂಯಾರ್ಕ್ ಟೈಮ್ಸ್‌, ಡಿಸೆಂಬರ್ 29, 1948.
 • "ಚೆಕ್ ಕ್ಯೂಬಾ ರಿಫೋರ್ಟ್ ಆಫ್ ಮಿಸ್ಸಿಂಗ್ ಏರ್‌ಲೈನರ್," ನ್ಯೂಯಾರ್ಕ್ ಟೈಮ್ಸ್, ಡಿಸೆಂಬರ್ 30, 1948.
 • "ಏರ್‌ಲೈನರ್ ಹಂಟ್ ಎಕ್ಸ್ಟೆಂಡೆಡ್," ನ್ಯೂಯಾರ್ಕ್ ಟೈಮ್ಸ್‌, ಡಿಸೆಂಬರ್ 31, 1948.

ಹಾರ್ವೆ ಕಾನೊವರ್ ಮತ್ತು ರೆವೊನೊಕ್ಸಂಪಾದಿಸಿ

 • "ಸರ್ಚ್ ಕಂಟಿನ್ಯೂಯಿಂಗ್ ಫಾರ್ ಕೊನೊವರ್ ಯಾವ್ಲ್‌," ನ್ಯೂಯಾರ್ಕ್ ಟೈಮ್ಸ್‌, ಜನವರಿ 8, 1958.
 • "ಯಾಚ್‌ ಸರ್ಚ್ ಗೋಸ್ ಆನ್," ನ್ಯೂಯಾರ್ಕ್ ಟೈಮ್ಸ್‌, ಜನವರಿ 9,1958.
 • "ಯಾಚ್‌ ಸರ್ಚ್‌ ಪ್ರೆಸ್ಸ್ಡ್‌‍," ನ್ಯೂಯಾರ್ಕ್ ಟೈಮ್ಸ್‌, ಜನವರಿ 10,1958.
 • "ಕೊನೊವರ್ ಸರ್ಚ್‌ ಕಾಲ್ಡ್ ಆಫ್‌," ನ್ಯೂಯಾರ್ಕ್‌ ಟೈಮ್ಸ್‌, ಜನವರಿ 15, 1958.

KC-135 ಸ್ಟ್ರಾಟೊ ಟ್ಯಾಂಕರ್ಸ್ಸಂಪಾದಿಸಿ

 • "ಸೆಕಂಡ್ ಏರಿಯಾ ಆಫ್ ಡೆಬ್ರಿಸ್ ಫೌಂಡ್ ಇನ್ ಹಂಟ್ ಫಾರ್ ಜೆಟ್ಸ್‌‍," ನ್ಯೂಯಾರ್ಕ್ ಟೈಮ್ಸ್‌, ಆಗಸ್ಟ್ 31, 1963.
 • "ಹಂಟ್ ಫಾರ್ ಟ್ಯಾಂಕರ್ ಜೆಟ್ಸ್ ಹಾಲ್ಟೆಡ್," ನ್ಯೂಯಾರ್ಕ್ ಟೈಮ್ಸ್‌‍, ಸೆಪ್ಟೆಂಬರ್ 3, 1963.
 • "ಪ್ಲೇನ್ಸ್ ಡೆಬ್ರಿಸ್ ಫೌಂಡ್ ಇನ್ ಜೆಟ್ ಟ್ಯಾಂಕರ್‌ ಹಂಟ್," ವಾಷಿಂಗ್‌ಟನ್ ಪೋಸ್ಟ್, ಆಗಸ್ಟ್ 30, 1963.

