ಬನ್ಸ್

ಕರಾವಳಿ ತಿನಿಸು

ಮಂಗಳೂರು ಬನ್ಸ್ ಕೆಲವು ಆಹಾರ ಪದಗಳೊಂದಿಗೆ ಊರ ಹೆಸರು ಸೇರಿಸಿರುವುದು ಸಾಮಾನ್ಯವಾಗಿದೆ. ಉದಾಹರಣೆಗೆ, ಧಾರವಾಡ ಪೇಡಾ, ಮೈಸೂರು ಪಾಕ್, ಮಂಗಳೂರು ಬಜ್ಜಿ, ಮದ್ದೂರ್ ವಡಾ, ಮತ್ತು ದಾವಣಗೆರೆ ಬೆಣ್ಣೆ ದೋಸೆ ಇತ್ಯಾದಿ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಊರ ಹೆಸರಿನೊಂದಿಗೆ ಪ್ರಸಿದ್ಧವಾದ ಉಪಾಹಾರ ಎಂದರೆ ಮಂಗಳೂರು ಬನ್ಸ್ (Mangalore Buns). ಇದು ಬೆಳಿಗ್ಗೆಯ ಉಪಾಹಾರ ಅಥವಾ ಸಂಜೆ ಚಹಾ ಜೊತೆಗೆ ತಿನ್ನಬಹುದಾದ ತಿನಿಸುಗಳಲ್ಲಿ ಒಂದಾಗಿದೆ. ಮೃದು ಮತ್ತು ಸ್ವಲ್ಪ ಸಿಹಿಯಾದ ಈ ಬನ್ಸ್ ಆರೋಗ್ಯಕರ ತಿನಿಸುಗಳಲ್ಲಿ ಒಂದು.

ಬನ್ಸ್


ಮಂಗಳೂರು ಬನ್ಸ್ ತಯಾರಿಸಲು ಬೇಕಾಗುವ ವಸ್ತುಗಳು

ಬದಲಾಯಿಸಿ

2 ಹಣ‍್ಣಾದ ಬಾಳೆಹಣ್ಣು 2 ಕಪ್ ಮೈದಾ 2 ಚಮಚ ಸಕ್ಕರೆ (ಬಾಳೆಹಣ್ಣು ಸಿಹಿಯಾದರೆ 1 ಚಮಚ, ಇನ್ನೂ ಸಿಹಿಯಿಲ್ಲದರೆ 2 ಚಮಚ) ¼ ಕಪ್ ಹುಳಿ ಮೊಸರು 1 ಚಮಚ ಜೀರಿಗೆ ಚಿಟಿಕೆ ಅಡುಗೆ ಸೋಡಾ ರುಚಿಗೆ ತಕ್ಕಷ್ಟು ಉಪ್ಪು ಕರಿಯಲು ಬೇಕಾದ ಎಣ್ಣೆ

ಮಂಗಳೂರು ಬನ್ಸ್ ತಯಾರಿಸುವ ವಿಧಾನ

ಬದಲಾಯಿಸಿ

ಬಾಳೆಹಣ್ಣುಗಳನ್ನು ಚಿಪ್ಪೆ ತೆಗೆದು, ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವಚಿಕೊಳ್ಳಿ. ಬಾಳೆಹಣ್ಣು ಸಿಹಿಯಿದ್ದರೆ ಒಂದು ಚಮಚ ಸಕ್ಕರೆ ಸೇರಿಸಬಹುದು, ಇಲ್ಲದಿದ್ದರೆ 2 ಚಮಚ ಸಕ್ಕರೆ ಸೇರಿಸಿ. ಈ ಮಿಶ್ರಣವನ್ನು ನಯವಾದ ಪೇಸ್ಟ್ ರೀತಿ ರುಬ್ಬಿರಿ.ಈ ಪೇಸ್ಟ್‌ಗೆ ¼ ಕಪ್ ಮೊಸರು, 1 ಟೀಸ್ಪೂನ್ ಜೀರಿಗೆ, ಚಿಟಿಕೆ ಅಡುಗೆ ಸೋಡಾ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ 2 ಕಪ್ ಮೈದಾ ಸೇರಿಸಿ, ಹಿಟ್ಟಿನ ಉಬ್ಬಲು, ಹಿಟ್ಟನ್ನು ಚೆನ್ನಾಗಿ ನೆನೆಸಿರಿ ಮತ್ತು ಸ್ವಲ್ಪ ಎಣ್ಣೆ ಸವರಿ. ಇದನ್ನು 8 ಗಂಟೆಗಳ ಕಾಲ ಹುದುಗಿ (ಹುಳಿ ಬರಲು) ಹಾಕಿಡಿ.ಎಂಟು ಗಂಟೆಗಳ ನಂತರ, ಹಿಟ್ಟು ಹುಳಿ ಬಂದ ನಂತರ, ಸ್ವಲ್ಪ ಹಿಟ್ಟು ಆವಶ್ಯಕತೆ ಇದ್ದರೆ ಹಾಕಿ, ಕೈಯಿಂದ ಸುಲಭವಾಗಿ ನಾದಿ, ಚಿಕ್ಕ ಚಿಕ್ಕ ಉಂಡೆಗಳಂತೆ ಮಾಡಿರಿ. ಪೂರಿಯಂತೆ ಲಟ್ಟಿಸಿ, ಚಿಕ್ಕದಾಗಿ ಪರಿಗಣಿಸಿ. ಎಣ್ಣೆ ಕಾಯಿಸಲು ಬಿಡಿ, ಮಧ್ಯಮ ಉರಿಯಲ್ಲಿ ಬನ್ಸ್‌ಗಳನ್ನು ಡೀಪ್ ಫ್ರೈ ಮಾಡಿ. ಪೂರಿಯ ಮೇಲ್ಭಾಗವು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ, ಎರಡೂ ಕಡೆ ಚೆನ್ನಾಗಿ ಬೇಯಿರಿ. ಹೊರಗೆ ಕಂದು ಬಣ್ಣದಲ್ಲಿ, ಒಳಗೆ ತುಂಬಾ ಮೃದುವಾದ ಮಂಗಳೂರು ಬನ್ಸ್ ಬಿಸಿ ಬಿಸಿಯಾಗಿ ಸೇವಿಸಲು ಕೊಡಿ. []

