ಪ್ರಚ್ಛನ್ನ ಶಕ್ತಿ
ಭೌತಶಾಸ್ತ್ರದಲ್ಲಿ ಯವುದೇ ಒಂದು ವಸ್ತುವಿನ ಪ್ರಚ್ಛನ್ನಶಕ್ತಿಯು ಆ ವಸ್ತುವಿನ ಬಲಕ್ಷೇತ್ರದಲ್ಲಿರುವ ಸ್ಥಾನದಿಂದ ಪಡೆಯುವಂತಹ ಶಕ್ತಿಯಾಗಿರುತ್ತದೆ. ಪ್ರಚ್ಛನ್ನಶಕ್ತಿಯು ಕೆಲವೊಮ್ಮೆ ವ್ಯವಸ್ಥೆಯಲ್ಲಿರುವ ವಸ್ತುವಿನ ಭಾಗಗಳ ಜೋಡಣೆ ಅಥವಾ ಎರ್ಪಾಟಿನಿಂದಲೂ ಆ ವಸ್ತು ಪಡೆಯುತ್ತದೆ.[೧][೨] ಪ್ರಚ್ಛನ್ನ ಶಕ್ತಿಯಲ್ಲಿ ಹಲವು ವಿಧಗಳಿವೆ. ಒಂದು ವಸ್ತುವಿನ ದ್ರವ್ಯರಾಶಿ ಮತ್ತು ಇನ್ನೊಂದು ವಸ್ತುವಿನ ಕೇಂದ್ರದಿಂದಿರುವ ದೂರಗಳ ಮೇಲೆ ಅವಲಂಬಿತವಾಗಿರುವಂತಹ ವಸ್ತುವಿನ ಗುರುತ್ವ ಪ್ರಚ್ಛನ್ನ ಶಕ್ತಿಯು, ಎಳೆದು ಹಿಡಿಯಲ್ಪಟ್ಟ ಸುರಳಿಯಲ್ಲಿ ಹಿಗ್ಗಿ ಸಂಗ್ರಹವಾಗಿರುವ ಪ್ರಚ್ಚನ್ನ ಶಕ್ತಿಯು, ವಿದ್ಯುತ್ ಕಾಂತ ಕ್ಷೇತ್ರದಲ್ಲಿರುವ ವಿದ್ಯುತ್ ಪೂರಿತ ಕಣದಲ್ಲಿ ಇರುವ ವಿದ್ಯುತ್ ಪ್ರಚ್ಛನ್ನ ಶಕ್ತಿಯು, ಪ್ರಚ್ಛನ್ನ ಶಕ್ತಿಯ ಸಾಮಾನ್ಯ ವಿಧಗಳಾಗಿವೆ. ಅಂತರಾಷ್ಟ್ರೀಯ ಮಾನಕಗಳ ವ್ಯವಸ್ಥೆಯಲ್ಲಿ(International System of Units-SI) ಶಕ್ತಿಯ ಮಾನಕವು ಜೌಲ್ (joule), ಅಗಿದ್ದು, ಅದನ್ನು J ಇಂದ ಸೂಚಿಸಲಾಗುತ್ತದೆ.
ಮೇಲ್ನೋಟ
ಬದಲಾಯಿಸಿಒಂದು ವಸ್ತುವಿನ ಪ್ರಚ್ಛನ್ನ ಶಕ್ತಿಯು ಆ ವಸ್ತುವಿನಲ್ಲಿ ಸಂಗ್ರಹಿಸಲ್ಪಟ್ಟ ಶಕ್ತಿಯಾಗಿರುತ್ತದೆ. ಒಂದು ವಸ್ತುವಿನಿಂದ ಬೇರೆ ವಸ್ತುವಿಗಿರುವ ಸಾಪೇಕ್ಷ ಸ್ಥಾನದಿಂದ ಈ ಶಕ್ತಿಯನ್ನು ಅಳೆಯಲಾಗುತ್ತದೆ. ಒಂದು ವಸ್ತುವಿನ ಗೊತ್ತಾದ ಸ್ಥಾನದಲ್ಲಿರುವ ಶಕ್ತಿ ಮತ್ತು ಆಕರಸೂಚಕ ಸ್ಥಾನದಲ್ಲಿರುವಾಗಿನ ಶಕ್ತಿಗಳ ನಡುವಿನ ವ್ಯತ್ಯಾಸವನ್ನು, ಪ್ರಚ್ಛನ್ನ ಶಕ್ತಿಯ ಹೆಚ್ಛು ಸಾಂಪ್ರದಾಯಿಕ ವ್ಯಖ್ಯಾನ ಆಗಿದೆ.
ಇದನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Jain, Mahesh C. "Fundamental forces and laws: a brief review". Textbook Of Engineering Physics, Part 1. PHI Learning Pvt. Ltd. p. 10. ISBN 9788120338623.
- ↑ McCall, Robert P. (2010). "Energy, Work and Metabolism". Physics of the Human Body. JHU Press. p. 74. ISBN 978-0-8018-9455-8.