B-52 ಬಾಂಬರ್‌ (ಪೊಗೊ 22 )ಸಂಪಾದಿಸಿ

 • "ಯು.ಎಸ್.-ಕೆನಡಾ ಟೆಸ್ಟ್ ಆಫ್ ಏರ್ ಡಿಫೆನ್ಸ್‌ ಎ ಸಕ್ಸಸ್," ನ್ಯೂಯಾರ್ಕ್ ಟೈಮ್ಸ್‌, ಅಕ್ಟೋಬರ್ 16, 1961.
 • "ಹಂಟ್ ಫಾರ್ ಲೊಸ್ಟ್ B-52 ಬಾಂಬರ್‌ ಪುಶ್ಡ್ ಇನ್ ನ್ಯೂಯಾರ್ಕ್ ಏರಿಯಾ," ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 17,1961.
 • " ಬಾಂಬರ್‌ ಹಂಟ್ ಪ್ರೆಸ್ಸ್ಡ್‌," ನ್ಯೂಯಾರ್ಕ್ ಟೈಮ್ಸ್‌, ಅಕ್ಟೋಬರ್ 18. 1961.
 • "ಬಾಂಬರ್‌ ಸರ್ಚ್‌ ಕಂಟಿನ್ಯೂಯಿಂಗ್," ನ್ಯೂಯಾರ್ಕ್ ಟೈಮ್ಸ್‌‍, ಅಕ್ಟೋಬರ್ 19.1961.
 • "ಹಂಟ್ ಫಾರ್ ಬಾಂಬರ‍್ ಎಂಡ್ಸ್‌," ನ್ಯೂಯಾರ್ಕ್ ಟೈಮ್ಸ್‌, ಅಕ್ಟೋಬರ್ 20, 1961.

ಚಾರ್ಟರ್ ವೆಸ್ಸೆಲ್ ಸ್ನೊ ಬಾಯ್ ಸಂಪಾದಿಸಿ

 • " ಪ್ಲೇನ್‌ ಹಂಟಿಂಗ್ ಬೋಟ್ ಸೈಟ್ಸ್‌ ಬಾಡಿ ಇನ್ ಸೀ," ನ್ಯೂಯಾರ್ಕ್ ಟೈಮ್ಸ್‌, ಜುಲೈ ‌7, 1963.
 • "ಸರ್ಚ್ ಅಬಾಂಡನ್ಡ್ ಫಾರ್ 40 ಆನ್ ವೆಸ್ಸೆಲ್ ಲಾಸ್ಟ್ ಇನ್ ಕ್ಯಾರಿಬಿಯನ್," ನ್ಯೂಯಾರ್ಕ್ ಟೈಮ್ಸ್‌, ಜುಲೈ 11, 1963.
 • " ಸರ್ಚ್‌ ಕಂಟಿನ್ಯೂಸ್ ಫಾರ್ ವೆಸ್ಸೆಲ್ ವಿತ್ 55 ಅಬೋರ್ಡ್ ಇನ್ ಕ್ಯಾರಿಬಿಯನ್," ವಾಷಿಂಗ್‌ಟನ್ ಪೋಸ್ಟ್ತ್, ಜುಲೈ 6, 1963.
 • "ಬಾಡಿ ಫೌಂಡ್ ಇನ್ ಸರ್ಚ್‌ ಫಾರ್ ಫಿಶಿಂಗ್ ಬೋಟ್," ವಾಷಿಂಗ್‌ಟನ್ ಪೋಸ್ಟ್, ಜುಲೈ 7, 1963.

SS ಮರೀನ್ ಸಲ್ಫರ್ ಕ್ವೀನ್ಸಂಪಾದಿಸಿ

 • "ಟ್ಯಾಂಕರ‍್ ಲೊಸ್ಟ್ ಇನ್ ಅಟ್ಲಾಂಟಿಕ್;39 ಅಬೋರ್ಡ್," ವಾಷಿಂಗ್‌ಟನ್ ಪೋಸ್ಟ್, ಫೆಬ್ರುವರಿ 9, 1963.
 • "ಡೆಬ್ರಿಸ್ ಸೈಟೆಡ್ ಇನ್ ಪ್ಲೇನ್ ಸರ್ಚ್‌ ಫಾರ್ ಟ್ಯಾಂಕರ‍್ ಮಿಸ್ಸಿಂಗ್ ಆಫ್‌ ಫ್ಲೋರಿಡಾ," ನ್ಯೂಯಾರ್ಕ್ ಟೈಮ್ಸ್‌‍, ಫೆಬ್ರುವರಿ 11, 1963.
 • "2.5 ಮಿಲಿಯನ್ ಈಸ್ ಆಸ್ಕ್ಡ್‌ ಇನ್ ಸೀ ಡಿಸಾಸ್ಟರ್," ವಾಷಿಂಗ್‌ಟನ್ ಪೋಸ್ಟ್, ಫೆಬ್ರುವರಿ 19, 1963.
 • "ವ್ಯಾನಿಷಿಂಗ್ ಆಫ್ ಶಿಫ್ ರೂಲ್ಡ್ ಎ ಮಿಸ್ಟರಿ," ನ್ಯೂಯಾರ್ಕ್ ಟೈಮ್ಸ್‌‍, ಎಪ್ರಿಲ್ 14, 1964.
 • "ಫ್ಯಾಮಿಲಿಸ್ ಆಫ್ 39 ಲೊಸ್ಟ್ ಅಟ್ ಸೀ ಬಿಗನ್ $20-ಮಿಲಿಯನ್ ಸ್ಯೂಟ್ ಹಿಯರ್," ನ್ಯೂಯಾರ್ಕ್ ಟೈಮ್ಸ್‌, ಜೂನ್ 4, 1969.
 • "10-ಇಯರ್ ರಿಫ್ಟ್ ಒವರ್ ಲೊಸ್ಟ್ ಶಿಪ್ ನಿಯರ್ ಎಂಡ್," ನ್ಯೂಯಾರ್ಕ್ ಟೈಮ್ಸ್, ಫೆಬ್ರುವರಿ 4, 1973.

