ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯

ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯, ೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಆ ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ, ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರು.[][]

ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯
ಭಾರತದ ಸಂಸತ್ತು
ಪೌರತ್ವ ಮಸೂದೆ, ೧೯೫೫ರ ತಿದ್ದುಪಡಿ ಕಾಯಿದೆ.
ಉಲ್ಲೇಖAct No. 47 of 2019
ಭೌಗೋಳಿಕ ವ್ಯಾಪ್ತಿ ಭಾರತ
ಮಂಡನೆಲೋಕಸಭೆ
ಅಂಗೀಕೃತವಾದ ದಿನ10 ಡಿಸೆಂಬರ್ 2019 (2019-12-10)
ಮಂಡನೆರಾಜ್ಯ ಸಭೆ
ಅಂಗೀಕೃತವಾದ ದಿನ11 ಡಿಸೆಂಬರ್ 2019 (2019-12-11)
ಒಪ್ಪಿತವಾದ ದಿನ12 ಡಿಸೆಂಬರ್ 2019 (2019-12-12)
ಸಹಿ ಹಾಕಿದ್ದು12 ಡಿಸೆಂಬರ್ 2019 (2019-12-12)
ಸಹಿ ಮಾಡಿದವರುರಾಮನಾಥ ಕೋವಿಂದ್,
(ಭಾರತದ ರಾಷ್ಟ್ರಪತಿ)
ಶಾಸನ ಜಾರಿ10 ಜನವರಿ 2020; 1807 ದಿನ ಗಳ ಹಿಂದೆ (2020-೦೧-10)[][]
ಮಸೂದೆಯ ಇತಿಹಾಸ
ಮೂಲ ಉಲ್ಲೇಖಮೂಲ
ಶಾಸನದ ಉಲ್ಲೇಖBill No. 370 of 2019
ಶಾಸನ ಪ್ರಕಟವಾದ ದಿನಾಂಕ9 ಡಿಸೆಂಬರ್ 2019; 1839 ದಿನ ಗಳ ಹಿಂದೆ (2019-೧೨-09)
ಮಂಡನೆಅಮಿತ್ ಶಾ,
ಗೃಹ ಸಚಿವ, ಭಾರತ ಸರ್ಕಾರ
ಮೊದಲ ಮಂಡನೆ9 ಡಿಸೆಂಬರ್ 2019 (2019-12-09)
ಎರಡನೆಯ ಮಂಡನೆ10 ಡಿಸೆಂಬರ್ 2019 (2019-12-10)
ಮೂರನೆಯ ಮಂಡನೆ11 ಡಿಸೆಂಬರ್ 2019 (2019-12-11)
ಸಾರಾಂಶ
೨೦೧೪ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್ಖ, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಧರ್ಮದ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡುತ್ತದೆ.
ಸ್ಥಿತಿ: ಜಾರಿಗೆ ಬಂದಿದೆ
Shaheen Bagh protests against CAA, NRC and NPR in Pune on 22 Jan 2020

ಕೇಂದ್ರ ಸಚಿವ ಸಂಪುಟವು ೪ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಮುಂದಿಟ್ಟಿತು. ಇದನ್ನು ಡಿಸೆಂಬರ್ ೧೦ ರಂದು ಲೋಕಸಭೆಯು ಅಂಗೀಕರಿಸಿತು ಹಾಗೂ ಡಿಸೆಂಬರ್ ೧೧ ರಂದು ರಾಜ್ಯಸಭೆಯು ಇದನ್ನು ಅಂಗೀಕಾರ ಮಾಡಿತು.[]

ಹಿನ್ನೆಲೆ

ಬದಲಾಯಿಸಿ

ಭಾರತೀಯ ಜನತಾ ಪಕ್ಷವು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವುದಾಗಿ ಭರವಸೆಯನ್ನು ನೀಡಿತ್ತು.[] ೨೦೧೪ರಲ್ಲಿ ಬಿಜೆಪಿ ಪಕ್ಷವು, ಚುನಾವಣಾ ಪ್ರಣಾಳಿಕೆಯಲ್ಲಿ, ಹಿಂದೂ ನಿರಾಶ್ರಿತರನ್ನು ಸ್ವಾಗತಿಸಿ ಅವರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿತ್ತು. ಪೌರತ್ವ (ತಿದ್ದುಪಡಿ) ಮಸೂದೆ, ೨೦೧೬ ನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು ಮತ್ತು ಅಂಗೀಕರಿಸಲಾಯಿತು. ಆದರೆ ಈಶಾನ್ಯ ಭಾರತದಲ್ಲಿ ವ್ಯಾಪಕ ರಾಜಕೀಯ ವಿರೋಧ ಮತ್ತು ಪ್ರತಿಭಟನೆಗಳು ನಡೆದವು.[] ಅವರ ಮುಖ್ಯ ಕಾಳಜಿ ಏನಾಗಿತ್ತೆಂದರೆ, ಬಾಂಗ್ಲಾದೇಶದಿಂದ ಜನರು ವಲಸೆ ಬಂದರೆ, ಈಶಾನ್ಯ ಭಾರತದ ಜನಸಂಖ್ಯಾಶಾಸ್ತ್ರವು ಬದಲಾಗುತ್ತದೆ. ಹಾಗಾಗಿ, ಇದನ್ನು ಅನುಸರಿಸಿ, ಈಶಾನ್ಯ ಭಾರತದ ರಾಜ್ಯಗಳನ್ನು ಮಸೂದೆಯ ನಿಬಂಧನೆಗಳಿಂದ ಹೊರಗಿಟ್ಟು, ೨೦೧೯ ರ ಮಸೂದೆಯನ್ನು ಅಂಗೀಕರಿಸಲಾಯಿತು.[][]

ಶಾಸಕಾಂಗ ಇತಿಹಾಸ

ಬದಲಾಯಿಸಿ

ಪೌರತ್ವ ಕಾಯ್ದೆ ೧೯೫೫ ರಲ್ಲಿ ತಿದ್ದುಪಡಿ ಮಾಡಲು, ೨೦೧೬ ರ ಜನವರಿಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ ೧೯, ೨೦೧೬ ರಂದು ಪೌರತ್ವ (ತಿದ್ದುಪಡಿ) ಮಸೂದೆ, ೨೦೧೬ ಎಂದು ಪರಿಚಯಿಸಲಾಯಿತು. ಬಳಿಕ ಇದನ್ನು ೧೨ ಆಗಸ್ಟ್ ೨೦೧೬ ರಂದು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು. ಅದು ೭ ಜನವರಿ ೨೦೧೯ ರಂದು ತನ್ನ ವರದಿಯನ್ನು ಸಲ್ಲಿಸಿತು. ಇದನ್ನು ಲೋಕಸಭೆಯು ೮ ಜನವರಿ ೨೦೧೯ ರಂದು ಅಂಗೀಕರಿಸಿತು. ಆದರೆ, ಇದು ೧೬ ನೇ ಲೋಕಸಭಾ ವಿಸರ್ಜನೆಯೊಂದಿಗೆ ಕಳೆದುಹೋಯಿತು.[೧೦][೧೧]

ತರುವಾಯ, ಕೇಂದ್ರ ಸಚಿವ ಸಂಪುಟ ೨೦೧೯ ರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ೨೦೧೯ರ ಡಿಸೆಂಬರ್ ೪ ರಂದು ಸಂಸತ್ತಿನಲ್ಲಿ ಪರಿಚಯಿಸಲು ತೆರವುಗೊಳಿಸಿತು. ಈ ಮಸೂದೆಯನ್ನು ೧೭ನೇ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ೯ ಡಿಸೆಂಬರ್ ೨೦೧೯ ರಂದು ಪರಿಚಯಿಸಿದರು ಮತ್ತು ೨೦೧೯ ರ ಡಿಸೆಂಬರ್ ೧೦ ರಂದು ಬೆಳಿಗ್ಗೆ, ೩೧೧ ಸಂಸದರು ಪರವಾಗಿ ಮತ್ತು ೮೦ ಸಂಸದರು ಮಸೂದೆ ವಿರುದ್ಧ ಮತ ಚಲಾಯಿಸಿದರು.[೧೨] ಇದನ್ನು ಡಿಸೆಂಬರ್ ೧೧ ರಂದು ರಾಜ್ಯಸಭೆಯು ಅಂಗೀಕರಿಸಿತು.[೧೩]

ನಿಬಂಧನೆಗಳು

ಬದಲಾಯಿಸಿ

೨೦೧೪ ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್ಖ, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ನ್ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು ೧೯೫೫ ರ ಪೌರತ್ವ ಕಾಯ್ದೆಗೆ ಮಸೂದೆ ತಿದ್ದುಪಡಿ ಮಾಡಿದೆ. ಈ ಕಾಯಿದೆಯಡಿ, ನೈಸರ್ಗಿಕೀಕರಣದ ಮೂಲಕ ಪೌರತ್ವಕ್ಕಾಗಿ ಒಂದು ಅವಶ್ಯಕತೆಯೆಂದರೆ, ಅರ್ಜಿದಾರನು ಕಳೆದ 12 ತಿಂಗಳಿನಿಂದ ಭಾರತದಲ್ಲಿ ವಾಸಿಸುತ್ತಿರಬೇಕು. ಅದಲ್ಲದೆ, ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿರಬೇಕು. ಆದರೆ ಈ ತಿದ್ದುಪಡಿಯು, ಮೂರು ದೇಶಗಳ,ಆರು ಧರ್ಮಗಳಿಗೆ ಸೇರಿದ ವ್ಯಕ್ತಿಗಳಿಗೆ ಈ 11 ವರ್ಷದ ಅಗತ್ಯವನ್ನು ಐದು ವರ್ಷಗಳವರೆಗೆ ಸಡಿಲಿಸುತ್ತದೆ. ಅದಲ್ಲದೆ, ಈ ಮಸೂದೆಯು ಅಸ್ಸಾಂ, ಮೇಘಾಲಯ, ಮಿಜೋರಾಂ, ಮತ್ತು ತ್ರಿಪುರದ ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿ ಸೇರಿಸಿದೆ. ಈ ಬುಡಕಟ್ಟು ಪ್ರದೇಶಗಳಲ್ಲಿ ಅಸ್ಸಾಂನ ಕಾರ್ಬಿ ಆಂಗ್ಲಾಂಗ್, ಮೇಘಾಲಯದ ಗಾರೊ ಹಿಲ್ಸ್, ಮಿಜೋರಾಂನ ಚಕ್ಮಾ ಜಿಲ್ಲೆ ಮತ್ತು ತ್ರಿಪುರದ ಕೆಲ ಬುಡಕಟ್ಟು ಪ್ರದೇಶಗಳು ಸೇರಿವೆ. ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಅನ್ನು ಒಳಗೊಂಡಿರುವ ಇನ್ನರ್ ಲೈನ್ ಪರ್ಮಿಟ್ ಮೂಲಕ ನಿಯಂತ್ರಿಸಲ್ಪಡುವ ಪ್ರದೇಶಗಳಿಗೆ ಈ ತಿದ್ದುಪಡಿಯಿಂದ ವಿನಾಯಿತಿ ನೀಡಿದೆ ಹಾಗೂ ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್‌ನಲ್ಲಿ ಸೇರ್ಪಡೆಗೊಳಿಸುವುದನ್ನು ೧೦ ಡಿಸೆಂಬರ್ ೨೦೧೯ ರಂದು ಘೋಷಿಸಲಾಗಿದೆ.[೧೪][೧೫]

ಭಾರತದ ಸಾಗರೋತ್ತರ ಪೌರತ್ವ (ಓಸಿಐ) ಹೊಂದಿರುವವರು ನೋಂದಣಿಯಾದ ಐದು ವರ್ಷಗಳಲ್ಲಿ, ಎರಡು ಅಥವಾ ಹೆಚ್ಚಿನ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದರೆ ಆಥವಾ ಅಗತ್ಯದ ಸಂದರ್ಭದಲ್ಲಿ ವಂಚನೆಯ ಮೂಲಕ ನೋಂದಣಿಯನ್ನು ಮಾಡಿಸಿದರೆ, ಭಾರತದ ಸಾರ್ವಭೌಮತ್ವದ ಹಿತದೃಷ್ಟಿಯಿಂದ, ಸಾಗರೋತ್ತರ ಪೌರತ್ವ ನೋಂದಣಿಯನ್ನು ರದ್ದುಗೊಳಿಸುವ ಹೊಸ ನಿಬಂಧನೆಗಳನ್ನು ಮಸೂದೆಯು ಒಳಗೊಂಡಿದೆ.[೧೬]

ಪ್ರತಿಕ್ರಿಯೆಗಳು

ಬದಲಾಯಿಸಿ

ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (ಯುಎಸ್ಸಿಐಆರ್ಎಫ್) ೯ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಅಂಗೀಕರಿಸಿದ ಬಗ್ಗೆ ಅಮಿತ್ ಶಾ ಮತ್ತು "ಇತರ ಪ್ರಮುಖ ನಾಯಕತ್ವ"ದ ವಿರುದ್ಧ ನಿರ್ಬಂಧಗಳನ್ನು ಕೋರಿತು.[೧೭][೧೮] ಇದನ್ನು ಅನುಸರಿಸಿ ಭಾರತ ವಿದೇಶಾಂಗ ಸಚಿವಾಲಯವು ಒಂದು ಹೇಳಿಕೆಯನ್ನು ನೀಡಿದೆ:[೧೯]

ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಯುಎಸ್‌ಸಿಐಆರ್‌ಎಫ್ ನೀಡಿದ ಹೇಳಿಕೆಯು ನಿಖರವಾಗಿಲ್ಲ ಅಥವಾ ಖಾತರಿಯಿಲ್ಲ. [...] ಸಿಎಬಿ ಅಥವಾ ಭಾರತದ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯು ಯಾವುದೇ ನಂಬಿಕೆಯ, ಯಾವುದೇ ಭಾರತೀಯ ನಾಗರಿಕರಿಂದ ಪೌರತ್ವವನ್ನು ತೆಗೆದುಹಾಕಲು ಪ್ರಯತ್ನಿಸುವುದಿಲ್ಲ. ಆ ಪರಿಣಾಮದ ಸಲಹೆಗಳು ಪ್ರೇರೇಪಿತ ಮತ್ತು ನ್ಯಾಯಸಮ್ಮತವಲ್ಲ. [...]

— ರವೀಶ್ ಕುಮಾರ್, ಅಧಿಕೃತ ವಕ್ತಾರ, ವಿದೇಶಾಂಗ ಸಚಿವಾಲಯ, ಭಾರತ ಸರ್ಕಾರ

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಉದ್ದೇಶಿತ ಪೌರತ್ವ ಕಾನೂನನ್ನು ಟೀಕಿಸಿದರು ಮತ್ತು ಭಾರತವು, "ದ್ವಿಪಕ್ಷೀಯ ಒಪ್ಪಂದಗಳನ್ನು" ಉಲ್ಲಂಘಿಸಿದ್ದಾರೆ ಎಂದು ಹೇಳಿದರು.[೨೦] ೨೦೧೯ ರ ಜನವರಿಯಲ್ಲಿ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಸಂಸತ್ತಿನ ಜಂಟಿ ಸಮಿತಿಯೊಂದಕ್ಕೆ, ಸಿಎಬಿಯ ಹಿಂದಿನ ಆವೃತ್ತಿಯೊಂದರಲ್ಲಿ "ಭಾರತವನ್ನು ಒಳನುಸುಳಲು ವಿದೇಶಿ ಏಜೆಂಟರು ಸಿಎಬಿ ಅನ್ನು ದುರುಪಯೋಗಪಡಿಸಿಕೊಳ್ಳಬಹುದು" (ಪಾಕಿಸ್ತಾನದ ಐಎಸ್‌ಐನಂತಹ ಸಂಸ್ಥೆಗಳಿಂದ) ಮತ್ತು ಅದು "ಅವರು ಭಾರತಕ್ಕೆ ನುಸುಳಲು ಬಳಸಬಹುದಾದ 'ಕಾನೂನು ಚೌಕಟ್ಟು' ಆಗಬಹುದು" ಎಂದಿತ್ತು.[೨೧]

ಮಸೂದೆಯು ಭಾರತದ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆಯೆ ಎಂದು ಪರಿಗಣಿಸಬೇಕಾದ ಪ್ರಮುಖ ವಿಷಯವೆಂದರೆ ಅಕ್ರಮ ವಲಸಿಗರಿಗೆ ಅವರ ಮೂಲ ದೇಶ, ಧರ್ಮ, ಭಾರತಕ್ಕೆ ಪ್ರವೇಶಿಸಿದ ದಿನಾಂಕ ಮತ್ತು ಭಾರತದಲ್ಲಿ ವಾಸಿಸುವ ಸ್ಥಳದ ಆಧಾರದ ಮೇಲೆ ಮಸೂದೆ ಭೇದಾತ್ಮಕ ಚಿಕಿತ್ಸೆಯನ್ನು ಒದಗಿಸುತ್ತದೆ ( ವಿನಾಯಿತಿ ಪಡೆದ ಈಶಾನ್ಯ ಭಾರತ ಪ್ರದೇಶಗಳಿಗೆ ಸಂಬಂಧಿಸಿದಂತೆ). ವಿಧಿ ೧೪ ನಾಗರಿಕರು ಮತ್ತು ವಿದೇಶಿಯರು ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಹಾಗೆ ಮಾಡುವ ತಾರ್ಕಿಕತೆಯು ಸಮಂಜಸವಾದ ಉದ್ದೇಶವನ್ನು ಪೂರೈಸಿದರೆ ಮಾತ್ರ ಜನರ ಗುಂಪುಗಳ ನಡುವೆ ವ್ಯತ್ಯಾಸವನ್ನು ತೋರಿಸಲು ಇದು ಕಾನೂನುಗಳು ಅನುಮತಿಸುತ್ತದೆ. ಪರಿಗಣಿತ ಪ್ರಸ್ತಾವಿತ ಕಾನೂನಿನಲ್ಲಿ ಜನರ ಗುಂಪುಗಳ ವರ್ಗೀಕರಣವು "ಸಮಂಜಸವಾದ ವರ್ಗೀಕರಣ" ದ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ ಮತ್ತು ಇದರ ಪರಿಣಾಮವಾಗಿ 14 ನೇ ಪರಿಚ್ಛೇದದಿಂದ ವಿನಾಯಿತಿ ನೀಡಲಾಗುತ್ತದೆ:

  1. ವರ್ಗೀಕರಣವು ಬುದ್ಧಿವಂತ ಭೇದವನ್ನು ಆಧರಿಸಿದೆ. ಅದು ಗುಂಪಿನಿಂದ ಹೊರಗುಳಿದಿರುವ ಇತರರಿಂದ ಗುಂಪು ಮಾಡಲ್ಪಟ್ಟ ವ್ಯಕ್ತಿಗಳು ಅಥವಾ ವಸ್ತುಗಳನ್ನು ಪ್ರತ್ಯೇಕಿಸುತ್ತದೆ, ಮತ್ತು,
  2. ಭೇದಾತ್ಮಕತೆಯು ಕಾಯಿದೆಯ ಉದ್ದೇಶದೊಂದಿಗೆ ತರ್ಕಬದ್ಧ ಸಂಬಂಧವನ್ನು ಹೊಂದಿದೆ.[೨೨][೨೩]

ಸಿಎಬಿನಲ್ಲಿನ ವಸ್ತುಗಳು ಮತ್ತು ಕಾರಣಗಳ ಹೇಳಿಕೆಯನ್ನು ಹೀಗೆ ಹೇಳುತ್ತದೆ:

