ಫ್ರೆಡ್ರಿಕ್ ಐರಿನಾ ಬ್ರೂನಿಂಗ್

ಫ್ರೆಡ್ರಿಕ್ ಐರಿನಾ ಬ್ರೂನಿಂಗ್ ಅವರನ್ನು ಸುದೇವಿ ಮಾತಾಜಿ ಎಂದೂ ಕರೆಯುತ್ತಾರೆ. ಅವರು ಜರ್ಮನ್ ಮೂಲದವರಾಗಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು, [] ೧೯೯೬ ರಲ್ಲಿ ರಾಧಾ ಸುರಭಿ ಎಂಬ್ ಗೋಶಾಲೆಯನ್ನು ಸ್ಥಾಪಿಸಿದರು.ಸುದೇವಿ ಮಾತಾಜಿ ಅವರು ೩೫ ವರ್ಷಗಳಿಂದ ರಾಧಾ ಕುಂಡ್ (ವೃಂದಾವನ) ದಲ್ಲಿ ವಾಸಿಸುತ್ತಾ, ಅನಾರೋಗ್ಯ ಹಸುಗಳ ಆರೈಕೆ ಮಾಡುತ್ತಿದ್ದಾರೆ.[]

ಫ್ರೆಡ್ರಿಕ್ ಐರಿನಾ ಬ್ರೂನಿಂಗ್
Born
ಫ್ರೆಡ್ರಿಕ್ ಐರಿನಾ ಬ್ರೂನಿಂಗ್

೨೦೧೯ ಮೇ ೨೬
Other namesಸುದೇವಿ ಮಾತಾಜಿ
Occupationಪ್ರಾಣಿ ಹಕ್ಕುಗಳ ಕಾರ್ಯಕರ್ತ
Years active೧೯೯೬–ಪ್ರಸ್ತುತ
Awardsಪದ್ಮಶ್ರೀ (೨೦೧೯)

ಆರಂಭಿಕ ಜೀವನ

ಬದಲಾಯಿಸಿ

ತನ್ನ ೨೦ ನೇ ವಯಸ್ಸಿನಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ೧೯೭೮ ರಲ್ಲಿ ಪ್ರವಾಸಿಯಾಗಿ ಭಾರತಕ್ಕೆ ಬಂದರು. ಜೀವನದ ಗುರಿಯನ್ನು ಹುಡುಕುತ್ತಾ ಉತ್ತರ ಪ್ರದೇಶದ ರಾಧಾ ಕುಂಡಕ್ಕೆ ತಲುಪಿದಳು. ನಂತರದ ದಿನಗಳಲ್ಲಿ ಗುರು ಶ್ರೀಲ ಟಿಂಕುಡಿ ಗೋಸ್ವಾಮಿಗಳ ಶಿಷ್ಯರಾದರು. ನೆರೆಹೊರೆಯವರ ಸಲಹೆಯ ಮೇರೆಗೆ ಹಸುವನ್ನು ಖರೀದಿಸಿದಳು. ಅವಳು ಸ್ವತಃ ಹಿಂದಿಯನ್ನು ಕಲಿತು. ಹಸುಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿ, ಅನಾರೋಗ್ಯ ಪೀಡಿತ ಪ್ರಾಣಿಗಳ ಆರೈಕೆಗಾಗಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಳು. []

