ಫೇಣಿ
ಫೇಣಿ ಚೂರುಚೂರು ಮಾಡಲಾದ, ಹಲ್ಲೆಹಲ್ಲೆಯಾಗಿರುವ, ತುಪ್ಪದಲ್ಲಿ ಕರಿಯಲಾಗುವ ಅಕ್ಕಿ ಹಿಟ್ಟಿನ ಒಂದು ಭಾರತೀಯ ಸಿಹಿ ತಿಂಡಿ. ಇದನ್ನು ಬಡಿಸುವಾಗ ಕರಗಿದ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಸಕ್ಕರೆ ಮಿಠಾಯಿಯಂತೆ ರೂಪಿಸಲಾಗುತ್ತದೆ, ಮತ್ತು ಮೇಲೆ ನಯವಾಗಿ ಕತ್ತರಿಸಿದ ಪಿಸ್ತಾ ಹಾಗೂ ಬಾದಾಮಿಯನ್ನು ಸಿಂಪಡಿಸಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ಏಲಕ್ಕಿ ಪುಡಿಯಿಂದ ಸುವಾಸಿತಗೊಳಿಸಲಾಗುತ್ತದೆ. ಇದು ಗುಲಾಬಿ ಜಲ ಅಥವಾ ಕೇದಗೆಯಂತಹ ಹೂವಿನ ಸಾರದ ಪರಿಮಳವನ್ನು ಹೊಂದಿದ್ದು ಬಿಳಿ ಬಣ್ಣದ್ದಾಗಿರಬಹುದು, ಅಥವಾ ಬಣ್ಣ ಹೊಂದಿದ್ದು ಕೇಸರಿಯ ಪರಿಮಳ ಹೊಂದಿರಬಹುದು.
ತಯಾರಿಕೆ
ಬದಲಾಯಿಸಿಸಕ್ಕರೆ/ಹಿಟ್ಟಿನ ಮಿಶ್ರಣವನ್ನು ಕರಗಿಸಲು ಮತ್ತು ಎಳೆಗಳಾಗಿ ನೇಯಲು ಯಾವುದೇ ವಿಶೇಷ ಉಪಕರಣವಿಲ್ಲದೇ, ಫೇಣಿಯನ್ನು ಮಾಡುವುದು ಪ್ರಯಾಸಕರವಾಗಬಹುದು ಮತ್ತು ಈ ಖಾದ್ಯವನ್ನು ಮನೆಯಲ್ಲಿ ತಯಾರಿಸುವುದು ಸೂಕ್ತವಲ್ಲ. ಪರ್ಯಾಯ ಪಾಕವಿಧಾನಗಳು ಬೆಣ್ಣೆ ಅಥವಾ ಕೊಬ್ಬಿನಲ್ಲಿ ಕರೆಯಲಾದ ಚೂರುಚೂರಾದ ಫಿಲೊ ಪೇಸ್ಟ್ರಿಯಿಂದ[೧], ಅಥವಾ ಅಂಗಡಿಯಲ್ಲಿ ಖರೀದಿಸಿದ ಸಿದ್ಧ, ಕರಿದ ಗೋಧಿ ಶಾವಿಗೆಯಿಂದ ಆರಂಭಗೊಳ್ಳುತ್ತವೆ. ನಂತರ ಪೇಸ್ಟ್ರಿಯನ್ನು ಅದರ ತೂಕದ ಸುಮಾರು ಅರ್ಧದಷ್ಟು (೨ ಭಾಗ ಸಕ್ಕರೆಗೆ ೧ ಭಾಗ ನೀರು ಸೇರಿಸಿ ತಯಾರಿಸಲಾದ) ಸಕ್ಕರೆ ಪಾಕದೊಂದಿಗೆ ಸೇರಿಸಲಾಗುತ್ತದೆ. ಇದು ಕ್ರಮೇಣವಾಗಿ ಪೇಸ್ಟ್ರಿಯಲ್ಲಿ ಹೀರಲ್ಪಡುತ್ತದೆ, ಮತ್ತು ಹಾಗಾಗಿ ಅಂತಿಮ ಉತ್ಪನ್ನವು ಒಣಗಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Kaity Desai. http://www.tarladalal.com/Sutarfeni-16536r Archived 2019-01-29 ವೇಬ್ಯಾಕ್ ಮೆಷಿನ್ ನಲ್ಲಿ.