ಫ್ಯುಜಿಟಾ ಮಾಪಕ
Fujita scale | ||||||
F0 | F1 | F2 | F3 | F4 | F5 |
ಫ್ಯುಜಿಟಾ ಮಾಪಕ (ಎಫ್-ಸ್ಕೇಲ್ ) ಅಥವಾ ಫ್ಯುಜಿಟಾ-ಪಿಯರ್ಸನ್ ಮಾಪಕ ವು ಟೊರ್ನೆಡೋ (ಸುಂಟರಗಾಳಿ) ತೀವ್ರತೆಯನ್ನು ಅಳೆಯುವ ಒಂದು ಮಾಪಕವಾಗಿದೆ. ಇದರಲ್ಲಿ ಟೊರ್ನೆಡೋ (ಸುಂಟರಗಾಳಿ)ಗಳಿಂದ ಮಾನವ ನಿರ್ಮಿತ ರಚನೆಗಳಿಗೆ ಮತ್ತು ಸಸ್ಯಸಂಪತ್ತಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ಮುಖ್ಯವಾಗಿ ಆಧರಿಸಿ, ಅಳೆಯಲಾಗುತ್ತದೆ. ಅಧಿಕೃತ ಫ್ಯುಜಿಟಾ ಮಾಪಕ ವರ್ಗೀಕರಣವನ್ನು ಹವಾಮಾನತಜ್ಞರು (ಮತ್ತು ಇಂಜಿನಿಯರ್‌ಗಳು) ಭೂಮಿ ಮೇಲೆ ಮತ್ತು/ಅಥವಾ ವೈಮಾನಿಕವಾಗಿ ಹಾನಿಯ ಸಮೀಕ್ಷೆಯನ್ನು ಮಾಡಿದ ನಂತರ ನಿರ್ಣಯಿಸುತ್ತಾರೆ. ಜೊತೆಗೆ ಸನ್ನಿವೇಶಗಳನ್ನು ಅವಲಂಬಿಸಿ ಭೂ-ಸುಳಿಯ ವಿನ್ಯಾಸಗಳು(ಚಕ್ರೀಯದ ಗುರುತುಗಳು), ರಾಡಾರ್ ಪತ್ತೆಹಚ್ಚುವಿಕೆ , ಪ್ರತ್ಯಕ್ಷ ಸಾಕ್ಷಿಗಳ ಸಾಕ್ಷಾಧಾರಗಳು, ಮಾದ್ಯಮದ ವರದಿಗಳು ಮತ್ತು ಹಾನಿಯ ಚಿತ್ರಗಳು ಹಾಗೂ ಚಲನೆಯ ಚಿತ್ರಗಳನ್ನು (ಮೋಶನ್ ಪಿಕ್ಚರ್ಸ್) ಮುದ್ರಿಸಿಕೊಂಡಿದ್ದು ಸಿಕ್ಕಿದರೆ ಫೋಟೋಗ್ರಾಮೆಟ್ರಿ/ವಿಡಿಯೋಗ್ರಾಮೆಟ್ರಿಗಳನ್ನು ಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ.
ಹಿನ್ನೆಲೆ
ಬದಲಾಯಿಸಿಈ ಮಾಪಕವನ್ನು ಮೊದಲು ೧೯೭೧ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದ ಟೆಟ್ಸುಯ ಫ್ಯುಜಿಟಾ ಎನ್ನುವವರು ಅಲೆನ್ ಪಿಯರ್ಸನ್ ಜೊತೆ ಸೇರಿ ಅಭಿವೃದ್ಧಿಪಡಿಸಿದರು (ಪಥದ ಉದ್ದ ಅಂದರೆ ಪಾತ್ ಲೆಂಗ್ತ್ ಮತ್ತು ಅಗಲವನ್ನು ೧೯೭೩ರಲ್ಲಿ ಹೆಚ್ಚುವರಿಯಾಗಿ ಸೇರಿಸಲಾಯಿತು). ಫ್ಯುಜಿಟಾ ಅವರು ರಾಷ್ಟ್ರೀಯ ತೀವ್ರ ಬಿರುಗಾಳಿ ಮುನ್ಸೂಚನಾ ಕೇಂದ್ರ(ನ್ಯಾಶನಲ್ ಸೆವಿಯರ್ ಸ್ಟಾರ್ಮ್ ಫೋರ್‌ಕಾಸ್ಟ್ ಸೆಂಟರ್)ದ ಮುಖ್ಯಸ್ಥರಾಗಿದ್ದರು (ಈ ಕೇಂದ್ರವು ಮೊದಲಿನ ಬಿರುಗಾಳಿ ಊಹೆ ಕೇಂದ್ರ (ಸ್ಟಾರ್ಮ್ ಪ್ರೆಡಿಕ್ಷನ್ ಸೆಂಟರ್)ದ ನಂತರ ಆರಂಭಿಸಿದ್ದು). ಸಂಯುಕ್ತ ಸಂಸ್ಥಾನದಲ್ಲಿ ೧೯೭೩ರ ನಂತರದಿಂದ ಟೊರ್ನೆಡೋ (ಸುಂಟರಗಾಳಿ)ಗಳು ಸಂಭವಿಸಿದ ತಕ್ಷಣವೇ ಅವುಗಳನ್ನು ಅಳೆಯಲಾಗುತ್ತಿತ್ತು. ಈ ಮಾಪಕವನ್ನು ಟೊರ್ನೆಡೋ (ಸುಂಟರಗಾಳಿ) ವರದಿಗಳಿಗಾಗಿ ೧೯೫೦ರಿಂದ ೧೯೭೨ರವರೆಗೂ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (NOAA)ಕ್ಕಾಗಿ ರಾಷ್ಟ್ರೀಯ ಟೊರ್ನೆಡೋ (ಸುಂಟರಗಾಳಿ) ಡಾಟಾಬೇಸ್‌ಗಾಗಿ ಬಳಸಲಾಗುತ್ತಿತ್ತು. ೧೯೧೬–೧೯೯೨ರವರೆಗಿನ ಟೊರ್ನೆಡೋ (ಸುಂಟರಗಾಳಿ)ಗಳನ್ನು ಫ್ಯುಜಿಟಾ ಅಳೆದಿದ್ದಾರೆ. ಟೊರ್ನೆಡೋ (ಸುಂಟರಗಾಳಿ) ಪ್ರಾಜೆಕ್ಟ್‌ನ ಟಾಮ್ ಗ್ರಜುಲಿಸ್ ಕೂಡ ೧೮೮೦ರ ನಂತರ ಅಮೆರಿಕದಲ್ಲಿ ಸಂಭವಿಸಿದ, (ಎಫ್‌೨-ಎಫ್‌೫ ಅಥವಾ ಸಾವುನೋವುಗಳನ್ನು ಉಂಟುಮಾಡಿರುವ)ಗೊತ್ತಿರುವ ಎಲ್ಲ ಗಮನಾರ್ಹ ಟೊರ್ನೆಡೋ (ಸುಂಟರಗಾಳಿ)ಗಳನ್ನು ಅಳೆದಿದ್ದಾರೆ. ಮೊದಲು ಗ್ರೇಟ್ ಬ್ರಿಟನ್‌ನ ಹೊರಗೆ ಬಹುತೇಕ ಪ್ರದೇಶಗಳಲ್ಲಿ ಬಳಸಲಾದ ಫ್ಯುಜಿಟಾ ಮಾಪಕವನ್ನು ಸಂಯುಕ್ತ ಸಂಸ್ಥಾನ ೨೦೦೭ರಲ್ಲಿ ಬಳಕೆಗೆ ಬಂದ ಸುಧಾರಿತ ಫ್ಯುಜಿಟಾ ಮಾಪಕವು ಹಿಂದಿಕ್ಕಿತು.