ತತ್ವಶಾಸ್ತ್ರ

ಬದಲಾಯಿಸಿ

೨೫ ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ನೆಲೆಸಿದ್ದಾರೆ. ಭಗವದ್ಗೀತೆ, ಉಪನಿಷತ್ತುಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಬೋಧನೆಗಳು ಆಕೆಯನ್ನು ಪ್ರಭಾವಿಸಿದವು. ಈ ರೀತಿಯ ಜ್ಞಾನ ತನ್ನ ದೇಶದಲ್ಲಿ ಸುಲಭವಾಗಿ ಲಭ್ಯವಿಲ್ಲದ ಕಾರಣ, ಅವರು ಭಾರತೀಯರನ್ನು ಅದೃಷ್ಟವಂತರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಸ್ಯಾಹಾರಿ ಮತ್ತು ಹಿಂಸೆ, ಭಯ ಮತ್ತು ದ್ವೇಷವನ್ನು ಉಂಟುಮಾಡುವ ಯಾವುದೇ ರೀತಿಯ ಚಟುವಟಿಕೆಗಳು ಆರೋಗ್ಯಕ್ಕೆ ಹಾನಿಕಾರಕವೆಂದು ಭಾವಿಸಿದ್ದಾರೆ. ಆಹಾರವು ನಮ್ಮ ಜೀವನದ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅವರು ನಂಬುತ್ತಾರೆ. ಆಹಾರವು ಸತ್ವ (ಶುದ್ಧ ಮತ್ತು ಬೆಳಕು), ರಜಸ್ (ಸಕ್ರಿಯ ಮತ್ತು ಭಾವೋದ್ರಿಕ್ತ) ಮತ್ತು ತಮಸ್ (ಭಾರೀ, ಸ್ಥೂಲ ಮತ್ತು ಹಿಂಸಾತ್ಮಕ) ಮೂರು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಮಾಂಸವು ತಮಸ್ ನಲ್ಲಿ ಬರುತ್ತದೆ. ಆದ್ದರಿಂದ ಅವಳು ಮಾಂಸವನ್ನು ತ್ಯಜಿಸಿದಳು.

ಮಾನವ ಪ್ರಜ್ಞೆಯು ಅತ್ಯುನ್ನತ ಮೌಲ್ಯವೆಂದು ಪರಿಗಣಿಸುತ್ತಾಳೆ. ಆಕೆಯ ಪ್ರಕಾರ, ಜನರು ದುರಾಸೆ ಮತ್ತು ಸ್ವಾರ್ಥವಿಲ್ಲದಿದ್ದರೆ ಉತ್ತಮವಾಗುತ್ತಾರೆ. ಅವಳು ದೇವರ ಕೆಲಸವನ್ನು ಮಾಡುವುದನ್ನು ನಂಬುತ್ತಾಳೆ. ಆಕೆ ಗಳಿಸಿದ ಎಲ್ಲವನ್ನೂ ದಾನ ಮಾಡುವ ಮೂಲಕ ನಿಸ್ವಾರ್ಥವಾಗಿ ಅಗತ್ಯವಿರುವ ಹಸುಗಳ ಆರೈಕೆ ಮಾಡಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ.[]

ವೃತ್ತಿ

ಬದಲಾಯಿಸಿ

ಫ್ರೆಡ್ರಿಕ್ ಐರಿನಾ ಬ್ರೂನಿಂಗ್ ೧೯೭೮ ರಲ್ಲಿ ಬರ್ಲಿನ್‌ನಿಂದ ಭಾರತದ ಮಥುರಾದಲ್ಲಿ ಪ್ರವಾಸಿಯಾಗಿ ಬಂದಿಳಿದರು. ಬೀಡಾಡಿ ಪ್ರಾಣಿಗಳ ಅವಸ್ಥೆಯನ್ನು ಕಂಡು ಅವಳು ಭಾವುಕಳಾದಳು. ಆದ್ದರಿಂದ ಅವುಗಳನ್ನು ನೋಡಿಕೊಳ್ಳಲು ನಿರ್ಧರಿಸಿದಳು. ಜರ್ಮನ್ ಪ್ರಜೆ ಫ್ರೆಡ್ರಿಕ್ ಐರಿನಾ ಬ್ರೂನಿಂಗ್, ಈಗ ಸುದೇವಿ ಮಾತಾಜಿ ಎಂದು ಕರೆಯುತ್ತಾರೆ. ೧೯೯೬ ರಾಧಾಕುಂಡ್‌ನಲ್ಲಿ ರಾಧಾ ಸುರಭಿ ಗೋಶಾಲೆ ನಿಕೇತನವನ್ನು ಪ್ರಾರಂಭಿಸಿದರು.[]

