ಫಕೀರ ಎಂದರೆ ಎಲ್ಲ ಸಂಬಂಧಗಳು ಮತ್ತು ಸ್ವತ್ತುಗಳನ್ನು ತ್ಯಜಿಸಿ, ಬಡತನ ಮತ್ತು ಆರಾಧನೆಯ ಪ್ರತಿಜ್ಞೆಗಳನ್ನು ಮಾಡಿರುವ ಸೂಫಿ ಮುಸ್ಲಿಮ್ ವಿರಾಗಿ. ಫಕೀರರು ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಾರೆ. ಫಕೀರನು ಸ್ವಯಂಪೂರ್ಣನಾಗಿದ್ದು ಕೇವಲ ದೇವರಿಗಾಗಿ ಆಧ್ಯಾತ್ಮಿಕ ಅಗತ್ಯವನ್ನು ಹೊಂದಿರುತ್ತಾನೆ ಎಂದು ಭಾವಿಸಲಾಗುತ್ತದೆ.[]

ಫಕೀರರ ವಿಶೇಷ ಲಕ್ಷಣಗಳೆಂದರೆ ಧಿಕ್ರ್ (ದೇವರ ಹೆಸರುಗಳನ್ನು ಪುನರಾವರ್ತಿಸುವ ಅಭ್ಯಾಸ, ಹಲವುವೇಳೆ ಪ್ರಾರ್ಥನೆಗಳ ನಂತರ ಮಾಡಲಾಗುತ್ತದೆ) ಬಗ್ಗೆ ಪೂಜ್ಯಭಾವವನ್ನು ಹೊಂದಿರುವುದು.[] ಮುಂಚಿನ ಉಮಯ್ಯದ್ ಕ್ಯಾಲಿಫೇಟ್‍ನ (661–750 CE[]) ಪ್ರಾಪಂಚಿಕತೆಯ ವಿರುದ್ಧದ ಪ್ರತಿಕ್ರಿಯೆಯಾಗಿ ಅನೇಕ ಮುಸ್ಲಿಮರಲ್ಲಿ ಸೂಫಿಪಂಥವು ಅನುಯಾಯಿಗಳನ್ನು ಸಂಪಾದಿಸಿತು. ಒಂದು ಸಹಸ್ರಮಾನದಲ್ಲಿ ಸೂಫಿಗಳು ಹಲವಾರು ಖಂಡಗಳು ಮತ್ತು ಸಂಸ್ಕೃತಿಗಳನ್ನು ವ್ಯಾಪಿಸಿದ್ದರಾದರೂ, ಮೊದಲು ತಮ್ಮ ನಂಬಿಕೆಗಳನ್ನು ಅರಬ್ಬೀ ಭಾಷೆಯಲ್ಲಿ ವ್ಯಕ್ತಪಡಿಸಿದರು. ನಂತರ ಪರ್ಷಿಯನ್, ತುರ್ಕಿ, ಭಾರತೀಯ ಭಾಷೆಗಳು ಹಾಗೂ ಇತರ ಡಜ಼ನ್ ಭಾಷೆಗಳಲ್ಲಿ ಹರಡಿದರು.

ಉಲ್ಲೇಖಗಳು

ಬದಲಾಯಿಸಿ
  1. "Encyclopædia Britannica". britannica.com. Retrieved 2015-07-10.
  2. A Prayer for Spiritual Elevation and Protection (2007) by Muhyiddin Ibn 'Arabi, Suha Taji-Farouki
  3. Hawting, Gerald R. (2000). The first dynasty of Islam: The Umayyad Caliphate AD 661-750. Routledge. ISBN 978-0-415-24073-4. See Google book search.
"https://kn.wikipedia.org/w/index.php?title=ಫಕೀರ&oldid=985050" ಇಂದ ಪಡೆಯಲ್ಪಟ್ಟಿದೆ