ಪ್ರಿಯಾಂಬದ ಮೊಹಂತಿ ಹೆಜಮಾಡಿ
ಪ್ರಿಯಾಂಬದ ಮೊಹಂತಿ ಹೆಜಮಾಡಿ ವಿಜ್ಞಾನಿ, ಶಿಕ್ಷಣ ತಜ್ಞೆ ಮತ್ತು ಒಡಿಸ್ಸಿಯ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಕಲಾ ಬರಹಗಾರ್ತಿ ಮತ್ತು ಜೀವಶಾಸ್ತ್ರಜ್ಞೆ. ೧೮ ನವೆಂಬರ್ ೧೯೩೯ ರಂದು ಜನಿಸಿದ ಇವರು ಸ್ನಾತಕೋತ್ತರ ಪದವಿಯನ್ನು ಪಡೆದರು.ಮಿಚಿಗನ್ ವಿಶ್ವವಿದ್ಯಾಲಯ, ಆನ್ ಆರ್ಬರ್, ಯು.ಎಸ್.ಎ ಯಿಂದ ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಇವರು ಬಾನ್ ಬಿಹಾರಿ ಮೈತಿ ಅವರ ಅಡಿಯಲ್ಲಿ ಚಿಕ್ಕ ವಯಸ್ಸಿನಿಂದಲೂ ಒಡಿಸ್ಸಿಯಲ್ಲಿ ಪಾಂಡಿತ್ಯವನ್ನು ಪಡೆದರು ಮತ್ತು ೧೯೫೪ ರಲ್ಲಿ ನವದೆಹಲಿಯಲ್ಲಿ ನಡೆದ ಅಂತರ-ವಿಶ್ವವಿದ್ಯಾಲಯ ಯುವ ಉತ್ಸವದಲ್ಲಿ ಅವರ ಒಡಿಸ್ಸಿ ಪ್ರದರ್ಶನವು ಪ್ರಸಿದ್ಧ ಕಲಾ ವಿಮರ್ಶಕ ಚಾರ್ಲ್ಸ್ ಫ್ಯಾಬ್ರಿ ಅವರ ಮೂಲಕ ನೃತ್ಯ ಪ್ರಕಾರವನ್ನು ಅಂತರರಾಷ್ಟ್ರೀಯ ಗಮನ ಸೆಳೆಯಲು ಸಹಾಯ ಮಾಡಿದೆ ಎಂದು ವರದಿಯಾಗಿದೆ.
ಪ್ರಿಯಾಂಬದ ಮೊಹಂತಿ ಹೆಜಮಾಡಿ | |
---|---|
ಜನನ | ೧೮ ನವೆಂಬರ್ ೧೯೩೯ |
ವೃತ್ತಿ(ಗಳು) | ಸಂಬಲ್ಪುರ ವಿಶ್ವವಿದ್ಯಾಲಯದ ಮಾಜಿ ಉಕುಲಪತಿಪ, ಲೇಖಕಿ(ಕಲೆ, ಸಂಸ್ಕೃತಿ, ಪರಿಸರ), ಪ್ರಾಣಿಶಾಸ್ತ್ರದ ಪ್ರೊಫೆಸರ್. ಒಡಿಸ್ಸಿ ಪ್ರವರ್ತಕ |
ಗಮನಾರ್ಹ ಕೆಲಸಗಳು | ಅಭಿವೃದ್ಧಿ ಜೀವಶಾಸ್ತ್ರ ಕ್ಕೆ ಹೆಸರುವಾಸಿಯಾದ ಒಡಿಸ್ಸಿ ಪ್ರವರ್ತಕಿ. |
ಪ್ರಶಸ್ತಿಗಳು | ಪದ್ಮಶ್ರೀ, (ವಿಜ್ಞಾನ ಮತ್ತು ಎಂಜಿನಿಯರಿಂಗ್) ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯಪಾಲರ ಪದಕ (ಒಡಿಸ್ಸಿ ನೃತ್ಯ). |
ಪ್ರಿಯಾಂಬದಾ ಅವರು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಫೆಲೋ ಆಗಿದ್ದಾರೆ. [೧] ಇವರು ಹಲವಾರು ಲೇಖನಗಳನ್ನು [೨] ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಒಡಿಸ್ಸಿ: ಭಾರತೀಯ ಶಾಸ್ತ್ರೀಯ ನೃತ್ಯ ರೂಪ, [೩] ಒಡಿಸ್ಸಿಯ ಭಾರತೀಯ ಶ್ರೇಷ್ಠ ರೂಪದ ಇತಿಹಾಸ ಮತ್ತು ವಿಕಾಸವನ್ನು ವಿವರಿಸುತ್ತದೆ. [೪] ಒರಿಸ್ಸಾದ ಗಹಿರ್ಮಠದ ಲೆಪಿಡೋಚೆಲಿಸ್ ಒಲಿವೇಸಿಯಾ ಆಲಿವ್ ರಿಡ್ಲೆಯ " ಪರಿಸರಶಾಸ್ತ್ರ, ಸಂತಾನೋತ್ಪತ್ತಿ ಮಾದರಿಗಳು, ಅಭಿವೃದ್ಧಿ ಮತ್ತು ಕ್ಯಾರಿಯೋಟೈಪ್ ಮಾದರಿಗಳ ಅಧ್ಯಯನ" ಬರೆದಿದ್ದಾರೆ. [೫]
ಇವರು ೨೦೧೩ ರಲ್ಲಿ " ಒಡಿಸ್ಸಿ ನೃತ್ಯ ಸನ್ಮಾನ" ವನ್ನು ಪಡೆದಿದ್ದಾರೆ. [೬] ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ೧೯೯೮ ರಲ್ಲಿ ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿತು. [೭]
ಉಲ್ಲೇಖಗಳು
ಬದಲಾಯಿಸಿ- ↑ "IAS Fellow". Indian Academy of Sciences. 2015. Retrieved 25 ಅಕ್ಟೋಬರ್ 2015."IAS Fellow". Indian Academy of Sciences. 2015. Retrieved 25 October 2015.
- ↑ Priyambada Mohanty Hejmadi (ಏಪ್ರಿಲ್ 2010). "Rushdie does an Odissi". Narthaki.
- ↑ "Author Search Results". crossasia-bibliographies.ub.uni-heidelberg.de (in ಇಂಗ್ಲಿಷ್). Retrieved 30 ಸೆಪ್ಟೆಂಬರ್ 2021.
- ↑ Priyambada Mohanty Hejmadi, Ahalya Hejmadi Patnaik (2007). Odissi: An Indian Classical Dance Form. Aryan Books International. p. 152. ISBN 978-8173053245.
- ↑ Hejmadi, Priyambada Mohanty (1988). A study of ecology, breeding patterns, development and karyotype patterns of the olive ridley, Lepidochelys Olivacea of Gahirmatha, Orissa. Pranikee. Utkal Univ., Dep. of Zoology, Zoological Soc. of Orissa.
- ↑ "Odissi danseuse Padmashree Priyambada Mohanty Hejmadi conferred with Odissi Nrutya Sanman-2013". Orissa Diary. 7 ಜನವರಿ 2013. Archived from the original on 15 ಜನವರಿ 2013. Retrieved 25 ಅಕ್ಟೋಬರ್ 2015.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 ಜುಲೈ 2015.
ಹೆಚ್ಚಿನ ಓದುವಿಕೆ
ಬದಲಾಯಿಸಿ- Priyambada Mohanty Hejmadi, Ahalya Hejmadi Patnaik (2007). Odissi: An Indian Classical Dance Form. Aryan Books International. p. 152. ISBN 978-8173053245.