"1947 ರಲ್ಲಿ ಭಾರತ ವಿಭಜನೆಯಾದಾಗ ವಿವಿಧ ಧರ್ಮಗಳಿಗೆ ಸೇರಿದ ಅವಿಭಜಿತ ಭಾರತದ ಲಕ್ಷಾಂತರ ನಾಗರಿಕರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರದೇಶಗಳಲ್ಲಿ ತಂಗಿದ್ದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಸಂವಿಧಾನಗಳು ಒಂದು ನಿರ್ದಿಷ್ಟ ರಾಷ್ಟ್ರಧರ್ಮವನ್ನು ಒದಗಿಸುತ್ತವೆ. ಇದರ ಪರಿಣಾಮವಾಗಿ, ಅನೇಕ ವ್ಯಕ್ತಿಗಳು ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಆ ದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ದೈನಂದಿನ ಜೀವನದಲ್ಲಿ ಇಂತಹ ಕಿರುಕುಳದ ಬಗ್ಗೆ ಭಯವನ್ನು ಹೊಂದಿದ್ದಾರೆ. ಅಲ್ಲಿ ಈ ಧರ್ಮದ ಅಭ್ಯಾಸದ ಹಕ್ಕು ಮತ್ತು ಪ್ರಚಾರದ ಹಕ್ಕನ್ನು ಅಡ್ಡಿಪಡಿಸಲಾಗಿದೆ ಮತ್ತು ನಿರ್ಬಂಧಿಸಲಾಗಿದೆ. ಅಂತಹ ಅನೇಕ ವ್ಯಕ್ತಿಗಳು ಆಶ್ರಯ ಪಡೆಯಲು ಭಾರತಕ್ಕೆ ಪಲಾಯನ ಮಾಡಿದ್ದಾರೆ ಮತ್ತು ಅವರ ಪ್ರಯಾಣದ ದಾಖಲೆಗಳು ಅವಧಿ ಮುಗಿದಿದ್ದರೂ ಅಥವಾ ಅಪೂರ್ಣ ಅಥವಾ ಯಾವುದೇ ದಾಖಲೆಗಳಿಲ್ಲದಿದ್ದರೂ ಭಾರತದಲ್ಲಿಯೇ ಇರುತ್ತಾರೆ."

[೨೪]

ಆದ್ದರಿಂದ ಮಸೂದೆಯು ಧರ್ಮದ ಆಧಾರದ ಮೇಲೆ ಮತ್ತು / ಅಥವಾ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಎದುರಿಸುತ್ತಿರುವ ಸಮುದಾಯಗಳನ್ನು ರಕ್ಷಿಸಲು ಉದ್ದೇಶಿಸಿದೆ. ಇದು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೂರು ದೇಶಗಳ ರಾಷ್ಟ್ರ ಧರ್ಮದ ಮಾನದಂಡಗಳನ್ನು ಬಳಸುತ್ತದೆ. ವಜ್ರಯಾನ ಬೌದ್ಧಧರ್ಮವನ್ನು ರಾಜ್ಯ ಧರ್ಮವಾಗಿ ಹೊಂದಿರುವ ಭೂತಾನ್ ಅನ್ನು ಏಕೆ ಹೊರಗಿಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ; ಏಕೆಂದರೆ ಭೂತಾನ್‌ನಲ್ಲಿರುವ ಕ್ರೈಸ್ತರು ಖಾಸಗಿಯಾಗಿ ತಮ್ಮ ಮನೆಗಳ ಒಳಗೆ ಮಾತ್ರ ಪ್ರಾರ್ಥಿಸಬಹುದು.[೨೫] ರಾಷ್ಟ್ರಧರ್ಮವನ್ನು ಹೊಂದಿರದ ಮ್ಯಾನ್ಮಾರ್‌ನಲ್ಲಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ವಿರುದ್ಧ ತಮ್ಮ ಧರ್ಮವನ್ನು ಆಚರಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.[೨೬] ಶ್ರೀಲಂಕಾದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತದೆ. ಆದರೆ ಶ್ರೀಲಂಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ೨೦೧೮ ರ ಯುಎಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ,[೨೭]

"ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಪ್ರತಿನಿಧಿಗಳ ಪ್ರಕಾರ, ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ, ವಿಶೇಷವಾಗಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ತಾರತಮ್ಯವನ್ನು ಮುಂದುವರೆಸಿದ್ದಾರೆ ಮತ್ತು "ಮುಕ್ತ "(ನಾನ್ಡೆನೊಮಿನೇಶನಲ್ ಮತ್ತು ಇವಾಂಜೆಲಿಕಲ್) ಕ್ರಿಶ್ಚಿಯನ್ ಗುಂಪುಗಳಾಗಿ ಪರಿವರ್ತನೆಗೊಂಡಿದ್ದಾರೆ, ಸ್ಥಳೀಯ ಸರ್ಕಾರಿ ಅಧಿಕಾರಿಗಳು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ವಿರುದ್ಧ ಧಾರ್ಮಿಕ ಪ್ರೇರಿತ ಹಿಂಸಾಚಾರದ ಹಲವಾರು ಘಟನೆಗಳಿಗೆ ಪೊಲೀಸರು ಪ್ರತಿಕ್ರಿಯಿಸಲಿಲ್ಲ ಎಂದು ವರದಿಯಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಮೇಲೆ ದೈಹಿಕ ದಾಳಿ ಮತ್ತು ಕಿರುಕುಳಕ್ಕೆ ಸರ್ಕಾರಿ ಅಧಿಕಾರಿಗಳು ಸಹಕರಿಸಿದ್ದಾರೆ ಎಂಬ ವರದಿಗಳಿವೆ."

