ಫ್ಯಾಮಿಲಿ ಪ್ಯಾಕ್ (ಚಲನಚಿತ್ರ)

ಫ್ಯಾಮಿಲಿ ಪ್ಯಾಕ್ 2022 ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದ್ದು ಅರ್ಜುನ್ ಕುಮಾರ್ ಎಸ್., [] ಅವರು ಈ ಹಿಂದೆ ಸಂಕಷ್ಟ ಕರ ಗಣಪತಿಯನ್ನು ನಿರ್ದೇಶಿಸಿದ್ದಾರೆ. [] ಚಿತ್ರದಲ್ಲಿ ಲಿಕಿತ್ ಶೆಟ್ಟಿ, ಅಮೃತ ಅಯ್ಯಂಗಾರ್, ರಂಗಾಯಣ ರಘು, ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಚಿತ್ರವು ಎರಡು ಕುಟುಂಬಗಳು ಮತ್ತು ರಘು ನಿರ್ವಹಿಸಿದ ಮಾನವ ತರಹದ ಪ್ರೇತದ ಕತೆ ಹೊಂದಿದೆ. [] [] [] [] ಚಲನಚಿತ್ರವು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಪ್ರಥಮ ಪ್ರದರ್ಶನಗೊಂಡಿತು. []

ಫ್ಯಾಮಿಲಿ ಪ್ಯಾಕ್
ನಿರ್ದೇಶನಅರ್ಜುನ್ ಕುಮಾರ್ ಎಸ್.
ನಿರ್ಮಾಪಕಅಶ್ವಿನಿ ಪುನೀತ್ ರಾಜ್‌ಕುಮಾರ್
ಪಾತ್ರವರ್ಗ
ಸಂಗೀತಗುರುಕಿರಣ್
ವಿರಾಜ್ ಕನ್ನಡಿಗ
ಸ್ಟುಡಿಯೋಪಿ ಆರ್ ಕೆ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು೧೭ -ಫೆಬ್ರುವರಿ ೨೦೨೨


ಪಾತ್ರವರ್ಗ

ಬದಲಾಯಿಸಿ

ತಯಾರಿಕೆ

ಬದಲಾಯಿಸಿ

ಸಂಕಷ್ಟಕರ ಗಣಪತಿಯ ಯಶಸ್ಸಿನ ನಂತರ, ನಿರ್ದೇಶಕ ಅರ್ಜುನ್ ಕುಮಾರ್ ಮತ್ತು ನಟ ಲಿಕಿತ್ ಶೆಟ್ಟಿ ಈ ಯೋಜನೆಗಾಗಿ ಮತ್ತೆ ಒಂದಾದರು. ಮೊದಲಿಗೆ ನಿರ್ಮಾಪಕರನ್ನು ಹುಡುಕಲು ಅವರು ಹೆಣಗಾಡಿದರು. ನಂತರ ಪುನೀತ್ ರಾಜ್‌ಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ನಂತರ ತಮ್ಮ ಬ್ಯಾನರ್‌ನ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದರು. [] [] [೧೦] ಚಿತ್ರೀಕರಣವು ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭವಾಯಿತು, [೧೧] [೧೨] [೧೩] ಮತ್ತು ಅದು ಜುಲೈ 2021 ರಲ್ಲಿ ಮುಕ್ತಾಯವಾಯಿತು.

ಧ್ವನಿಮುದ್ರಿಕೆ

ಬದಲಾಯಿಸಿ

"ಬಿದ್ದಳಪ್ಪೋ" ಹಾಡನ್ನು ಗುರುಕಿರಣ್ ಸಂಯೋಜಿಸಿದ್ದಾರೆ, ಚಿಂತನ್ ವಿಕಾಸ್ ಹಾಡಿದ್ದಾರೆ ಮತ್ತು ವಿ. ಮನೋಹರ್ ಬರೆದಿದ್ದಾರೆ. [೧೪] [೧೫] "ಬೇಕಾಗಿದೆ" ಗೀತೆಯನ್ನು ವಿರಾಜ್ ಕನ್ನಡಿಗ ರಚಿಸಿ, ಬರೆದು, ಹಾಡಿದ್ದಾರೆ. [೧೬]