SS ಸಿಲ್ವಿಯಾ ಎಲ್.ಒಸ್ಸಾ ಸಂಪಾದಿಸಿ

 • "ಶಿಫ್ ಆ‍ಯ್‌೦ಡ್ 37 ವ್ಯಾನಿಶ್ ಇನ್ ಬರ್ಮುಡಾ ಟ್ರಿಯಾಂಗಲ್ ಆನ್ ವೊಯೋಜ್ ಟು ಯು.ಎಸ್.," ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 18, 1976.
 • "ಶಿಫ್ ಮಿಸ್ಸಿಂಗ್ ಇನ್ ಬರ್ಮುಡಾ ಟ್ರಿಯಾಂಗಲ್ ನೌ ಪ್ರೆಸ್ಯೂಮ್ಡ್ ಟು ಬಿ ಲೊಸ್ಟ್ ಅಟ್ ಸೀ," ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 19,1976.
 • "ಡಿಸ್ಟ್ರೆಸ್ ಸಿಗ್ನಲ್ ಹರ್ಡ್ ಫ್ರಮ್ ಅಮೇರಿಕನ್ ಸೇಲರ್ ಮಿಸ್ಸಿಂಗ್ ಫಾರ್ 17 ಡೇಯ್ಸ್," ನ್ಯೂಯಾರ್ಕ್ ಟೈಮ್ಸ್‌‍, ಅಕ್ಟೋಬರ್ 31, 1976.

ಜಾಲತಾಣದ ಕೊಂಡಿಗಳುಸಂಪಾದಿಸಿ

ಈ ಕೆಳಗೆ ಕೊಟ್ಟಿರುವ ಜಾಲ ತಾಣಗಳಲ್ಲಿರುವ ವಿಷಯವು ಬರ್ಮುಡಾ ತ್ರಿಕೋಣದ ಕುರಿತಾದ ಜನಪ್ರಿಯ ವಿಷಯಗಳನ್ನು ಹಾಗೂ ಅಧಿಕೃತ ಮೂಲಗಳು ಕೈಗೊಂಡ ತನಿಖೆ ಹಾಗೂ ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ವರದಿಗಳು, ಉದಾಹರಣೆಗೆ ಸಂಯುಕ್ತ ಸಂಸ್ಥಾನ ನೌಕಾದಳ ಅಥವಾ ಸಂಯುಕ್ತ ಸಂಸ್ಥಾನದ ಕರಾವಳಿ ಕಾವಲು ಪಡೆಯವರು ನಡೆಸಲ್ಪಟ್ಟ ವಿಚಾರಣೆ ಹಾಗೂ ತನಿಖೆಯ ವರದಿಗಳನ್ನು ಒಳಗೊಂಡಿರುತ್ತವೆ. ಕೆಲವು ತನಿಖೆಯ ವರದಿಗಳು ಅಂತರ್ಜಾಲದಲ್ಲಿ ಲಭ್ಯವಿಲ್ಲವಾಗಿದ್ದು ನೇರವಾಗಿ ಸಂಬಂಧಪಟ್ಟ ಕಛೇರಿಯಿಂದ ಮಾಹಿತಿಯನ್ನು ಪಡೆಯಬೇಕಾಗುವುದು. ಉದಾಹರಣೆಗೆ ಫ್ಲೈಟ್ 19 ಕಣ್ಮರೆಯಾಗಿದ್ದು ಅಥವಾ ಯುಎಸ್‌ಎಸ್‌ ಸೈಕ್ಲೋಪ್ಸ್‌ ಬಗ್ಗೆ ಮಾಹಿತಿ ಬೇಕಾದರೆ ನೇರವಾಗಿ ಸಂಯುಕ್ತ ಸಂಸ್ಥಾನದ ಇತಿಹಾಸ ಕೇಂದ್ರದಿಂದ ತರಿಸಿಕೊಳ್ಳಬೇಕಾಗುತ್ತದೆ.

