'ಭಾರತದ ಚಲನಚಿತ್ರ ರಂಗ' ದಲ್ಲಿ, ಹಾಗೂ 'ಟೆಲಿವಿಶನ್ ವಲಯ' ದಲ್ಲಿ ಒಬ್ಬ ಪೋಶಕನಟನಾಗಿ ಅಭಿನಯಿಸಿದರು. ಅವರ ಹಾಸ್ಯ-ನಟನೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅನೇಕ ಪ್ರಖ್ಯಾತ ನಿರ್ಮಾಪಕ, ನಿರ್ದೇಶಕ, ದಿಗ್ಗಜರರಾಗಿದ್ದ ಬಾಸು ಚಟರ್ಜಿ, ಹೃಷಿಕೇಶ್ ಮುಖರ್ಜಿ, ಮತ್ತು ಗುಲ್ಝಾರ್ ಹತ್ತಿರ ಅವರು ಕೆಲಸಮಾಡಿದ್ದಾರೆ. ತಾವೇ ಸ್ವತಃ ಕೆಲವು ಚಿತ್ರಗಳನ್ನು ತಯಾರಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಬೇಶರಮ್, ಒಂದು ಉತ್ತಮ ಚಿತ್ರ. ದೇವನ್ ವರ್ಮರಿಗೆ, ೩ ಫಿಲ್ಮ್ ಫೇರ್ ಪ್ರಶಸ್ತಿ '(Best Comedian Award)' ಅವರು ನಟಿಸಿದ ಚೋರಿ ಮೇರ ಕಾಮ್ ಚಿತ್ರಕ್ಕೆ ಸಿಕ್ಕಿದೆ.

ದೇವನ್ ವರ್ಮ ಚಿತ್ರತಯಾರಿಸಿದರು ಸಹಿತ

ಬದಲಾಯಿಸಿ

ಚೋರ್ ಕೆ ಘರ್ ಚೋರ್ ಮತ್ತು ಅಂಗೂರ್ ಕೊನೆಯ ಚಿತ್ರವನ್ನು ನಿರ್ದೇಶಿಸಿದವರು, ಗುಲ್ಝಾರ್ ರವರು, ಇಂದಿಗೂ ಬಾಲಿವುಡ್ ತಯಾರಿಸಿದ ಅತ್ಯಂತ ಉತ್ತಮ ಕಾಮೆಡಿಗಳಲ್ಲೊಂದೆಂದು ದಾಖಲಾಗಿದೆ.

ಜನನ ಮತ್ತು ಬಾಲ್ಯ

ಬದಲಾಯಿಸಿ

ದೇವನ್ ವರ್ಮ, ೨೩, ಅಕ್ಟೋಬರ್, ಪುಣೆನಗರದಲ್ಲಿ ಜನಿಸಿದರು. ಅಲ್ಲೇ ಅವರು ನವರೋಸ್ ಜಿ ವಾಡಿಯ ಕಾಲೇಜ್ ಫಾರ್ ಆರ್ಟ್ಸ್ ಅಂಡ್ ಸೈನ್ಸ್ ನಲ್ಲಿ (University of Pune), (೧೯೫೩-೫೭), (with Honours) ಪಾಲಿಟಿಕ್ಸ್ ಮತ್ತು ಸೋಶಿಯಾಲಜಿ ಗಳಲ್ಲಿ ಪದವಿಪಡೆದರು.