ಈ ಗೋಶಾಲೆಯು ೩,೩೦೦ ಹಸುಗಳನ್ನು ಹೋಂದಿದೆ. ಅನಾರೋಗ್ಯ, ಗಾಯಗೊಂಡ, ನಡೆಯಲು ಸಾಧ್ಯವಾಗದ ಮತ್ತು ಹಸಿವಿನಿಂದ ಬಳಲುತ್ತಿರುವ ಹಸುಗಳನ್ನು ಇಲ್ಲಿ ಆರೈಕೆ ಮಾಡಲಾಗುತ್ತದೆ. ಅಗತ್ಯ ಪೋಷಣೆ ಪಡೆದು ಆರೋಗ್ಯವಂತ ಹಸಗಳಾಗುತ್ತವೆ.[] ವಿಶೇಷ ಆರೈಕೆಯ ಅಗತ್ಯವಿರುವ ಹಸುಗಳು ತಮ್ಮ ಸ್ಥಾನವನ್ನು ಹೊಂದಿರುವ ರೀತಿಯಲ್ಲಿ ಗೋಶಾಲೆಯನ್ನು ವಿಂಗಡಿಸಲಾಗಿದೆ. [] ಕುರುಡು ಮತ್ತು ತೀವ್ರವಾಗಿ ಗಾಯಗೊಂಡ ಹಸುಗಳನ್ನು ಪ್ರತ್ಯೇಕ ಆವರಣದಲ್ಲಿ ಇರಿಸಲಾಗುತ್ತದೆ. ಪ್ರಸ್ತುತ ಅವರು ೯೦ ಕೆಲಸಗಾರರನ್ನು ಮತ್ತು ೧೮೦೦ ಅನಾರೋಗ್ಯದ ಹಸುಗಳನ್ನು ಹೊಂದಿದ್ದಾರೆ. ೭೧ ನೇ ಗಣರಾಜ್ಯೋತ್ಸವದಂದು ಭಾರತ ಸರ್ಕಾರ ಆಕೆಯ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. []

ಫ್ರೆಡ್ರಿಕ್ ಐರಿನಾ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ನಿಧಿಯನ್ನು ಪಡೆಯುವುದು ಒಂದಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಲು, ಅವಳು ಬರ್ಲಿನ್‌ನಲ್ಲಿ ತನ್ನ ಸ್ಥಳೀಯ ಆಸ್ತಿಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದಳು ಆದರೆ ಗೋಶಾಲೆಯನ್ನು ನಡೆಸುವಲ್ಲಿ ಕಾಳಜಿ ವಹಿಸುವಲ್ಲಿ ಅವಳ ಎಲ್ಲಾ ಹಣವು ಖಾಲಿಯಾಗುತ್ತದೆ. [] ಆಕೆಗೆ ಯಾವುದೇ ಸರ್ಕಾರಿ ಸಂಸ್ಥೆಗಳಿಂದ ಯಾವುದೇ ಬೆಂಬಲ ಸಿಗುವುದಿಲ್ಲ. ೨೦೧೯ ರಲ್ಲಿ, ಅವರು ವೀಸಾ ಬಗ್ಗೆ ಸಮಸ್ಯೆಯನ್ನು ಎದುರಿಸುತ್ತಿದ್ದರು, ಅದನ್ನು ಸುಷ್ಮಾ ಸ್ವರಾಜ್ ಮತ್ತು ಹೇಮಾ ಮಾಲಿನಿ ಪರಿಹರಿಸಿದರು. []