[೨೮]

ಇದರ ಪರಿಣಾಮವಾಗಿ, ಮ್ಯಾನ್ಮಾರ್‌ನ ರೋಹಿಂಗ್ಯಾಗಳಂತಹ ಸಮುದಾಯಗಳನ್ನು ಹೊರಗಿಡುವುದು ಜನಾಂಗ ಅಥವಾ ಜನಾಂಗದ ಆಧಾರದ ಮೇಲೆಯೇ ಹೊರತು ಧರ್ಮವೆಂದಲ್ಲ. ಆದರೆ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅವರು ಎದುರಿಸುತ್ತಿರುವ ನಿರ್ಬಂಧಗಳು ಪ್ರಶ್ನಾರ್ಹವಾಗಿದೆ. ಶ್ರೀಲಂಕಾದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಅಲ್ಪಸಂಖ್ಯಾತರಿಗೂ ಇದೇ ರೀತಿಯ ಪ್ರಶ್ನೆ ಉದ್ಭವಿಸುತ್ತದೆ. ಅಂತಿಮವಾಗಿ, ಪಾಕಿಸ್ತಾನದಲ್ಲಿ ಅಹ್ಮದಿಯಾ ಮತ್ತು ಬಾಂಗ್ಲಾದೇಶದ ನಾಸ್ತಿಕರನ್ನು ಹೊರಗಿಡುವುದು ಸಹ ಪ್ರಶ್ನಾರ್ಹವಾಗಿದೆ. ಇವುಗಳು ಸಂಬಂಧಿತ ವಿಷಯವಾದರೂ, ಈ ಮಸೂದೆಯ ವ್ಯಾಪ್ತಿಯಲ್ಲಿಲ್ಲ. ಶ್ರೀಲಂಕಾದಲ್ಲಿ ಹಿಂದುಗಳು ಅಲ್ಪಸಂಖ್ಯಾತ ಧರ್ಮವಾದವರಾದರೂ, ಜನಾಂಗೀಯತೆಯ ಆಧಾರದ ಮೇಲೆ ಕಿರುಕುಳವನ್ನು ಅನುಭವಿಸಿರುವ ಶ್ರೀಲಂಕಾದ ತಮಿಳರು ಭಾರತದತ್ತ ವಲಸೆ ಬರುತ್ತಿರುವುದು ಪ್ರಶ್ನಾರ್ಹವಾಗಿದೆ.

"ಶ್ರೀಮಂತ ಮತ್ತು ವ್ಯಾಪಕವಾದ ಚರ್ಚೆಯ ನಂತರ ಲೋಕಸಭೆ ೨೦೧೯ ರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ ಎಂದು ಖುಷಿಪಟ್ಟಿದ್ದೇನೆ" ಮತ್ತು "ಮಸೂದೆ ಭಾರತದ ಶತಮಾನಗಳ ಹಳೆಯ ಒಗ್ಗೂಡಿಸುವಿಕೆ ಮತ್ತು ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.[೨೯] ಲೋಕಸಭೆಯಲ್ಲಿ ಈಶಾನ್ಯ ರಾಜ್ಯಗಳ ಬಹುಪಾಲು ಸದಸ್ಯರು ಮಸೂದೆಯನ್ನು ಬೆಂಬಲಿಸಿದ ಕಾರಣ ಮಸೂದೆಯನ್ನು ಅವರೂ ಬೆಂಬಲಿಸಿದರು.[೩೦]

  • ಈ ಮಸೂದೆಗೆ ಭಾರತದೇಶದ ಅನೇಕ ಕಡೆ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಹೆಚ್ಚು ವಿರೋದವಿದ್ದು ವ್ಯಾಪಕವಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧಕ್ಕೆ ಅದರ ಹಿಂದಿನ ಇತಿಹಾಸದ ಕಾರಣಗಳಿವೆ.[೩೧]. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿವಸೇನಾ ಸಂಸದ ಸಂಜಯ್ ರಾವುತ್, ಅಮೆರಿಕ ನಾಯಕ ಮಾರ್ಟಿನ್‌ ಲೂಥರ್‌ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಹೀಗೆ ಟೀಕಿಸಿದರು. - :‘ಎಲ್ಲಿ ಧಾರ್ಮಿಕ ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸಲಾಗುತ್ತದೆಯೊ ಆ ದೇಶ ಉತ್ತಮ ಎನಿಸಿಕೊಳ್ಳುತ್ತದೆ. ಆದರೆ, ಎಲ್ಲಿ ರಾಜಕೀಯವೇ ಧಾರ್ಮಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೊ, ಅಂತಹ ಕಡೆ ಅನರ್ಹರ ಹಿಡಿತದಲ್ಲಿ ದೇಶ ಸಾಗುತ್ತಿದೆ ಎಂದು ನಾವೆಲ್ಲ ತಿಳಿಯಬೇಕು’ ಎಂದು ಮಾರ್ಟಿನ್‌ ಲೂಥರ್‌ ಹೇಳಿದ್ದರು. ಅವರ ಮಾತುಗಳನ್ನು ಉಲ್ಲೇಖಿಸಿ ರಾವುತ್ ಟ್ವೀಟ್‌ ಮಾಡಿದ್ದಾರೆ. ಆದರೆ ಏಕೆ ಮತ್ತು ಯಾವ ವಿಷಯದ ಕುರಿತು ಎನ್ನುವುದನ್ನು ನಿರ್ಧಿಷ್ಟವಾಗಿ ತಿಳಿಸಿಲ್ಲ. [೩೨]