ಪ್ರತಿಯೊಂದು ಹಾನಿಯ ಮಟ್ಟವೂ ಗಾಳಿಯ ವೇಗದೊಂದಿಗೆ ಸಂಬಂಧ ಹೊಂದಿದ್ದರೂ, ಫ್ಯುಜಿಟಾ ಮಾಪಕವು ಹಾನಿಯನ್ನು ಅಳೆಯುವ ಒಂದು ಪರಿಣಾಮಕಾರಿ ಮಾಪಕವಾಗಿದೆ. ಅಲ್ಲದೇ ಪಟ್ಟಿ ಮಾಡಲಾದ ಹಾನಿಯೊಂದಿಗೆ ಜೊತೆಗೂಡಿದ ಗಾಳಿಯ ವೇಗವನ್ನು ತೀವ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ತೀವ್ರವಾದ ಟೊರ್ನೆಡೋ (ಸುಂಟರಗಾಳಿ)ಗಳು ಹಾನಿಯನ್ನು ಉಂಟುಮಾಡಲು ಅಗತ್ಯವಾದ ಗಾಳಿಯ ವೇಗವನ್ನು ಫ್ಯುಜಿಟಾ ಮಾಪಕದಲ್ಲಿ ತುಂಬ ಮೇಲಂದಾಜು ಮಾಡಲಾಗುತ್ತದೆ; ಈ ಕಾರಣದಿಂದ ಸುಧಾರಿತ ಫ್ಯುಜಿಟಾ ಮಾಪಕ(ಇಎಫ್) ವನ್ನು ಕಂಡುಹಿಡಿಯಲಾಯಿತು. ಉನ್ನತ ಇಂಜಿನಿಯರ್‌ಗಳಿಂದ ಮತ್ತು ಹವಾಮಾನ ತಜ್ಞರಿಂದ ತಜ್ಞ ಪರಿಶೀಲನೆಯ ಪ್ರಕ್ರಿಯೆಯು ಇಎಫ್ ಮಾಪಕದ ಗಾಳಿ ವೇಗಗಳಿಗೆ ಕಾರಣವಾಗಿದೆ, ಆದರೆ ಇವು ಸಂಯುಕ್ತ ಸಂಸ್ಥಾನದ ನಿರ್ಮಾಣ ಪದ್ಧತಿಗಳ ಪೂರ್ವಗ್ರಹಕ್ಕೆ ಒಳಗಾಗಿದೆ. ಇಎಫ್ ಮಾಪಕವು ಹಾನಿಯ ಮಾನದಂಡಗಳ ವಿವರಣೆಗಳನ್ನೂ ಉತ್ತಮಪಡಿಸಿದೆ.
ವ್ಯುತ್ಪನ್ನ
ಬದಲಾಯಿಸಿಫ್ಯುಜಿಟಾ ಕಂಡುಹಿಡಿದ ಮೂಲ ಮಾಪಕವು ಒಂದು ಸೈದ್ಧಾಂತಿಕ ೧೩-ಶ್ರೇಣಿಯ ಮಾಪಕವಾಗಿದ್ದು (ಎಫ್‌೦-ಎಫ್‌೧೨), ಬ್ಯುಫೋರ್ಟ್ ಮಾಪಕ ಮತ್ತು ಮ್ಯಾಕ್ ಸಂಖ್ಯೆ ಮಾಪಕವನ್ನು ಸೂಕ್ಷ್ಮವಾಗಿ ಜೋಡಿಸುವಂತೆ ವಿನ್ಯಾಸಗೊಳಿಸಲಾಗಿತ್ತು. ಎಫ್‌೧ ಎಫ್‌೧ ಬ್ಯುಫೋರ್ಟ್ ಮಾಪಕದ ಹನ್ನೆರಡನೇ ಮಟ್ಟಕ್ಕೆ ಸಂಬಂಧಿಸಿದ್ದರೆ, ಎಫ್‌೧೨ ಮ್ಯಾಕ್ ಸಂಖ್ಯೆ ೧.೦ಕ್ಕೆ ಸಂಬಂಧಿಸಿರುತ್ತದೆ. ಎಫ್‌೦ ಅನ್ನು ಏನೂ ಹಾನಿಯಾಗಿಲ್ಲ ಎಂಬುದನ್ನು ಸೂಚಿಸುವ ಸ್ಥಾನಕ್ಕೆ ಇಡಲಾಗುತ್ತದೆ (ಇದು ಬ್ಯುಫೋರ್ಟ್ ಮಾಪಕದಲ್ಲಿ ಸುಮಾರಾಗಿ ೮ನೇ ಮಟ್ಟಕ್ಕೆ ಸಮ), ಬ್ಯುಫೋರ್ಟ್ ಮಾಪಕದ ಶೂನ್ಯ ಮಟ್ಟವು ಗಾಳಿಯು ಸ್ವಲ್ಪ ಇದೆ ಅಥವಾ ಏನೂ ಇಲ್ಲ ಎಂಬುದನ್ನು ಸೂಚಿಸುವುದಕ್ಕೆ ಇದು ಸಾದೃಶ್ಯವಾಗಿದೆ. ಈ ಗಾಳಿಯ ವೇಗದ ಸಂಖ್ಯೆಗಳಿಂದ ಹಾನಿಯ ಗುಣಾತ್ಮಕ ವಿವರಣೆಗಳನ್ನು ಪ್ರತಿ ಫ್ಯುಜಿಟಾ ಮಾಪಕದ ವಿಭಾಗಗಳಿಗೆ ಮಾಡಲಾಗುತ್ತದೆ ಮತ್ತು ನಂತರ ಈ ವಿವರಣೆಗಳನ್ನು ಟೊರ್ನೆಡೋ (ಸುಂಟರಗಾಳಿ)ಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ.[೧] ಬಲಗಡೆ ಇರುವ ರೇಖಾಚಿತ್ರವು ಬ್ಯುಫೋರ್ಟ್, ಫ್ಯುಜಿಟಾ, ಮತ್ತು ಮ್ಯಾಕ್ ಸಂಖ್ಯೆ ಮಾಪಕಗಳ ನಡುವಣ ಸಂಬಂಧವನ್ನು ಚಿತ್ರಿಸುತ್ತದೆ.