ಕೆಲವು ವಿಶೇಷ ಸೂಚನೆಗಳು

ಬದಲಾಯಿಸಿ

ಹಿಟ್ಟು ಕಲಸುವಾಗ ನೀರು ಸೇರಿಸಬೇಡಿ: ಬನ್ಸ್ ಹಿಟ್ಟಿಗೆ ನೀರು ಸೇರಿಸುವುದರಿಂದ ಅದು ತೆಳ್ಳಗಾಗಬಹುದು. ಮೊಸರು, ಬಾಳೆಹಣ್ಣು ಮತ್ತು ಸಕ್ಕರೆ ಸೇರಿರುವುದರಿಂದ ಹಿಟ್ಟನ್ನು ಕಲಸಲು ನೀರಿನ ಅವಶ್ಯಕತೆಯಿಲ್ಲ. ಮೈಸೂರು ಬಾಳೆಹಣ್ಣು ಅಥವಾ ಪಚ್ಚೆ ಬಾಳೆಹಣ್ಣು ಬಳಸಿರಿ:ಬನ್ಸ್ ಮಾಡಲು ಬಲಿತ ಮೈಸೂರು ಬಾಳೆಹಣ್ಣು ಅಥವಾ ತಾಜಾ ಪಚ್ಚೆ ಬಾಳೆಹಣ್ಣು ಬಳಸಿದರೆ, ಉತ್ತಮ ರುಚಿ ಪಡೆಯಬಹುದು. ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿ:ಬನ್ಸ್‌ನ್ನು ಇಬ್ಬಾದಿಯೂ ಚೆನ್ನಾಗಿ ಫ್ರೈ ಮಾಡಬೇಕು, ಇಲ್ಲದಿದ್ದರೆ ಒಳಭಾಗದ ಹಿಟ್ಟು ಸರಿಯಾಗಿ ಬೇಯದು. ಮೈದಾಹಿಟ್ಟನ್ನು ಬದಲಾಯಿಸಬಹುದು:ಮೈದಾ ಹಿಟ್ಟನ್ನು ಬಳಸದೇ, ಗೋಧಿ ಹಿಟ್ಟನ್ನೂ ಬಳಸಬಹುದು. ಗೋಧಿ ಮತ್ತು ಮೈದಾ ಹಿಟ್ಟನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಬನ್ಸ್ ತಯಾರಿಸಬಹುದು. ಹೆಚ್ಚು ಸಿಹಿ ಬೇಕಾದರೆ: ಹೆಚ್ಚು ಸಿಹಿಯ ಬೇಕಾದರೆ.ಸಕ್ಕರೆಯ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಬಹುದು. []

ವಿಧಗಳು

ಬದಲಾಯಿಸಿ

ಸಾಮಾನ್ಯವಾಗಿ ಸ್ವಲ್ಪ ಸಿಹಿಯಾಗಿರುವ ಬನ್ಸ್ ಗಳೇ ಪ್ರಸಿದ್ಧವಾಗಿವೆ. ಸಕ್ಕರೆಯ ಬದಲಿಗೆ ಮೆಣಸಿನ ಪುಡಿಯನ್ನು ಸೇರಿಸಿ ಖಾರ ಬನ್ಸ್ ಕೂಡಾ ಮಾಡುತ್ತಾರೆ.

ತಿನ್ನುವ ಕ್ರಮ

ಬದಲಾಯಿಸಿ

ಕರಾವಳಿ ಕರ್ನಾಟಕದಲ್ಲಿ ಬೆಳಗಿನ ತಿಂಡಿಗೆ ಬನ್ಸ್ ಸೇವಿಸುತ್ತಾರೆ. ಸಂಜೆಯ ಹೊತ್ತು ಚಹದೊಂದಿಗೆ ಬನ್ಸ್ ತಿನ್ನುವ ಅಭ್ಯಾಸವೂ ಇದೆ. ಬನ್ಸ್ ನ್ನು ಚಟ್ನಿ ಅಥವಾ ಸಾಂಬಾರ್ ನೊಂದಿಗೂ ಸೇವಿಸುತ್ತಾರೆ. ಚಟ್ನಿ ಸಾಂಬಾರ್ ಗಳಿಲ್ಲದೆಯೂ ತಿನ್ನಬಹುದು.