ವಿವಾದ ಮತ್ತು ಕಾರಣ

ಬದಲಾಯಿಸಿ
  • C.A.Act protests
  • ಸಿಎಎ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಿಲ್ಲ, ಧಾರ್ಮಿಕ ಕಿರುಕುಳಕ್ಕೊಳಗಾದ ಸಂತ್ರಸ್ತತೆಯ ಆಧಾರದಲ್ಲಿ ಪೌರತ್ವ ನೀಡುತ್ತದೆ; ಆದಕಾರಣ ಇಲ್ಲಿ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಆದರೆ ಕಾಯ್ದೆಯಲ್ಲಿ ಎಲ್ಲೂ ‘ಧಾರ್ಮಿಕ ಕಿರುಕುಳಕ್ಕೊಳಗಾದ’ ಆಧಾರದ ಮೇಲೆ ವಲಸೆಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಲಾಗುವುದು ಎಂದು ಹೇಳಿಲ್ಲ. ಅದರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಬಂದ ಹಿಂದೂ, ಬೌದ್ಧ, ಜೈನ, ಪಾರ್ಸಿ, ಸಿಖ್ ಮತ್ತು ಕ್ರೈಸ್ತ ಅಕ್ರಮವಾಸಿಗಳಿಗೆ ಆದ್ಯತೆಯ ಮೇಲೆ ಪೌರತ್ವ ನೀಡಲಾಗುವುದು ಎಂದು ಹೇಳಿದೆ. ಇದರ ಬದಲಿಗೆ "ಆ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಬಂದವರಿಗೆ" ಎಂದು ಸ್ಪಷ್ಟವಾಗಿ ಹೇಳಿದ್ದರೆ ಮತ್ತು ಆ ಕಾರಣಕ್ಕೋಸ್ಕರ ಬಹಳಷ್ಟು ಮುಸ್ಲಿಮರು ಈ ಕಾಯ್ದೆಯಡಿ ಅನುಕೂಲ ಪಡೆಯಲು ಅನರ್ಹರಾಗಿದ್ದರೆ, ಆಗ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಬರುತ್ತಿರಲಿಲ್ಲ. ಇಡೀ ಪ್ರಕ್ರಿಯೆಯಲ್ಲಿ ದೇಶವಾಸಿಗಳೂ ಅಕ್ರಮವಾಸಿಗಳೆಂದು ಪರಿಗಣಿಸಲ್ಪಟ್ಟು ಇಂತಹ ಬಂಧನಗೃಹ ಕೇಂದ್ರ ಸೇರುವ ಅಪಾಯವೂ ಇದೆ ಎನ್ನುವ ಅಂಶವನ್ನು ಅಸ್ಸಾಂನಲ್ಲಿ ನಡೆದ ಎನ್ಆರ್‌ಸಿ ತೋರಿಸಿಕೊಟ್ಟಿದೆ..
  • ಎಲ್ಲ ಶ್ರೀಮಂತ ದೇಶಗಳಲ್ಲೂ ಅಕ್ರಮವಾಗಿ ನೆಲೆಸಿದ ಲಕ್ಷಲಕ್ಷ ಭಾರತೀಯರಿದ್ದಾರೆ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ (2019, ಡಿ. 1), 2010-17ರ ನಡುವೆ ಅಮೆರಿಕವೊಂದರಲ್ಲೇ ಅಕ್ರಮವಾಗಿ ಉಳಿದುಕೊಂಡಿರುವವರಲ್ಲಿ ಅತೀ ಹೆಚ್ಚಿರುವುದು ಭಾರತೀಯರು (3.30 ಲಕ್ಷ). ಎಲ್ಲ ದೇಶಗಳೂ ಅಕ್ರಮವಾಸಿಗಳ ಬಗ್ಗೆ ಕ್ರೂರ ತೀರ್ಮಾನವೊಂದನ್ನು ಕೈಗೊಂಡದ್ದೇ ಆದರೆ, ಅದಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೆ ಬಲಿಯಾಗಲಿರುವವರು ಭಾರತದ ಹಿಂದೂಗಳೇ ಆಗಬಹುದು.[೩೩]
  • ಸಿಎಎ ಬಗ್ಗೆ ಈಗಲೂ ಒಂದು ವರ್ಗದ ಜನರಿಗೆ ವಿರೋಧ ಇಲ್ಲ, ಸಿಎಎ ಜೊತೆ ಎನ್‌ಆರ್‌ಸಿ ((National Register of Citizens))ಜೋಡಿಸುವುದಕ್ಕೆ ವಿರೋಧ ಇದೆ. ಎನ್‌ಪಿಆರ್ ಬಗ್ಗೆ ಅಲ್ಲ, ಎನ್‌ಪಿಆರ್‌ನ ಪ್ರಶ್ನಾವಳಿಗೆ ಸೇರಿಸಿರುವ ಹೊಸ ಪ್ರಶ್ನೆಗಳ ಬಗ್ಗೆ ವಿರೋಧ ಇದೆ(ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್‌)).[೩೪][೩೫]

ಪೌರತ್ವ ನೊಂದಣಿಯ ಮೂಲ ಸಮಸ್ಯೆ

ಬದಲಾಯಿಸಿ
  • ಮುಖ್ಯವಾಗಿ ಭಾರತದಲ್ಲಿ ತಾವು ಭಾರತೀಯರು ಎಂದು ತೋರಿಸಲು ದಾಖಲೆ ಇಲ್ಲದ ಕೋಟಿ ಕೋಟಿ ದಲಿತರು ಹಿಂದುಳಿದವರು ಮೂಲನಿವಾಸಿಗಳು ಇದ್ದಾರೆ. ಇವರನ್ನೆಲ್ಲಾ ಅವರ ಸಂಸಾರದಿಂದ ಬೇರ್ಪಡಿಸಿ ಬಂಧನಗೃಹದಲ್ಲಿ ಸಾಯುವ ತನಕ ಕೂಡಿಹಾಕುವುದು ಎಷ್ಟು ಸರಿ. ಈ ಕ್ರೂರತೆಗೆ ಸರಿಸಮಾನ ಉಂಟೆ? ಇದು ಯೋಚಿಸಬೇಕಾದ ಪ್ರಶ್ನೆ. ಷಾ ಹೇಳಿದಂತೆ ವಿದೇಶೀಯರೆಂದು ಅವರನ್ನೆಲ್ಲಾ ಸಮುದ್ರಕ್ಕೆ ಎಸೆಯುವುದು ಅಥವಾ ಬೇರೆ ದೇಶಕ್ಕೆ ಕಳಿಸುವುದು ಸಾಧ್ಯವೇ? ಆರ್ಥಿಕ ಸಂಕ್ಷಷ್ಟ ಇರುವಾಗ ಬಂಧನಗೃಹದಲ್ಲಿ ಸಾಯುವ ತನಕ ಅವರಯೋಗಕ್ಷೇಮದ ವೆಚ್ಚಕ್ಕಾಗಿ ೪೦-೫೦ ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯ ಮಾಡುವುದು ಪ್ರಯೋಜನಕಾರಿಯಾಗಬಹುದೆ ಎನ್ನುವುದು ಮುಖ್ಯ ಸಮಸ್ಯೆ. [೩೬]
  • ಉದಾಹರಣೆ:ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಹಿಂದೆಯೂ ಇತ್ತೆಂದು ಸರ್ಕಾರದವರು ವಾದ ಮಾಡುತ್ತಾರೆ. ಆದರೆ 2010ರಲ್ಲಿ ಇದ್ದ ನೋಂದಣಿಗೂ ಈಗಿನದಕ್ಕೂ ಬಹಳ ವ್ಯತ್ಯಾಸವಿದೆ. ನಿಮ್ಮ ಜನ್ಮದಾಖಲೆಯ ಜೊತೆಗೆ ನಿಮ್ಮ ತಂದೆ, ತಾಯಿಯ ಜನ್ಮದಾಖಲೆ, ಅವರು ಯಾವ ಊರಲ್ಲಿ ಹುಟ್ಟಿದವರು ಎನ್ನುವ ದಾಖಲೆಗಳನ್ನೂ ತೋರಿಸಬೇಕು. ಆ ಬಗೆಯ ದಾಖಲೆ ಸಿಗದವರು ಕೋಟ್ಯಂತರ ಜನ ಇದ್ದಾರೆ. ಸ್ವತಃ ತಮ್ಮ ದಾಖಲೆ ಸಿಗುವುದೇ ದುರ್ಲಭವಿರುವ, ಗಂಡ ಬಿಟ್ಟ,ಅನಕ್ಷರಸ್ತ ರೇಣುಕಾಳಂಥ ಕೋಟ್ಯಂತರ ಮಹಿಳೆಯರು, ಅವರ ತಂದೆ ತಾಯಿಯ ಹುಟ್ಟಿದೂರಿಗೆ ಹೋಗಿ ದಾಖಲೆಗಳನ್ನು ತರಲು ಪ್ರಯತ್ನ ಆರಂಭಿಸಿದ್ದಾರೆ. ಸಿಗದೆ ಇದ್ದಾಗ ಏನು ಮಾಡಬೇಕು. ಅವಳನ್ನು ಬಾಂಗ್ಲಾ ಎಂದು ಬಂಧನಗೃಹಕ್ಕೆ ನೂಕಬೇಕಾಗಬಹುದು.[೩೭]
  • ಸಮಸ್ಯೆ:ಕೊಪ್ಪಳದ ಕಾರ್ಮಿಕ ಕಾರಣ್ಣ ಅವರ ಅಳಲು-‘ಅನ್ನ ಅರಸಿ ಬೆಂಗಳೂರಿಗೆ ಬಂದಿದ್ದ, ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಉಳಿದುಕೊಂಡಿದ್ದವನನ್ನು, ಬಾಂಗ್ಲಾದೇಶದ ಪ್ರಜೆ ಎಂಬ ಪಟ್ಟ ಕಟ್ಟಿ ಅವನ ಜೋಪಡಿಯನ್ನೇ ನೆಲಸಮ ಮಾಡಲಾಗಿದೆ.ಅವನ ಬದುಕು ಬೀದಿಗೆ ಬಂದಿದೆ. ಹಾಗೆಯೇ ಅಲ್ಲಿ ಸುಮಾರು ೩೦೦ ಭಾರತೀಯ ಕಾರ್ಮಿಕರ ಗುಡಿಸಲುಗಳನ್ನು ನೆಲಸಮಅ ಮಾಡಿದರು ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು, ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿದ್ದ ಸ್ಥಳೀಯ ಕಾರ್ಮಿಕರ ಜೋಪಡಿಗಳನ್ನು 19 ಜನವರಿ 2020 ರಂದು ಏಕಾಏಕಿ ನೆಲಸಮ ಮಾಡಿದರು. ಅವರ ಬದುಕು ಬೀದಿಗೆ ಬಂದಿದೆ. [೩೮][೩೯][೪೦]