ಫ್ಯುಜಿಟಾ ಈ ಮಾಪಕವನ್ನು ಅಭಿವೃದ್ಧಿಪಡಿಸಿದ ಸಮಯದಲ್ಲಿ, ಗಾಳಿಯಿಂದಾಗುವ ಹಾನಿಗಳ ಕುರಿತು ತುಂಬ ಕಡಿಮೆ ಮಾಹಿತಿ ಲಭ್ಯವಿತ್ತು. ಹೀಗಾಗಿ ಮೂಲ ಮಾಪಕವು ನಿರ್ದಿಷ್ಟ ಹಾನಿಗಳನ್ನುಂಟು ಮಾಡುವ ಗಾಳಿಯ ವೇಗದ ವ್ಯಾಪ್ತಿಯ ಕುರಿತು ಶಿಕ್ಷಿತರು ಊಹೆ ಮಾಡುವುದಕ್ಕಿಂತ ಸ್ವಲ್ಪ ಹೆಚ್ಚು ಹಾನಿಯನ್ನು ಊಹೆ ಮಾಡುವಂತಿತ್ತು. ಫ್ಯುಜಿಟಾ ಕೇವಲ ಎಫ್‌೦-ಎಫ್‌೫ ಅನ್ನು ರೂಢಿಗತವಾಗಿ ಬಳಸಬಹುದು ಎಂಬ ಉದ್ದೇಶ ಹೊಂದಿದ್ದರು, ಏಕೆಂದರೆ ಇದು ಮನೆಗಳಿಗೆ ಆಗುವ ಹಾನಿಯ ಪ್ರಮಾಣ ಮತ್ತು ಗಾಳಿಯ ವೇಗದಿಂದ ಉಂಟಾಗುವ ನಿರೀಕ್ಷಿತ ಅಂದಾಜುಗಳನ್ನೂ ಒಳಗೊಳ್ಳುತ್ತಿತ್ತು. ಆದಾಗ್ಯೂ ಅವರು ಎಫ್‌೬ಕ್ಕೆ ಒಂದು ವಿವರಣೆಯನ್ನು ಸೇರಿಸಿ, ಅನೂಹ್ಯ ಟೊರ್ನೆಡೋ (ಸುಂಟರಗಾಳಿ)" ಎಂದು ಹೆಸರಿಟ್ಟರು. ಇದು ಎಫ್‌೫ಗಿಂತ ಅಧಿಕವಿರುವ ಗಾಳಿಯ ವೇಗಕ್ಕೆ ಮತ್ತು ಹಾನಿಯ ವಿಶ್ಲೇಷಣೆಯಲ್ಲಿ ಸಂಭಾವ್ಯ ಪ್ರಗತಿಯನ್ನು ತೋರಿಸಲು ಆಸ್ಪದ ಕಲ್ಪಿಸುತ್ತದೆ.[೨]
ಅಲ್ಲದೇ, ಮೂಲ ಗಾಳಿಯ ವೇಗದ ಸಂಖ್ಯೆಗಳು ಪ್ರತಿ ವಿಭಾಗದಲ್ಲಿಯೂ ವಿವರಿಸಲಾದ ಹಾನಿಯನ್ನು ಉಂಟು ಮಾಡಲು ಅಗತ್ಯವಾದ ನಿಜವಾದ ಗಾಳಿಯ ವೇಗಕ್ಕಿಂತ ಅಧಿಕವಿದ್ದುದು ಕಂಡುಬಂದಿತು. ವಿಭಾಗವು ಅಧಿಕಗೊಂಡಂತೆ ತಪ್ಪು ತಾನಾಗಿಯೇ ಅಧಿಕವಾಗಿ ಪ್ರಕಟಗೊಳ್ಳತೊಡಗಿತ್ತು, ವಿಶೇಷವಾಗಿ ಎಫ್‌೩ ಶ್ರೇಣಿಯಲ್ಲಿ ಎಫ್‌೫ರ ಮೂಲಕ ಅಧಿಕವಾಗಿ ಕಾಣುತ್ತಿತ್ತು. ಎನ್‌ಒಎಎ ಹೀಗೆ ಗಮನಿಸಿತ್ತು, "....ನಿಖರ ಗಾಳಿಯ ವೇಗದ ಸಂಖ್ಯೆಗಳು ವಾಸ್ತವದಲ್ಲಿ ಊಹೆಗಳು ಮತ್ತು ಅವುಗಳನ್ನು ವೈಜ್ಞಾನಿಕವಾಗಿ ಎಂದೂ ಪರೀಕ್ಷಿಸಿರಲಿಲ್ಲ. ಭಿನ್ನ ಗಾಳಿಯ ವೇಗಗಳು ಸ್ಥಳದಿಂದ ಸ್ಥಳಕ್ಕೆ ಒಂದೇ ರೀತಿಯಾಗಿ ಕಾಣುವ ಹಾನಿಯನ್ನು ಉಂಟು ಮಾಡಬಹುದು- ಅಷ್ಟೇಕೆ ಕಟ್ಟಡದಿಂದ ಕಟ್ಟಡಕ್ಕೆಕೂಡ. ಟೊರ್ನೆಡೋ (ಸುಂಟರಗಾಳಿ)ಗಳ ಸೂಕ್ಷ್ಮವಾದ ಇಂಜಿನಿಯರಿಂಗ್ ವಿಶ್ಲೇಷಣೆ ಇಲ್ಲದೇ, ಆ ಹಾನಿಯನ್ನು ಉಂಟು ಮಾಡಲು ಅಗತ್ಯವಾದ ನಿಜವಾದ ಗಾಳಿಯ ವೇಗಗಳು ಗೊತ್ತಾಗುವುದಿಲ್ಲ".[೨] ಆನಂತರ ಸುಧಾರಿತ ಫ್ಯುಜಿಟಾ ಮಾಪಕವನ್ನು ಎಂಜಿನಿಯರ್‌ಗಳು ಹಾಗೂ ಹವಾಮಾನ ತಜ್ಞರು ಗಾಳಿಯ ಉತ್ತಮ ಅಂದಾಜುಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದರು.