ಪುಸ್ತಕಗಳುಸಂಪಾದಿಸಿ

ಇಲ್ಲಿ ನಮೂದಿಸಲಾದ ಹೆಚ್ಚಿನ ಪುಸ್ತಕಗಳ ಪ್ರತಿಗಳು ಲಭ್ಯವಿಲ್ಲ. ಪ್ರತಿಗಳನ್ನು ನಿಮ್ಮ ಸಮೀಪದ ಸಾರ್ವಜನಿಕ ವಾಚನಾಲಯಗಳಿಂದ ಪಡೆದುಕೊಳ್ಳಬಹುದು ಅಥವಾ ಬಳಸಿದ ಪುಸ್ತಕಗಳು ಸಿಗುವ ಪುಸ್ತಕದ ಅಂಗಡಿಯಿಂದ ಖರೀದಿಸಬಹುದು ಅಥವಾ E-Bay ಅಥವಾ Amazon.com.ನಲ್ಲಿ ಹುಡುಕಬಹುದು.

ಬರ್ಮುಡಾ ತ್ರಿಕೋಣದ ಸುತ್ತಮುತ್ತ ನಡೆದ ಕೆಲವು ಘಟನೆಗಳಿಗೆ ಈ ಪುಸ್ತಕಗಳು ಮಾತ್ರ ಮಾಹಿತಿ ಒದಗಿಸುವ ಆಕರಗಳಾಗಿವೆ ಎಂಬುದನ್ನು ಗಮನಿಸಬೇಕಾಗುತ್ತದೆ.

 • ಜಿಯಾನ್ ಜೆ.ಕ್ವಾಸಾರ್ ಅವರಿಂದ ಬರಯಲ್ಪಟ್ಟ ಇಂಟು ದಿ ಬರ್ಮುಡಾ ಟ್ರಿಯಾಂಗಲ್ : ಪರ್ಸ್ಯೂಯಿಂಗ್ ದಿ ಟ್ರುಥ್ ಬಿಹೈಂಡ್ ದಿ ವರ್ಲ್ಡ್ಸ್‌‍ ಗ್ರೇಟೆಸ್ಟ್ ಮಿಸ್ಟರಿ , ಇಂಟರ್‌ನ್ಯಾಷನಲ್ ಮರೀನ್/ರಾಗ್ಡ್ ಮೌಂಟೇನ್ ಫ್ರೆಸ್ (2003)ಐಎಸ್‌ಬಿಎನ್‌ 0-07-142640-x; ಕಣ್ಮರೆಯಾದ ವಿಮಾನಗಳ ಬಗ್ಗೆ ಅಧಿಕೃತ ಮೂಲಗಳಿಂದ ಮಾಡಲ್ಪಟ್ಟ ಸಂಶೋಧನೆಯ ವಿವರಗಳನ್ನು ಇದು ಒಳಗೊಂಡಿದೆ.

ಪೇಪರ್‌ಬ್ಯಾಕ್‌ ಗುಣಮಟ್ಟದಲ್ಲಿ ಇದು ಮರುಮುದ್ರಣ (2005)ಗೊಂಡಿದೆ. ISBN 0-07-145217-6).