ಅಸ್ಸಾಮಿನ ಸ್ಥಿತಿ

ಬದಲಾಯಿಸಿ
  • ಪಶ್ಚಿಮ ಅಸ್ಸಾಂನ ತಮುಲ್ಪುರದ ಪ್ರಾಥಮಿಕ ಶಾಲಾ ಶಿಕ್ಷಕ 30 ವರ್ಷದ ಗೋಬಿಂದ ನಂದಿ," ನಾವು ಇಲ್ಲಿ ಜನಿಸಿದ್ದೇವೆ "ಎಂದುಹೇಳಿದರು. ಕಳೆದ ವರ್ಷ ಬಿಡುಗಡೆಯಾದ ಕರಡು ಪಟ್ಟಿಯು ಅಂದಾಜು 4 ಮಿಲಿಯನ್ (೪೦ ಲಕ್ಷ) ಜನರ ಹೆಸರನ್ನು ರಿಜಿಸ್ಟರ್‌ನಿಂದ ಹೊರಹಾಕಿದೆ. ಈ ಯೋಜನೆಯಲ್ಲಿ 4 ಮಿಲಿಯನ್ ಭಾರತೀಯರು ಪೌರತ್ವವನ್ನು ಕಳೆದುಕೊಳ್ಳುವ ಅಪಾಯವನ್ನುಂಟುಮಾಡುತ್ತದೆ,ಎಂದರು.
  • 1971 ರಲ್ಲಿ ರಕ್ತಸಿಕ್ತ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ರಾಜ್ಯಕ್ಕೆ ಗಡಿಯನ್ನು ದಾಟಿದ ನಂತರ ಅಸ್ಸಾಂನ ಅನೇಕ ಅಲ್ಪಸಂಖ್ಯಾತ ಬಂಗಾಳಿ ಸಮುದಾಯಗಳು ಭಾರತದಲ್ಲಿ ದಶಕಗಳಿಂದ ವಾಸಿಸುತ್ತಿವೆ. ಇನ್ನೂ ಅನೇಕರು ತಮ್ಮ ಇತಿಹಾಸವನ್ನು ಇನ್ನೂ ಹಿಂದಕ್ಕೆ ಕಂಡುಹಿಡಿಯಬಹುದು, 1947 ರಲ್ಲಿ ಭಾರತದ ಸ್ವಾತಂತ್ರ್ಯದ ಮೊದಲು ಆಗಮಿಸಿದರು.
  • "ಪಟ್ಟಿ ಪ್ರಕಟವಾದ ನಂತರ ಏನಾಗಲಿದೆ ಎಂದು ಯಾರಿಗೂ ನಿಜವಾಗಿಯೂ ತಿಳಿದಿಲ್ಲ" ಎಂದು ಶ್ರೇಯಾ ಮುನೊತ್ ಹೇಳಿದರು. ಭಾರತದ ಈಶಾನ್ಯ ಅಸ್ಸಾಂನಲ್ಲಿ ಸುಮಾರು 2 ಮಿಲಿಯನ್ (20ಲಕ್ಷ) ಜನರು ಈ ವಾರಾಂತ್ಯದಲ್ಲಿ ರಾಜ್ಯದ ಭಾರತೀಯ ನಾಗರಿಕರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಪ್ರಕಟವಾದ, ವಿವಾದಾತ್ಮಕ ಹೊಸ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)-ರಾಜ್ಯದ 33 ದಶಲಕ್ಷದಷ್ಟು ಜನಸಂಖ್ಯೆಯ 1.9 ದಶಲಕ್ಷವನ್ನು ಹೊರಗಿಟ್ಟಿದೆ.[೪೧]