ಕೆಲವು ಮೂಲಗಳಲ್ಲಿ ಎಫ್+" ಮಟ್ಟವನ್ನು ಸೇರಿಸುತ್ತಾರೆ, ಇದರರ್ಥ ಗಂಟೆಗೆ ೩೯ ಮೈಲಿಗಿಂತ ಕಡಿಮೆ ಇರುವ ಗಾಳಿಯಿಂದ ಬೀಸುವ ಟೊರ್ನೆಡೋ (ಸುಂಟರಗಾಳಿ); ಕೆಲವು ಅಪರೂಪದ ಸನ್ನಿವೇಶಗಳಲ್ಲಿ ಇಷ್ಟು ದುರ್ಬಲ ಟೊರ್ನೆಡೋ (ಸುಂಟರಗಾಳಿ)ಗಳು ಬಹಳ ವಿಶಾಲ ಶ್ರೇಣಿಯ ದಾರಿ ಉದ್ದ ಮತ್ತು ಅಗಲವನ್ನು ಒಳಗೊಳ್ಳುವುದನ್ನು ಗಮನಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಮಾನದಂಡಗಳು
ಬದಲಾಯಿಸಿಐದು ವಿಭಾಗಗಳನ್ನು ಇಲ್ಲಿ ಅಧಿಕಗೊಳ್ಳುವ ತೀವ್ರತೆಯ ಶ್ರೇಣಿಯಲ್ಲಿ ಪಟ್ಟಿ ಮಾಡಲಾಗಿದೆ.
- ಟೊರ್ನೆಡೋ (ಸುಂಟರಗಾಳಿ)ಗಳ ಸಾಪೇಕ್ಷ ಕಂಪನವನ್ನು ಉಲ್ಲೇಖಿಸಲಾಗಿರುತ್ತದೆ, ಸಂಯುಕ್ತ ಸಂಸ್ಥಾನದಲ್ಲಿ ಸಾಪೇಕ್ಷ ಕಂಪನ ದರಗಳ ಅತ್ಯುತ್ತಮ ದತ್ತಾಂಶಗಳು ಇವೆ. ಬಲಶಾಲಿ ಟೊರ್ನೆಡೋ (ಸುಂಟರಗಾಳಿ)ಗಳು (ಎಫ್‌೨ ಅಥವಾ ಅಧಿಕ) ವಿಶ್ವದಲ್ಲಿ ಬೇರೆಡೆಗಳಲ್ಲಿ ಬಹಳ ಕಡಿಮೆ ಸಂಭವಿಸುತ್ತವೆ. ಬ್ರಿಟನ್‌ನಂತಹ ಕೆಲವು ಪ್ರದೇಶಗಳಿಗೆ ಈ ಅನುಪಾತವು ಕಡಿಮೆ ಇರುವುದನ್ನು ಹೊರತುಪಡಿಸಿದರೆ ಬೇರೆಡೆ ಇದು ಒಂದೇ ರೀತಿಯಾಗಿ ಇರುವಂತೆ ತೋರುತ್ತದೆ. ಆದರೆ ಕೆಲವು ಟೊರ್ನೆಡೋ (ಸುಂಟರಗಾಳಿ)ಗಳು ಬಹಳ ಶಕ್ತಿಶಾಲಿಯಾಗಿರುತ್ತವೆ. ಕೆನಡಾದ ದಕ್ಷಿಣ ಭಾಗಗಳು, ಬಾಂಗ್ಲಾದೇಶ ಮತ್ತು ಪೂರ್ವ ಭಾರತದ ಅಕ್ಕಪಕ್ಕದ ಪ್ರದೇಶಗಳು, ಮತ್ತು ಕೆಲವು ಸಂಭಾವ್ಯ ಪ್ರದೇಶಗಳು ತುಂಬ ಗಂಭೀರವಾದ ಆಗಾಗ ಸಂಭವಿಸುವ ಟೊರ್ನೆಡೋ (ಸುಂಟರಗಾಳಿ)ಗಳನ್ನು ಎದುರಿಸುತ್ತವೆ; ಆದರೆ ಈ ಕುರಿತ ದತ್ತಾಶಗಳು ಬಹಳ ವಿರಳ ಮತ್ತು ಈ ದೇಶಗಳಲ್ಲಿ ಲಭ್ಯವಿರುವ ಅಂಕಿಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿಲ್ಲ.
- ಯಾವುದೇ ದತ್ತ ಟೊರ್ನೆಡೋ (ಸುಂಟರಗಾಳಿ)ವನ್ನು ಶ್ರೇಣೀಕರಿಸುವುದು ಅದು ಅತ್ಯುತ್ತಮವಾಗಿ ಕಟ್ಟಿದ ಮನೆಯೊಂದನ್ನು ಎಷ್ಟು ಹಾನಿಗೊಳಿಸಿರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ ಅಥವಾ ಬೇರೆ ಹಾನಿಯ ಇಂಜಿನಿಯರಿಂಗ್ ವಿಶ್ಲೇಷಣೆಗೆ ಅದನ್ನು ಹೋಲಿಸಿ, ಶ್ರೇಣಿ ನೀಡಲಾಗುತ್ತದೆ.
ಮಾಪಕ | ಗಾಳಿಯ ಅಂದಾಜು ವೇಗ* [೩] | ಸಾಪೇಕ್ಷ ಕಂಪನ ದರ[ಸೂಕ್ತ ಉಲ್ಲೇಖನ ಬೇಕು] | ಸರಾಸರಿ ಹಾನಿಯ ಪಥದ ಅಗಲ (ಮೀಟರ್‌ಗಳು) [ಸೂಕ್ತ ಉಲ್ಲೇಖನ ಬೇಕು] | ಸಂಭಾವ್ಯ ಹಾನಿ [೩] | ||
ಪ್ರತಿ ಗಂಟೆಗೆ ಮೈಲುಗಳು | ಕಿಮೀ/ಗಂಟೆ(ಪ್ರತಿ ಗಂಟೆಗೆ ಕಿಲೋಮೀಟರ್) | |||||
ಎಫ್‌೦ | ೪೦–೭೨ | ೬೪–೧೧೬ | ೩೮.೯% | ೧೦–೫೦ | ಲಘು ಹಾನಿ. ಚಿಮಣಿಗಳಿಗೆ ಸ್ವಲ್ಪ ಹಾನಿ; ಮರಗಳ ಟೊಂಗೆಗಳು ಮುರಿದಿರುವುದು; ಮೇಲ್ಭಾಗದಲ್ಲಿ ಬೇರುಗಳಿದ್ದ ಮರಗಳು ಅಲ್ಲಾಡಿರುತ್ತವೆ; ಸೈನ್‌ಬೋರ್ಡ್‌ಗಳಿಗೆ ಹಾನಿಯಾಗಿರುತ್ತದೆ. | |
