ಪ್ರಪಂಚ (ಪತ್ರಿಕೆ)
ಪ್ರಪಂಚ, ಕನ್ನಡದ ಪ್ರಮುಖ ವಾರ ಪತ್ರಿಕೆಗಳಲ್ಲೊಂದು. ಹುಬ್ಬಳ್ಳಿಯ ಕನ್ನಡದ ಖ್ಯಾತ ಲೇಖಕರಾದ ಪಾಟೀಲ ಪುಟ್ಟಪ್ಪ ನವರು ಇದರ ಸ್ಥಾಪಕ ಸಂಪಾದಕರು.ಪ್ರಪಂಚ ವಾರಪತ್ರಿಕೆ ೧೯೫೪ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾಯಿತು.ಸ್ವಾತಂತ್ರ್ಯಾನಂತರ ಪ್ರಾರಂಭವಾದ ಮುಂಬಯಿ-ಕರ್ನಾಟಕದ ವಾರಪತ್ರಿಕೆಗಳಲ್ಲಿ ಪ್ರಮುಖವಾದುದು.ಇದರ ಸ್ಥಾಪಕ ಸಂಪಾದಕರಾದ ಪಾಟೀಲ ಪುಟ್ಟಪ್ಪನವರು ಅಮೆರಿಕದಲ್ಲಿ ಪತ್ರಿಕೋದ್ಯಮದಲ್ಲಿ ಪ್ರೌಢ ವ್ಯಾಸಂಗ ಮಾಡಿ ,ಪತ್ರಿಕೋದ್ಯಮದಲ್ಲಿ ಎಂಎಸ್‌ಸಿ ಡಿಗ್ರಿ ಸಂಪಾದಿಸಿ,ಹಿಂದಿರುಗಿ ಬಂದು ಈ ಪತ್ರಿಕೆಯನ್ನು ಪ್ರಾರಂಭಿಸಿದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |