ಬಜಾಜ್ ಸಾಮಾನ್ಯ ವಿಮಾ ಕಂಪೆನಿ

ಬಜಾಜ್ ಸಾಮಾನ್ಯ ವಿಮಾ ಕಂಪೆನಿಯು ಭಾರತದಲ್ಲಿನ ಖಾಸಗಿ ಸಾಮಾನ್ಯ ವಿಮಾ ಕ೦ಪನಿಯಾಗಿದೆ. ಈ ಕ೦ಪನಿಯನ್ನು ೨೦೦೧ ರಲ್ಲಿ ಸ್ಥಾಪಿಸಲಾಗಿದೆ. ಇದರ ಪ್ರಧಾನ ಕಚೇರಿ ಪುಣೆಯಲ್ಲಿದೆ. ಈ ಕ೦ಪನಿಯು ಬಜಾಜ್ ಫಿನ್‌ಸರ್ವ್ ಲಿಮಿಟೆಡ್ ಮತ್ತು ಜಮ೯ನಿಯ ನಾಯಲ್ ಸವಿ೯ಸಸ್ ಕ೦ಪನಿಯಾದ ಅಲಿಯನ್ಸ್ ಎಸ್ಇ ಒಡೆತನದ ಜಂಟಿ ಉದ್ಯಮವಾಗಿದೆ. ಈ ಕ೦ಪನಿ ವಿಶ್ವಾದ್ಯಂತ ಸೇವೆಯನ್ನು ಸಲ್ಲಿಸುತ್ತಿದೆ. ತಪನ್ ಸಿಂಗೆಲ್ ಈ ಕ೦ಪನಿಯ ಮುಖ್ಯ ಕಾಯ೯ನಿವಾ೯ಹಕ ಅಧಿಕಾರಿ. ಮೋಟಾರ್ ವಿಮೆ, ಆರೋಗ್ಯ ವಿಮೆ, ಪ್ರಯಾಣ ವಿಮೆ, ಮನೆ ವಿಮೆ, ಸಾಗರ ವಿಮೆ, ಮತ್ತು ಮುಂತಾದ ವಿಮೆಗಳನ್ನು ಈ ಕ೦ಪನಿಯು ನೀಡುತ್ತದೆ. ೨೦೧೫ - ೨೦೧೬ ರ ಆರ್ಥಿಕ ವಷ೯ದಲ್ಲಿ ಈ ಕ೦ಪನಿಯ ಆದಾಯ ೫೯ ಶತಕೋಟಿಯಷ್ಟಿತ್ತು ಹಾಗೂ ನಿವ್ವಳ ಆದಾಯ ೬ ಶತಕೋಟಿಯಷ್ಟಿತ್ತು.[][]

ಬಜಾಜ್ ಸಾಮಾನ್ಯ ವಿಮಾ ಕಂಪೆನಿ
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆ೨೦೦೧[]
ಸಂಸ್ಥಾಪಕ(ರು)ಜಮ್ನಾಲಾಲ್ ಬಜಾಜ್
ಮುಖ್ಯ ಕಾರ್ಯಾಲಯಪುಣೆ, ಮಹಾರಾಷ್ಟ್ರ, ಭಾರತ
ಪ್ರಮುಖ ವ್ಯಕ್ತಿ(ಗಳು)ಸಂಜೀವ್ ಬಜಾಜ್
(ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ)
ಉದ್ಯಮಹಣಕಾಸು ಸೇವೆಗಳು
ಉತ್ಪನ್ನ
ಆದಾಯIncrease೮೨,೦೭೨ ಕೋಟಿ (ಯುಎಸ್$೧೮.೨೨ ಶತಕೋಟಿ)[]
ಆದಾಯ(ಕರ/ತೆರಿಗೆಗೆ ಮುನ್ನ)Increase೧೬,೮೦೯ ಕೋಟಿ (ಯುಎಸ್$೩.೭೩ ಶತಕೋಟಿ)[]
ನಿವ್ವಳ ಆದಾಯIncrease೧೨,೨೦೮ ಕೋಟಿ (ಯುಎಸ್$೨.೭೧ ಶತಕೋಟಿ)[]
ಒಟ್ಟು ಆಸ್ತಿIncrease೪,೦೫,೫೦೯ ಕೋಟಿ (ಯುಎಸ್$೯೦.೦೨ ಶತಕೋಟಿ)[]
ಒಟ್ಟು ಪಾಲು ಬಂಡವಾಳIncrease೪೬,೪೦೭ ಕೋಟಿ (ಯುಎಸ್$೧೦.೩ ಶತಕೋಟಿ)[]
ಉದ್ಯೋಗಿಗಳು105 (2022)[]
ಪೋಷಕ ಸಂಸ್ಥೆಬಜಾಜ್ ಗ್ರೂಪ್[]
ಉಪಸಂಸ್ಥೆಗಳುಬಜಾಜ್ ಫೈನಾನ್ಸ್[]
ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್
ಬಜಾಜ್ ಅಲಿಯಾನ್ಸ್ ಜೀವ ವಿಮೆ
ಬಜಾಜ್ ಹೌಸಿಂಗ್ ಫೈನಾನ್ಸ್[]
ಬಜಾಜ್ ಫಿನ್‌ಸರ್ವ್ ಮಾರುಕಟ್ಟೆಗಳು[]