ಎಫ್‌೧ | ೭೩–೧೧೨ | ೧೧೭–೧೮೦ | ೩೫.೬% | ೩೦–೧೫೦ | ಮಧ್ಯಮ ಹಾನಿ.ಇದರ ಕೆಳ ಮಿತಿಯು ಹರಿಕೇನ್ (ಚಂಡಮಾರುತ) ಗಾಳಿಯ ವೇಗದಷ್ಟಿರುತ್ತದೆ; ಮೇಲ್ಚಾವಣಿಗಳು ಕಿತ್ತುಬಂದಿರುತ್ತವೆ; ಮೊಬೈಲ್ (ಸಂಚಾರಿ) ಮನೆಗಳ ಅಡಿಪಾಯ ಕಿತ್ತಿರುತ್ತದೆ ಅಥವಾ ಬುಡಮೇಲಾಗಿರುತ್ತವೆ; ಚಲಿಸುತ್ತಿರುವ ಆಟೋಗಳು ರಸ್ತೆಯಿಂದ ನೂಕಲ್ಪಟುತ್ತವೆ; ಮನೆಗೆ ಅಂಟಿಕೊಂಡ ಗ್ಯಾರೇಜ್‌ಗಳು ಕುಸಿದುಬೀಳಬಹುದು. | |
ಎಫ್‌೨ | ೧೧೩–೧೫೭ | ೧೮೧–೨೫೩ | ೧೯.೪% | ೧೧೦–೨೫೦ | ಗಣನೀಯ ಹಾನಿ. ಚೌಕಟ್ಟಿರುವ ಮನೆಗಳ ಮೇಲ್ಚಾವಣಿ ಹಾರಿಹೋಗುತ್ತವೆ; ಮೊಬೈಲ್ ಮನೆಗಳು ಪೂರ್ಣ ಜಖಂಗೊಳ್ಳುತ್ತವೆ; ಬಾಕ್ಸ್‌ಕಾರುಗಳು ತಲೆಕೆಳಗಾಗುತ್ತವೆ; ದೊಡ್ಡ ಮರಗಳು ಬೀಳುತ್ತವೆ ಅಥವಾ ಬುಡಮೇಲಾಗುತ್ತವೆ; ಮೇಲ್ಭಾಗದಲ್ಲಿರುವ ಕಿಡಕಿಗಳು ಮುರಿಯುತ್ತವೆ ಮತ್ತು ಹಗುರು ವಸ್ತುಗಳು ಗಾಳಿಯಲ್ಲಿ ತೂರಿಕೊಂಡು ಹೋಗುತ್ತವೆ. | |
ಎಫ್‌೩ | ೧೫೮–೨೦೬ | ೨೫೪–೩೩೨ | ೪.೯% | ೨೦೦–೫೦೦ | ತೀವ್ರ ಹಾನಿ. ಉತ್ತಮವಾಗಿ ಕಟ್ಟಿರುವ ಮನೆಗಳ ಮೇಲ್ಚಾವಣಿಗಳು ಮತ್ತು ಗೋಡೆಗಳು ಕುಸಿದುಬೀಳುತ್ತವೆ; ಕಾಡಿನಲ್ಲಿರುವ ಬಹುತೇಕ ಮರಗಳು ಬುಡಮೇಲಾಗುತ್ತವೆ; ಸ್ಕೈಸ್ಕ್ರೇಪರ್‌ಗಳು ತಿರುಚಿದಂತಾಗುತ್ತವೆ ಮತ್ತು ಕಟ್ಟಡಗಳ ಹೊರಭಾಗಕ್ಕೆ ಅಪಾರ ಹಾನಿಯುಂಟಾಗುತ್ತದೆ; ಭಾರವಾದ ಕಾರುಗಳು ಕೂಡ ನೆಲದಿಂದ ದೂರಕ್ಕೆ ಎಸೆಯಲ್ಪಡುತ್ತವೆ. | |
ಎಫ್‌೪ | ೨೦೭–೨೬೦ | ೩೩೩–೪೧೮ | ೧.೧% | ೪೦೦–೯೦೦ | ವಿಧ್ವಂಸಗೊಳಿಸುವಷ್ಟು ಹಾನಿ. ಅತ್ಯುತ್ತಮವಾಗಿ ನಿರ್ಮಿಸಿದ ಮನೆಗಳು ನೆಲಕಚ್ಚುತ್ತವೆ; ದುರ್ಬಲ ಅಡಿಪಾಯದ ಮನೆಗಳು ದೂರಕ್ಕೆ ಎಸೆಯಲ್ಪಡುತ್ತವೆ; ರೈಲುಗಳು ತಲೆಕೆಳಗಾಗುತ್ತವೆ; ಕಾರುಗಳು ದೂರಕ್ಕೆ ಎಸೆಯಲ್ಪಡುತ್ತವೆ ಮತ್ತು ದೊಡ್ಡದಾದ ಭಾರದ ವಸ್ತುಗಳು ಕ್ಷಿಪಣಿಗಳಂತೆ ಸುಂಟರಗಾಳಿಯಲ್ಲಿ ಹಾರುತ್ತವೆ. ಸ್ಕೈಸ್ಕ್ರೇಪರ್‌ಗಳು ಮತ್ತು ಎತ್ತರದ ಕಟ್ಟಡಗಳು ಕೆಳಗುರುಳಿ, ನಾಶವಾಗುತ್ತವೆ. | |
ಎಫ್‌೫ | ೨೬೧–೩೧೮ | ೪೧೯–೫೧೨ | <0.1% | 1100 ~ | ಅತ್ಯಧಿಕ, ಊಹಿಸಲಾಗದಷ್ಟು ಹಾನಿ. ಬಹಳ ಬಲವಾದ ಚೌಕಟ್ಟುಳ್ಳ ಮನೆಗಳ ಅಡಿಪಾಯ ಕಿತ್ತೆದ್ದು, ಬುಡಮೇಲಾಗಿ, ಗಾಳಿಯೊಡನೆ ಸಾಕಷ್ಟು ದೂರಕ್ಕೆ ಎಸೆದಂತಾಗುತ್ತವೆ. ವಾಹನಗಳಷ್ಟು ದೊಡ್ಡ ವಸ್ತುಗಳು ಗಾಳಿಯಲ್ಲಿ 100 ಮೀಟರ್‌ಗೂ ಎತ್ತರಕ್ಕೆ ಕ್ಷಿಪಣಿಗಳಂತೆ ಹಾರುತ್ತವೆ. ಮರಗಳು ಕೆಳಗುರುಳುತ್ತವೆ; ಸ್ಟೀಲ್ ಬಲವರ್ಧಿತ ಕಾಂಕ್ರೀಟ್ ನಿರ್ಮಾಣಗಳೂ ತೀವ್ರ ಹಾನಿಗೊಳಗಾಗುತ್ತವೆ. |
*ಫ್ಯುಜಿಟಾ ಅವರ ಆರಂಭಿಕ ಗಾಳಿಯ ವೇಗದ ಅಂದಾಜುಗಳು ಹೆಚ್ಚು ನಿಖರವಾಗಿಲ್ಲ. ಸುಧಾರಿತ ಫ್ಯುಜಿಟಾ ಮಾಪಕ ನೋಡಿ.