ಪ್ರಶಸ್ತಿಗಳು

ಬದಲಾಯಿಸಿ

ಮೇ ೨೦೧೯ ರಲ್ಲಿ, ಬ್ರೂನಿಂಗ್ ಅವರ ವೀಸಾ ವಿಸ್ತರಣೆಯನ್ನು ನಿರಾಕರಿಸಲಾಯಿತು. ಇದು ಪದ್ಮಶ್ರೀಯನ್ನು ಹಿಂದಿರುಗಿಸುವಂತೆ ಬೆದರಿಕೆ ಹಾಕಲು ಅವಳನ್ನು ಪ್ರೇರೇಪಿಸಿತು. ತಾಂತ್ರಿಕ ಸಮಸ್ಯೆಯಿಂದಾಗಿ ಆಕೆಯ ವಿದ್ಯಾರ್ಥಿ ವೀಸಾ ವಿಸ್ತರಣೆಯನ್ನು ನಿರಾಕರಿಸಲಾಯಿತು, ಇದು ಆಕೆಯ ವಿದ್ಯಾರ್ಥಿ ವೀಸಾವನ್ನು ಉದ್ಯೋಗ ವೀಸಾವಾಗಿ ಪರಿವರ್ತಿಸುವುದನ್ನು ತಡೆಯಿತು. ನಂತರ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು ಮತ್ತು ವಿಷಯವನ್ನು ಪರಿಶೀಲಿಸಿದ್ದಕ್ಕಾಗಿ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ತಿಳಿಸಿದರು. [೧೨] [೧೩]

ಉಲ್ಲೇಖಗಳು

ಬದಲಾಯಿಸಿ
  1. "Padma Awards" (PDF). Padma Awards ,Government of India. Retrieved 25 January 2019.
  2. "'Lady Tarzan' to 'Mother of Trees': 6 Awe-Inspiring Women Who Just Won the Padma Shri". The Better India. 19 March 2019.
  3. "Meet this German lady who provides shelter to 1200 sick cows in Mathura; her tale will bring tears to your eyes". The Financial Express (in ಅಮೆರಿಕನ್ ಇಂಗ್ಲಿಷ್). 18 September 2017. Retrieved 2019-06-18.
  4. Das, Deepannita (26 February 2019). "The German Tourist Who Became A Gaurakshak In Mathura, Mothering 1800+ Sick Cows For Last 40 Years". LifeBeyondNumbers (in ಇಂಗ್ಲಿಷ್). Retrieved 2019-06-18.Das, Deepannita (26 February 2019). "The German Tourist Who Became A Gaurakshak In Mathura, Mothering 1800+ Sick Cows For Last 40 Years". LifeBeyondNumbers. Retrieved 18 June 2019.
  5. "The German Tourist Who Became A Gaurakshak In Mathura, Mothering 1800+ Sick Cows For Last 40 Years". 26 February 2019.
  6. ೬.೦ ೬.೧ "About Us". Radha Surabhi Goshala.
  7. Jaiswal, Anuja (27 January 2019). "Mathura: German gau sevak gets Padma Shri". The Times of India (in ಇಂಗ್ಲಿಷ್). Retrieved 2019-06-18.
  8. "How A 59-Year-Old German Turned Mother To Over 1,000 Sick Cows in Mathura". NDTV.com.
  9. "Padma Shri Friederike Irina Bruning: From traveller to mother of cows". 3 February 2019.
  10. bureau, Odisha Diary (16 March 2019). "President Ramnath Kovind presents Padma Shri to Ms Friederike Irina Bruning for Social Work". {{cite web}}: |last= has generic name (help)
  11. Jaiswal, Anuja (29 January 2019). "German woman who dedicated life to cows gets Padma Shri on R-Day". The Times of India (in ಇಂಗ್ಲಿಷ್). Retrieved 2019-06-18.
  12. "Denied Visa Extension, Padma Shri Winner Says Will Return Award: Report". NDTV.com. 26 May 2019. Retrieved 2019-06-18."Denied Visa Extension, Padma Shri Winner Says Will Return Award: Report". NDTV.com. 26 May 2019. Retrieved 18 June 2019.
  13. Mohan, Geeta (27 May 2019). "Padma awardee German gau rakshak regrets outburst over visa rejection". India Today (in ಇಂಗ್ಲಿಷ್). Retrieved 2019-06-18.