ಬಜಾಜ್ ಫಿನ್‌ಸರ್ವ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ
ಬಜಾಜ್ ಫಿನ್‌ಸರ್ವ್ ನೇರ (ಬಜಾಜ್ ಮಾರುಕಟ್ಟೆಗಳು)

ಬಜಾಜ್ ಫಿನ್‌ಸರ್ವ್ ಹೆಲ್ತ್
ಜಾಲತಾಣwww.bajajfinserv.in

೨ ಜುಲೈ ೨೦೦೧ ರಂದು ಬಜಾಜ್ ಅಲಿಯನ್ಸ್ ಸಾಮಾನ್ಯ ವಿಮೆ ಕ೦ಪನಿ, "ಇನ್ಷೂರೆನ್ಸ್ ರೆಗ್ಯೂಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ(ಐಆರ್‌ಡಿಎಐ) ದಿಂದ ಆರೋಗ್ಯ ವಿಮೆ ಸೇರಿದಂತೆ ಸಾಮಾನ್ಯ ವಿಮಾ ವ್ಯವಹಾರವನ್ನು ನಡೆಸಲು ನೋಂದಣಿ ಪ್ರಮಾಣಪತ್ರವನ್ನು ಪಡೆಯಿತು. ಅದರ ಕಾರ್ಯಾಚರಣೆಯ ಮೊದಲ ವಷ೯ದಲ್ಲಿ ಕ೦ಪನಿಯು ೩೬ ಕಚೇರಿಗಳನ್ನು ಹೊಂದಿತ್ತು ಮತ್ತು ಸುಮಾರು ೧೦೦ ಉದ್ಯೋಗಿಗಳನ್ನು ಹೊಂದಿತ್ತು. ಕ೦ಪನಿಯು ೧.೧೦ ಶತಕೋಟಿ ಬಂಡವಾಳದೊಂದಿಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದರಲ್ಲಿ ಬಜಾಜ್ ಫಿನ್‌ಸರ್ವ್ ಲಿಮಿಟೆಡ್ ೭೪% ಮತ್ತು ಉಳಿದ ೨೬% ಅಲಿಯನ್ಸ್ ಎಸ್ಇ ವಹಿಸಿಕೊಂಡಿದೆ.

ಬಜಾಜ್ ಅಲಿಯನ್ಸ್ ಕ೦ಪನಿಯು ಸತತವಾಗಿ ಏಳು ವರ್ಷಗಳಿಂದ ಹೂಡಿಕೆದಾರರ ಸೇವೆಯ ಸಹಾಯಕರಾದ ಐಸಿಆರ್‌ಎ ಲಿಮಿಟೆಡ್‌ನಿಂದ ಐಎಎಎ ರೇಟಿಂಗ್ ಪಡೆದಿದೆ. ಈ ರೇಟಿಂಗ್ ಅತ್ಯಧಿಕ ಸಾಮರ್ಥ್ಯ ಮತ್ತು ಮೂಲಭೂತವಾಗಿ ಪ್ರಬಲ ಸ್ಥಾನವನ್ನು ಸೂಚಿಸುತ್ತದೆ.