ಎನ್‌ಬಿ: ಪಥ ಅಗಲಗಳು ಟೊರ್ನೆಡೋ (ಸುಂಟರಗಾಳಿ)ಗಳ ಫ್ಯುಜಿಟಾ ದರದ ಸರಾಸರಿಗಳು ಮತ್ತು ಅಂದಾಜು ಮೌಲ್ಯಗಳು; ಹಾನಿಯ ಪಥದ ಗಾತ್ರದಿಂದ ಟೊರ್ನೆಡೋ (ಸುಂಟರಗಾಳಿ)ಯ ತೀವ್ರತೆಯನ್ನು ಊಹೆ ಮಾಡಲಾಗದು. ಒಂದು ಎಫ್‌೫ ಟೊರ್ನೆಡೋ (ಸುಂಟರಗಾಳಿ)ದ ಹಾನಿಯ ಮಾರ್ಗವು ಒಂದು ಸ್ಥಳದಲ್ಲಿ ೯೦ ಮೀಟರ್‌ಗಳಷ್ಟು ಅಗಲವಿತ್ತು.
ಫ್ಯುಜಿಟಾ ಮಾಪಕವು ಜೋರಾಗಿ ಎತ್ತರದಿಂದ ಬೀಡುವ ಗಾಳಿಯಿಂದ ಉಂಟಾದ ಹಾನಿಯ ತೀವ್ರತೆಯನ್ನು ಆಧರಿಸಿರುವುದರಿಂದ, ಎಫ್‌ಎಫ್‌೬ ಟೊರ್ನೆಡೋ (ಸುಂಟರಗಾಳಿ)ಯು ಸಂಪೂರ್ಣವಾಗಿ ಒಂದು ಸೈದ್ಧಾಂತಿಕ ಸೂತ್ರವಾಗಿದೆ. ಒಂದು ಎಫ್‌೫ಅನ್ನು ಒಳಗೊಂಡಿರುವ, ಆಸ್ತಿ ಹಾನಿಯು ಒಟ್ಟು ನಾಶವನ್ನು ಮೀರಲಾರದು. (ಗಂಟೆಗೆ ೩೧೯ ಮೈಲಿಗಳಿಗಿಂತ ಅಧಿಕವಿರುವ ಗಾಳಿಯ ವೇಗದಿಂದ ಬೀಸುವ ಟೊರ್ನೆಡೋ (ಸುಂಟರಗಾಳಿ) ಸೈದ್ಧಾಂತಿಕವಾಗಿ ಸಾಧ್ಯವಿದೆ ಮತ್ತು ೧೯೯೯ರ ಒಕ್ಲಹಾಮಾ ನಗರದ ಟೊರ್ನೆಡೋ (ಸುಂಟರಗಾಳಿ) ಅಂತಹದೊಂದು ಘಟನೆಯಾಗಿರಬಹುದು. ಆದಾಗ್ಯೂ, ಅಂತಹ ಗಾಳಿಯ ವೇಗವನ್ನು ದಾಖಲಿಸಿಕೊಂಡೇ ಇಲ್ಲ ಮತ್ತು ಹಾಗೆ ಅಳೆದಿದ್ದು ಭೂಮಟ್ಟದ ಸಮೀಪ ಅಲ್ಲ.)
ಅಂದಾಜು ನಿರ್ಣಯಿಸುವ ವರ್ಗೀಕರಣಗಳು
ಬದಲಾಯಿಸಿಎಫ್0 | ಎಫ್1 | ಎಫ್2 | ಎಫ್3 | ಎಫ್4 | ಎಫ್5 |
---|---|---|---|---|---|
ದುರ್ಬಲ | ಶಕ್ತಿಶಾಲಿ | ವಿಧ್ವಂಸಕ | |||
ಗಣನೀಯ | |||||
ತೀವ್ರ |
ಟೊರ್ನೆಡೋ (ಸುಂಟರಗಾಳಿ) ಹವಾಮಾನಶಾಸ್ತ್ರ ಅಧ್ಯಯನದಂತಹ ಉದ್ದೇಶಗಳಿಗೆ, ಫ್ಯುಜಿಟಾ ಮಾಪಕ ಅಂದಾಜು ನಿರ್ಣಯಗಳನ್ನು ವಿವಿಧ ವರ್ಗಗಳಲ್ಲಿ ಗುಂಪು ಮಾಡಬಹುದು.[೪][೫][೬]
ಅಮೆರಿಕದಲ್ಲಿ ಬಳಕೆಯಿಂದ ತೆಗೆದುಹಾಕಿದ್ದು
ಬದಲಾಯಿಸಿಫ್ಯುಜಿಟಾ ಮಾಪಕವನ್ನು ೧೯೭೧ರಲ್ಲಿ ಟೊರ್ನೆಡೋ (ಸುಂಟರಗಾಳಿ)ಗಳ ತೀವ್ರತೆಯನ್ನು ಮತ್ತು ಪಥ ವಿಸ್ತೀರ್ಣವನ್ನು ಪ್ರತ್ಯೇಕಿಸಲು ಒಂದು ವಿಧಾನವಾಗಿ ಪರಿಚಯಿಸಲಾಯಿತು. ಆ ಪ್ರದೇಶಗಳಲ್ಲಿ ಹಾನಿಯನ್ನುಂಟು ಮಾಡಲು ಗಾಳಿಯ ವೇಗವು ಹೆಚ್ಚೆಂದರೆ ಶಿಕ್ಷಿತರ ಊಹೆಗಳಿಗಿಂತ ಉತ್ತಮವಾಗಿರುತ್ತವೆ ಎಂಬುದನ್ನು ಇದು ಆಧರಿಸಿತ್ತು.