ಪ್ರತಿಕ್ರಿಯೆಗಳು

ಬದಲಾಯಿಸಿ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಎ. ಶಾರದಾ ಅವರು " ಫ್ಯಾಮಿಲಿ ಪ್ಯಾಕ್ ಆರಾಮದಾಯಕ ನೋಡತಕ್ಕ ಚಿತ್ರವಾಗಿದ್ದು ಒಂದು ಸಂದೇಶ ಹೊಂದಿದೆ " ಎಂದು ಅಭಿಪ್ರಾಯಪಟ್ಟಿದ್ದಾರೆ. [೧೭] ಡೆಕ್ಕನ್ ಹೆರಾಲ್ಡ್‌ನ ಜಗದೀಶ್ ಅಂಗಡಿ ಬರೆದಿದ್ದಾರೆ- "'ಫ್ಯಾಮಿಲಿ ಪ್ಯಾಕ್' ನ್ಯೂನತೆಗಳನ್ನು ಹೊಂದಿದೆ ಆದರೆ ಚಿತ್ರದ ತಿರುವುಗಳು ಚೆನ್ನಾಗಿವೆ. ಅನೇಕ ಘಟನೆಗಳುಳ್ಳ ಎರಡನೇ ಭಾಗವು ಬಸವನ ಹುಳುವಿನಷ್ಟು ವೇಗದ ಮೊದಲ ಅರ್ಧ ಭಾಗವನ್ನು ಸರಿದೂಗಿಸುತ್ತದೆ. ಈ ಚಲನಚಿತ್ರವು ಮಾನವ ಭಾವನೆಗಳ ಪ್ರೀತಿಯ ಕಥೆಯಾಗ ಬಹುದಿತ್ತು" [೧೮] ದಿ ನ್ಯೂಸ್ ಮಿನಿಟ್‌ನ ಸೌಮ್ಯಾ ರಾಜೇಂದ್ರನ್ ಅವರು "ಸುಮಾರು ಎರಡು ಗಂಟೆಗಳ ಚಿತ್ರವಾದ, ಫ್ಯಾಮಿಲಿ ಪ್ಯಾಕ್ ಸಹಿಷ್ಣುತೆಯ ಪರೀಕ್ಷೆಯಂತೆ ಭಾಸವಾಗುತ್ತದೆ,ನೋಡುಗರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಕೆಟ್ಟ ಚಲನಚಿತ್ರಗಳನ್ನು ನೋಡಬೇಕಾದ ಚಲನಚಿತ್ರ ವಿಮರ್ಶಕರಾಗಿರದ ಹೊರತು ಈ ಚಿತ್ರವನ್ನು ಸಹಿಸಲು ವಿಫಲರಾಗುವ ಸಾಧ್ಯತೆಯಿದೆ. ". [೧೯] ಟೈಮ್ಸ್ ಆಫ್ ಡಿಯಾದ ಸುನಯನಾ ಸುರೇಶ್ ಅವರು " ಫ್ಯಾಮಿಲಿ ಪ್ಯಾಕ್ ದ ಹಾಸ್ಯವು ಅದರ ದೊಡ್ಡ ಶಕ್ತಿಯಾಗಿದೆ. ನಿರ್ದೇಶಕ ಅರ್ಜುನ್ ಕುಮಾರ್ ಮತ್ತೊಂದು ತಮಾಷೆಯ ಚಿತ್ರವನ್ನು ನೀಡಿದ್ದಾರೆ". [೨೦]

ಉಲ್ಲೇಖಗಳು

ಬದಲಾಯಿಸಿ
  1. Anandraj, Shilpa (February 17, 2022). "Arjun Kumar on Kannada film 'Family Pack': 'Comedy is a great genre'". The Hindu.
  2. "Family Pack reunites Arjun Kumar and Likith Shetty". The New Indian Express.
  3. "Fun apart, people will sense the message of 'Family Pack': Director Arjun Kumar". The New Indian Express.
  4. "Family Pack is a landmark movie for me and marks a very important project in my career: Likith Shetty - Times of India". The Times of India.
  5. "'Family Pack' is the most important film of my career: Amrutha Iyengar". www.daijiworld.com.
  6. "The cast and director of 'Family Pack' share their real-life experiences on guiding ghosts! - Times of India". The Times of India.
  7. "'Family Pack' to premiere on Prime Video". The New Indian Express.
  8. R, Shilpa Sebastian (June 22, 2020). "Likith Shetty: 'In the Kannada film industry there is no insider or outsider'". The Hindu.
  9. India, The Hans (February 11, 2022). "PRK productions Kannada comedy drama 'Family Pack' trailer unveiled". The Hans India.
  10. "Puneeth Rajkumar to bankroll Likith Shetty's upcoming film Family Pack". India Today.
  11. "Team Family Pack begins shooting with short schedules - Times of India". The Times of India.
  12. "It's a wrap for 'Family Pack'". The New Indian Express.
  13. "Likith Shetty-starrer Family Pack shooting to start today". The New Indian Express.
  14. "Makers of Kannada film 'Family Pack' released a mesmerising love track on Valentine's day". DT next.
  15. "'Biddalappo' from 'Family Pack' celebrates love - Times of India". The Times of India.
  16. "Team 'Family Pack' drops new single titled 'Bekagide' - Times of India". The Times of India.
  17. "Family Pack Movie Review: Packed with laughter and surprise". The New Indian Express.
  18. "Family Pack review: A comedy drama that defies logic". Deccan Herald. February 18, 2022.
  19. "Family Pack review: This meandering Kannada comedy is best avoided". The News Minute. February 17, 2022.
  20. "Family Pack Review: A comedy of many errors that holds its own eventually". The Times of India.