ಬಜಾಜ್ ಅಲಿಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಯು ೨೦೧೬ರಲ್ಲಿ ಅತ್ಯುತ್ತಮ ಉದ್ಯೋಗದಾತ ಕಂಪನಿ ಎಂದು ಗುರುತಿಸಲ್ಪಟ್ಟಿತು. ಈ ಕಂಪನಿಯು ಉದ್ಯೋಗಿ ಸ್ನೇಹಿ ನೀತಿಗಳನ್ನು ವಿನ್ಯಾಸಗೊಳಿಸುವುದರ ಜೊತೆಗೆ ಪಾರದರ್ಶಕ ಸಂಸ್ಕೃತಿ ಮತ್ತು ಆರೋಗ್ಯಕರ ಕೆಲಸದ ವಾತಾವರಣವನ್ನು ಉತ್ತೇಜಿಸುತ್ತದೆ. ಬಜಾಜ್ ಅಲಿಯನ್ಸ್ ಜಿಐಸಿ ವರ್ಷದ ಅತ್ಯುತ್ತಮ ಆರೋಗ್ಯ ವಿಮೆ ನೀಡುವವರನ್ನು ಆಯ್ಕೆ ಮಾಡಿತು. ಈ ಕಂಪನಿಗೆ ೨೦೧೫ರ ಔಟ್ಲುಕ್ ಮನಿ ಪ್ರಶಸ್ತಿಗಳು ದೊರೆತಿದೆ. ಅತ್ಯುತ್ತಮ-ವರ್ಗ ಮತ್ತು ನವೀನ ಉತ್ಪನ್ನಗಳು ಮತ್ತು ಸೇವೆಗಳು ಮತ್ತು ಅಸಾಧಾರಣ ಹಕ್ಕು ಸ್ಥಾಪನೆ ನಿರ್ವಹಣಾ ಪ್ರಕ್ರಿಯೆಗಳಿಗೆ ಎಕಾನಾಮಿಕ್ ಟೈಮ್ಸ್‌ನ ಅತ್ಯುತ್ತಮ ಬ್ರಾಂಡ್ಸ್ ಸರ್ವೆ ೨೦೧೬ ರ ಫಲಿತಾಂಶವಾಗಿ ಬಜೆಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಅನ್ನು ಎಕಾನಾಮಿಕ್ ಟೈಮ್ಸ್ ಅತ್ಯುತ್ತಮ ಬ್ರಾಂಡ್ಗಳಲ್ಲಿ ಒಂದಾಗಿ ಗುರುತಿಸಿದೆ.

