ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ

ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈಯನ್ನು ಮದ್ರಾಸ್ ವಿಶ್ವವಿದ್ಯಾಲಯದ ಅಗ್ರಗಾಮಿ ಕಾಲೆಜ್ ಎಂದು ಪರಿಗಣಿಸಲಾಗುತ್ತದೆ.

ಪ್ರೆಸಿಡೆನ್ಸಿ ಕಾಲೆಜ್
ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ(ಮುಂಬಾಗ)

ಇತಿಹಾಸ

ಬದಲಾಯಿಸಿ

ಸರ್ ಥೋಮಸ್ ಮನ್ರೋವಿನ ಆಜ್ಞೆಯಂತೆ ೧೮೨೬ರಲ್ಲಿ ಒಂದು ಸಾರ್ವಜನಿಕ ಶಿಕ್ಷಣ ಸಮಿತಿಯನ್ನು ರಚಿಸಲಾಯಿತು. ೧೮೩೬ರಲ್ಲಿ ಈ ಸಮಿತಿಯ ಕರ್ತವ್ಯಗಳನ್ನು ‘ದೇಶೀಯ ಶಿಕ್ಷಣ ಸಮಿತಿ(Committee of Native Education)’ ಕೈಗೆತ್ತಿಕೊಂಡಿತು. ಸಮಿತಿಯು ತಯಾರಿಸಿದ ರೂಪರೇಷೆಗಳು ಮದ್ರಾಸಿನ ಗವರ್ನರ್ ಆಗಿದ್ದ ಲಾರ್ಡ್ ಎಲ್ಫಿನ್‍ಸ್ಟನರಿಗೆ ಒಪ್ಪಿಗೆಯಾಗಲಿಲ್ಲ. ಆ ಕಾರಣ ಅವರು ೧೯ ಠರಾವುಗಳನ್ನು ಸೂಚಿಸಲಾಗಿ ಅವೆಲ್ಲವೂ ಸರ್ವಾನುಮತದಿಂದ ಅಂಗೀಕೃತವಾದವು.


ಈ ಪ್ರಕಾರ ೧೫ನೇ ಅಕ್ಟೋಬರ್ ೧೮೪೦ರಂದು ಮದ್ರಾಸಿನ (ಇಂದಿನ ಚೆನ್ನೈ) ಎಗ್ಮೋರಿನ ‘ಎಡಿನ್ ಬರ್ಗ್ ಹೋಮ್’ ಕಟ್ಟಡವನ್ನು ಬಾಡಿಗೆಗೆ ಪಡೆದು, ಪ್ರೆಸಿಡೆನ್ಸಿ ಶಾಲೆಯನ್ನು ತೆರೆಯಲಾಯಿತು. ಇದರ ಪ್ರಥಮ ಪ್ರಾಂಶುಪಾಲರಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರೌಢಪಾಂಡಿತ್ಯದಲ್ಲಿ ಶ್ರೇಷ್ಠವರ್ಗದಲ್ಲಿ ತೇರ್ಗಡೆಯಾಗಿದ್ದ ಏರ್ ಬರ್ಟನ್ ಪವೆಲ್ (Eyre Burton Powell) ನೇಮಕವಾಗಿದ್ದರೂ ಇಂಗ್ಲೆಂಡ್ನಿಂದ ಆತ ಭಾರತವನ್ನು ಸೇರುವದು ತಡವಾದ ಕಾರಣ, ಕೊಲ್ಕತ್ತದ ಹುಗ್ಲಿ ಕಾಲೆಜಿನ ಪ್ರಾಧ್ಯಾಪಕ ಕೂಪರ್ ಎನ್ನುವವರು ತಾತ್ಕಾಲಿಕ ಪ್ರಾಂಶುಪಾಲರಾಗಿದ್ದರು. ಪವೆಲ್ ಬಂದು ಸೇರಿದ ನಂತರ ಎಪ್ರಿಲ್ ೧೮೪೧ರಲ್ಲಿ ಪ್ರೌಢಶಾಲಾ ವಿಭಾಗವನ್ನು ತೆರೆಯಲಾಯಿತು. ಆ ವರ್ಷದಲ್ಲೇ ಶಾಲೆಯನ್ನು ಪೊಫಮಿನ ಬ್ರಾಡ್ವೇಗೆ ಸ್ಥಳಾಂತರಿಸಲಾಯಿತು.


ಈ ಶಾಲೆಯು ಬೆಳೆದು ಪ್ರೆಸಿಡೆನ್ಸಿ ಕಾಲೆಜ್ ಆಯಿತು. ೧೮೫೭ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು ಸ್ಥಾಪಿತವಾದಾಗ ಪ್ರೆಸಿಡೆನ್ಸಿ ಕಾಲೆಜ್ ಅದಕ್ಕೆ ಸೇರಸಲ್ಪಟ್ಟಿತು. ೧೮೭೦ರಲ್ಲಿ ಕಾಲೆಜನ್ನು ಮರಿನ ಬೀಚಿನ ಎದುರಿರುವ ಕಾಮರಾಜ್ ಸಾಲೈಗೆ ಸ್ಥಳಾಂತರಿಸಲಾಗಿ, ಇಂದಿಗೂ ಅಲ್ಲೇ ಇದೆ.

ಪ್ರಸಿದ್ಧರಾದ ಹಳೆಯ ವಿದ್ಯಾರ್ಥಿಗಳು

ಬದಲಾಯಿಸಿ

ಪ್ರೆಸಿಡೆನ್ಸಿ ಕಾಲೆಜಿನ ಕೆಲವು ಪ್ರಸಿದ್ಧರಾಗಿರುವ ವಿದ್ಯಾರ್ಥಿಗಳ ಪರಿಚಯ ಹೀಗಿವೆ:


  • ಡಾ ಸರ್ವೆಪಲ್ಲಿ ಗೋಪಾಲ್, ಇತಿಹಾಸ ತಜ್ಞ ಮತ್ತು ರಾಷ್ಟ್ರೀಯ ಪುಸ್ತಕ ವಿಶ್ವಸ್ಥ ಸಮಿತಿ (ನ್ಯಾಶನಲ್ ಬುಕ್ ಟ್ರಸ್ಟ್)ಯ ಸಭಾಧ್ಯಕ್ಷ.
  • ಎನ್ ರಾಮ್, ‘ದ ಹಿಂದೂ’ ಪತ್ರಿಕೆಯ ಮ್ಯಾನೇಜಿಂಗ್ ಡೈರೆಕ್ಟರ್


ಕೊಂಡಿಗಳು

ಬದಲಾಯಿಸಿ