ಬರ್ಕ
ಬರ್ಕಗಳು ಟ್ರ್ಯಾಗ್ಯುಲಿಡೇ ಕುಟುಂಬದ ಸಣ್ಣ ಗಾತ್ರದ ಗೊರಸುಳ್ಳ ಸಸ್ತನಿಗಳು. ಇದರ ೧೦ ಪ್ರಜಾತಿಗಳು ಅಸ್ತಿತ್ವದಲ್ಲಿವೆ. ಅಸ್ತಿತ್ವದಲ್ಲಿರುವ ಪ್ರಜಾತಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಒಂದೇ ಒಂದು ಪ್ರಜಾತಿ ಮಧ್ಯ ಹಾಗೂ ಪಶ್ಚಿಮ ಆಫ಼್ರಿಕಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ.[೧] ಇವು ಒಂಟಿಜೀವಿಗಳು ಅಥವಾ ಜೋಡಿಯಾಗಿ ಜೀವಿಸುತ್ತವೆ, ಮತ್ತು ಬಹುತೇಕವಾಗಿ ಕೇವಲ ಸಸ್ಯವಸ್ತುವನ್ನು ತಿನ್ನುತ್ತವೆ. ಬರ್ಕಗಳು ವಿಶ್ವದಲ್ಲಿನ ಅತ್ಯಂತ ಚಿಕ್ಕ ಗೊರಸುಳ್ಳ ಸಸ್ತನಿಗಳಾಗಿವೆ. ಏಷ್ಯಾದ ಪ್ರಜಾತಿಗಳು ೦.೭ ಹಾಗೂ ೮ ಕೆ.ಜಿ. ನಡುವೆ ತೂಕ ಹೊಂದಿದ್ದರೆ, ಆಫ಼್ರಿಕಾದ ಬರ್ಕವು ಗಣನೀಯವಾಗಿ ದೊಡ್ಡದಾಗಿದೆ (೭-೧೬ ಕೆ.ಜಿ.).
ಜೀವಶಾಸ್ತ್ರ
ಬದಲಾಯಿಸಿಇದು ಒಂದು ಪ್ರಾಚೀನ ರೋಮಂಥಕ ರೂಪದ ಉದಾಹರಣೆಯಾಗಿದೆ. ಒರಟಾದ ಸಸ್ಯ ಆಹಾರಗಳನ್ನು ಕಿಣ್ವಿಸಲು ಇವು ನಾಲ್ಕು ಕೋಶಗಳ ಹೊಟ್ಟೆಗಳನ್ನು ಹೊಂದಿವೆ, ಆದರೆ ಮೂರನೇ ಕೋಶವು ಸಾಕಷ್ಟು ವಿಕಸನವಾಗಿಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ Nowak, R. M. (eds) (1999). Walker's Mammals of the World. 6th edition. Johns Hopkins University Press.