ಫಣ್‍ಸಾಡ್ ವನ್ಯಜೀವಿ ಅಭಯಾರಣ್ಯ

ಫಣ್‍ಸಾಡ್ ವನ್ಯಜೀವಿ ಅಭಯಾರಣ್ಯವು ಭಾರತದ ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯ ಮುರುದ್ ಮತ್ತು ರೋಹಾ ತಾಲೂಕುಗಳಲ್ಲಿರುವ ಒಂದು ವನ್ಯಜೀವಿ ಅಭಯಾರಣ್ಯವಾಗಿದೆ.[೧] ಪಶ್ಚಿಮ ಘಟ್ಟಗಳ ಕರಾವಳಿ ಅರಣ್ಯ ಪರಿಸರ ವ್ಯವಸ್ಥೆಯ ಸ್ವಲ್ಪ ಭಾಗವನ್ನು ಸಂರಕ್ಷಿಸಲು ಇದನ್ನು 1986 ರಲ್ಲಿ ರಚಿಸಲಾಯಿತು ಮತ್ತು 6,979 ha (17,250 acres) ದಷ್ಟು ಅರಣ್ಯ, ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳನ್ನು ಒಳಗೊಂಡಿದೆ.

ಫಣ್‍ಸಾಡ್ ವನ್ಯಜೀವಿ ಅಭಯಾರಣ್ಯದ ಭೂದೃಶ್ಯ

ಅಭಯಾರಣ್ಯದ ಮೂಲಕ ನಾಲ್ಕು ಪ್ರಮುಖ ಹಾದಿಗಳಿವೆ. ಇವು ಮುಖ್ಯ ನೀರಹಳ್ಳಗಳಾದ ಘುನ್ಯಾಚಾ ಮಾಲ್, ಚಿಖಲ್‍ಗಾನ್ ಮತ್ತು ಫಣ್‍ಸಾಡ್‍ಗಾನ್‍ನ್ನು ತೆಗೆದುಕೊಳ್ಳುತ್ತವೆ. ಇವು ವನ್ಯಜೀವಿಗಳನ್ನು ನೋಡಲು ಉತ್ತಮ ಸ್ಥಳಗಳಾಗಿವೆ. ದೇವ್‍ರಾಯ್ ಸುಪೇಗಾಂವ್ ಬಳಿ ಇದೆ. ಮಾಲ್ ಎಂದು ಕರೆಯಲ್ಪಡುವ ತೆರೆದ ಹುಲ್ಲುಗಾವಲಿನ ಪ್ರದೇಶಗಳು ಅಭಯಾರಣ್ಯದಾದ್ಯಂತ ಕಂಡುಬರುತ್ತವೆ. ಅಭಯಾರಣ್ಯದಲ್ಲಿನ ನೈಸರ್ಗಿಕ ನೀರಿನ ಮೂಲಗಳ ಸ್ಥಳಗಳನ್ನು "ಗಾನ್" ಎಂದು ಕರೆಯಲಾಗುತ್ತದೆ.

ಜೀವವೈವಿಧ್ಯಸಂಪಾದಿಸಿ

ಅಭಯಾರಣ್ಯವು ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಇಲ್ಲಿನ ಅರಣ್ಯ ವಿಧಗಳೆಂದರೆ ಅರೆ ನಿತ್ಯಹರಿದ್ವರ್ಣ, ನಿತ್ಯಹರಿದ್ವರ್ಣ, ಮಿಶ್ರ ಪತನಶೀಲ ಮತ್ತು ಒಣ ಪತನಶೀಲ ಕಾಡುಗಳು ಮತ್ತು ಹುಲ್ಲುಗಾವಲುಗಳು ಮತ್ತು ಕರಾವಳಿ.

ಪ್ರಾಣಿಗಳ ವೈವಿಧ್ಯತೆಸಂಪಾದಿಸಿ

ಅಭಯಾರಣ್ಯವು ಭಾರತೀಯ ದೈತ್ಯ ಅಳಿಲುಗಳ ಸಣ್ಣ ಸಂಖ್ಯೆಯನ್ನು ಹೊಂದಿದೆ. ಇದು ಪಶ್ಚಿಮ ಘಟ್ಟಗಳಿಂದ ವಿಭಜಿತವಾಗಿದೆ. ಪ್ರಾಣಿಗಳಲ್ಲಿ 16 ಜಾತಿಯ ಸಸ್ತನಿಗಳು, 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, 17 ಸರೀಸೃಪಗಳು, 47 ಕೀಟಗಳು ಮತ್ತು 27 ಸಮುದ್ರ ಅಕಶೇರುಕಗಳು ಸೇರಿವೆ. ಅಳಿವಿನಂಚಿನಲ್ಲಿರುವ ಬಿಳಿಪೃಷ್ಠದ ರಣಹದ್ದು (ಜಿಪ್ಸ್ ಬೆಂಗಾಲೆನ್ಸಿಸ್) ಸಹ ಅಭಯಾರಣ್ಯದಲ್ಲಿ ಕಂಡುಬರುತ್ತದೆ.[೨] ಪ್ರಾತಿನಿಧಿಕ ಪ್ರಾಣಿಗಳಲ್ಲಿ ಈ ಕೆಳಗಿನವು ಸೇರಿವೆ:

 • ಭಾರತೀಯ ದೈತ್ಯ ಅಳಿಲು (ರಟುಫಾ ಇಂಡಿಕಾ) [೧]
 • ಭಾರತೀಯ ಮುಂಟ್ಜಾಕ್ (ಬಾರ್ಕಿಂಗ್ ಜಿಂಕೆ)
 • ಭಾರತೀಯ ಗೌರ್ (ಬಾಸ್ ಗೌರಸ್)
 • ಭಾರತೀಯ ಪಟ್ಟೆಯುಳ್ಳ ಹೈನಾ (ಹಯಾನಾ ಹೈನಾ)
 • ಧೋಲ್ ("ಕ್ಯೂನ್ ಆಲ್ಪಿನಸ್")
 • ಭಾರತೀಯ ಚಿರತೆ ( ಪ್ಯಾಂಥೆರಾ ಪಾರ್ಡಸ್ )
 • ಭಾರತೀಯ ಪ್ಯಾಂಗೊಲಿನ್ ("ಮನಿಸ್ ಕ್ರಾಸಿಕೌಡಾಟಾ")
 • ಸಾಂಬಾರ್ (ಸರ್ವಸ್ ಯೂನಿಕಲರ್)
 • ರಕ್ತಪಿಶಾಚಿ ಬಾವಲಿ ("ಮೆಗಾಡರ್ಮಾ ಸ್ಪಾಸ್ಮಾ")
 • ಬರ್ಕ (ಟ್ರಾಗುಲಸ್ ಮೆಮಿನ್ನಾ)
 • ಪೈಥಾನ್ ("ಪೈಥಾನ್ ಮೊಲರಸ್")
 • ಬಾಂಬೆ ಎರೆಹಾವು (ಯುರೊಪೆಲ್ಟಿಸ್ ಮ್ಯಾಕ್ರೋಲೆಪಿಸ್ )
 • ಗಿರಿಯ ಕಂಚುಬೆನ್ನಿನ ಮರದ ಹಾವು ("ಡೆಂಡ್ರೆಲಾಫಿಸ್ ಗಿರಿ")
 • ಸದರ್ನ್ ಬರ್ಡ್‌ವಿಂಗ್ ("ಟ್ರಾಯ್ಡ್ಸ್ ಮಿನೋಸ್")

ಸಸ್ಯಗಳ ವೈವಿಧ್ಯತೆಸಂಪಾದಿಸಿ

ಅಭಯಾರಣ್ಯದ ಮೇಲಿನ ಬೆಟ್ಟದ ಅರಣ್ಯವು ನಿತ್ಯಹರಿದ್ವರ್ಣವಾಗಿದ್ದು, ಇದರಲ್ಲಿ ಹೆಚ್ಚಾಗಿ ಅಂಜನ್(ಮೆಮೆಸಿಲಾನ್ ಅಂಬೆಲ್ಲಾಟಮ್), ಫನ್ಸಡಾ (ಗಾರ್ಸಿನಿಯಾ ಟಾಲ್ಬೂಟಿ) ಮತ್ತು ಇಳಿಜಾರುಗಳಲ್ಲಿ ಒಣ ಪತನಶೀಲವಾಗಿವೆ. ಇವುಗಳಲ್ಲಿ ಐನ್, ಕಿಂಜಲ್, ತೇಗ, ಹಿರ್ದ, ಜಂಬ, ಮಾವು ಮತ್ತು ವಿವಿಧ ಫೈಕಸ್ ಸೇರಿವೆ.[೧] ಅಭಯಾರಣ್ಯವು 710 ಜಾತಿಯ ಸಸ್ಯಗಳನ್ನು ಹೊಂದಿದೆ, ಇದರಲ್ಲಿ 179 ಜಾತಿಯ ಮರಗಳು, 66 ಪೊದೆಗಳು, 141 ಗಿಡಮೂಲಿಕೆಗಳು ಇತ್ಯಾದಿ ಸೇರಿವೆ. (ಮರಾಠೆ 2004).[೨]

ಚಿತ್ರಸಂಪುಟಸಂಪಾದಿಸಿ

ಅಭಯಾರಣ್ಯದಲ್ಲಿನ ಪ್ರಾಣಿಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 

 1. ೧.೦ ೧.೧ ೧.೨ "Phansad Jungle". Rohan Gurao, Website for Roha. Cite error: Invalid <ref> tag; name "Roha" defined multiple times with different content Cite error: Invalid <ref> tag; name "Roha" defined multiple times with different content
 2. ೨.೦ ೨.೧ Shinde, Prashant. "Saving the White-rumped Vultures at Phansad Wildlife Sanctuary" (PDF). static1.squarespace.com. Srushtidnyan, Prashant Shinde. Retrieved 9 December 2019. Cite error: Invalid <ref> tag; name "Srushtidnyan" defined multiple times with different content

ಹೊರಗಿನ ಕೊಂಡಿಗಳುಸಂಪಾದಿಸಿ