ಆರೋಗ್ಯಕ್ಕೆ ಆಗುವ ಉಪಯೋಗಗಳು

ಬದಲಾಯಿಸಿ

ಮಂಗಳೂರು ಬನ್ಸ್‌ವು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದು ಕಾರ್ಬೋಹೈಡ್ರೇಟ್ಸ್, ಪ್ರೋಟೀನ್‌ ಮತ್ತು ಫೈಬರ್‌ನಂತಹ ಮುಖ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಬಾಳೆಹಣ್ಣು ಮತ್ತು ಮೊಸರು ಬಳಸಿಕೊಂಡು ತಯಾರಿಸಲಾಗುವ ಈ ತಿಂಡಿಯು ಇದುವರೆಗೆ ಪೌಷ್ಟಿಕ ಉಪಾಹಾರವನ್ನಾಗಿ ಪರಿಗಣಿಸಲಾಗಿದೆ. ಮಂಗಳೂರಿನ ಬನ್ಸ್ ಕೇವಲ ರುಚಿಕರವಾದ ತಿಂಡಿಯಲ್ಲ, ವಿವಿಧ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಹಿಟ್ಟು, ಬಾಳೆಹಣ್ಣು ಮತ್ತು ಮೊಸರುಗಳ ಸಂಯೋಜನೆಯಿಂದ ಇದು ಪೋಷಕಾಂಶಗಳಿಂದ ಸಂಪೂರ್ಣವಾಗಿದೆ. ಬಾಳೆಹಣ್ಣು ಪೊಟ್ಯಾಸಿಯಮ್, ವಿಟಮಿನ್ B6 ಮತ್ತು ವಿಟಮಿನ್ C ನ ಉತ್ತಮ ಮೂಲವಾಗಿದೆ, ಮತ್ತು ಮೊಸರು ಕ್ಯಾಲ್ಸಿಯಮ್, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗಳನ್ನು ಕಾಪಾಡಲು ಸಹಾಯ ಮಾಡುತ್ತವೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ ಮತ್ತು ಕರುಳಿನ ಚಲನೆಯನ್ನು ನಿಯಂತ್ರಿಸುತ್ತವೆ. ಬನ್ಸ್‌ನಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಕಾರ್ಬೋಹೈಡ್ರೇಟ್ಸ್ ಶಕ್ತಿಯ ತ್ವರಿತ ಮೂಲವನ್ನು ಒದಗಿಸುತ್ತವೆ.[]

ಸಾಂಸ್ಕೃತಿಕ ಮಹತ್ವ

ಬದಲಾಯಿಸಿ

ಮಂಗಳೂರು ಬನ್ಸ್ ತನ್ನ ಸಾಂಸ್ಕೃತಿಕ ಮಹತ್ವದಲ್ಲಿ ಶ್ರೀಮಂತವಾಗಿದ್ದು, ತುಳುನಾಡಿನ ಪಾಕಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಹೆಸರಿನಿಂದಲೇ ಇದು ಮಂಗಳೂರಿನ ಉತ್ಪತ್ತಿಯಾಗಿದೆ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ, ಮಂಗಳೂರಿನ ಕರಾವಳಿಯ ಪ್ರಮುಖ ಬಂದರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಅಡುಗೆಯವರು ಈ ತಿಂಡಿಯನ್ನು ಮೊದಲಬಾರಿಗೆ ತಯಾರಿಸಿದ್ದರು ಎಂದು ಹೇಳಲಾಗಿದೆ. ಅಂದಿನಿಂದ, ಈ ಖಾದ್ಯವು ಈ ಪ್ರದೇಶದಲ್ಲಿ ಸುಪ್ರಸಿದ್ಧ ಉಪಾಹಾರವಾಯಿತು. ದಿನನಿತ್ಯದ ಆಹಾರವಾಗಿಯೂ ಹಬ್ಬದ ವಿಶೇಷ ತಿನಿಸುಗಳಾಗಿಯೂ ಮಂಗಳೂರು ಬನ್ಸ್ ತನ್ನದೇ ಆದ ಸ್ಥಾನವನ್ನು ಪಡೆದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ Kannada, TV9 (29 May 2024). "ಸ್ವಲ್ಪ ಮೃದು, ಸ್ವಲ್ಪ ಸಿಹಿ; ಪೌಷ್ಟಿಕ ಉಪಾಹಾರ ಮಂಗಳೂರು ಬನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?". TV9 Kannada.{{cite web}}: CS1 maint: numeric names: authors list (link)
  2. "ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್". Asianet News Network Pvt Ltd.
"https://kn.wikipedia.org/w/index.php?title=ಬನ್ಸ್&oldid=1243666" ಇಂದ ಪಡೆಯಲ್ಪಟ್ಟಿದೆ