ಪ್ರಶಾಂತ ಚಂದ್ರ ಮಹಾಲನೊಬಿಸ್‌

ಗಣಿತಜ್ಞ

ಪ್ರಶಾಂತ ಚಂದ್ರ ಮಹಲನೋಬಿಸ್ (ಒಬಿಇ, ಎಫ್ಎನ್ಎ, ಎಫ್ಎಎಸ್ಸಿ, ಎಫ್ಆರ್ಎಸ್)  (29 ಜೂನ್ 1893 - 28 ಜೂನ್ 1972)  ಭಾರತೀಯ ವಿಜ್ಞಾನಿ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಸ್ವತಂತ್ರ ಭಾರತದ ಪ್ರಥಮ ಯೋಜನಾ ಆಯೋಗದ ಸದಸ್ಯರಾಗಿದ್ದರು. ಸಂಖ್ಯಾಶಾಸ್ತ್ರಕ್ಕೆ ಅವರು ಕೊಟ್ಟ ಮಹತ್ತರ ಕೊಡುಗೆಯೆಂದರೆ ಮಹಲನೋಬಿಸ್ ಅಳತೆ. ಅವರು ಭಾರತದಲ್ಲಿ ಮಾನವಶಾಸ್ತ್ರದಲ್ಲಿ ಗಮನಾರ್ಹ ಅಧ್ಯಯನಗಳನ್ನು ಮಾಡಿದರು.  ಅವರು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸಕ್ಕೆ ಕೊಡುಗೆ ನೀಡಿದ್ದಾರೆ.

Prasanta Chandra Mahalanobis
ಪ್ರಶಾಂತ ಚಂದ್ರ ಮಹಲನೊಬಿಸ್
PCMahalanobis.png
Prasanta Chandra
ಜನನಬಂಗಾಳಿ:প্রশান্ত চন্দ্র মহালানবিস
(೧೮೯೩-೦೬-೨೯)೨೯ ಜೂನ್ ೧೮೯೩
ಕಲ್ಕತ್ತಾ, ಬಂಗಾಳ, ಬ್ರಿಟಿಷ್ ಭಾರತ
ಮರಣ28 June 1972(1972-06-28) (aged 78)
ಕಲ್ಕತ್ತ, ಪಶ್ಚಿಮ ಬಂಗಾಳ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತ, ಸಂಖ್ಯಾಶಾಸ್ತ್ರ
ಸಂಸ್ಥೆಗಳುಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ
ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ
ಅಭ್ಯಸಿಸಿದ ವಿದ್ಯಾಪೀಠಪ್ರೆಸಿಡೆನ್ಸಿ ಕಾಲೇಜ್, ಕಲ್ಕತ್ತಾ ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್
ಡಾಕ್ಟರೇಟ್ ಸಲಹೆಗಾರರುW. H. ಮಕಾಲೆ[೧]
ಡಾಕ್ಟರೇಟ್ ವಿದ್ಯಾರ್ಥಿಗಳುಸಮರೇಂದ್ರ ರಾಯ್[೧]
Other notable studentsರಾಜ್ ಚಂದ್ರ ಬೋಸ್
C.R. ರಾವ್
ಪ್ರಸಿದ್ಧಿಗೆ ಕಾರಣಮಹಲನೋಬಿಸ್ ಅಳತೆ
ಫೆಲ್ಡ್‌ಮನ್-ಮಹಲನೋಬಿಸ್ ಮಾದರಿ
ಗಮನಾರ್ಹ ಪ್ರಶಸ್ತಿಗಳುಪದ್ಮ ವಿಭೂಷಣ (1968)

ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (OBE, 1942)
ರಾಯಲ್ ಸೊಸೈಟಿಯ ಫೆಲೋ (FRS)

ವೆಲ್ಡನ್ ಮೆಮೋರಿಯಲ್ ಪ್ರಶಸ್ತಿ
ಸಂಗಾತಿನಿರ್ಮಲ್ ಕುಮಾರಿ ಮಹಲನೋಬಿಸ್ [೨]
ಹಸ್ತಾಕ್ಷರ

ಆರಂಭಿಕ ಜೀವನಸಂಪಾದಿಸಿ

ಮಹಲನೋಬಿಸ್ ಅವರು ಬಿಕ್ರಮ್‌ಪುರದಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ಜನಿಸಿದರು. ಅವರ ಅಜ್ಜ ಗುರುಚರಣ್ (1833-1916) 1854 ವ್ಯಾಪಾರದ ಸಲುವಾಗಿ ಕಲ್ಕತ್ತಾಗೆ ತೆರಳಿದರು ಮತ್ತು 1860 ರಲ್ಲಿ ರಾಸಾಯನಿಕಗಳನ್ನು ಮಾರುವ ಅಂಗಡಿಯನ್ನು ಆರಂಭಿಸಿದರು. ದೇವೇಂದ್ರನಾಥ ಟಾಗೋರ್ ( ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರರ ತಂದೆ) (1817-1905) ಗುರುಚರಣರ ಮೇಲೆ ಪ್ರಭಾವ ಬೀರಿದ ಕಾರಣ, ಬ್ರಹ್ಮಸಮಾಜದಂತಹ ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. (ಖಜಾಂಚಿ ಮತ್ತು ಅಧ್ಯಕ್ಷರಾಗಿ) ಕಾರ್ನ್‍ವಾಲೀಸ್ ರಸ್ತೆಯಲ್ಲಿ ಅವರ ಮನೆಯೇ ಬ್ರಹ್ಮಸಮಾಜದ ಕೇಂದ್ರವಾಗಿತ್ತು. ಗುರುಚರಣ್ ಒಬ್ಬ ವಿಧವೆಯನ್ನು ವಿವಾಹವಾಗುವ ಮೂಲಕ ಸಾಮಾಜಿಕ ಮೂಢನಂಬಿಕೆಗಳನ್ನು ವಿರೋಧಿಸಿದರು.ಗುರುಚರಣರಿಗೆ ಇಬ್ಬರು ಮಕ್ಕಳು. ಸುಭೋದಚಂದ್ರ (೧೮೬೭-೧೯೫೩) ಮತ್ತು ಪ್ರಭೋದಚಂದ್ರ(೧೮೬೯-೧೯೪೨).ಪ್ರಭೋದಚಂದ್ರರ ಮಗನೇ ಮಹಲನೋಬಿಸ್.

ಗೌರವಗಳುಸಂಪಾದಿಸಿ

 • ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋ (FASC, 1935)
 • ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ (ಎಫ್ಎನ್ಎ, 1935)
 • ಆರ್ಡರ್ ಆಫ್ ದ ಬ್ರಿಟೀಷ್ ಎಂಪೈರ್ (ನಾಗರಿಕ ವಿಭಾಗ), 1942 ಹೊಸ ವರ್ಷದ ಗೌರವಗಳ ಪಟ್ಟಿ
 • ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ವೆಲ್ಡನ್ ಮೆಮೋರಿಯಲ್ ಪ್ರಶಸ್ತಿ (1944)
 • ರಾಯಲ್ ಸೊಸೈಟಿಯ ಫೆಲೋ, ಲಂಡನ್ (1945)
 • ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧ್ಯಕ್ಷರು (1950)
 • ಎಕನಾಮೆಟ್ರಿಕ್ ಸೊಸೈಟಿ ಫೆಲೋ ಆಫ್ ಅಮೇರಿಕಾ (1951)
 • ಪಾಕಿಸ್ತಾನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ ಫೆಲೋ (1952)
 • ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿ, ಯುಕೆ (1954) ನ ಗೌರವ ಫೆಲೋ
 • ಸರ್ ದೇವಿಪ್ರಸಾದ್ ಸರ್ವಾಧಿಕರಿ ಚಿನ್ನದ ಪದಕ (1957)
 • ಯುಎಸ್ಎಸ್ಆರ್ನ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಸದಸ್ಯ (1958)
 • ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ನ ಗೌರವ ಫೆಲೋ (1959)
 • ಫೆಲೋ ಆಫ್ ದಿ ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (1961)
 • ದುರ್ಗಾಪ್ರಸಾದ್ ಖೈತಾನ್ ಚಿನ್ನದ ಪದಕ (1961)
 • ಪದ್ಮ ವಿಭೂಷನ (1968)
 • ಶ್ರೀನಿವಾಸ ರಾಮನುಜನ್ ಚಿನ್ನದ ಪದಕ (1968)
 • ಭಾರತ ಸರ್ಕಾರವು 2006 ರಲ್ಲಿ ತನ್ನ ಹುಟ್ಟುಹಬ್ಬವನ್ನು ಜೂನ್ 29, ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವಾಗಿ ಆಚರಿಸಲು ನಿರ್ಧರಿಸಿತು.
 • 125ನೇ ಜನ್ಮದಿನದಂದು ಗೂಗಲ್ ಡೂಡಲ್ ಪ್ರದರ್ಶಿಸಿ ಗೌರವ ನೀಡಿದೆ.

ಉಲ್ಲೇಖಸಂಪಾದಿಸಿ

 1. ೧.೦ ೧.೧ ಪ್ರಶಾಂತ ಚಂದ್ರ ಮಹಾಲನೊಬಿಸ್‌ at the Mathematics Genealogy Project
 2. [೧] Prasanta Chandra Mahalanobis: a Biography by Ashok Rudra. Delhi: Oxford University Press, 1996