 • ಚಾರ್ಲ್ಸ್‌ ಬರ್ಲಿಟ್ಜ್ (ಐಎಸ್‌ಬಿಎನ್‌ 0-385-04114-4)ಬರೆದ ದಿ ಬರ್ಮುಡಾ ಟ್ರಿಯಾಂಗಲ್ , ಈ ಪುಸ್ತಕದ ಪ್ರತಿಗಳು ಲಭ್ಯವಿಲ್ಲ; ಆದರೆ ಈ ಪುಸ್ತಕದಲ್ಲಿ ಇರುವ ವಿಷಯಗಳನ್ನೇ ಇದರಲ್ಲಿರುವ ಘಟನೆಗಳನ್ನೇ ಆದರಿಸಿ ಬರೆದ ಹಲವಾರು ಪುಸ್ತಕಗಳು ಲಭ್ಯವಿದೆ.
 • ದಿ ಬರ್ಮುಡಾ ಟ್ರಿಯಾಂಗಲ್ ಮಿಸ್ಟರಿ ಸೊಲ್ವ್ಡ್‌‍ (1975). ಲಾರೆನ್ಸ್‌ ಡೆವಿಡ್ ಕಾಸ್ಚ್ (ISBN 0-87975-971-2)
 • ಲಿಂಬೊ ಆಫ್ ದಿ ಲೊಸ್ಟ್, ಜಾನ್ ವಾಲೆಸ್ ಸ್ಪೆನ್ಸರ್ (ISBN ೦-686-10658-x)
 • ದಿ ಎವಿಡೆನ್ಸ್‌ ಫಾರ್ ದಿ ಬರ್ಮುಡಾ ಟ್ರಿಯಾಂಗಲ್ , (1984), ಡೆವಿಡ್ ಗ್ರೂಪ್ (ISBN 0-85030-413-X)
 • ದಿ ಫೈನಲ್ ಫ್ಲೈಟ್ , (2006), ಟೋನಿ ಬ್ಲಾಕ್‌ಮನ್ (ISBN 0-9553856-0-1) -ಈ ಪುಸ್ತಕವು ಕಾಲ್ಪನಿಕ ಕಥೆಯಾದಾರಿತ ಕೃತಿ ಎಂಬುದು ಗಮನದಲ್ಲಿರಲಿ.
 • ಬರ್ಮುಡಾ ಶಿಪ್‌ವ್ರೆಕ್ಸ್‌ , (2000), ಡೇನಿಯಲ್ ಬರ್ಗ್‌ (ISBN 0-9616167-4-1)
 • ದಿ ಡೆವಿಲ್ಸ್‌ ಟ್ರಿಯಾಂಗಲ್ , (1974), ರಿಚರ್ಡ್ ವೈನರ್ (ISBN ೦553106880); ಈ ಪುಸ್ತಕವು ಮುದ್ರಣದ ಮೊದಲ ವರ್ಷ ಮಿಲಿಯನ್ ಪ್ರತಿಗಳಿಗಿಂತ ಹೆಚ್ಚಿಗೆ ಮಾರಾಟ ಕಂಡಿತು; ಈವರೆಗೆ ಸುಮಾರು 17 ಬಾರಿ ಮರು ಮುದ್ರಣಗೊಂಡಿದೆ.
 • ದಿ ಡೆವಿಲ್ಸ್ ಟ್ರಿಯಾಂಗಲ್ 2 (1975), ರಿಚರ್ಡ್ ವೈನರ್ (ISBN 0-553-02464-7)
 • ಫ್ರಮ್‌ ದಿ ಡೆವಿಲ್ಸ್‌ ಟ್ರಿಯಾಂಗಲ್ ಟು ದಿ ಡೆವಿಲ್ಸ್‌ ಜಾವ್‌ (1977), ರಿಚರ್ಡ್‌ ವೈನರ್ (ISBN 0-553-10860-3)
 • ಘೋಸ್ಟ್ ಶಿಫ್ಸ್‌: ಟ್ರ್ಯೂ ಸ್ಟೋರೀಸ್ ಆಫ್ ನಾಟಿಕಲ್ ನೈಟ್‌ಮೇರ್ಸ್‌, ಹೌಂಟಿಂಗ್ಸ್‌, ಆ‍ಯ್ಂಡ್ ಡಿಸಾಸ್ಟರ್ಸ್ (2000), ರಿಚರ್ಡ್ ವೈನರ್ (ISBN 0-425-17548-0)
 • ದಿ ಬರ್ಮುಡಾ ಟ್ರಿಯಾಂಗಲ್ (1975) ಬೈ ಆಡಿ-ಕೆಂಟ್ ಥಾಮಸ್ ಜೆಫ್ರಿ (ISBN 0-446-59961-1)

ಹೊರಗಿನ ಕೊಂಡಿಗಳುಸಂಪಾದಿಸಿ