ದೆಹಲಿ ಪ್ರತಿಭಟನೆಯ ವಿಡಿಯೊ

ಬದಲಾಯಿಸಿ

ಹೆಚ್ಚಿನ ಮಾಹಿತಿ

ಬದಲಾಯಿಸಿ

ಸಮಸ್ಯೆಯ ವಾಸ್ತವತೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "MINISTRY OF HOME AFFAIRS NOTIFICATION S.O. 172(E)" (PDF). The Gazette of India. 10 January 2020. Retrieved 11 March 2024.
  2. "Citizenship Amendment Act comes into effect from today as MHA issues notification". The Indian Express. 10 January 2020.
  3. "bill-files/Citizenship" (PDF). Archived from the original (PDF) on 2019-12-12. Retrieved 2019-12-11.
  4. amendment-bill-nrc-northeast-bandh
  5. bill-in-lok-sabha
  6. https://www.hindustantimes.com/india/bjp-offer-of-natural-home-for-hindu-refugees-triggers-debate/story-aU5sVqOSrWCpcIE29qMKXJ.html
  7. https://indianexpress.com/article/explained/assam-protests-citizenship-amendment-bill-nrc-northeast-bandh-5543785/
  8. https://timesofindia.indiatimes.com/india/bringing-ilp-for-manipur-3-ne-states-will-be-out-of-cab/articleshow/72449076.cms
  9. https://www.hindustantimes.com/columns/the-cab-nrc-package-is-flawed-and-dangerous/story-mHB05zOPf20vlcnSydvQdI.html
  10. https://indianexpress.com/article/explained/explained-why-the-citizenship-amendment-bill-is-dead-for-now-5582573/
  11. https://www.indiatoday.in/india/story/citizenship-amendment-bill-passed-lok-sabha-assam-protests-1426345-2019-01-08
  12. https://www.livemint.com/news/india/amit-shah-to-table-citizenship-amendment-bill-in-lok-sabha-today-11575855950416.html
  13. https://economictimes.indiatimes.com/news/politics-and-nation/citizenship-amendment-bill-triple-talaq-bill-set-to-lapse-on-june-3/articleshow/67974015.cms
  14. https://www.indiatoday.in/education-today/gk-current-affairs/story/what-is-citizenship-amendment-bill-2016-1372701-2018-10-22
  15. https://indianexpress.com/article/explained/where-the-citizenship-amendment-bill-does-not-apply-parliament-6157094/
  16. https://www.prsindia.org/billtrack/citizenship-amendment-bill-2019
  17. https://www.uscirf.gov/news-room/press-releases-statements/uscirf-raises-serious-concerns-and-eyes-sanctions
  18. https://economictimes.indiatimes.com/news/politics-and-nation/it-has-no-locus-standi-mea-on-uscirfs-citizenship-bill-statement/articleshow/72454886.cms
  19. https://timesofindia.indiatimes.com/india/uscirf-statement-on-cab-neither-accurate-nor-warranted-mea/articleshow/72454704.cms
  20. https://www.indiatoday.in/india/story/imran-khan-tweet-on-citizenship-amendment-bill-1626982-2019-12-10
  21. https://www.deccanherald.com/national/national-politics/enemies-may-use-cab-to-push-own-people-raw-783713.html
  22. https://blog.ipleaders.in/reasonable-classification-and-its-validity-under-article-14/
  23. https://www.gktoday.in/gk/article-14-of-constitution-of-india-doctrine-of-reasonable-classification/
  24. "ಆರ್ಕೈವ್ ನಕಲು" (PDF). Archived from the original (PDF) on 2019-12-12. Retrieved 2019-12-11.
  25. https://www.thehindu.com/opinion/lead/a-patently-unconstitutional-piece-of-legislation/article30270128.ece
  26. https://en.wikipedia.org/w/index.php?title=Freedom_of_religion_in_Myanmar&oldid=918539823
  27. https://en.wikipedia.org/w/index.php?title=Freedom_of_religion_in_Sri_Lanka&oldid=916848480
  28. https://www.state.gov/reports/2018-report-on-international-religious-freedom/sri-lanka/
  29. https://www.livemint.com/politics/news/citizenship-amendment-bill-cleared-by-lok-sabha-11575916850821.html
  30. https://www.thehindu.com/news/national/lok-sabha-passes-citizenship-amendment-bill/article30260415.ece
  31. ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧ ಏಕೆ? ; ಪ್ರಜಾವಾಣಿ; d: 16 ಡಿಸೆಂಬರ್ 2019,
  32. ರಾಜಕೀಯವೇ ಧಾರ್ಮಿಕ ಸಮಸ್ಯೆ ಸೃಷ್ಟಿಸಿದರೆ, ಆ ದೇಶ ಅನರ್ಹರ ಕೈಯಲ್ಲಿರಲಿದೆ: ರಾವುತ್; d: 23 ಡಿಸೆಂಬರ್ 2019
  33. ಸಿಎಎ, ಎನ್‌ಆರ್‌ಸಿ | ಸುಳ್ಳಾಡಬೇಡಿ ಮೋದಿ, ಆತಂಕ ಅರಿತುಕೊಳ್ಳಿ; ನಾರಾಯಣ ಎ.d: 02 ಜನವರಿ 2020,
  34. ಸಿಎಎ ಎತ್ತುವ ತಾತ್ವಿಕ ಪ್ರಶ್ನೆಗಳು- ದಿ.ಅ.ಮಟ್ಟು ೧೫-೧-೨೦
  35. https://www.prajavani.net/op-ed/market-analysis/dictatorship-in-democracy-712107.html ಬಹುಮತಾಧಿಕಾರವು ಸರ್ವಾಧಿಕಾರವಲ್ಲ;ಬರಗೂರು ರಾಮಚಂದ್ರಪ್ಪ ;d: 14 ಮಾರ್ಚ್ 2020,
  36. ವಾಸ್ತವ;-ದಿನೇಶ್ ಅಮಿನ್ ಮಟ್ಟು;d: 18 ಜನವರಿ 2020
  37. https://www.prajavani.net/op-ed/market-analysis/citizenship-amendment-act-and-women-role-in-society-700278.html ಎಲ್ಲೂ ಸಲ್ಲದವಳು... ಎಲ್ಲಿಯವಳು? ಶಾರದಾ ಗೋಪಾಲ Updated: 24 ಜನವರಿ 2020
  38. ಬಾಂಗ್ಲಾ ನೆವ: ಅನ್ನ ಅರಸಿ ಬಂದವರ ಸೂರು ನೆಲಸಮ;ಸಂತೋಷ ಜಿಗಳಿಕೊಪ್ಪ;d: 23 ಜನವರಿ 2020,
  39. ಜೋಪಡಿ ನೆಲಸಮ;ಪ್ರಜಾವಾಣಿ;d: 24 ಜನವರಿ 2020,
  40. ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಸಂವಿಧಾನಕ್ಕೆ ವಿರೋಧ: ಪತ್ರಕರ್ತ ಪಿ. ಸಾಯಿನಾಥ್ಪ್ರ;ಜಾವಾಣಿ;d: 14 ಫೆಬ್ರವರಿ 2020,
  41. 1.9 million excluded from Indian citizenship list in Assam state; By Helen Regan and Manveena Suri, CNN;August 31, 2019