[೭] ಫ್ಯುಜಿಟಾ ಮತ್ತು ಇನ್ನಿತರರು ಇದನ್ನು ತಕ್ಷಣವೇ ಗುರುತಿಸಿದರು ಮತ್ತು ೧೯೭೦ರ ದಶಕದುದ್ದಕ್ಕೂ ಗಂಭೀರವಾದ ಇಂಜಿನಿಯರಿಂಗ್ ವಿಶ್ಲೇಷಣೆಗಳನ್ನು ನಡೆಸಲಾಯಿತು. ಈ ಸಂಶೋಧನೆ ಮತ್ತು ತದನಂತರದಲ್ಲಿ ನಡೆದ ಸಂಶೋಧನೆಗಳು ವಿವರಿಸಲಾದ ಹಾನಿಯನ್ನುಂಟು ಮಾಡಲು ಅಗತ್ಯವಾದ ಟೊರ್ನೆಡೋ (ಸುಂಟರಗಾಳಿ) ಗಾಳಿಯ ವೇಗವು ಎಫ್-ಮಾಪಕದಲ್ಲಿ ಸೂಚಿಸಿದ್ದಕ್ಕಿಂತ ಬಹಳ ಕಡಿಮೆ ಇದೆ, ವಿಶೇಷವಾಗಿ ಮೇಲಿನ ವಿಭಾಗಗಳಿಗೆ ಬಹಳ ಕಡಿಮೆ ಎಂಬುದನ್ನು ತೋರಿಸಿದವು. ಜೊತೆಗೆ ಮಾಪಕವು ಒಂದು ಟೊರ್ನೆಡೋ (ಸುಂಟರಗಾಳಿ) ಉಂಟು ಮಾಡಬಹುದಾದ ಹಾನಿಯ ವಿಧದ ಸಾಮಾನ್ಯ ವಿವರಣೆಗಳನ್ನು ನೀಡಿದ್ದರೂ, ಅದು ಕಡಿಮೆ ಗಾಳಿಯ ವೇಗದಲ್ಲಿ ಕಟ್ಟಡವೊಂದು ಅತಿಯಾದ ಹಾನಿಗೊಳಗಾಗಲು ಕಾರಣವಾಗುವ ಇನ್ನಿತರ ಅಂಶಗಳು ಮತ್ತು ನಿರ್ಮಾಣದ ಬಲದ ಕುರಿತು ತುಂಬ ಕಡಿಮೆ ಅವಕಾಶವನ್ನು ನೀಡಿತ್ತು. ಫ್ಯುಜಿಟಾ ಈ ಸಮಸ್ಯೆಗಳನ್ನು ಬಗೆಹರಿಸಲು ೧೯೯೨ರಲ್ಲಿ ಪ್ರಯತ್ನಿಸಿ, ಮಾರ್ಪಾಡು ಮಾಡಿದ ಫ್ಯುಜಿಟಾ ಮಾಪಕದೊಂದಿಗೆ ಪ್ರಯತ್ನಿಸಿದರು, ನಿಜ.[೮] ಆದರೆ ಆ ಹೊತ್ತಿಗೆ ಅವರು ಅರೆ-ನಿವೃತ್ತಿಯಾಗಿದ್ದರು ಮತ್ತು ರಾಷ್ಟ್ರೀಯ ಹವಾಮಾನ ಸೇವೆಯು (ನ್ಯಾಶನಲ್ ವೆದರ್ ಸರ್ವಿಸ್) ಸಂಪೂರ್ಣವಾಗಿ ಒಂದು ಹೊಸ ಮಾಪಕಕ್ಕೆ ನವೀಕರಣಗೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ, ಆದ್ದರಿಂದ ಆ ಹೊಸ ಮಾಪಕವನ್ನು ಕಾರ್ಯಗತಗೊಳಿಸಲಿಲ್ಲ.[೯]
ಅಮೆರಿಕದಲ್ಲಿ ಮತ್ತು ಬೇರೆ ಕೆಲವು ದೇಶಗಳಲ್ಲಿ, ೨೦೦೭ರ ಫೆಬ್ರವರಿ ೧ರಂದು ಫ್ಯುಜಿಟಾ ಮಾಪಕದ ಬಳಕೆಯನ್ನು ಕೈಬಿಡಲಾಯಿತು ಮತ್ತು ಈ ವಿಜ್ಞಾನಿಗಳು ಇದರ ಬದಲಿಗೆ ಹೆಚ್ಚು ನಿಖರವಾದ ಸುಧಾರಿತ ಫ್ಯುಜಿಟಾ ಮಾಪಕ (ಇಎಫ್) ಬಳಸಲಾರಂಭಿಸಿದರು. ಇಎಫ್ ಮಾಪವು ಎಫ್-ಸ್ಕೇಲ್‌ಅನ್ನು ಅನೇಕ ರೀತಿಯಲ್ಲಿ ಉತ್ತಮಪಡಿಸಿದೆ ಎಂದು ನಂಬಲಾಗಿದೆ - ವಿವಿಧ ರೀತಿಯ ನಿರ್ಮಿತಿಗಳಿಗೆ ಸಂಭವಿಸುವ ಮನುಷ್ಯ ನಿರ್ಮಿತ ಮತ್ತು ಸ್ವಾಭಾವಿಕ ನಿರ್ಮಿತಿಗಳಿಗೆ ಉಂಟಾಗುವ ವಿವಿಧ ಪ್ರಮಾಣದ ಹಾನಿಯನ್ನು ಲೆಕ್ಕ ಹಾಕುತ್ತದೆ. ವಿಸ್ತರಿತ ಮತ್ತು ಉತ್ತಮಪಡಿಸಲಾದ ಹಾನಿಯ ಸೂಚಕಗಳು ಮತ್ತು ಹಾನಿಯ ಪ್ರಮಾಣವು ಸ್ವಲ್ಪ ಮಟ್ಟಿಗೆ ಗೊಂದಲಮಯವಾಗಿದ್ದನ್ನು ಪ್ರಮಾಣೀಕರಣಗೊಳಿಸಿವೆ. ಇದು ಗಾಳಿಯ ವೇಗಗಳ ಇನ್ನೂ ಉತ್ತಮ ಅಂದಾಜನ್ನು ಒಡಗಿಸುತ್ತದೆ ಎಂದು ಯೋಚಿಸಲಾಗಿದೆ ಮತ್ತು ಶಕ್ತಿಶಾಲಿ ಗಾಳಿಯ ವೇಗಗಳಿಗೆ, ಅಂದರೆ ಇಎಫ್‌೫ಗಳಿಗೆ ಯಾವುದೇ ಮೇಲಿನ ಮಿತಿಯನ್ನು ಇರಿಸಿಲ್ಲ. ಕೆನಡಾ ಮತ್ತು ಫ್ರಾನ್ಸ್ ಒಳಗೊಂಡಂತೆ ಇನ್ನು ಹಲವಾರು ದೇಶಗಳು ಮೂಲ ಫ್ಯುಜಿಟಾ ಮಾಪಕದ ಬಳಕೆಯನ್ನೇ ಮುಂದುವರೆಸಿವೆ.