 
ಪ್ರಧಾನ ಕಚೇರಿ, ಪುಣೆ

ಪ್ರಶಸ್ತಿ

ಬದಲಾಯಿಸಿ

ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗೆ ಸಂಬಂಧಿಸಿದ ಪ್ರಶಸ್ತಿಗಳು ೨೦೧೪ ರ ಹೊತ್ತಿಗೆ "ಖಾಸಗಿ ವಲಯದಲ್ಲಿನ ಉತ್ತಮ ಜನರಲ್ ಇನ್ಶುರೆನ್ಸ್ ಕಂಪನಿ" ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲಾಗಿದೆ. ೨೦೧೨ ರಲ್ಲಿ ಬ್ಲೂಮ್ಬರ್ಗ್ ಯುಟಿವಿಯಿಂದ ಫೈನಾನ್ಷಿಯಲ್ ಲೀಡರ್ಶಿಪ್ ಅವಾರ್ಡ್ಸ್ ದೊರೆತಿದೆ. ೨೦೧೨ ಮತ್ತು ೨೦೧೧ ರಲ್ಲಿ ಸಿಎನ್‌ಬಿಸಿ ಟಿವಿ ೧೮ ಇಂಡಿಯಾದಿಂದ ಅತ್ಯುತ್ತಮ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆ ಎಂಬ ಪ್ರಶಸ್ತಿ ದೊರೆತಿದೆ. ಬಜಾಜ್ ಅಲಿಯಾನ್ಸ್ ಅವರಿಗೆ ೨೦೧೪ರಲ್ಲಿ ನವೀನ ಉತ್ಪನ್ನಗಳು / ಸೇವೆಯ ವಿಭಾಗದಲ್ಲಿ ಗೋಲ್ಡನ್ ಪೀಕಾಕ್ ಪ್ರಶಸ್ತಿ ನೀಡಲಾಯಿತು. ಇಂಡಿಯನ್ ಇನ್ಶುರೆನ್ಸ್ ಅವಾರ್ಡ್ಸ್ ೨೦೧೩ ಮೂಲಕ "ವರ್ಷದ ಕ್ಲೇಮ್ಸ್ ಸೇವಾ ಕಂಪನಿ" ಎಂದು ಬಿರುದು ನೀಡಲಾಯಿತು. ೨೦೧೩ ರಲ್ಲಿ ಬಾಜಾಜ್ ಅಲಿಯಾನ್ಸ್, ಏಷ್ಯಾ ಪೆಸಿಫಿಕ್ ವಲಯದಲ್ಲಿ "ಕ್ಲೇಮ್ಸ್ ಇನೋವೇಶನ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಪಡೆದರು. ಬಜಾಜ್ ಅಲಿಯಾನಾಸ್ಸ್ ಸಾಮಾನ್ಯ ವಿಮೆ ಕ೦ಪನಿಯ ನಿವ್ವಳ ಲಾಭ ೨೭%. ಬಜಾಜ್ ಅಲಿಯಾನ್ಸ್ ಸಾಮಾನ್ಯ ವಿಮೆ ಕಂಪೆನಿಯ ನಿವ್ವಳ ಲಾಭ ಕಳೆದ ವರ್ಷ ೧.೬೫ ಶತಕೋಟಿ ರೂ. ಗಳಿಂದ ೧.೭೫ ಶತಕೋಟಿಗೆ ಏರಿಕೆಯಾಗಿದೆ.ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು ೭.೨೮ ಶತಕೋಟಿ ಡಾಲರ್‌ನಷ್ಟಿದ್ದ ಬ್ಯಾಗ್ಕ್ ನಿವ್ವಳ ಲಾಭ ೨೭ ರಷ್ಟು ಹೆಚ್ಚಳವಾಗಿದೆ. ಆರ್ಥಿಕ ವರ್ಷ ೧೮ಕ್ಕೆ ಕಂಪನಿಯ ಆದಾಯವೂ ೨೩.೪ ಶೇಕಡಕ್ಕೆ ಏರಿತ್ತು.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ "Bajaj Finserv Consolidated Balance Sheet, Bajaj Finserv Financial Statement & Accounts". moneycontrol.com (in ಇಂಗ್ಲಿಷ್). Retrieved 14 July 2020.
  2. "Apply for Loans, EMI Finance, Credit Card and Insurance – Bajaj Finserv". bajajfinserv.in.
  3. ೩.೦ ೩.೧ ೩.೨ "Bajaj Finserv Consolidated Profit & Loss account, Bajaj Finserv Financial Statement & Accounts". moneycontrol.com (in ಇಂಗ್ಲಿಷ್).
  4. "Bajaj Finserv Company Overview". Forbes.com (in ಇಂಗ್ಲಿಷ್). Retrieved 20 March 2023.
  5. "Bajaj Finserv Chairman's Speech > Finance - Investments > Chairman's Speech from Bajaj Finserv - BSE: 532978, NSE: BAJAJFINSV". www.moneycontrol.com.
  6. "ACKO partners with Bajaj Finserv's subsidiary – Finserv MARKETS". ibsintelligence.com.
  7. https://en.wikipedia.org/wiki/Bajaj_Allianz_General_Insurance. Retrieved 25 ಜನವರಿ 2019. {{cite web}}: Missing or empty |title= (help)
  8. https://www.bajajallianz.com/Corp/aboutus/general-insurance-company.jsp. Retrieved 25 ಜನವರಿ 2019. {{cite web}}: Missing or empty |title= (help)