ಬಟರ್‍ಸ್ಕಾಚ್

(ಬಟರ್ ಸ್ಕಾಚ್ ಇಂದ ಪುನರ್ನಿರ್ದೇಶಿತ)

ಬಟರ್‍ಸ್ಕಾಚ್ ಕಂದು ಸಕ್ಕರೆ ಮತ್ತು ಬೆಣ್ಣೆಯನ್ನು ತನ್ನ ಮೂಲ ಪದಾರ್ಥಗಳಾಗಿ ಹೊಂದಿರುವ ಒಂದು ಬಗೆಯ ಕನ್ಫೆಕ್ಷನರಿ; ಜೊತೆಗೆ ಕಾರ್ನ್ ಸಿರಪ್, ಕೆನೆ, ವನಿಲಾ, ಮತ್ತು ಉಪ್ಪಿನಂತಹ ಇತರ ಪದಾರ್ಥಗಳೂ ಕೆಲವು ಪಾಕವಿಧಾನಗಳ ಭಾಗವಾಗಿರಬಹುದು. ೧೯ನೆಯ ಶತಮಾನದ ಮಧ್ಯಭಾಗದಲ್ಲಿ, ಅತ್ಯಂತ ಹಿಂದೆ ತಿಳಿಯಲ್ಪಟ್ಟಿರುವ ಪಾಕವಿಧಾನಗಳು ಸಕ್ಕರೆಯ ಬದಲು ಅಥವಾ ಅದರ ಜೊತೆಗೆ ಕಾಕಂಬಿಯನ್ನು ಬಳಸಿದ್ದವು. ಬಟರ್‍ಸ್ಕಾಚ್ ಟಾಫಿಯನ್ನು ಹೋಲುತ್ತದೆ, ಆದರೆ ಬಟರ್‍ಸ್ಕಾಚ್‍ಗಾಗಿ ಸಕ್ಕರೆಯನ್ನು ಸಾಫ಼್ಟ್ ಕ್ರ್ಯಾಕ್ ಹಂತಕ್ಕೆ ಕುದಿಸಲಾಗುತ್ತದೆ, ಟಾಫಿಯಂತೆ ಹಾರ್ಡ್ ಕ್ರ್ಯಾಕ್ ಹಂತಕ್ಕಲ್ಲ.

ಬಟರ್‍ಸ್ಕಾಚ್‍ನ ಸಂಡೆ