ಇವನ್ನೂ ಗಮನಿಸಿ
ಬದಲಾಯಿಸಿ- ಬ್ಯುಫೋರ್ಟ್ ಮಾಪಕ
- ಟೊರೊ (ಟಿಒಆರ್‌ಆರ್‌ಒ) ಮಾಪಕ
- ಸಫಿರ್-ಸಿಂಪ್ಸನ್ ಹರಿಕೇನ್ ಮಾಪಕ
- ಯಾವುದೇ ತುರ್ತು ಸನ್ನಿವೇಶಗಳ ತೀವ್ರತೆಯ ಪ್ರಮಾಣವನ್ನು ಅಳೆಯುವ ರಾನ್ ತುರ್ತು ಮಾಪಕ
- ಟೊರ್ನೆಡೋ (ಸುಂಟರಗಾಳಿ) ತೀವ್ರತೆ ಮತ್ತು ಹಾನಿ
- ಟೊರ್ನೆಡೋ (ಸುಂಟರಗಾಳಿ)ಗಳ ಮತ್ತು ಟೊರ್ನೆಡೋ (ಸುಂಟರಗಾಳಿ) ನಾಶಗಳ ಪಟ್ಟಿ
- ಪಟ್ಟಿ ಎಫ್‌೫ ಮತ್ತು ಇಎಫ್‌೫ ಟೊರ್ನೆಡೋ (ಸುಂಟರಗಾಳಿ)ಗಳು
- ತೀವ್ರತೆರವಾದ ಹವಾಮಾನ ಪರಿಭಾಷೆ (ಸಂಯುಕ್ತ ಸಂಸ್ಥಾನ)
- ವಿಂಡ್ ಎಂಜಿನಿಯರಿಂಗ್
ಉಲ್ಲೇಖಗಳು
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ ಬಿರುಗಾಳಿ ಊಹೆ ಕೇಂದ್ರ(ಸ್ಟಾರ್ಮ್ ಪ್ರಡಿಕ್ಷನ್ ಸೆಂಟರ್) ಸುಧಾರಿತ ಫ್ಯುಜಿಟಾ ಮಾಪಕ (ಇಎಫ್ ಮಾಪಕ)
- ↑ ೨.೦ ೨.೧ ಟೊರ್ನೆಡೋ (ಸುಂಟರಗಾಳಿ) ಎಫ್‌ಎಕ್ಯೂ. ಬಿರುಗಾಳಿ ಊಹೆ ಕೇಂದ್ರ (ಸ್ಟಾರ್ಮ್ ಪ್ರೆಡಿಕ್ಷನ್ ಸೆಂಟರ್). ೨೦೦೬ರ ಜೂನ್ ೨೭ರಂದು ಅಂತರಜಾಲ ತಾಣವನ್ನು ಲಭ್ಯಗೊಳಿಸಲಾಗಿದೆ.
- ↑ ೩.೦ ೩.೧ ಫ್ಯುಜಿಟಾ ಟೊರ್ನೆಡೋ (ಸುಂಟರಗಾಳಿ) ಹಾನಿ ಮಾಪಕ ಬಿರುಗಾಳಿ ಊಹೆ ಕೇಂದ್ರ (ಸ್ಟಾರ್ಮ್ ಪ್ರೆಡಿಕ್ಷನ್ ಸೆಂಟರ್). 2009-05-20ರಂದು ಲಭ್ಯಪಡಿಸಿಕೊಳ್ಳಲಾಗಿದೆ.
- ↑ Grazulis, Thomas P (1993). Significant Tornadoes 1680–1991. St. Johnsbury, VT: The Tornado Project of Environmental Films. ISBN 1-879362-03-1.
{{cite book}}
: Unknown parameter|month=
ignored (help) - ↑ "ಟೊರ್ನೆಡೋ (ಸುಂಟರಗಾಳಿ) ತೀವ್ರತೆ ಅಳೆಯಲು ಫ್ಯುಜಿಟಾ ಮಾಪಕ". Archived from the original on 2011-12-30. Retrieved 2011-06-03.
- ↑ "ತೀವ್ರ ಗುಡುಗು ಬಿರುಗಾಳಿಯ ಹವಾಮಾನಶಾಸ್ತ್ರ". Archived from the original on 2012-10-04. Retrieved 2011-06-03.
- ↑ Fujita, Tetsuya Theodore (1971). Proposed characterization of tornadoes and hurricanes by area and intensity. Chicago: University of Chicago.
- ↑ http://www.spc.noaa.gov/MF Scale and EF Scale..
- ↑ Fujita, Tetsuya Theodore (1992). Memoirs of an Effort to Unlock the Mystery of Severe Storms. Chicago: University of Chicago.
ಗ್ರಂಥಸೂಚಿ
ಬದಲಾಯಿಸಿ- ಮಾರ್ಷಲ್, ತಿಮೊತಿ ಪಿ. (೨೦೦೧). "ಬತ್ ಆಫ್ ದಿ ಫ್ಯುಜಿಟಾ ಸ್ಕೇಲ್". ಸ್ಟಾರ್ಮ್ ಟ್ರಾಕ್ . ೨೪ (೩): ೬–೧೦.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಎನ್‌ಒಎಎ ನ್ಯಾಶನಲ್ ವೆದರ್ ಸರ್ವಿಸ್ ಇಂಪ್ರೂವ್ಸ್ ಟೊರ್ನೆಡೋ ರೇಟಿಂಗ್ ಸಿಸ್ಟಮ್ (ಎನ್‌ಒಎಎ ನ್ಯೂಸ್)
- ಟೊರ್ನೆಡೋ (ಸುಂಟರಗಾಳಿ) ಹಾನಿಗಳ ಸುಧಾರಿತ ಎಫ್ ಮಾಪಕ (ಎಸ್ಪಿಸಿ)
- ಸುಧಾರಿತ ಫ್ಯುಜಿಟಾ ಮಾಪಕ (ಇಎಫ್ ಮಾಪಕ) (ಎಸ್ಪಿಸಿ)
- ಫ್ಯುಜಿಟಾ ಮಾಪಕ ಉತ್ತಮಪಡಿಸುವ ಯೋಜನೆ (ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದಲ್ಲಿರುವ ಗಾಳಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ )
- ಉಪಶಮನ ಮೌಲ್ಯಮಾಪನ ವರದಿ: 1999, ಮೇ 3ರ ಮಿಡ್ವೆಸ್ಟ್ ಟೊರ್ನೆಡೋ (ಸುಂಟರಗಾಳಿ)ಗಳು, Archived 2006-03-17 ವೇಬ್ಯಾಕ್ ಮೆಷಿನ್ ನಲ್ಲಿ. (ಒಕ್ಕೂಟ ತುರ್ತು ನಿರ್ವಹಣಾ ಏಜೆನ್ಸಿ)
- ಎಫ್-ಸ್ಕೇಲ್ ಹಾನಿ ಮೌಲ್ಯಾಂಕಕ್ಕೆ ಒಂದು ಮಾರ್ಗದರ್ಶಿ (ಎನ್ಡಬ್ಲ್ಯುಎಸ್)
- ಲಂಬಗತಿಯ ಬಿರುಗಾಳಿ ಸಮೀಕ್ಷೆಗಳನ್ನು ನಡೆಸಲು ಒಂದು ಮಾರ್ಗದರ್ಶಿ (ಎನ್ಡಬ್ಲ್ಯುಎಸ್ ಎಸ್ಆರ್೧೪೬)
- ಟೊರ್ನೆಡೋ (ಸುಂಟರಗಾಳಿ): ಇಂಜಿನಿಯರಿಂಗ್ ಪ್ರೇರಿತ ದೃಷ್ಟಿಕೋನ (ಎನ್ಡಬ್ಲ್ಯುಎಸ್ ಎಸ್ಆರ್೧೪೭)
- ಟೊರ್ನೆಡೋ (ಸುಂಟರಗಾಳಿ) ತೀವ್ರತೆಗೆ ಫ್ಯುಜಿಟಾ ಮಾಪಕ Archived 2010-03-14 ವೇಬ್ಯಾಕ್ ಮೆಷಿನ್ ನಲ್ಲಿ. (ಟೊರ್ನೆಡೋ (ಸುಂಟರಗಾಳಿ) ಯೋಜನೆ)