'ಪ್ರೀತಿ ಗಂಗೂಲಿ' ಸನ್, ೧೯೭೦-೮೦ ರಲ್ಲಿ ಭಾರತೀಯ ಚಲನಚಿತ್ರ ರಂಗದಲ್ಲಿ ಹಲವಾರು ಹಾಸ್ಯಪಾತ್ರಗಳಿಂದ ಪ್ರೇಕ್ಷಕರ ಮನತಣಿಸಿದ ನಟಿ. ಪ್ರೀತಿ ಗಂಗುಲಿ ಪ್ರಖ್ಯಾತ ನಾಯಕ ನಟ ಅಶೋಕ್ ಕುಮಾರ್ (ದಾದಾಮುನಿ) ಯವರ ಮಗಳು. ಚಲನಚಿತ್ರ ಪರದೆಯಮೇಲೆ'ಪ್ರೀತಿ ಗಂಗುಲಿ' ಯವರನ್ನು ಜನ, ಫ್ರೆನಿ ಸೆತ್ನ ಎಂದು ಗುರುತಿಸುತ್ತಾರೆ. ಅಮಿತಾಬ್ ಬಚ್ಚನ್ ರವರ ಪರಮ ಪ್ರಿಯರಾಗಿ, ಖಟ್ಟಾ-ಮೀಠ ಚಿತ್ರದಲ್ಲಿ 'ಪ್ರೀತಿ ಗಂಗುಲಿ' ಅಭಿನಯಿಸಿದ್ದಾರೆ. 'ಪ್ರೀತಿ ಗಂಗುಲಿ' ಯವರು ಹೆಚ್ಚು ದಪ್ಪಗಿದ್ದಿದ್ದರಿಂದ ಚಲನಚಿತ್ರ ನಿರ್ಮಾಪಕರುಗಳು, ಅವರ ಆಕಾರಕ್ಕೆ ತಕ್ಕದಾದ ಪಾತ್ರಗಳನ್ನು ಹೆಣೆದು ಪ್ರಸ್ತುತಪಡಿಸುತ್ತಿದ್ದರು. ಹಿಂದಿ ಚಿತ್ರದಲ್ಲಿ ಈಗಾಗಲೇ ಹೆಸರುಮಾಡಿದ, ಟುನ್ ಟುನ್, ಗುಡ್ಡಿ ಮಾರುತಿ ಯವರ ಪಾತ್ರವನ್ನು ಹೋಲುವ ಪಾತ್ರಾಭಿನಯ 'ಪ್ರೀತಿ ಗಂಗುಲಿ'ಯವರದು. 'ಪ್ರೀತಿ ಗಂಗುಲಿ' ತಮ್ಮ ತೂಕವನ್ನು ಬಹಳವಾಗಿ ಕಡಿಮೆಮಾಡಿಕೊಂಡರು. ಅವರ ಪ್ರೀತಿಯ ತಂದೆಯವರ ಹೆಸರಿನಲ್ಲಿ ಒಂದು ನಟನ ಕಲೆಯ ಶಾಲೆಯೊಂದನ್ನು ಸ್ಥಾಪಿಸಿದರು.

ಪ್ರೀತಿ ಗಂಗೂಲಿ
ಜನನ(೧೯೫೩-೦೫-೧೭)೧೭ ಮೇ ೧೯೫೩
ಮುಂಬಯಿ
ಮರಣ2 ಡಿಸೆಂಬರ್ 2012(2012-12-02)[]
ಮುಂಚೈ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಪಾಲು
ವೃತ್ತಿನಟಿ
ಗಮನಾರ್ಹ ಕೆಲಸಗಳುಹಿಂದಿ ಸಿನಿಮಾದಲ್ಲಿ ಹಾಸ್ಯ ಪಾತ್ರಗಳು

ಜನನ ಮತ್ತು ಬಾಲ್ಯ

ಬದಲಾಯಿಸಿ

'ಪ್ರೀತಿ ಗಂಗುಲಿ' ಮೇ, ೭ ನೇ ತಾರೀಖಿನ ದಿನ ಜನಿಸಿದರು. ಮದುವೆಯಾದದ್ದು, ದೇವನ್ ವರ್ಮರನ್ನು,ಕಿಶೋರ್ ಕುಮಾರ್, ಅನೂಪ್ ಕುಮಾರ್, ಆಕೆಗೆ ಚಿಕ್ಕಪ್ಪಂದಿರು. ಸತಿ ದೇವಿ ಆಕೆಗೆ ಅತ್ತೆ.

ನಟಿಸಿದ ಚಿತ್ರಗಳು

ಬದಲಾಯಿಸಿ
  • Ashiq Banaya Aapne (2005)
  • Uttar Dakshin (1987)
  • Kranti (1981)
  • Thodisi Bewafai (1980)
  • Dillagi (1978)
  • Khatta Meetha (1978)
  • Khel Khel Mein (1975)

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Preeti Ganguly at the Internet Movie Database
  • Interview in The Financial Express

ಉಲ್ಲೇಖಗಳು

ಬದಲಾಯಿಸಿ