ಪ್ರೇಮ್ ಮಾಥುರ್
ಪ್ರೇಮ್ ಮಾಥುರ್ ಮೊದಲ ಭಾರತೀಯ ಮಹಿಳಾ ವಾಣಿಜ್ಯ ಪೈಲಟ್. ಅವರು ಡೆಕ್ಕನ್ ಏರ್ವೇಸ್ ನಲ್ಲಿ ವಿಮಾನ ಚಾಲಕರಾಗಿದ್ದರು. ಅವರು 1947 ರಲ್ಲಿ ತನ್ನ ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆದು, [೧] [೨] [೩] 1949 ರಲ್ಲಿ ರಾಷ್ಟ್ರೀಯ ವಾಯು ಸ್ಪರ್ಧೆಯನ್ನು ಸಹ ಗೆದ್ದರು. [೪]
ಆರಂಭಿಕ ಜೀವನ
ಬದಲಾಯಿಸಿಮಾಥುರ್ 1910 ರ ಜನವರಿ 17 ರಂದು ಜನಿಸಿದರು. [೫]
ವೃತ್ತಿ
ಬದಲಾಯಿಸಿ1947 ರಲ್ಲಿ ಹೈದರಾಬಾದ್‌ನ ಡೆಕ್ಕನ್ ಏರ್‌ವೇಸ್‌ನಲ್ಲಿ ಕೆಲಸ ಪಡೆಯುವ ಮೊದಲು ಮಾಥುರ್ ಅವರನ್ನು ಎಂಟು ವಿಮಾನಯಾನ ಸಂಸ್ಥೆಗಳು ತಿರಸ್ಕರಿಸಿದವು. [೫] 38 ನೇ ವಯಸ್ಸಿನಲ್ಲಿ ಆಕೆಗೆ ಉದ್ಯೋಗವನ್ನು ನೀಡಲಾಯಿತು, ಅಲ್ಲಿ ಅವರು ವಾಣಿಜ್ಯ ವಿಮಾನವನ್ನು ಹಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲಹಾಬಾದ್ ಫ್ಲೈಯಿಂಗ್ ಕ್ಲಬ್‌ನಿಂದ ಆಕೆ ತನ್ನ ಪರವಾನಗಿಯನ್ನು ಪಡೆದಳು. ಸಹ-ಪೈಲಟ್ ಆಗಿ ಅವರು ತನ್ನ ಮೊದಲ ವಿಮಾನವನ್ನು ಹಾರಿಸಿದರು. ಡೆಕ್ಕನ್ ಏರ್ವೇಸ್ನಲ್ಲಿ ತನ್ನ ವೃತ್ತಿಜೀವನದ ಸಮಯದಲ್ಲಿ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಲೇಡಿ ಮೌಂಟ್ ಬ್ಯಾಟನ್ ನಂತಹ ಉನ್ನತ ವ್ಯಕ್ತಿಗಳ ಚಾಲಕರಾಗಿದ್ದರು. [೬]
ಮಾಥುರ್ ಅವರು ಕಾಕ್‌ಪಿಟ್‌ನ ಸಂಪೂರ್ಣ ಹತೋಟಿಯನ್ನು ಬಯಸಿದ್ದರು. ಆದರೆ ಅಗತ್ಯವಾದ ಹಾರಾಟದ ಸಮಯವನ್ನು ಅವಳು ಪೂರೈಸಿದ ನಂತರವೂ, ಡೆಕ್ಕನ್ ಏರ್‌ವೇಸ್ ಅವರು ಅದನ್ನು ನಿರಾಕರಿಸಿದರು. [೬] ಶೀಘ್ರದಲ್ಲೇ, ಅವರು ದೆಹಲಿಗೆ ತೆರಳಿ, ಅಲ್ಲಿ ಜಿಡಿ ಬಿರ್ಲಾ ಅವರ ಖಾಸಗಿ ಜೆಟ್ ಪೈಲಟ್ ಆದರು. [೫] ನಂತರ 1953 ರಲ್ಲಿ ಇಂಡಿಯನ್ ಏರ್ಲೈನ್ಸ್ ಗೆ ಸೇರಿ, ವೃತ್ತಿಜೀವನದ ಉಳಿದ ಅವಧಿಯಲ್ಲಿ ಅಲ್ಲಿಯೇ ಕೆಲಸ ಮಾಡಿದರು.
ಪ್ರಶಸ್ತಿಗಳು
ಬದಲಾಯಿಸಿ1949 ರಲ್ಲಿ ಮಾಥುರ್ ಅವರು "ರಾಷ್ಟ್ರೀಯ ವಾಯು ಸ್ಪರ್ಧೆ" ಗೆದ್ದರು. [೫]
ವೈಯಕ್ತಿಕ ಜೀವನ
ಬದಲಾಯಿಸಿಮಾಥುರ್ ಉತ್ತರ ಪ್ರದೇಶದ ಅಲಹಾಬಾದ್ ಮೂಲದ ಹರಿ ಕೃಷ್ಣ ಮಾಥುರ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಆರು ಜನ ಮಕ್ಕಳಿದ್ದಾರೆ. ಮಾಥುರ್ 1992 ರ ಡಿಸೆಂಬರ್ 22 ರಂದು ತಮ್ಮ 82 ನೇ ವಯಸ್ಸಿನಲ್ಲಿ ನಿಗೂಢವಾಗಿ ನಿಧನರಾದರು. [೫]
ಉಲ್ಲೇಖಗಳು
ಬದಲಾಯಿಸಿ- ↑ Kumar, Ganesh (2010). Modern General Knowledge. Upkar Prakashan. ISBN 9788174821805.
- ↑ KRISHNASWAMY, MURALI N. (November 1, 2011). "One hundred years of flying high". The Hindu. Retrieved 22 March 2013.
- ↑ Neelam Raaj,, Amrita Singh (Jun 17, 2007). "Women in the cockpit". Times of India. Archived from the original on 2013-04-26. Retrieved 22 March 2013.
{{cite news}}
: CS1 maint: extra punctuation (link) - ↑ "Strong Indian women". 10 December 2012. Retrieved 22 March 2013.
- ↑ ೫.೦ ೫.೧ ೫.೨ ೫.೩ ೫.೪ "Prem Mathur, India's Badass First Female Pilot, Was Licensed Back In 1947!". iDiva.com. 2018-03-01. Retrieved 2019-03-08.
- ↑ ೬.೦ ೬.೧ "Navrang India: First indian woman commercial pilot - Ms. Prem Mathur". Navrang India. Retrieved 2019-03-08.